ವಿದೇಶಕ್ಕೆ ಪ್ರಯಾಣಿಸದಂತೆ ಏರ್‌ಪೋರ್ಟ್‌ನಲ್ಲೆ ತೆಡೆಯಲ್ಪಟ್ಟಿದ್ದ ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಅವರಿಗೆ ಷರತ್ತುಗಳಿಗೆ ಒಳಪಟ್ಟು ವಿದೇಶಕ್ಕೆ ಪ್ರಯಾಣಿಸಲು ದೆಹಲಿ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ. ಏಪ್ರಿಲ್ 1ರ ಮಂಗಳವಾರದಂದು ರಾಣಾ ಅಯ್ಯೂಬ್ ಅವರನ್ನು ಲಂಡನ್‌ಗೆ ಹೋಗದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ತಡೆದಿದ್ದರು. ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವ ಕಾರಣ ಅವರನ್ನು ವಿದೇಶ ಪ್ರವಾಸದಿಂದ ತಡೆಹಿಡಿಯಲಾಗಿದೆ ಎಂದು ದಿ ಹಿಂದೂ ವರದಿ ಮಾಡಿತ್ತು.
ಅವರು ಏಪ್ರಿಲ್ 1 ರಂದು ಲಂಡನ್‌ನ ಕೆಲವು ಉನ್ನತ ನ್ಯಾಯಾಧೀಶರು, ಸಂಪಾದಕರು ಮತ್ತು ರಾಜತಾಂತ್ರಿಕರೊಂದಿಗೆ ಕಾರ್ಯಕ್ರಮವನ್ನು ಹೊಂದಿದ್ದರಿಂದ ಅವರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಅದೇ ದಿನ ಅವರು ‘ದಿ ಗಾರ್ಡಿಯನ್’ ಪತ್ರಿಕೆಯ ಸಂಪಾದಕಿ ಕ್ಯಾಥರೀನ್ ವಿನರ್ ಅವರ ಆಹ್ವಾನದ ಮೇರೆಗೆ ಪತ್ರಿಕೆಯ ಕಚೇರಿಯಲ್ಲಿ ಮಾತನಾಡಬೇಕಿತ್ತು. ಅದರ ನಂತರ ಏಪ್ರಿಲ್ 6 ಮತ್ತು 7 ರಂದು, ಅವರು ಇಂಟರ್ನ್ಯಾಷನಲ್ ಜರ್ನಲಿಸಂ ಫೆಸ್ಟಿವಲ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಟಲಿಗೆ ತೆರಳಬೇಕಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
“ನಾನು ಎಲ್ಲಾ ಘಟನೆಗಳ ಬಗ್ಗೆ ಮೂರು ವಾರಗಳ ಮುಂಚಿತವಾಗಿ ಟ್ವೀಟ್ ಮಾಡಿದ್ದೆ. ನನ್ನ ವಿಮಾನ ಇಂದು (ಮಂಗಳವಾರ) ಮಧ್ಯಾಹ್ನ 3 ಗಂಟೆಗೆ ಇತ್ತು. ವಿಮಾನ ನಿಲ್ದಾಣದಲ್ಲಿರುವ ಇಮಿಗ್ರೇಷನ್ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ. ಹಾಗೂ ಹೀಗೂ ಒಂದು ಗಂಟೆಯ ನಂತರ, ಜಾರಿ ನಿರ್ದೇಶನಾಲಯವು ನನಗೆ ಏಪ್ರಿಲ್ 1 ರಂದು ಹಾಜರಾಗಲು ಸಮನ್ಸ್ ಕಳುಹಿಸುತ್ತಿದ್ದಾರೆ ಎಂದು ಅಧಿಕಾರಿಳು ನನಗೆ ಹೇಳಿದರು. ನಾನು ಹೊರಡುವ ಒಂದು ಗಂಟೆಯ ಮೊದಲು ಅಂದರೆ ಮಧ್ನಹ್ನ 2 ಗಂಟೆಯ ಸುಮಾರಿಗೆ ನನಗೆ ಮೇಲ್‌ನಲ್ಲಿ ಸಮನ್ಸ್ ಬಂದಿದೆ” ಎಂದು ರಾಣಾ ಅಯೂಬ್ ಮಂಗಳವಾರ ಹೇಳಿದ್ದರು.
ಇದನ್ನೂ ಓದಿ: ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ವಿದೇಶ ಪ್ರವೇಶ ಮಾಡದಂತೆ ತಡೆ
ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದ ಇಡಿ, ಉತ್ತರ ನೀಡಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.
“ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಆಹಾರ ಮತ್ತು ಇತರ ಪರಿಹಾರಗಳನ್ನು ಒದಗಿಸಲು ಪತ್ರಕರ್ತೆ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ ನಂತರ, ‘ಹಣ ಲಾಂಡರಿಂಗ್ ತನಿಖೆ’ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ರಾಣಾ ಅಯ್ಯೂಬ್ ಅವರ 1.77 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಿದೆ” ಎಂದು ಕಳೆದ ಫೆಬ್ರವರಿಯಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು.
2021ರ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶ ಪೊಲೀಸರ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಪತ್ರಕರ್ತೆಯ ವಿರುದ್ದ ಪ್ರಕರಣ ದಾಖಲಿಸಿತ್ತು.
ಸೆಪ್ಟೆಂಬರ್‌ನಲ್ಲಿ, ಹಿಂದೂ ಐಟಿ ಸೆಲ್ ಎಂಬ ಬಿಜೆಪಿ ಪರ ಗುಂಪು ರಾಣಾ ಅಯೂಬ್ ವಿರುದ್ಧ ಆನ್‌ಲೈನ್ ನಿಧಿಸಂಗ್ರಹಣೆ ವೇದಿಕೆಯಾದ ಕೆಟ್ಟೋ ಮೂಲಕ “ದಾನದ ಹೆಸರಿನಲ್ಲಿ” ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿತ್ತು. ಸರ್ಕಾರದ ಅನುಮತಿಯಿಲ್ಲದೆ ರಾಣಾ ಅವರು ವಿದೇಶಿ ಹಣವನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಣಬ್ ಮುಖರ್ಜಿ ನಿಧನಕ್ಕೆ ಪತ್ರಕರ್ತೆ ರಾಣಾ ಅಯೂಬ್ ಸಂತಸಪಟ್ಟಿದ್ದು ಸುಳ್ಳುಸುದ್ದಿ
ರಾಣಾ ಅವರು ಕೆಟ್ಟೋದಲ್ಲಿ 2,69,44,680 ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ಜಾರಿ ನಿರ್ದೇಶನದ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಅವರು ಸಂಗ್ರಹಿಸಿದ ನಿಧಿಯಿಂದ 50 ಲಕ್ಷ ರೂಪಾಯಿಗಳ ಸ್ಥಿರ ಠೇವಣಿ ಪ್ರಾರಂಭಿಸಿದ್ದು, ಅದನ್ನು ಪರಿಹಾರ ಕಾರ್ಯಗಳಿಗೆ ಬಳಸಲಿಲ್ಲ ಎಂದು ಜಾರಿ ನಿರ್ದೇಶನಾಲಯವೂ ಹೇಳಿಕೊಂಡಿದೆ.
“ಜಾರಿ ನಿರ್ದೇಶನಾಲಯವು 50 ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಠೇವಣಿ ಮತ್ತು ಬಾಕಿ ಮೊತ್ತವನ್ನು ಬ್ಯಾಂಕ್ ಠೇವಣಿಗಳಾಗಿ ನವಿ ಮುಂಬೈನ ಖಾಸಗಿ ಬ್ಯಾಂಕ್‌ನ ಎರಡು ಖಾತೆಗಳಲ್ಲಿ ಇರಿಸಲು ತಾತ್ಕಾಲಿಕ ಆದೇಶವನ್ನು ಹೊರಡಿಸಿದೆ” ಎಂದು ಪಿಟಿಐ ವರದಿ ಮಾಡಿದೆ.
ಆದರೆ ರಾಣಾ ಅಯೂಬ್ ಈ ಆರೋಪಗಳನ್ನು, ಅಸಂಬದ್ಧ, ಸಂಪೂರ್ಣ ದುರುದ್ದೇಶಪೂರಿತ ಮತ್ತು ಯಾವುದೆ ದಾಖಲೆಯಿಲ್ಲದೆ ಮಾಡಲಾದ ಆರೋಪ ಎಂದು ಹೇಳಿದ್ದಾರೆ. ತನ್ನ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಉದ್ದೇಶ ಪೂರ್ವಕವಾಗಿ ತಪ್ಪಾಗಿ ವರದಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆಯಡಿಯಲ್ಲಿ ವಿವರಿಸಿದಂತೆ ತಾನು ಯಾವುದೇ ವಿದೇಶಿ ಕೊಡುಗೆಗಳನ್ನು ಸ್ವೀಕರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ’ಬುಲ್ಲಿ ಭಾಯ್’ – ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ


