Homeಮುಖಪುಟ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ - ರಾಜಾರಾಂ ತಲ್ಲೂರು

’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ – ರಾಜಾರಾಂ ತಲ್ಲೂರು

ಒಂದು ಕ್ಷಣ ಕುಳಿತು ತಣ್ಣಗೆ ಯೋಚಿಸಿದರೆ ಸುಳ್ಳೆಂದು, ವಿಷವೆಂದು ಗೊತ್ತಾಗಿಬಿಡುವ ಸಂಗತಿಯನ್ನೂ ಕೂಡ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಸುತ್ತಾ ಹೋದಾಗ, ಓದುಗನಿಗೆ ಆ ಒಂದು ಕ್ಷಣ ತಣ್ಣಗೆ ಕುಳಿತು ಯೋಚಿಸುವ ಸಮಯ ಉಳಿದಿರುವುದಿಲ್ಲ.

- Advertisement -
- Advertisement -

ಸಾಂಪ್ರದಾಯಿಕವಾಗಿ ಮೇಲು ಜಾತಿಗಳದೇ ಬಿಗಿಮುಷ್ಟಿಯಲ್ಲಿ ಬಹುತೇಕ ‘ಗುರುಶಿಷ್ಯ ಪರಂಪರೆ’ ಆಗಿಯೇ ಉಳಿದಿದ್ದ ಸುದ್ದಿಕೋಣೆಗಳಲ್ಲಿ ಸುದ್ದಿಗಾರರ ಸಂಚಲನದ ಮ್ಯಾಪಿಂಗ್ ಬಹಳ ಕುತೂಹಲಕರ ಸಂಗತಿಗಳನ್ನು ಹೊರಹಾಕಬಹುದು. ಇಲ್ಲಿ ನಾನು ಮಾಡಿರುವುದು ಕಣ್ಣಳತೆಯ ಮ್ಯಾಪಿಂಗೇ ಹೊರತು ಫೀಲ್ಡಿಗಿಳಿದು ಅಂಕಿಸಂಖ್ಯೆಗಳ ಆಧಾರದಲ್ಲಿ ಮಾಡಿದ್ದಲ್ಲ. ಆದರೆ ಮಾಧ್ಯಮ ಪರಿಣತರಿಗೆ ಇಲ್ಲೊಂದು ಚೆಂದದ ಸಂಶೋಧನಾವಕಾಶ ಇದೆ ಎಂದು ಧಾರಾಳವಾಗಿ ಹೇಳಬಲ್ಲೆ.

ಅಂದಾಜು 2000-2010 ಕನ್ನಡದ ಮುದ್ರಣ ಮಾಧ್ಯಮಗಳಲ್ಲಿ ಸ್ಥಿತ್ಯಂತರದ ಕಾಲ. ಈ ಅವಧಿಯಲ್ಲೇ (2000) ನಾನು ಉದ್ದೇಶಪೂರ್ವಕವಾಗಿ ನನ್ನ ಅನುಭವ ಇದ್ದ ಮುದ್ರಣ ಮಾಧ್ಯಮದ ಬದಲು ವೆಬ್ ಮಾಧ್ಯಮದ ಕಡೆ ಹೊರಳಿಕೊಂಡಿದ್ದರಿಂದ ನನಗೆ ಆದ ಲಾಭವೆಂದರೆ, ಒಳಗಿನವನಾಗಿದ್ದೂ ಹೊರಗಿನಿಂದ ಮುದ್ರಣ ಮಾಧ್ಯಮದ ಸುದ್ದಿಮನೆಗಳನ್ನು ನೋಡುವ ಅವಕಾಶ ಸಿಕ್ಕಿದ್ದು. ಈ ಅವಧಿಯಲ್ಲೇ ಕನ್ನಡ ಮುದ್ರಣ ಮಾಧ್ಯಮಗಳು ಮಾಲಕೀಯ ನಿಗಾದಿಂದ ‘ಕಾರ್ಪೋರೇಟ್ ನಿಗಾ ವ್ಯವಸ್ಥೆ’ಗೆ ಹೊರಳಿಕೊಂಡದ್ದು. ಅರ್ಥಾತ್ ಪತ್ರಿಕೆಯೊಂದರ ‘ಹೃದಯ’ದ ಜವಾಬ್ದಾರಿಯನ್ನು ‘ಕಿಡ್ನಿ’ ವಹಿಸಿಕೊಂಡದ್ದು. ಪುನರರ್ಥಾತ್, ಸುದ್ದಿಮನೆಗೆ ಸುದ್ದಿಗಾರರ ನೇಮಕ ಮಾಡುವ ಸುದ್ದಿಮನೆಯ ಹಿರಿಯರ ಜವಾಬ್ದಾರಿಯನ್ನು ಸಂಸ್ಥೆಯ ‘ಮಾನವ ಸಂಪನ್ಮೂಲ’ ವಿಭಾಗಗಳು ವಹಿಸಿಕೊಂಡದ್ದು!

