Homeಮುಖಪುಟದೆಹಲಿ: ಅಂಗವಿಕಲ ಯುವತಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್‌ ಆರೋಪ, ಖಂಡನೆ ಬಳಿಕ ಕ್ಷಮೆಯಾಚನೆ

ದೆಹಲಿ: ಅಂಗವಿಕಲ ಯುವತಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್‌ ಆರೋಪ, ಖಂಡನೆ ಬಳಿಕ ಕ್ಷಮೆಯಾಚನೆ

- Advertisement -
- Advertisement -

ಇತರ ಗ್ರಾಹಕರಿಗೆ ತೊಂದರೆ ಉಂಟಾಗುತ್ತದೆ ಎಂದು ಗಾಲಿಕುರ್ಚಿ ಬಳಸುವ ಅಂಗವಿಕಲೆಯಾಗಿರುವ ನನಗೆ ಜನಪ್ರಿಯ ರೆಸ್ಟೋರೆಂಟ್‌ ಒಂದು ಪ್ರವೇಶ ನಿರಾಕರಿಸಿದೆ ಎಂದು ಯುವತಿ ಆರೋಪಿಸಿರುವ ಘಟನೆ ದೆಹಲಿಯ ಗುರ್ಗಾಂವ್‌ನಲ್ಲಿ ನಡೆದಿದೆ.

ತನ್ನ ಆತ್ಮೀಯ ಸ್ನೇಹಿತ ಮತ್ತು ಅವರ ಕುಟುಂಬದೊಂದಿಗೆ ಗುರ್ಗಾಂವ್‌ನ ಜನಪ್ರಿಯ ರೆಸ್ಟೋರೆಂಟ್‌ ರಾಸ್ತಾಗೆ ತೆರಳಿದ್ದು, ಗಾಲಿಕುರ್ಚಿಗೆ ಒಳಗೆ ಹೋಗಲು ಅನುಮತಿಯಿಲ್ಲ ಎಂದು ತನಗೆ ಪ್ರವೇಶ ನಿರಾಕರಿಸಿದೆ ಎಂದು ಯುವತಿ ಸೃಷ್ಟಿ ಪಾಂಡೆ ತಮ್ಮ ಟ್ವಿಟರ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.

“ಗಾಲಿಕುರ್ಚಿ ಒಳಗೆ ಹೋಗಲು ಸಮಸ್ಯೆಯಾಗಬಹುದು ಎಂದು ಹೇಳುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವು. ಆದರೆ ಸಮಸ್ಯೆ ಅದಾಗಿರಲಿಲ್ಲ. ನಾವು ಮ್ಯಾನೆಜ್ ಮಾಡಿಕೊಳ್ಳುತ್ತೇವೆ, ನಮಗೆ ಟೇಬಲ್ ರಿಸರ್ವ ಮಾಡಿ ಎಂದು ಅವರಿಗೆ ಹೇಳಿದೆವು. ಆದರೆ, ಮುಂದೆ ಅವರು ಹೇಳಿದ ಮಾತು ನಮ್ಮೆಲ್ಲರನ್ನೂ ಕೆಲಕಾಲ ಬೆಚ್ಚಿಬೀಳುವಂತೆ ಮಾಡಿತು” ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

“ಒಳಗೆ ಬೇರೆ ಗ್ರಾಹಕರು ತೊಂದರೆಗೊಳಗಾಗುತ್ತಾರೆ ಎಂದು ಅವರು ನನ್ನ ಕಡೆಗೆ ತೋರಿಸುತ್ತಾ ನಮಗೆ ಹೇಳಿದರು. ಜೊತೆಗೆ ತುಂಬಾ ಸುಲಭವಾಗಿ ನಮಗೆ ಪ್ರವೇಶವನ್ನು ನಿರಾಕರಿಸಿದ ಅವರು, ಹೊರಗೆ ಟೇಬಲ್ ನೀಡುತ್ತೇವೆ ಎಂದು ಸಿಬ್ಬಂದಿ ತಿಳಿಸಿದರು. ಆದರೆ, ಹೊರಗಡೆ ಟೇಬಲ್ ಸರಿಯಿರಲಿಲ್ಲ. ನನ್ನ ದೇಹವು ದುರ್ಬಲವಾಗಿರುವ ಕಾರಣ ಹೆಚ್ಚು ಕಾಲ ಶೀತದಲ್ಲಿ ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ” ಎಂದು ಸೃಷ್ಟಿ ಪಾಂಡೆ ಹೇಳಿದ್ದರು.

