Homeಮುಖಪುಟಪಕ್ಷಾಂತರ ಚರ್ಚೆ: ‘ಸಾಯುವವರೆಗೂ ಬಿಜೆಪಿ ಸೇರಲಾರೆ’ ಎಂದ ಕಪಿಲ್‍ ಸಿಬಲ್‍

ಪಕ್ಷಾಂತರ ಚರ್ಚೆ: ‘ಸಾಯುವವರೆಗೂ ಬಿಜೆಪಿ ಸೇರಲಾರೆ’ ಎಂದ ಕಪಿಲ್‍ ಸಿಬಲ್‍

- Advertisement -
- Advertisement -

ಜಿತಿನ್ ಪ್ರಸಾದ್‍ ನಿರ್ಗಮನ ಕಾಂಗ್ರೆಸ್‍ ಪಕ್ಷದಲ್ಲಿನ ಆಳವಾದ ಬಿಕ್ಕಟ್ಟನ್ನು ಮತ್ತೊಮ್ಮೆ ಬಹಿರಂಗಗೊಳಿಸಿದೆ. ಈ ಹಿಂದೆ ಸೋನಿಯಾ ಗಾಂಧಿಗೆ ಪತ್ರ ಬರೆದ “ಜಿ -23” ಅಥವಾ 23 “ಭಿನ್ನಮತೀಯ” ನಾಯಕರ ಗುಂಪಿನ ಇತರ ಜನರ ಮೇಲೆ ಈ ಪ್ರಕರಣ ಬೆಳಕು ಚೆಲ್ಲುತ್ತದೆ. ಈ  ಜಿ-23 ಕ್ಲಬ್‌ನ ಪ್ರಮುಖ ಸದಸ್ಯರಾದ ಕಪಿಲ್ ಸಿಬಲ್, ಅಂತಹ ಯಾವುದೇ ಕ್ರಮವನ್ನು (ಜಿತಿನ್‍ ಮಾಡಿದಂತೆ) ನಾನು ತೆಗೆದುಕೊಳ್ಳಲಾರೆ. ನಾನು ಮೃತನಾದಾಗ ಅಂಥದ್ದನ್ನು ಊಹಿಸಬಹುದು, ನಾನೆಂದೂ ಬಿಜೆಪಿ ಸೇರಲಾರೆ ಎಂದಿದ್ದಾರೆ.

ಆದರೆ ಸಿಬಲ್‍ ತಮ್ಮ ಆಕ್ಷೇಪ ಮತ್ತು ಆಗ್ರಹಗಳನ್ನು ಪುನರುಚ್ಛರಿಸಿದ್ದಾರೆ. ಈ ಸಂದರ್ಭವನ್ನು ಅವರು ತಮ್ಮ ಪಕ್ಷದ ಉನ್ನತ ನಾಯಕರಿಗೆ ಒಂದು ಸಂದೇಶ ಕಳಿಸುವ ಅವಕಾಶವನ್ನಾಗಿ ಬಳಸಿಕೊಂಡಿದ್ದಾರೆ.

ಸಿದ್ಧಾಂತಕ್ಕಿಂತ ವೈಯಕ್ತಿಕ ಲಾಭದ ಆಧಾರದ ಮೇಲೆ ‘ಪ್ರಸಾದ್‍ ರಾಮ್‍’ (ಅವರೇ ಸೃಷ್ಟಿಸಿದ ಪದ) ಪಕ್ಷಾಂತರ ನಡೆದಿದೆ ಎಂಬುದನ್ನು ಅವರು ಒಪ್ಪಲಿಲ್ಲ ಎಂದು ಎನ್‍ಡಿಟಿವಿ ವರದಿ ಮಾಡಿದೆ.