ಈ ಸ್ಥಿತ್ಯಂತರದ ಮೊದಲ ಪರಿಣಾಮ -ಸುದ್ದಿಮನೆಯಲ್ಲಿರುವ ‘ಹಿರಿತಲೆ’ಗಳ ತಲೆದಂಡ. ಅದಕ್ಕೆ ಕೊಡಲಾದ ಕಾರ್ಪೋರೇಟ್ ಕಾರಣ ‘ಕನ್ನಡದ ಸುದ್ದಿಮನೆಯ ಸರಾಸರಿ ಪ್ರಾಯ 50+ ಇದೆ. ಉದಾರೀಕರಣದ-ನವಮಾರುಕಟ್ಟೆಗಳ ಪರ ಇದ್ದು ಆದಾಯ ಗಳಿಸಬೇಕಾಗಿರುವ ಪತ್ರಿಕೆಗಳು ಈ ನವ ಮಾರುಕಟ್ಟೆಯ ನಾಡಿಮಿಡಿತ ಅರಿಯಬೇಕಾದರೆ, ಸುದ್ದಿಮನೆಗಳ ಸರಾಸರಿ ಪ್ರಾಯ 30-35ರ ಆಸುಪಾಸು ಇರಬೇಕು ಎಂಬ ಕಾರ್ಪೋರೇಟ್ ತುಡಿತ. ಹೊಸದಾಗಿ ಬಂದಿದ್ದ ಈ ಕಾರ್ಪೋರೇಟೀಕರಣದ ವೃತ್ತಿಪರತೆಯ ವರಸೆಗಳು ಎಷ್ಟು ಬಲವಾಗಿದ್ದವೆಂದರೆ, ಅವರ ಅಂಕಿ-ಸಂಖ್ಯೆಗಳು, ಚಾರ್ಟುಗಳು, ಪಿಪಿಟಿ ಪ್ರೆಸಂಟೇಷನ್‍ಗಳು, ಉಳಿದವರನ್ನು ಬಿಡಿ – ಮಾಲಕ ವರ್ಗದ ಬಾಯಿಯನ್ನೇ ಕಟ್ಟಿಸಿಬಿಡುತ್ತಿದ್ದವು/ತ್ತಿವೆ.

