Homeಮುಖಪುಟಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

- Advertisement -
- Advertisement -

ಅಕ್ಷರದಲ್ಲಿ ಮುದ್ರಿತವಾದದ್ದು “ಅಂತಿಮ ಸತ್ಯ” ಎಂಬುದನ್ನೇ ಹಾಸಿ, ಹೊದ್ದು ನಂಬಿದ್ದವರಿದ್ದರು. ನಿರ್ಣಾಯಕ ಸಂದರ್ಭ ಎದುರಾದಾಗ “ನೋಡಿ ಬೇಕಿದ್ರೆ… ಹಾಗಂತ ನಾನು ಬರೆದು ಕೊಡ್ತೇನೆ!” ಎಂದು ಹೇಳುವುದು ಸುಮ್ಮನೇ ಅಲ್ಲ. “ಬರೆದು ಕೊಡುವುದು ಅಂತಿಮ ಸತ್ಯ” ಎಂಬ ನಂಬಿಕೆಯ ಫಲ ಅದು.

ಯಾವುದೇ ಸುದ್ದಿ ಖಚಿತವಾಗಬೇಕಿದ್ದರೆ ಪೇಪರಲ್ಲಿ ಬಂದಿದೆಯಾ? ಎಂದು ನೋಡುವ ಕಾಲ ಇತ್ತು. ಏನೇ ಸಮಾಜವಿರೋಧಿ ಕೆಲಸ ಮಾಡಿದರೂ ಪೇಪರಲ್ಲಿ ಬರ್ತದೆ ಎಂಬ ಅಂಜಿಕೆ ಇತ್ತು. ಅದು ಕ್ರಮೇಣ ಮಸುಕಾಗುತ್ತಾ ಬಂದಿದೆ. ಮಾಧ್ಯಮಗಳಿಗೊಂದು ಸಾಮಾಜಿಕ ಗೌರವ ತಕ್ಕಮಟ್ಟಿಗೆ ಇತ್ತು. ಹಾಗೆಂದಾಕ್ಷಣ ಎಲ್ಲವೂ ಸುಸೂತ್ರವಾಗಿತ್ತೆಂದಲ್ಲ. ಬರಹಗಳ ಮೇಲಿನ ಓದುಗರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಎಲ್ಲೋ ಅಲ್ಲೊಂದು-ಇಲ್ಲೊಂದು ಅಪರೂಪಕ್ಕೆ ನಡೆಯುತ್ತಿತ್ತು. ಅದನ್ನು “ಹಳದಿ ಪತ್ರಿಕೋದ್ಯಮ” ಎಂದು ಗುರುತಿಸಲಾಗುತ್ತಿತ್ತು.

ಆದರೆ ಬರಬರುತ್ತಾ ಇಡಿಯ ಪತ್ರಿಕೋದ್ಯಮವೇ ಮಲ್ಟಿಕಲರ್ ಆಗತೊಡಗಿತು. ಅಕ್ಷರಗಳಿಂದಲೇ ದುಡಿದು ತಿನ್ನುವ ಸುದ್ದಿಮನೆಗಳಲ್ಲಿ ತಮ್ಮ ಅನ್ನದಾತರಾದ ಓದುಗರು ತಮ್ಮ ಮೇಲಿರಿಸಿರುವ ನಂಬಿಕೆಗೇ ದ್ರೋಹ ಮಾಡುವ ಕೆಲಸ ಸಾತತ್ಯದೊಂದಿಗೆ ಆರಂಭ ಆದದ್ದು 2010ರ ಸುಮಾರಿಗೆ. ಇದನ್ನು ಓದುಗರು “ಪತ್ರಿಕೆಗಳ ಬೆಲೆ ಸಮರ” ಎಂದೇ ಗುರುತಿಸಿದರೇ ಹೊರತು ಅಲ್ಲಿಂದ ಆಳಕ್ಕೆ ಇಳಿದು ನೋಡಲಿಲ್ಲ. ಸುದ್ದಿ ಚೀಪ್ ಆಯಿತು!

