Homeಮುಖಪುಟಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?

ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?

- Advertisement -
- Advertisement -

ಕಳೆದ ವರ್ಷದ ಆಗಸ್ಟ್‌ನಲ್ಲಿ ಅಪ್ಪಳಿಸಿದ ಪ್ರವಾಹದಿಂದಾಗಿ ಇಡೀ ಉತ್ತರ ಕರ್ನಾಟಕ ತತ್ತರವಾಗಿತ್ತು. ರಾಜ್ಯದ 20ಕ್ಕೂ ಹೆಚ್ಚು(ಮುಖ್ಯವಾಗಿ ಉತ್ತರ ಕರ್ನಾಟಕದ) ಜಿಲ್ಲೆಗಳು ಹಾನಿಗೊಳಗಾಗಿದ್ದವು. 61 ಜನರು ಪ್ರಾಣ ಕಳೆದುಕೊಂಡರೆ ಹಲವು ಜನರು ನಾಪತ್ತೆಯಾಗಿದ್ದರು. ಕೋಟಿಗೂ ಹೆಚ್ಚು ಜನ ಪ್ರವಾಹ ಸಂತ್ರಸ್ತರಾಗಿದ್ದರು.ಅದಕ್ಕೂ ಹಿಂದಿನ ವರ್ಷ ಕೊಡಗು ಸಂಪೂರ್ಣ ಜಲಾವೃತವಾಗಿತ್ತು. ಹಲವಾರು ಸಾವುನೋವುಗಳು ಆಸ್ತಿನಷ್ಟ ಉಂಟಾಗಿತ್ತು.

ಕಳೆದ ವರ್ಷದ ಪ್ರವಾಹ ನಷ್ಟ 50 ಸಾವಿರ ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಆದರೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 35,000 ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಿತು. ಆರಂಭಿಕವಾಗಿ ತಾತ್ಕಾಲಿಕ 1200 ಕೋಟಿ ರೂ ಮಾತ್ರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತು. ಅದು ಪ್ರವಾಹ ಆರಂಭವಾಗಿ ತಿಂಗಳು ಕಳೆದ ನಂತರವಷ್ಟೇ..

ಇನ್ನು ಈ ವರ್ಷ ಮತ್ತೆ 1869 ಕೋಟಿ ರೂ ಪ್ರವಾಹ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಗೃಹ ಇಲಾಖೆ ಘೋಷಿಸಿತು. ಆದರೆ ಬಿಡುಗಡೆಯಾಗಿದ್ದು ಕೇವಲ 669 ಕೋಟಿ ರೂ ಮಾತ್ರ. ಇನ್ನು 1200 ಕೋಟಿ ಬಾಕಿ ಇದೆ. ಇಂತಹ ಸಂಕಷ್ಟದ ಸಮಯದಲ್ಲಿ ಮತ್ತೆ ಈ ವರ್ಷವೂ ಕರ್ನಾಟಕದಲ್ಲಿ ನೆರೆ ಕಾಣಿಸಿಕೊಂಡಿದೆ. ಮೊನ್ನೆ ಪ್ರಧಾನಿಯೊಂದಿಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ 4000 ಕೋಟಿ ಪರಿಹಾರಕ್ಕೆ ಮೊರೆ ಇಟ್ಟಿರುವುದಾಗಿ ರಾಜ್ಯ ಸರ್ಕಾರ ಹೇಳಿಕೊಂಡಿದೆ. ಯಥಾಪ್ರಕಾರ ಕೇಂದ್ರ ಸರ್ಕಾರವಿನ್ನೂ ಹಣ ಬಿಡುಗಡೆ ಮಾಡಿಲ್ಲ.

ಇನ್ನು ಕೊರೊನಾ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲಿಯೇ 4ನೇ ಸ್ಥಾನದಲ್ಲಿದ್ದು ಹತ್ತಿರತ್ತಿರ 2 ಲಕ್ಷ ಪ್ರಕರಣಗಳನ್ನು ದಾಖಲಿಸಿದೆ. ಈ ವರದಿ ಬರೆಯುವ ಹೊತ್ತಿಗೆ 3510 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಬಾರಿ ಹೇರಿದ ಲಾಕ್‌ಡೌನ್‌ನಿಂದಾಗಿ ಕರ್ನಾಟಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಕೇಂದ್ರದಿಂದ ಹೆಚ್ಚಿನ ಹಣ ಬಿಡುಗಡೆಯಾಗಿಲ್ಲ. ಕರ್ನಾಟಕದ ಪಾಲಿನ ಜಿಎಸ್‌ಟಿ ಹಣ ಸಹ ಬಂದಿಲ್ಲ.