ಈ ಸ್ಥಿತ್ಯಂತರದ ಆರಂಭದ ಹೊತ್ತಿಗೆ ಸುದ್ದಿಮನೆಗಳ ಪರಿಸ್ಥಿತಿ ಹೇಗಿತ್ತೆಂದರೆ ಬಹುತೇಕ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಅನುಭವೀ, ಇಗೊ ಧಿಮಾಕಿನ ಮುದುಕರೇ ತುಂಬಿದ್ದರು. ಸುದ್ದಿಮನೆಗಳಿಗೆ ಜಂಪಿಂಗ್ ಬೋರ್ಡ್‍ಗಳೆಂದೇ ಪ್ರಸಿದ್ಧವಾಗಿದ್ದ ಎರಡು ಪತ್ರಿಕೆಗಳು – ‘ಸಂಯುಕ್ತ ಕರ್ನಾಟಕ’ ಹಾಗೂ ‘ಹೊಸದಿಗಂತ’ ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಸುದ್ದಿಮನೆಯ ಸರಾಸರಿ ಪ್ರಾಯದಲ್ಲಿ ಬಹಳ ತಗ್ಗಿನಲ್ಲಿದ್ದವು. ಅಂದರೆ, ಬೇರೆ ಸುದ್ದಿಮನೆಗಳಿಗೆ ಹೋಲಿಸಿದರೆ ಅಲ್ಲಿ ಎಳೆಯರ ಸಂಖ್ಯೆ ಜಾಸ್ತಿ ಇತ್ತು.

ಈಗ ನಾನು ಲೇಖನದ ಆರಂಭದಲ್ಲಿ ಹೇಳಿದ ಸುದ್ದಿಮನೆಯಲ್ಲಿ ಸಂಚಲನದ ಮ್ಯಾಪಿಂಗ್ ಮಾಡಿದರೆ, ನಿಮಗೆ ಕಾಣಬಹುದಾದ ಎರಡು ಹಾಟ್‍ಸ್ಪಾಟ್‍ಗಳೆಂದರೆ ‘ಸಂಯುಕ್ತ ಕರ್ನಾಟಕ’ ಹಾಗೂ ‘ಹೊಸದಿಗಂತ’. ಬಹುತೇಕ ಎಲ್ಲ ಸುದ್ದಿಮನೆಗಳಿಗೂ ಈ ಎರಡು ಪತ್ರಿಕೆಗಳಿಂದ ಅನುಭವೀ ಎಳೆಯರು ಹರಡಿ ಹೋದರು. ಈ ಹರಡುವಿಕೆ 1999ರಲ್ಲಿ ‘ವಿಜಯ ಕರ್ನಾಟಕ’ದ ಆರಂಭದೊಂದಿಗೆ ಟ್ರಿಗರ್ ಆಯಿತು. ಸುದ್ದಿಮನೆಯ ಮಂದಿ ಪತ್ರಿಕೆಯಿಂದ ಪತ್ರಿಕೆಗೆ ಹಿಂಡು ಕಟ್ಟಿಕೊಂಡು ತಿರುಗುವ ಸಂಪ್ರದಾಯಕ್ಕೂ ಇಲ್ಲೇ ನಾಂದಿ ಆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತಿನ ಕನ್ನಡ ಮುದ್ರಣ ಮಾಧ್ಯಮದ ಪರಿಸ್ಥಿತಿಗೆ ಈ ಬೆಳವಣಿಗೆ ಬೀಜ ಬಿತ್ತಿತು.

