ದೆಹಲಿ ಗಡಿಯಲ್ಲಿ ರೈತರು ಒಳಪ್ರವೇಶಿಸದಂತೆ ತಡೆಯಲು ಉಕ್ಕಿನ ಸರಳುಗಳು, ರೇಜರ್ ಬ್ಲೇಡ್ ಉಳ್ಳ ಮುಳ್ಳು ತಂತಿಗಳು ಮತ್ತು ದೊಡ್ಡ ಬಂಡೆಗಳನ್ನು ತಡೆಗೋಡೆಗಳಾಗಿ ಬಳಸಲಾಗಿದೆ. ಇಂದು ಮಧ್ಯಾಹ್ನ 12:50ರ ಸಮಯದಲ್ಲಿ ಪಟ್ಟು ಬಿಡದ ರೈತರ ದಂಡು ದೆಹಲಿಯತ್ತ ಹೆಜ್ಜೆ ಹಾಕಿದೆ. ದೆಹಲಿಯ ಶಂಭು ಗಡಿಯಲ್ಲಿ ಪೊಲೀಸರು ಅಶ್ರವಾಯು ಮತ್ತು ಜಲಫಿರಂಗಿ ಸಿಡಿಸಿದ್ದಾರೆ.
#WATCH Water cannon and tear gas shells used to disperse protesting farmers at Shambu border, near Ambala pic.twitter.com/EaqmJLhAZI
— ANI (@ANI) November 27, 2020
ನಮಗೆ ಕೊರೊನಾ ಸೋಂಕಿನ ಭಯವಿಲ್ಲ. ಆದರೆ ಸರ್ಕಾರದ ಈ ತಾರತಮ್ಯ, ಬೇಧ ಭಾವದ ಭಯವಿದೆ ಎಂದು ರೈತರು ಹೇಳಿದ್ದಾರೆ. ನಾವು ರೈತರು ಹಾಗಾಗಿ ಇಲ್ಲಿ ಸೇರಿದ್ದೇವೆ. ಇದು ಯಾವ ರಾಜಕೀಯ ಪಕ್ಷದ ಹೋರಾಟವಲ್ಲ. ಬದಲಿಗೆ ಸಮಸ್ತ ರೈತರ ಹೋರಾಟವಾಗಿದೆ. ಯಾರಾದರೂ ಇದನ್ನು ರಾಜಕೀಯ ಪಕ್ಷದ ಹೋರಾಟವೆಂದು ಕರೆದರೆ ಅವರು ರೈತ ವಿರೋಧಿಗಳು ಎಂದು ರೈತರು ಕಿಡಿಕಾರಿದ್ದಾರೆ.
ಈ ನಡುವೆ ರೋಹ್ಟಕ್‌ನಲ್ಲಿ ರೈತರ ಲಾರಿಯೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 40 ವರ್ಷದ ರೈತರೊಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
The voice of farmers cannot be muzzled indefinitely. Centre should immediately initiate talks with Kisan Union leaders to defuse the tense situation at the Delhi borders. Why wait till December 3? pic.twitter.com/e1zUUgDoyx
— Capt.Amarinder Singh (@capt_amarinder) November 27, 2020
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡಲೇ ಕೇಂದ್ರ ಸರ್ಕಾರ ರೈತ ಸಂಘಟನೆಗಳೊಂದಿಗೆ ಮಾತಕತೆ ನಡೆಸಬೇಕು ಎಂದು ತಾಕೀತು ಮಾಡಿದ್ದಾರೆ. ಕೇಂದ್ರವು ತನ್ನ ರಾಜತಾಂತ್ರಿಕತೆಯನ್ನು ಮೆರೆಯಬೇಕು. ರೈತರ ಕನಿಷ್ಠ ಬೆಂಬಲ ಬೆಲೆ ಹಕ್ಕೊತ್ತಾಯವನ್ನು ಒಪ್ಪಿಕೊಳ್ಳಬೇಕು. ಇದು ಎಲ್ಲಾ ರೈತರ ಮೂಲಭೂತ ಹಕ್ಕು. ಇದನ್ನು ಕೇವಲ ಬಾಯಿಮಾತಿನಲ್ಲಿ ಒಪ್ಪಿಕೊಳ್ಳದೆ ಅದನ್ನೊಂದು ಸರ್ಕಾರಿ ಆದೇಶವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಯಾರಾದರೂ ಇದನ್ನು ಕಾಂಗ್ರೆಸ್ ಕುಮ್ಮಕ್ಕಿನ ಹೋರಾಟ ಎಂದು ಕರೆದರೆ ಅವರು ಅಂಧರು ಎಂದು ಪರಿಗಣಿಸಬೇಕು. ಏಕೆಂದರೆ ದೇಶದ ಲಕ್ಷಾಂತರ ರೈತರು ದೆಹಲಿ ಪ್ರವೇಶಿಸಲು ಹಾತೊರೆಯುತ್ತಿರುವುದನ್ನು ಅವರ ಕಣ್ಣುಬಿಟ್ಟು ನೋಡಬೇಕು. ಇದು ಅವರ ಜೀವನೋಪಾಯಕ್ಕೆ ನಡೆಯುತ್ತಿರುವ ಜೀವನ್ಮರಣದ ಹೋರಾಟವಾಗಿದೆ. ಅವರಿಗೆ ಯಾವುದೇ ಪ್ರಚೋದನೆ ಅಥವಾ ಪಕ್ಷದ ಬೆಂಬಲ ಬೇಕಿಲ್ಲ ಎಂದು ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ಇನ್ನೊಂದೆಡೆ ದೆಹಲಿ ಪ್ರವೇಶಿಸಿರುವ ಲಕ್ಷಾಂತರ ರೈತರನ್ನು ಬಂಧಿಸಿಡಲು 09 ಸ್ಟೇಡಿಯಂಗಳನ್ನು ಬಂಧನಕೇಂದ್ರಗಳಾಗಿ ಮಾರ್ಪಡಿಸಬೇಕೆಂಬ ದೆಹಲಿ ಪೊಲೀಸರ ಬೇಡಿಕೆಯನ್ನು ದೆಹಲಿ ಸರ್ಕಾರ ನಿರಾಕರಿಸಿದೆ.
ರೈತ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು ತಾವು ದೆಹಲಿ ಪ್ರವೇಶಿಸಲು ಮತ್ತು ರಾಮಲೀಲಾ ಮೈದಾನದಲ್ಲಿ ಹೋರಾಟ ನಡೆಸಲು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಖಂಡ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿದ ರೈತರು ದೆಹಲಿ ಗಡಿಗಳಲ್ಲಿ ಜಮಾಯಿಸಿದ್ದಾರೆ. ಸರ್ಕಾರ ಅವರಿಗೆ ದೆಹಲಿ ಪ್ರವೇಶಿಸಲು ಅನುಮತಿ ನೀಡದಿದ್ದರೆ ತಿಂಗಳುಗಟ್ಟಲೇ ಗಡಿಯಲ್ಲಿಯೇ ಅನಿರ್ದಿಷ್ಟ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ ಪ್ರವೇಶಿಸಲು ಶತಪ್ರಯತ್ನ: ಮುಂಜಾನೆಯೆ ರೈತರ ಮೇಲೆ, ಲಾಠೀ ಚಾರ್ಜ್, ಜಲಫಿರಂಗಿ ಸಿಡಿಸಿದ ಪೊಲೀಸರು!