Homeಮುಖಪುಟರೈತರ ಪ್ರತಿಭಟನೆಗೆ ಮಣಿದ ಸರ್ಕಾರ: ಕೊನೆಗೂ ದೆಹಲಿ ಪ್ರವೇಶಿಸಲು ರೈತರಿಗೆ ಅನುಮತಿ

ರೈತರ ಪ್ರತಿಭಟನೆಗೆ ಮಣಿದ ಸರ್ಕಾರ: ಕೊನೆಗೂ ದೆಹಲಿ ಪ್ರವೇಶಿಸಲು ರೈತರಿಗೆ ಅನುಮತಿ

ಸರ್ಕಾರದ ಅನುಮತಿ ಮೇರೆಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ದೆಹಲಿ ಪ್ರವೇಶಿಸಿದ್ದಾರೆ. ಆದರೆ ದೆಹಲಿಯೊಳಗೆ ಅಶ್ರವಾಯು ಸಿಡಿತ ಮತ್ತು ಜಲಫಿರಂಗಿ ಸಿಡಿಸಲಾಗಿದೆ ಎಂದು ರೈತ ಮುಖಂಡರು ದೂರಿದ್ದಾರೆ.

- Advertisement -
- Advertisement -

ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಬುರಾರಿ ಪ್ರದೇಶದ ನಿರಂಕರಿ ಸಮಗಂ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವರಿಗೆ ಅನುಮತಿ ಇರುತ್ತದೆ ಎಂದು ದೆಹಲಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ರೈತರ ತೀವ್ರ ಹೋರಾಟಕ್ಕೆ ಮಣಿದು ಈ ಸರ್ಕಾರ ಕೊನೆಗೂ ರೈತರ ದೆಹಲಿ ಪ್ರವೇಶಿಸಲು ಅನುಮತಿ ನೀಡಿದೆ. ನಿರಂಕರಿ ಸಮಗಂ ಮೈದಾನದಲ್ಲಿ ಪ್ರತಿಭಟನೆ ನಡೆಸುವ ಪ್ರಸ್ತಾಪವನ್ನು ಸನ್ಯುಕ್ತ ಕಿಸಾನ್ ಮೋರ್ಚಾ ಸ್ವೀಕರಿಸಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಟ್ವೀಟ್‌ ಮಾಡಿದ್ದಾರೆ.

ಸರ್ಕಾರದ ಅನುಮತಿ ಮೇರೆಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ದೆಹಲಿ ಪ್ರವೇಶಿಸಿದ್ದಾರೆ. ಆದರೆ ನಂತರವೂ ಸಹ ಪೊಲೀಸ್ ದೌರ್ಜನ್ಯ ಮುಂದುವರೆದಿದೆ. ದೆಹಲಿಯೊಳಗೆ ಅಶ್ರವಾಯು ಸಿಡಿತ ಮತ್ತು ಜಲಫಿರಂಗಿ ಸಿಡಿಸಲಾಗಿದೆ ಎಂದು ರೈತ ಮುಖಂಡರು ದೂರಿದ್ದಾರೆ.

ನಮಗೆ ಕೊರೊನಾ ಸೋಂಕಿನ ಭಯವಿಲ್ಲ. ಆದರೆ ಸರ್ಕಾರದ ಈ ತಾರತಮ್ಯ, ಬೇಧ ಭಾವದ ಭಯವಿದೆ ಎಂದು ರೈತರು ಹೇಳಿದ್ದಾರೆ. ನಾವು ರೈತರು ಹಾಗಾಗಿ ಇಲ್ಲಿ ಸೇರಿದ್ದೇವೆ. ಇದು ಯಾವ ರಾಜಕೀಯ ಪಕ್ಷದ ಹೋರಾಟವಲ್ಲ. ಬದಲಿಗೆ ಸಮಸ್ತ ರೈತರ ಹೋರಾಟವಾಗಿದೆ. ಯಾರಾದರೂ ಇದನ್ನು ರಾಜಕೀಯ ಪಕ್ಷದ ಹೋರಾಟವೆಂದು ಕರೆದರೆ ಅವರು ರೈತ ವಿರೋಧಿಗಳು ಎಂದು ರೈತರು ಕಿಡಿಕಾರಿದ್ದಾರೆ.


ಇದನ್ನೂ ಓದಿ: ದೆಹಲಿ ಚಲೋ ಲೈವ್ ಅಪ್ಡೇಟ್ಸ್‌: ದೆಹಲಿಯಲ್ಲಿ ಈಗೇನಾಗುತ್ತಿದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಪಿಡಿಪಿ-ಬಿಜೆಪಿ ಮೈತ್ರಿಯು ಅಖಂಡವಾಗಿ ಉಳಿದಿದೆಯೇ..?’; ಮುಫ್ತಿ ವಿರುದ್ಧ ಒಮರ್ ಅಬ್ದುಲ್ಲಾ ಕಿಡಿ

0
ಅನಂತನಾಗ್ ರಜೌರಿ ಸಂಸದೀಯ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಮತ ನೀಡುವಂತೆ, ಬಿಜೆಪಿ ಪ್ರಮುಖ ನಾಯಕರೊಬ್ಬರು ತಮ್ಮ ಪಹಾರಿ ಸಮುದಾಯದ ಸದಸ್ಯರನ್ನು ಕೇಳಿದ್ದು, ಮಾಜಿ ಮುಖ್ಯಮಂತ್ರಿ...