ಮೂಲದಲ್ಲೇ ಕಲುಷಿತ

‘ಸುದ್ದಿ ಸಂಸ್ಕರಣೆ’ ಎಂಬುದು ಕನ್ನಡದ ಮಟ್ಟಿಗೆ ‘ಗುರುಶಿಷ್ಯ’ ಪರಂಪರೆಯದೇ ಕೊಡುಗೆ. ಹಠಾತ್ ಆಗಿ ಹಿರಿಯ ತಲೆಮಾರಿನ ಪತ್ರಕರ್ತರ ಒಂದು ದೊಡ್ಡ ಬಳಗ ಕನ್ನಡ ಪತ್ರಿಕೆಗಳ ಸುದ್ದಿಮನೆಯಿಂದ ಹತ್ತು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ, ವಿವಿಧ ಕಾರಣಗಳ ಹೆಳೆಯಲ್ಲಿ ‘ಒಂದೇ ಉದ್ದೇಶ ಸಾಧನೆಗಾಗಿ (ಮಾರುಕಟ್ಟೆಯಲ್ಲಿ ಗೆಲ್ಲುವ ಉದ್ದೇಶ ಅದು!)’ ಹೊರದಬ್ಬಿಸಿಕೊಂಡಾಗ, ಸುದ್ದಿಮನೆಯಲ್ಲಿ ಏಕಾಏಕಿ ಸುದ್ದಿ ಸಂಸ್ಕರಣೆ ಕೌಶಲದ ಕೊರತೆ ಉಂಟಾಗತೊಡಗಿತು. ಅದರ ಫಲವಾಗಿ ನಿಧಾನಕ್ಕೆ ಸುದ್ದಿಗಳು ತಮ್ಮ ಸೂಕ್ಷ್ಮಜ್ಞತೆಯನ್ನು ಕಳೆದುಕೊಳ್ಳತೊಡಗಿದವು. ಭಾಷೆ, ವ್ಯಾಕರಣದಂತಹ ಒಣ ಪಾಂಡಿತ್ಯದಿಂದ ಆರಂಭಿಸಿ ಸುದ್ದಿ ವಿಶ್ಲೇಷಣೆ, ಸುದ್ದಿಯ ದರ್ಜೆ ನಿರ್ಧಾರಣೆಯಂತಹ ಎಲ್ಲ ಸುದ್ದಿ ಕೌಶಲಗಳೂ ಏಕಾಏಕಿ ಮೊಂಡಾಗಿ, ಮಾರ್ಕೇಟು ಮಂಗಾಟಗಳು ಮುನ್ನೆಲೆಗೆ ಬರತೊಡಗಿದವು. ಓದುಗರ ಕಜ್ಜಿ ಕೆರೆಯುವ ಮತ್ತು ಆ ಕೆರೆತದ ಆನಂದಕ್ಕೆ ಉಪ್ಪು ಸವರಿ ಮತ್ತಷ್ಟು ಹಾರ ಕೊಡುವ ಕೆಲಸಗಳು ಆರಂಭಗೊಂಡವು.

2010ರ ಹೊತ್ತಿಗೆ, ದೇಶದಾದ್ಯಂತ ಹೆಚ್ಚಿನಂಶ ಇಂತಹದೊಂದು ಟ್ರೆಂಡ್ ವಿವಿಧ ಸ್ಥಳೀಯ ಕಾರಣಗಳಿಗಾಗಿ ಹುಟ್ಟಿಕೊಂಡಿರಬೇಕು. ಅಂತೂ ಎಲ್ಲೆಡೆ ಇದೇಸ್ಥಿತಿ ಇರುವಾಗ ‘ಸುದ್ದಿಮೂಲ ಸಂಸ್ಥೆ’ಗಳು ಹಿಂದುಳಿಯಲಾದೀತೇ? ANI, PTI, UNI ಮತ್ತಿತರ ಸುದ್ದಿಮೂಲ ಸಂಸ್ಥೆಗಳೂ ಇಂತಹದೇ ಸ್ಥಿತ್ಯಂತರಕ್ಕೆ ಒಳಪಟ್ಟು ತಮ್ಮ ತಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು ಹಂಚಲಾರಂಭಿಸಿದವು. ಈ ರೀತಿ ಮೂಲದಿಂದ ಬಂದ ಸುದ್ದಿಗಳ ‘ಸಂಸ್ಕರಣೆ’ ಕೌಶಲ ಇಲ್ಲದ ಸುದ್ದಿಮನೆಗಳು (ಕನಿಷ್ಟ ಕನ್ನಡದ ಮಟ್ಟಿಗೆ) ಇದೇ ಸುದ್ದಿಗಳನ್ನು ತಮ್ಮ ಓದುಗರಿಗೆ ಬಡಿಸತೊಡಗಿದವು.