“ಪಕ್ಷದ ನಾಯಕತ್ವ ಏನು ಮಾಡಿದೆ ಅಥವಾ ಮಾಡಿಲ್ಲ ಎಂಬುದರ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾವು ಭಾರತೀಯ ರಾಜಕಾರಣದಲ್ಲಿ ಒಂದು ಹಂತವನ್ನು ತಲುಪಿದ್ದೇವೆ, ಅಲ್ಲಿ ಈ ರೀತಿಯ (ಜಿತಿನ್‍ ನಿರ್ಧಾರ) ನಿರ್ಧಾರಗಳು ಸಿದ್ಧಾಂತವನ್ನು ಆಧರಿಸಿಲ್ಲ. ಅವು ಈಗ ನಾನು ಪ್ರಸಾದ ರಾಮ್ ಎಂದು ಕರೆಯುವ ಆಧಾರದ ಮೇಲೆ ನಡೆಯುತ್ತಿರುವ ರಾಜಕೀಯ. ಇದು ಹಿಂದೆ ಆಯಾ ರಾಮ್ ಗಯಾ ರಾಮ್ ಆಗಿತ್ತು. ಪಶ್ಚಿಮ ಬಂಗಾಳದಲ್ಲಿ ಇದು ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಬಿಜೆಪಿ ಯಶಸ್ವಿಯಾಗಲಿದೆ ಎಂದು ಭಾವಿಸಿದ್ದರಿಂದ ಜನರು ಇದ್ದಕ್ಕಿದ್ದಂತೆ ಬಿಜೆಪಿಗೆ ಪಕ್ಷಾಂತರಗೊಂಡರು. ಈಗ ಬಹುಪಾಲು ರಾಜಕಾರಣಿಗಳು ಚುನಾವಣೆಗಳಲ್ಲಿ ಹೋರಾಡಲು ಬಯಸುವುದು ಒಂದು ಸಿದ್ಧಾಂತದ ಬಗೆಗಿನ ನಂಬಿಕೆಗಳ ಆಧಾರದ ಮೇಲೆ ಅಲ್ಲ, ಆದರೆ ವೈಯಕ್ತಿಕವಾಗಿ ಏನನ್ನಾದರೂ ಪಡೆಯಬಹುದು’ ಎಂಬ ದೃಢೀಕರಣದ ಆಧಾರದ ಮೇಲೆ.. ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲೂ ಇದೇ ಸಂಭವಿಸಿದೆ…’ ಎಂದು ಹೇಳಿದ್ದಾರೆ.

ಕಾಂಗ್ರೆಸ್‍ಗೆ  ಸುಧಾರಣೆಗಳು ಅಗತ್ಯವಾಗಿವೆ ಮತ್ತು ಪಕ್ಷದ ನಾಯಕತ್ವವು ಇದನ್ನು ಆಲಿಸಬೇಕಾಗಿದೆ ಎಂದು ಸಿಬಲ್ ಹೇಳಿದರು. ಅದೇ ಸಮಯದಲ್ಲಿ, ಜಿತಿನ್ ಪ್ರಸಾದ ಅವರಂತಹ ವ್ಯಕ್ತಿ ಬಿಜೆಪಿಗೆ ಸೇರುತ್ತಾರೆ ಎಂಬುದಕ್ಕೆ ವಿವರಣೆ ನೀಡುವುಸು ಅಸಾಧ್ಯ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

“ಸಮಸ್ಯೆಗಳನ್ನು ಬಗೆಹರಿಸಿದ್ದರೂ, ನಾನು ಏನನ್ನೂ ಪಡೆಯುತ್ತಿಲ್ಲ ಎಂದು ಒಬ್ಬ ವ್ಯಕ್ತಿಯು ಭಾವಿಸಿದರೆ ಅವನು ಹೊರಟು ಹೋಗುತ್ತಾನೆ. ಜಿತಿನ್ ಹೊರಹೋಗಲು ಒಳ್ಳೆಯ ಕಾರಣಗಳಿರಬಹುದು. ಪಕ್ಷವನ್ನು ತೊರೆದಿದ್ದಕ್ಕಾಗಿ ನಾನು ಅವರನ್ನು ದೂಷಿಸುವುದಿಲ್ಲ. ಅವರು ಬಿಜೆಪಿಗೆ ಸೇರಿದ ಕಾರಣಗಳಿಗಾಗಿ ನಾನು ಅವರನ್ನು ದೂಷಿಸುತ್ತೇನೆ. ಮೂರು ದಶಕಗಳಿಂದ ತಾನು ವಿರೋಧಿಸುತ್ತಿದ್ದ ಒಂದು ಸಿದ್ಧಾಂತವನ್ನು ಈಗ ಸ್ವೀಕರಿಸುತ್ತಿದ್ದೇನೆ ಎಂದು ಅವರು ಯಾವ ಮುಖದಿಂದ ಹೇಳಬಹುದು? ತತ್ವಬದ್ಧ ರಾಜಕೀಯದ ಬಗ್ಗೆ ಮಾತನಾಡುವ ಬಿಜೆಪಿಯವರು, ಜಿತಿನ್ ಅವರನ್ನು ಯಾವ ಮುಖದಿಂದ ತೆಗೆದುಕೊಳ್ಳುತ್ತಾರೆ? ಜನರು ಈ ರೀತಿಯ ರಾಜಕೀಯದ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ಸಿಬಲ್‍ ಹೇಳಿದ್ದಾರೆ.

ಮಧ್ಯಪ್ರದೇಶದ ಪಕ್ಷಾಂತರಗಳು ಮತ್ತು ಹಿಂದಿನ ಲೋಕಸಭಾ  ಚುನಾವಣಾ ಸೋಲುಗಳ ಬಗ್ಗೆ ಕಪಿಲ್‍ ಸಿಬಲ್, ಗುಲಾಮ್ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಮುಂತಾದ 23 ಕಾಂಗ್ರೆಸ್‍ ನಾಯಕರು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ಪಕ್ಷದಲ್ಲಿ ಆಂತರಿಕ ಸುಧಾರಣೆಗಳಿಗ ಮನವಿ ಮಾಡಿದ್ದರು.

