ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಜಾಥಾ ದೆಹಲಿಯತ್ತ ಸಾಗುತ್ತಿದ್ದು ನಗರದ ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸಲು ದೆಹಲಿ ಪೊಲೀಸರಿಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಸರ್ಕಾರ ಅನುಮತಿ ನಿರಾಕರಿಸಿದೆ.
ಬೆಳಿಗ್ಗೆಯಿಂದಲೇ ದೆಹಲಿಗೆ ಪ್ರವೇಶಿಸಲು ಯತ್ನಿಸುತ್ತಿದ್ದ ಪ್ರತಿಭಟನಾಕಾರ ರೈತರನ್ನು ಚದುರಿಸಲು ದೆಹಲಿ ಪೊಲೀಸರು ಅಶ್ರುವಾಯು ಬಳಸಿದ್ದಾರೆ.
ದೆಹಲಿ ಪೊಲೀಸರ ಮನವಿಯನ್ನು ತಿರಸ್ಕರಿಸಿದ ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್, “ಪ್ರತಿ ಭಾರತೀಯ ಪ್ರಜೆಗೆ ಶಾಂತಿಯುತವಾಗಿ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕಿದೆ. ಪ್ರತಿಭಟನಾಕಾರರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು, ರೈತರನ್ನು ಜೈಲುಗಳಲ್ಲಿ ಇಡುವುದು ಪರಿಹಾರವಲ್ಲ” ಎಂದು ಪ್ರಧಾನ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿದ ಸರ್ಕಾರ: ಕೊನೆಗೂ ದೆಹಲಿ ಪ್ರವೇಶಿಸಲು ರೈತರಿಗೆ ಅನುಮತಿ
Farmers' march: Delhi Home Minister Satyendar Jain denies permission to police to use stadiums as temporary jails
— Press Trust of India (@PTI_News) November 27, 2020
ಈ ಹಿಂದೆ ದೆಹಲಿ ಪೊಲೀಸರು ನಗರದ ಒಂಬತ್ತು ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಬಳಸಲು ಸರ್ಕಾರದಿಂದ ಅನುಮತಿ ಕೋರಿದ್ದರು.
“ರೈತರ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಬಂಧಿತ ರೈತರನ್ನು ಉಳಿಸಿಕೊಳ್ಳಲು ಒಂಬತ್ತು ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಬಳಸಲು ದೆಹಲಿ ಪೊಲೀಸರು ದೆಹಲಿ ಸರ್ಕಾರವನ್ನು ಕೇಳಿದ್ದಾರೆ” ಎಂದು ಮಾಧ್ಯಮಳು ನಿನ್ನೆ ವರದಿ ಮಾಡಿತ್ತು.
ಈತನ್ಮಧ್ಯೆ, ದೆಹಲಿ ಪೊಲೀಸರು ಭದ್ರತಾ ಸಿಬ್ಬಂದಿಯ ನಿಯೋಜನೆಯನ್ನು ಹೆಚ್ಚಿಸಿದ್ದು, ನೀರಿನ ಫಿರಂಗಿಗಳು ಸೇರಿದಂತೆ ಪ್ರತಿಭಟನಾಕಾರರು ನಗರಕ್ಕೆ ಪ್ರವೇಶಿಸದಂತೆ ದೆಹಲಿ-ಹರಿಯಾಣ ಗಡಿ ಬೇಲಿ ಹಾಕಲು ಮುಳ್ಳುತಂತಿಯನ್ನು ಬಳಸಿದ್ದಾರೆ. ಆಂದೋಲನ ನಡೆಸುತ್ತಿರುವ ರೈತರನ್ನು ದೆಹಲಿಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದರಾದರೂ ಅದನ್ನೂ ಮೀರಿ ರೈತರು ದೆಹಲಿಯನ್ನು ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ ಲೈವ್ ಅಪ್ಡೇಟ್ಸ್: ದೆಹಲಿಯಲ್ಲಿ ಈಗೇನಾಗುತ್ತಿದೆ?