ಈ ವೇಳೆಗೆ, ದೇಶದ ರಾಜಕೀಯ ಸ್ಥಿತ್ಯಂತರಗಳು (1996 – 2004) ಮೊದಲ ಬಾರಿಗೆ ಕಾಂಗ್ರೆಸ್ಸೇತರ ಆಡಳಿತಕ್ಕೆ ಹಾದಿಮಾಡಿಕೊಡುವ ಹೊತ್ತಿಗೇ, ತನ್ನ ಯೋಜಿತ ಬದಲಾವಣೆಗಳನ್ನು ಮಾಧ್ಯಮ ರಂಗದಲ್ಲೂ ತಂದವು. ನಾನು ಗಮನಿಸಿದಂತೆ, ಸುದ್ದಿಮೂಲ ಸಂಸ್ಥೆಗಳು ಕಲುಷಿತಗೊಳ್ಳಲು ಆರಂಭವಾದದ್ದು ಈ ಹಂತದಲ್ಲಿ. ಇದರರ್ಥ, ಅದಕ್ಕಿಂತ ಮೊದಲು ಸುದ್ದಿಮೂಲ ಸಂಸ್ಥೆಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿರಲಿಲ್ಲ ಎಂದಲ್ಲ. ಅಲ್ಲಿಯ ತನಕ ಇದ್ದಂತಹ ಏಕಸ್ವಾಮ್ಯದ ಕಾಲ ಮುಗಿಯಿತು, ಅಷ್ಟೇ. ಆದರೆ, 2010ರ ಹೊತ್ತಿಗೆ ಸುದ್ದಿಮೂಲ ಸಂಸ್ಥೆಗಳ ಕಲುಷಿತಗೊಳ್ಳುವಿಕೆ ಎಷ್ಟು ತೀವ್ರಗೊಂಡಿತೆಂದರೆ ಸುದ್ದಿಗಳು ಸುದ್ದಿಮೂಲದಲ್ಲೇ ‘ಸೂಕ್ತ ಸಂಸ್ಕರಣೆಗೆ ಒಳಪಟ್ಟು’ ಸುದ್ದಿಮನೆಗಳಿಗೆ ತಲುಪತೊಡಗಿದವು.

2014 ಮತ್ತು 2019ರ ಮಹಾಚುನಾವಣೆಗಳಲ್ಲಿ ಮೈನ್ ಸ್ಟ್ರೀಮ್ ಮಾಧ್ಯಮಗಳಲ್ಲೇ ಯಾವ ಪ್ರಮಾಣದಲ್ಲಿ ಪರೋಕ್ಷ ಪ್ರಚಾರದ, ಸತ್ಯದ ಅಂಚಿನಲ್ಲಿರುವ ಅಥವಾ ಸುಳ್ಳು ಸುದ್ದಿಗಳು ಹೇಗೆ ಕೆಲಸ ಮಾಡಿದವು ಎಂಬುದು ಈಗ ಇತಿಹಾಸ. ಇದರಲ್ಲಿ ಎಲ್ಲ ತಪ್ಪೂ ಸುದ್ದಿಮನೆಗಳದಲ್ಲ. ಸುದ್ದಿಮನೆ ಪ್ರಕಟಿಸುವ ನೂರಕ್ಕೆ 60 ಸುದ್ದಿಗಳು (ಅಂದರೆ ಸ್ಥಳೀಯ ಸುದ್ದಿ ಹೊರತುಪಡಿಸಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮತ್ತು ರಾಜ್ಯ ಸುದ್ದಿಗಳು) ಸುದ್ದಿಮೂಲ ಸಂಸ್ಥೆಗಳನ್ನು ಆಧರಿಸಿದ ಸುದ್ದಿಗಳು. ಹಾಗಾಗಿ, ಮೂಲದಲ್ಲೇ ಅಂದರೆ ಸುದ್ದಿಮೂಲ ಸಂಸ್ಥೆಗಳಲ್ಲಿ ಸುದ್ದಿಯನ್ನು ತಮ್ಮ ಅನುಕೂಲಕ್ಕೆ ತಿರುಚಿಕೊಳ್ಳುವುದು ಸಾಧ್ಯವಾದರೆ, ಉಳಿದೆಡೆ ಅದು ತನ್ನಿಂತಾನೆ ಹರಿದುಬರುತ್ತದೆ ಎಂಬ ರಾಜಕೀಯ ಅರಿವು ಮೂಡಿದ್ದು ಈ ಹಂತದಲ್ಲಿ.

