ದೆಹಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 15.3 ಸೆಂ.ಮಿ, ದಾಖಲೆ ಮಳೆ ಸುರಿದ ಪರಿಣಾಮ ಅಕ್ಷರಶಃ ನಲುಗಿಹೋಗಿದೆ. ಕಳೆದ 21 ವರ್ಷಗಳ ಅವಧಿಯಲ್ಲಿ ಭಾರೀ ಮಳೆಯಾಗಿದೆ.
ವರುಣನ ಆರ್ಭಟಕ್ಕೆ ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಅವ್ಯವಸ್ಥೆಯನ್ನು ತಂದಿದೆ. ಹೀಗಾಗಿ ಹವಾಮಾನ ಇಲಾಖೆ ಶನಿವಾರ ಮಧ್ಯಾಹ್ನ ರೆಡ್ ಅಲರ್ಟ್ ನೀಡಿತ್ತು.
ಶನಿವಾರದಂತೆಯೇ, ಭಾನುವಾರ ಬೆಳಗ್ಗೆ ದೆಹಲಿಯು ಮಯೂರ್ ವಿಹಾರ್ ಹಂತ ಸೇರಿದಂತೆ ನಗರದ ಹಲವಾರು ಭಾಗಗಳಲ್ಲಿ ಜನರು ಮಳೆಯಿಂದ ಎಚ್ಚರವಾಗಿದ್ದಾರೆ. ಶನಿವಾರದ ಮಳೆಯನ್ನು ‘ಅತಿ ಭಾರೀ’ ವರ್ಗದಲ್ಲಿ ವರ್ಗೀಕರಿಸಲಾಗಿದೆ. ಶನಿವಾರ ಸಂಚಾರ ವಿಭಾಗಕ್ಕೆ ರಸ್ತೆ ಜಲಾವೃತ ಸಂಬಂಧ 56 ಮರಗಳು ಬಿದ್ದಿರುವ ಕುರಿತು 6 ಹಾಗೂ ಗುಂಡಿಗಳಿಗೆ ಸಂಬಂಧಿಸಿದ 5 ದೂರುಗಳು ಬಂದಿವೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಿಂಟೋ ಸೇತುವೆಯ ಅಂಡರ್‌ಪಾಸ್‌ನಲ್ಲಿ ವಾಹನ ಸಂಚಾರ ಬಂದ್ ಆಗಿದ್ದು, ಜಲಾವೃತವಾಗಿದೆ. ತಿಲಕ್ ಬ್ರಿಡ್ಜ್ ಅಂಡರ್‌ಪಾಸ್‌ನಿಂದಲೂ ಭಾರಿ ನೀರು ನಿಂತಿದೆ. ಪಾಂಡವನಗರ ಅಂಡರ್‌ಪಾಸ್, ಪುರಾಣ ಕ್ವಿಲಾ ರಸ್ತೆ, ದ್ವಾರಕಾ ಲಿಂಕ್ ರಸ್ತೆ, ಶಿವಮೂರ್ತಿ ಬಳಿಯ NH-48, ರೋಹ್ಟಕ್ ರಸ್ತೆ, ವಿಕಾಸ್ ಮಾರ್ಗ, ಏಮ್ಸ್ ಮೇಲ್ಸೇತುವೆ ಅಡಿಯಲ್ಲಿ, ಮೂಲ್‌ಚಂದ್ ಮೇಲ್ಸೇತುವೆ ಅಡಿಯಲ್ಲಿ, ಮದರ್ ತೆರೇಸಾ ಕ್ರೆಸೆಂಟ್-ಸರ್ದಾರ್ ಪಟೇಲ್ ಮಾರ್ಗ ಮತ್ತು ತಿಲಕ್ ಅಡಿಯಲ್ಲಿ ನೀರು ನಿಂತಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ಜುಲೈನಲ್ಲಿ, ವಾಯುವ್ಯ ಭಾರತದಲ್ಲಿ ಪ್ರಸ್ತುತ ಸಾಮಾನ್ಯ ಮಾನ್ಸೂನ್ ಮಳೆ ದಾಖಲಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ. ”ವಾಯುವ್ಯ ಭಾರತದ ಬಹುತೇಕ ಭಾಗಗಳು ಈಗಾಗಲೇ ತಿಂಗಳ ಸಾಮಾನ್ಯ ಮಳೆಯ ಮಾರ್ಕ್ ಅನ್ನು ದಾಟಿವೆ. ಇದೇ ರೀತಿಯ ತೀವ್ರತೆಯ ಮಳೆ ಇನ್ನೂ ಎರಡು ಮೂರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ಕಾಣಿಸುತ್ತಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
1982ರ ನಂತರ ದೆಹಲಿ ಕಂಡ ಅತ್ಯಂತ ದೊಡ್ಡ ಮಳೆ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 1982ರಲ್ಲಿ 16.9 ಸೆಂ.ಮೀ. ಮಳೆಯಾಗಿತ್ತು. 2003ರ ಜುಲೈ 10ರಂದು 13.34 ಸೆಂ.ಮೀ ಮಳೆಯಾಗಿತ್ತು. 1958ರ ಜುಲೈ 21ರಂದು 26.6 ಸೆಂ.ಮೀ.ನಷ್ಟು ಮಳೆಯಾದ ಕುರಿತು. ಐಎಂಡಿ ಮಾಹಿತಿ ನೀಡಿದೆ.
ಮುಂಗಾರಿಗೆ ಪಶ್ಚಿಮದಲ್ಲಿ ಆಗಿರುವ ಅಡಚಣೆ ಮತ್ತು ಮಾನ್ಸೂನ್ ಗಾಳಿ ಬೀಸಿದ ಪರಿಣಾಮ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದೆ, ದೆಹಲಿಯಲ್ಲಿ ಋತುಮಾನದ ಮೊದಲ ಭಾರೀ ಮಳೆ ಇದಾಗಿದೆ ಎಂದು ಇಲಾಖೆ ತಿಳಿಸಿದೆ.
ದೆಹಲಿಯೊಂದಿಗೆ ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ದಕ್ಷಿಣದಲ್ಲಿ ಕರ್ನಾಟಕ ಹಾಗೂ ಕೇರಳದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಯಲ್ಲೋ ಅಲರ್ಟ್ ಘೋಷಿಸಲಾಗಿದೆ.


