Homeಮುಖಪುಟಕಂಗನಾ ಕಚೇರಿ ಧ್ವಂಸ: ಕಾನೂನಿನ ದುರುಪಯೋಗವಲ್ಲದೆ ಬೇರೇನಲ್ಲ-ಬಾಂಬೆ ಹೈಕೋರ್ಟ್

ಕಂಗನಾ ಕಚೇರಿ ಧ್ವಂಸ: ಕಾನೂನಿನ ದುರುಪಯೋಗವಲ್ಲದೆ ಬೇರೇನಲ್ಲ-ಬಾಂಬೆ ಹೈಕೋರ್ಟ್

- Advertisement -
- Advertisement -

ಮುಂಬೈ ಪಾಲಿಕೆಯು ನಟಿ ಕಂಗನಾ ರಾಣಾವತ್ ಅವರ ಕಚೇರಿಯ ಒಂದು ಭಾಗವನ್ನು ನೆಲಸಮಗೊಳಿಸಿರುವುದು ಕಾನೂನಿನ ದುರುಪಯೋಗವಲ್ಲದೆ ಬೇರೇನಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಅವರ ಬಂಗಲೆ ಕೆಡವಲು ಪಾಲಿಕೆ ನೀಡಿದ್ದ ನೋಟಿಸ್‌ನ್ನು ಅದು ರದ್ದುಮಾಡಿದ್ದು, ಕೆಡವಿದ ಕಟ್ಟಡದ ಮೌಲ್ಯ ಮಾಪನ ಮಾಡಲು ನ್ಯಾಯಾಲಯ ಹೇಳಿದೆ.

ಸೆಪ್ಟೆಂಬರ್ 9 ರಂದು ಮುಂಬೈನ ಪಾಲಿ ಬೆಟ್ಟದ ಬಂಗಲೆಯೊಂದರ ಕಂಗನಾ ಅವರ ಕಚೇರಿಯ ಒಂದು ಭಾಗವನ್ನು ಪಾಲಿಕೆಯು ನೆಲಸಮ ಮಾಡಿತ್ತು. ಮಹಾರಾಷ್ಟ್ರ ಸರ್ಕಾರ ಮತ್ತು ಆಡಳಿತಾರೂಡ ಶಿವಸೇನೆ ವಿರುದ್ಧ ಅವರು ಮಾಡಿದ ಟೀಕೆಗಳ ಪರಿಣಾಮವಾಗಿ ಪಾಲಿಕೆಯು ತನ್ನ ವಿರುದ್ಧದ ಕ್ರಮ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: ಕೋಮುದ್ವೇಷ ಪ್ರಕರಣ: ಕಂಗನಾ, ರಂಗೋಲಿಗೆ ಮಧ್ಯಂತರ ರಕ್ಷಣೆ ನೀಡಿದ ಬಾಂಬೆ ಹೈಕೋರ್ಟ್!

“ಪಾಲಿಕೆಯು ನಾಗರಿಕರ ಹಕ್ಕುಗಳ ವಿರುದ್ಧ ನಡೆಯುತ್ತಿದೆ. ಇದು ಕಾನೂನಿನ ದುರುಪಯೋಗವಲ್ಲದೆ ಬೇರೆನಲ್ಲ” ಎಂದು ನ್ಯಾಯಮೂರ್ತಿಗಳಾದ ಎಸ್.ಜೆ. ಕಥಾವಾಲಾ ಮತ್ತು ಆರ್.ಐ.ಛಗ್ಲಾ ಅವರ ವಿಭಾಗೀಯ ಪೀಠ ಹೇಳಿದೆ. ಯಾವುದೇ ನಾಗರಿಕರ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ತೋರಿಸಲು ಅನುಮತಿಸುವುದಿಲ್ಲ ಎಂದು ಹೇಳಿದೆ.

ಕಂಗನಾ ಕೂಡಾ ಸರ್ಕಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳುವಾಗ ಸಂಯಮವನ್ನು ತೋರಿಸಬೇಕು ಎಂದು ನ್ಯಾಯಾಲಯವು ಹೇಳಲಿದ್ದು, ಶಿವಸೇನೆ ಸಂಸದ ಸಂಜಯ್ ರೌತ್ ಅವರ ಹೇಳಿಕೆ ಮತ್ತು ನಡವಳಿಕೆಯನ್ನು ನ್ಯಾಯಾಲಯ ಟೀಕಿಸಿದೆ. “ಇಂತಹ ನಡವಳಿಕೆಯು ಖಂಡಿತವಾಗಿಯೂ ಸಂಸದರೂ ಆಗಿರುವ ಸಂಜಯ್ ರಾವತ್‌ ಅವರಂತಹ ನಾಯಕನಿಗೆ ಸರಿಹೊಂದುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:  ಮೀಸಲಾತಿ ವಿರುದ್ಧ ಮಾತನಾಡಿದ ಕಂಗನಾ ರಾಣಾವತ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...