ಸುದ್ದಿಯು ಮೂಲದಲ್ಲೇ ಕಲುಷಿತಗೊಂಡಮೇಲೆ, ಸುದ್ದಿಮನೆಗಳಲ್ಲಿ ಅದು ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎಂಬಂತಾಯಿತು. ತಿರುಚಲಾದ, ರಾಜಕೀಯ ಪ್ರೇರಿತವಾದ ಸುದ್ದಿಗಳು ಪೂರಕ ಸಂಸ್ಕರಣೆಯ ಜೊತೆ ಆಡಂಬರ, ಅಲಂಕಾರಗಳೊಂದಿಗೆ ಪ್ರಕಟಗೊಳ್ಳುವುದು ಈಗ ಎಗ್ಗಿಲ್ಲದೇ ನಡೆದಿದೆ. ಕನ್ನಡದ ಮಟ್ಟಿಗೆ ಯಾವುದೇ ದಿನದ ಯಾವುದೇ ಪತ್ರಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಕನಿಷ್ಠ ಒಂದು ಸುದ್ದಿಯನ್ನು ಗುರುತಿಸಲು ಇಂದು ಸಾಧ್ಯವಿದೆ.

ಸೋಷಿಯಲ್ ಮೀಡಿಯಾ ಟಾಪ್‍ಅಪ್

ಮೀಡಿಯಾ ಬಂದ ಆರಂಭದಲ್ಲಿ ಅದನ್ನು ಸಮಾನಾವಕಾಶಗಳನ್ನು ಒದಗಿಸುವ ಟೂಲ್ ಎಂದು ಪರಿಗಣಿಸಲಾಗಿತ್ತು. ಆದರೆ, ಅದು ಮೈಕ್ರೊಬ್ಲಾಗಿಂಗ್ ಬದಲು ಮ್ಯಾಕ್ರೊಫ್ಲಾಗಿಂಗ್ ಆರಂಭಿಸಿತು. ನವ ರಾಜಕಾರಣದ ತಂತ್ರಗಾರಿಕೆಯು ಕುತಂತ್ರಗಾರಿಕೆ ಆಗಿ ಬದಲಾಗುವಲ್ಲಿ ಸೋಷಿಯಲ್ ಮೀಡಿಯಾಗಳ ಕೊಡುಗೆ ಅಪಾರ.

ಕಲುಷಿತ ಸುದ್ದಿಯ ‘ಮಡ್ಡಿ’ ರೂಪ ಪ್ರಕಟಗೊಳ್ಳುವುದು ಸೋಷಿಯಲ್ ಮೀಡಿಯಾಗಳಲ್ಲಿ. ವಾಟ್ಸಾಪ್‍ನಂತಹ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕಬಲ್ಲ ‘ಎಂಡೆ-ಪ್ಯಾಂಡಮಿಕ್ (ಅರ್ಥಾತ್ ಎಂಡೆಮಿಕಲಿ ಪ್ಯಾಂಡಮಿಕ್)’ ಕ್ರಿಮಿನಲ್ ಮೀಡಿಯಾಗಳು ರಿಯಲ್‍ಟೈಮ್‍ನಲ್ಲೇ ಅದರ ಓದುಗರನ್ನು ತಲುಪಿ, ಅದಾಗಿ ಕೆಲವು ಗಂಟೆಗಳ ಬಳಿಕ ಟೆಲಿವಿಷನ್ ಚಾನೆಲ್ ಅಥವಾ ಮರುದಿನ ಪ್ರಿಂಟ್ ಮೀಡಿಯಾ ಮೂಲಕ ಅದೇ ಕಲುಷಿತ ಸುದ್ದಿ ತಲುಪಿದಾಗ, ಸಹಜವಾಗಿಯೇ ಓದುಗರು ಹಲವು ಮೂಲಗಳಿಂದ ದೊರೆತಿರುವ ಸುದ್ದಿ ನಿಜವಿರಬಹುದೆಂಬ ಅಭಿಪ್ರಾಯ ತಳೆಯುತ್ತಾರೆ. ಇದು ಇಂದು ಆಟದ ನಿಯಮವಾಗಿಬಿಟ್ಟಿದೆ. ಮೊದಲಿಗೇ ವಿಷಕಾರಿ ಸುಳ್ಳು (ಸೋಷಿಯಲ್ ಮೀಡಿಯಾ), ಬಳಿಕ ಅಬ್ಬರದ ಸುಳ್ಳು (ಟೆಲಿವಿಷನ್) ಮತ್ತು ಕೊನೆಗೆ ಸತ್ಯದಂಚಿನ ಸುಳ್ಳು (ಮುದ್ರಿತ ಮಾಧ್ಯಮ) ಸಿಗುವ ಕ್ರೊನಾಲಜಿ ಈವತ್ತು ಓದುಗರಿಗೆ ಸುದ್ದಿಯನ್ನು ಅರ್ಥೈಸಿಕೊಳ್ಳುವ ಕ್ರೊನಾಲಜಿಯೂ ಆಗಿಬಿಟ್ಟಿರುವುದು ನಮ್ಮ ಕಾಲದ ದುರಂತ.

ಒಂದು ಕ್ಷಣ ಕುಳಿತು ತಣ್ಣಗೆ ಯೋಚಿಸಿದರೆ ಸುಳ್ಳೆಂದು, ವಿಷವೆಂದು ಗೊತ್ತಾಗಿಬಿಡುವ ಸಂಗತಿಯನ್ನೂ ಕೂಡ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಸುತ್ತಾ ಹೋದಾಗ, ಓದುಗನಿಗೆ ಆ ಒಂದು ಕ್ಷಣ ತಣ್ಣಗೆ ಕುಳಿತು ಯೋಚಿಸುವ ಸಮಯ ಉಳಿದಿರುವುದಿಲ್ಲ. ಈ ನಾನ್‍ಸ್ಟಾಪ್ ಕಾರ್ಪೆಟ್ ಬಾಂಬಿಂಗ್ ಇವತ್ತಿನ ವಿಷ ಸನ್ನಿವೇಶಕ್ಕೆ ಮೂಲ ಕಾರಣ. ಇದಕ್ಕೆ ವಿಷಹರ ಚಿಕಿತ್ಸೆ ಎಂದರೆ ಒಂದಿಷ್ಟು ಕಾಲ ಅವುಗಳಿಂದ ದೂರ ಉಳಿದುಬಿಡುವುದು. ನಿರಂತರ ಸುದ್ದಿಯನ್ನು ಕಳೆದುಕೊಂಡರೆ ಬದುಕಿನಲ್ಲಿ ಕಳೆದುಕೊಳ್ಳುವಂತಹದೇನೂ ಇಲ್ಲ ಎಂಬ ಸತ್ಯದ ಅರಿವು ಮೂಡಿಸಿಕೊಳ್ಳುವುದು.

(ಲೇಖಕರು ಮಾಜೀ ಪತ್ರಕರ್ತರು ಮತ್ತು ಹಾಲೀ ಭಾಷೋದ್ಯಮಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Rajaram talureravarige shubharathri nimmaa mahiti nodi bahala anubhava ayitu hagu egina midiyagalu odugara mattu nodugarannu mosa hagu dikku tappisutive sarvajanikaru echhara vagabeku idu nanna manavi

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...