ಇದನ್ನೂ ಓದಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

ನನಗೆ ಘಟನೆಯಿಂದ ತುಂಬಾ ನೋವಾಗಿದೆ ಎಂಬುದನ್ನು ತಮ್ಮ ಟ್ವೀಟ್‌ಗಳಲ್ಲಿ ಸೃಷ್ಟಿ ಪಾಂಡೆ ವ್ಯಕ್ತಪಡಿಸಿದ್ದರು. ಹೀಗೆ ಒಬ್ಬ ಅಂಕವಿಕಲ ಯುವತಿಗೆ ಅಪಮಾನ ಮಾಡಿದರ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ಫಿಲ್ಮಂ ಮೇಕರ್‌ ವಿನೋದ್ ಕಪ್ರಿ, ನಟಿ, ನಿದೇಶಕಿ ಪೂಜಾ ಭಟ್, ಪತ್ರಕರ್ತೆ ನವಿಕಾ ಕುಮಾರ್‌ ಸೇರಿದಂತೆ ಹಲವು ಮಂದಿ ಘಟನೆಯನ್ನು ಖಂಡಿಸಿದ್ದಾರೆ.

ಈ ಬೆನ್ನಲ್ಲೇ ರಾಸ್ತಾ ರೆಸ್ಟೋರೆಂಟ್ ಮ್ಯಾನೇಜ್‌ಮೆಂಟ್ ಘಟನೆಗೆ ಕ್ಷಮೆಯಾಚಿಸಿದೆ. ಜೊತೆಗೆ ತಮ್ಮ ಸಿಬ್ಬಂದಿಗೆ ಸೂಕ್ಷ್ಮತೆ ಮತ್ತು ಸಹಾನುಭೂತಿಯನ್ನು ಹೆಚ್ಚಿಸುವಂತಹ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈ ವಿಷಯವನ್ನು ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದೆ.

ಇದನ್ನೂ ಓದಿ: ಬೀಬಿ ಮುಸ್ಕಾನ್‌ ಘೋಷಣೆ: ಒಂದೆಡೆ RSS ಮುಸ್ಲಿಂ ಘಟಕದ ಬೆಂಬಲ, ಇನ್ನೊಂದೆಡೆ RSS ಮುಖಂಡರ ಖಂಡನೆ

ರಾಸ್ತಾದ ಸಂಸ್ಥಾಪಕ-ಪಾಲುದಾರ ಗೌಮ್ತೇಶ್ ಸಿಂಗ್ ಯುವತಿಯ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ. “ನಾನು ಘಟನೆಯನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದೇನೆ. ನೀವು ಅನುಭವಿಸಿದ ಕೆಟ್ಟ ಅನುಭವಕ್ಕಾಗಿ ಇಡೀ ತಂಡದ ಪರವಾಗಿ ಕ್ಷಮೆಯಾಚಿಸುತ್ತೇನೆ. ನಮ್ಮ ಸದಸ್ಯರಲ್ಲಿ ಯಾರಾದರೂ ತಪ್ಪು ಮಾಡಿರುವುದು ಕಂಡುಬಂದರೆ, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.

ಘಟನೆ ಬಗ್ಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಗುರ್ಗಾಂವ್ ಪೊಲೀಸರ ಟ್ವಿಟರ್ ಖಾತೆಯು ಮುಂದಿನ ಕ್ರಮಕ್ಕಾಗಿ ಅವರ ಸಂಪರ್ಕ ವಿವರಗಳನ್ನು ನೀಡುವಂತೆ ಕೋರಿದೆ.

ಕಳೆದ ವರ್ಷ, ದೆಹಲಿಯ ಅತ್ಯಾಧುನಿಕ ರೆಸ್ಟೋರೆಂಟ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿ ಸೀರೆ ಧರಿಸಿದ್ದಕ್ಕಾಗಿ ಪ್ರವೇಶ ನಿರಾಕರಿಸಿದ್ದ ಆರೋಪ ಕೇಳಿ ಬಂದಿತ್ತು. ಆದರೆ, ಮಹಿಳೆ ಸರ್ವರ್‌ನ ಮೇಲೆ ಹಲ್ಲೆ ನಡೆಸಿದ್ದರಿಂದ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿತ್ತು, ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ ಎಂದು ರೆಸ್ಟೋರೆಂಟ್ ನಂತರ ಸ್ಪಷ್ಟಪಡಿಸಿತ್ತು.


ಇದನ್ನೂ ಓದಿ: ಕೋವಿಡ್‌ ಅವಧಿಯಲ್ಲಿ ಮೋದಿಯ ವಾರಣಾಸಿ ಕಂಡ ಸಾವು ನೋವು: ಬೆಚ್ಚಿಬೀಳಿಸುವ ವರದಿ ಬಹಿರಂಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...