ದೇಶದಾದ್ಯಂತ ಸುದ್ದಿಮನೆಗಳಿಗೆ ಹೀಗೆ ಗೆದ್ದಲು ಹತ್ತಿದ್ದನ್ನು ನಾವು “ಇದು ಮಾಧ್ಯಮವು ಉದ್ಯಮ ಆದದ್ದರ ಫಲ” ಎಂದೇ ವಿಶ್ಲೇಷಿಸುತ್ತಾ ಬಂದೆವು. ಆದರೆ ಗೆದ್ದಲನ್ನು ಗುರುತಿಸಲಿಲ್ಲ. ಅದು ಇಂಚಿಂಚಾಗಿ ಇಡಿಯ ಮಾಧ್ಯಮ ವ್ಯವಸ್ಥೆಯನ್ನು ತಿನ್ನುತ್ತಾ ಬಂದು, 2014 ರ ಲೋಕಸಭಾ ಚುನಾವಣೆಗಳ ರನಪ್ ಹೊತ್ತಿಗೆ ತನ್ನ ಇರುವಿಕೆಯನ್ನು ಪೂರ್ಣಪ್ರಮಾಣದಲ್ಲಿ ತೋರಿಸಿಕೊಂಡಿತು. ಸರಿಯಾಗಿ ಗಮನಿಸಿದರೆ, ಸುದ್ದಿಮನೆಯಲ್ಲಿ ಆಗಿರುವ ಬದಲಾವಣೆಗಳಿಗೆ ಮಾಲಕತ್ವ ಮಾತ್ರ ಕಾರಣ ಅಲ್ಲ; ಬದಲಾಗಿ ಅಲ್ಲಿ ಜಾತಿ, ಗುಂಪು, ಸಿದ್ಧಾಂತ ಮತ್ತಿತರ ಆಯಕಟ್ಟಿನ ಜಾರೆಣ್ಣೆ ಬಳಸಿಕೊಂಡು ನುಸುಳಿ ಕುಳಿತಿರುವ ರಾಜಕೀಯ ದಲ್ಲಾಳಿಗಳು ಕಾರಣ ಎಂಬುದು ಈಗ ಬಯಲಾಗತೊಡಗಿದೆ.

ಸುದ್ದಿಗಳನ್ನು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿ ಪ್ರೆಸೆಂಟ್ ಮಾಡುವ ಚಾಳಿ ಸ್ವಲ್ಪ ಕದ್ದುಮುಚ್ಚಿ, ಮುಜುಗರದೊಂದಿಗೆ ಆರಂಭಗೊಂಡದ್ದು, ಈಗ ಪೂರ್ಣಪ್ರಮಾಣದಲ್ಲಿ ವ್ಯವಸ್ಥೆಯ ಭಾಗವಾಗಿಯೇ ನಡೆಯುತ್ತಿದೆ. ಅದು ಬಲುದೊಡ್ಡ ಕಥೆ. ಇಂತಹ ಸನ್ನಿವೇಶದಲ್ಲಿ, ಪ್ರತಿನಿತ್ಯ ಬಹುತೇಕ ಸುದ್ದಿಪುಟಗಳನ್ನು ಕಳ್ಳಸುದ್ದಿ, ಸುಳ್ಳುಸುದ್ದಿ, ನೆಟ್ಟಸುದ್ದಿ, ಕೆಟ್ಟಸುದ್ದಿಗಳು ಆವರಿಸತೊಡಗಿದಾಗ, ಓದುಗರಲ್ಲಿ ಪತ್ರಿಕೆಗಳ ಬಗ್ಗೆ ಅಸಹನೆ ಸ್ಪಷ್ಟವಾಗಿ ತೋರುವಷ್ಟಿತ್ತು. ಆದರೆ, ನಂಬಿಕೆ – ವಾಸ್ತವಗಳ ತೊಳಲಾಟದ ರಭಸದಲ್ಲಿ ಓದುಗ ಕೊಚ್ಚಿಹೋದದ್ದೇ ಜಾಸ್ತಿ. ಅದರ ಫಲವಾಗಿ ಇಂದು ಮಾಧ್ಯಮ ಎಂದರೆ ಛೀ.. ಥೂ.. ಎನ್ನುವುದು ಢಾಳಾಗಿ ಕಾಣಿಸತೊಡಗಿದೆ. ಹಳೆಯ ನಂಬಿಕೆ ಕಳೆದುಹೋಗಿದೆ.