ಕಳೆದ ವರ್ಷ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದ ನಂತರ ಪಕ್ಷದಲ್ಲಿ ಉತ್ತಮ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದ ಸಚಿನ್ ಪೈಲಟ್ ಬಗ್ಗೆ ಆಗ ಊಹಾಪೋಹ ಹರಿದಾಡಿದ್ದವು.

ತಪ್ಪುಗಳ ತಿದ್ದುಪಡಿಯ ಭರವಸೆಯ ಮೇರೆಗೆ ಪೈಲಟ್ ಅವರ ಬಂಡಾಯವನ್ನು ಕೊನೆಗೊಳಿಸುವಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಯಶಸ್ವಿಯಾಗಿದ್ದರು.

ಪರಿಹಾರಗಳನ್ನು ನೀಡುವಲ್ಲಿ ಕಾಂಗ್ರೆಸ್ ವಿಫಲವಾದ ಬಗ್ಗೆ ಕೇಳಿದಾಗ ಸಿಬಲ್, “ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ, ಅದು ನಿಜ. ಅವುಗಳನ್ನು ಆದಷ್ಟು ಬೇಗ ಪರಿಹರಿಸಬೇಕು. ನಾವು ಆ ಪ್ರಶ್ನೆಗಳನ್ನು  ಎತ್ತುವುದನ್ನು  ಮುಂದುವರಿಸುತ್ತೇವೆ. ಕೆಲವು ಕಾರಣಗಳಿಂದ  ನಾನು ಪಕ್ಷಕ್ಕೆ ಅಗತ್ಯವಿಲ್ಲ ಎಂದು ಪಕ್ಷ ನನಗೆ ಹೇಳಿದರೆ ನಾನು ಪಕ್ಷವನ್ನು ಬಿಡುತ್ತೇನೆ. ನಾನು ನನಗಾಗಿ ಈ ಪಕ್ಷದಲ್ಲಿ ಇಲ್ಲ. ಆದರೆ ರಾಜಕಾರಣಿಯಾಗಿ ಹುಟ್ಟಿದಾಗಿನಿಂದ ವಿರೋಧಿಸಿದ ಬಿಜೆಪಿಗೆ ನಾನು ಎಂದಿಗೂ ಸೇರುವುದಿಲ್ಲ. ಇದು ಜಿತೀನ್ ಪ್ರಸಾದ್‍ ಎತ್ತಿರುವ ಇಶ್ಯೂ’ ಎಂದು ಸಿಬಲ್‍ ತಿಳಿಸಿದ್ದಾರೆ.

ಪಕ್ಷದಲ್ಲಿ ಸುಧಾರಣೆಗಳು ಅಂದರೆ ಏನು ಎಂಬ ಪ್ರಶ್ನೆಗೆ,  “ನನ್ನನ್ನು ಕೇಳಬೇಡಿ, ಯಾರು ಅವನ್ನು ಪರಿಹರಿಸಬೇಕೋ ಅವರನ್ನು ಕೇಳಿ. ಕಾಂಗ್ರೆಸ್ ಮತ್ತೆ ಹಳೆಯ ಭವ್ಯತೆ ಪಡೆದ ಪಕ್ಷವಾಗಬೇಕು. ಅದಕ್ಕಾಗಿ ನಮಗೆ ಸುಧಾರಣೆಗಳು ಬೇಕಾಗುತ್ತವೆ. ನಾವು ಹೇಳಲು ಬಯಸುವುದನ್ನು ಪಕ್ಷ ಆಲಿಸುವ ಸಮಯವಿದು. ಮುಖ್ಯಸ್ಥರು ಆಲಿಸುವುದನ್ನು  ನಿಲ್ಲಿಸಿದರೆ ಪಕ್ಷ ಕುಸಿಯುತ್ತದೆ. ನಮಗೆ ಬೇಕಾಗಿರುವುದು ಕಾಂಗ್ರೆಸ್ ಪಕ್ಷ ನಮ್ಮ ಮಾತನ್ನು ಆಲಿಸಬೇಕು ಎಂಬುದಷ್ಟೇ’ ಎಂದು ಸಿಬಲ್‍ ಹೇಳಿದರು.


ಇದನ್ನೂ ಓದಿ: ಉತ್ತರ ಪ್ರದೇಶ ಸಿಎಂ ಬದಲಾವಣೆ ವದಂತಿ: ಮೋದಿ, ಶಾ ಭೇಟಿಯಾಗಲಿರುವ ಯೋಗಿ ಆದಿತ್ಯನಾಥ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...