ಒಬ್ಬ ಓದುಗನಾಗಿ ಮತ್ತು ಒಂದೆರಡು ದಶಕ ಸುದ್ದಿಮನೆಗೆ ಮಣ್ಣುಹೊತ್ತವನಾಗಿ, ಕನಿಷ್ಠ ನನ್ನ ಸಂಪರ್ಕದಲ್ಲಿರುವ ಒಂದಿಷ್ಟು ಜನರಿಗಾದರೂ “ಸುದ್ದಿ ಏಕೆ ಹೀಗೆ?” ಎಂಬುದನ್ನು ತಲುಪಿಸಲು ಸೋಷಿಯಲ್ ಮೀಡಿಯಾವನ್ನು ಬಳಸಬಹುದು ಅನ್ನಿಸಿತು. ಅದರ ಫಲವೇ ನನ್ನ ಮಾಧ್ಯಮ ವಿಶ್ಲೇಷಣೆಯ ಮೈಕ್ರೊಬ್ಲಾಗಿಂಗ್ ಪ್ರಯತ್ನ. ಈ ರೀತಿಯ ಮೈಕ್ರೊ ಬ್ಲಾಗಿಂಗ್ ಗೆ ಮೂಲ ಪ್ರೇರಣೆ ನಾನು ಈ ಹಿಂದೆ ಒಂದು ದಿನಪತ್ರಿಕೆಗೆ ಸಣ್ಣ ಅವಧಿಗೆ “ಆಂಬುಡ್ಸ್ ಮನ್” ಆಗಿ ಕೆಲಸ ಮಾಡಿದ್ದು.

2019 ಚುನಾವಣೆಗೆ ರನಪ್ ಆರಂಭಗೊಳ್ಳುವ ಹೊತ್ತಿಗೆ, ಮಾಧ್ಯಮಗಳಿಗೆ ಅಡರಿದ ಈ ರೋಗ ಪೂರ್ಣಪ್ರಮಾಣದ, ವಾಸಿಯಾಗದ ಮಹಾವ್ಯಾಧಿ ಎಂಬುದು ಖಚಿತವಾಗತೊಡಗಿತ್ತು. ಹಾಗಾಗಿ ನನ್ನ ಸುದ್ದಿ ವಿಶ್ಲೇಷಣೆಯ ಕೆಲಸಕ್ಕೆ ಒಂದು ಟ್ರ್ಯಾಕಿಂಗ್ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ #ಡಿಯರ್_ಮೀಡಿಯಾ ಹ್ಯಾಷ್ ಟ್ಯಾಗ್ ನ್ನು ಬಳಸತೊಡಗಿದೆ. ಇದು ಮೊದಲು ಬಳಕೆ ಆದದ್ದು 2018 ಅಕ್ಟೋಬರ್ ತಿಂಗಳಿನಲ್ಲಿ. ಈ ಹ್ಯಾಷ್ ಟ್ಯಾಗ್ ನನ್ನ ಟ್ರ್ಯಾಕಿಂಗ್ ದಾಖಲೆ ಆಗಿ ಬಳಕೆ ಆಗುತ್ತಿದ್ದದ್ದು, ಕ್ರಮೇಣ ಒಂದು ಬ್ರ್ಯಾಂಡ್ ಆಗಿ ಕೂಡ ಕಾಣಿಸತೊಡಗಿದ್ದರ ಸಂಪೂರ್ಣ ಶ್ರೇಯಸ್ಸು, ಮಾಧ್ಯಮಗಳಿಗೆ ಮತ್ತು ಅವು ಮಾಡತೊಡಗಿದ ಎದ್ದುಕಾಣುವ “ಹಲ್ಕಾ” ಕೆಲಸಗಳಿಗೆ ಸೇರಬೇಕು!

ಈ ಮಹಾವ್ಯಾಧಿ ಇಂದು ಎಷ್ಟು ತೀವ್ರವಾಗಿದೆ ಎಂದರೆ, ನೀವು ದಿನನಿತ್ಯ ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

ಇಂಗ್ಲೀಷಿನ ಲ್ಯಾಪ್ ಡಾಗ್ ಮೀಡಿಯಾ, ಹಿಂದಿಯ ಗೋದಿ ಮೀಡಿಯಾ ಕನ್ನಡದಲ್ಲಿ #ಡಿಯರ್_ಮೀಡಿಯಾ ಆಗತೊಡಗಿದೆ. ಮುಂದೊಂದು ದಿನ ಈ ಕ್ರಾನಿಕಲ್ ಕನ್ನಡದ ಮಾಧ್ಯಮಗಳ ಸ್ಥಿತಿಗೆ ಹಿಡಿದ ಕನ್ನಡಿ ಆದರೂ ಆಗಬಹುದೆಂದು ಈಗೀಗ ಅನ್ನಿಸತೊಡಗಿದೆ…!!


ಓದಿ: ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹ


ವೀಡಿಯೋ ನೋಡಿ: ಪರಮಾತ್ಮ ಪೊಲಿಟಿಕಲ್ ಮ್ಯಾಜಿಕ್ ಶೋ; ಚಿಲ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...