ಇಷ್ಟೆಲ್ಲ ಏಕೆ ಹೇಳಬೇಕಿದೆಯೆಂದರೆ ಈ ವಿಚಾರದ ಕುರಿತು ಗಟ್ಟಿ ದನಿಯೆತ್ತಬೇಕಾಗಿದ್ದ ಕರ್ನಾಟಕದ ಪ್ರಬಲ ಸಚಿವರು, ಸಂಸದರು ಈ ವಿಚಾರವಾಗಿ ಮೌನವಾಗಿದ್ದಾರೆ. ಪ್ರಧಾನಿ ಮೋದಿಯವರನ್ನು ದಿಟ್ಟಿಸಿ ಕೇಳುವ ಧೈರ್ಯ ಇವರ್ಯಾರಿಗೂ ಇಲ್ಲ. ಆದರೆ ಸಣ್ಣಪುಟ್ಟ ಗಲಭೆಗಳಾದರೆ, ಯಾರಾದರೂ ಅನುಮಾನಾಸ್ಪದವಾಗಿ ಸಾವಿಗೀಡಾದರೆ ಇವರೆಲ್ಲ ಓಡಿ ಬರುತ್ತಾರೆ. ಸ್ಥಳಕ್ಕೆ ಧಾವಿಸುತ್ತಾರೆ. ಶಾಂತಿ ಕಾಪಾಡಲು ಮನವಿ ಮಾಡುವ ಬದಲು ಜೋರಾಗಿ ಕಿರುಚುತ್ತಾರೆ. ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಬೊಬ್ಬೆಯಿಡುತ್ತಾರೆ. ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುತ್ತಾರೆ. ಆ ಬೆಂಕಿಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ.. ಯಾರಿವರು ಬನ್ನಿ ನೋಡೋಣ.

ಶೋಭಾ ಕರಂದ್ಲಾಜೆ

ರಾಜ್ಯ ಸರ್ಕಾರದಲ್ಲಿ ಸಚಿವರಾಗಿ, ಎರಡನೇ ಬಾರಿಗೆ ಸಂಸದರಾಗಿರುವ ಇವರು ಸಂಸತ್ತಿನಲ್ಲಿ ತಮಗೆ ಸಿಕ್ಕ ಮಾತನಾಡುವ ಅವಕಾಶವನ್ನು ರಾಜ್ಯದ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಏಕೀ ಮಿನಿಟ್ ಸರ್ ಎಂಬ ಅರ್ಧಂಬರ್ಧ ಹಿಂದಿಯಲ್ಲಿ ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್‌ಗೆ ಭಯೋತ್ಪಾದಕರೊಂದಿಗೆ ಸಂಬಂಧವಿದೆ ಎಂಬ ಕಟ್ಟುಕಥೆಗಳನ್ನು ಹೇಳಿ ಅಪಹಾಸ್ಯಕ್ಕೊಳಗಾಗಿದ್ದರು. ಅವರೇ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ.

ಅವರು 2017ರಲ್ಲಿ ರಾಜ್ಯದಲ್ಲಿ 4 ವರ್ಷದಲ್ಲಿ ಕೋಮುಗಲಭೆಗಳಲ್ಲಿ ಮೃತರಾದ ಹಿಂದೂಗಳ ಪಟ್ಟಿ ತಯಾರಿಸಿದ್ದ ಅವರು ಅದರಲ್ಲಿ ಅಶೋಕ್ ಪೂಜಾರಿ ಎಂಬ ಬದುಕಿದ್ದವರ ಹೆಸರನ್ನು ಸೇರಿಸಿ ವಿವಾದಕ್ಕೊಳಗಾಗಿದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಪರೇಶ್ ಮೇಸ್ತ ಎಂಬ ಯುವಕನ ಸಾವನ್ನು ಇಟ್ಟುಕೊಂಡು ರಾಜಕೀಯ ಮಾಡಿದ ಇವರು “ಅಜಾದ್ ಅಣ್ಣಿಗೇರಿ ಈ ಪ್ರಕರಣದಲ್ಲಿ ಪಾಲುದಾರರಾಗಿದ್ದು ಅವರಿಗೆ ಐಸಿಸ್‌ನೊಂದಿಗೆ ನಂಟಿದೆ” ಎಂದು ಆರೋಪಿಸಿದ್ದರು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕೆಂದು ಒತ್ತಾಯಿಸಿದ್ದರು. ನಂತರ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಳಪಡಿಸಿತ್ತು. ಪರೇಶ್ ಮೇಸ್ತ ಪಾಲಕರಿಗೆ ನ್ಯಾಯ ಸಿಗಲಿಲ್ಲ. ಶೋಭಾ ಕರಂದ್ಲಾಜೆ ಮಾತ್ರ ಪ್ರಕರಣದತ್ತ ಮತ್ತೆ ಸುಳಿಯಲಿಲ್ಲ.

ಸಿಎಎ 2019 ಅನ್ನು ಬೆಂಬಲಿಸಿದ್ದಕ್ಕಾಗಿ, ಕೇರಳದ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್‌ನ ಹಿಂದೂಗಳಿಗೆ ನೀರು ಸರಬರಾಜು ನಿರಾಕರಿಸಲಾಗಿದೆ. ಕೇರಳ ಮತ್ತೊಂದು ಕಾಶ್ಮೀರವಾಗಲು ಹೊರಟಿದೆ, ಹಿಂದೂಗಳ ವಿರುದ್ಧ ಅಲ್ಲಿನ ಎಡಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದರು. ಆ ಸುದ್ದಿ ಸುಳ್ಳೆಂದು ಅವರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು.

ಈ ರೀತಿಯಾಗಿ ಎಲ್ಲೇ ಸಾವಾದರೂ ಅದನ್ನು ರಾಜಕೀಯಗೊಳಿಸುವುದರಲ್ಲಿ ಇವರು ಎತ್ತಿದ ಕೈ. ಈಗ ಬೆಂಗಳೂರಿನ ಫೇಸ್‌ಬುಕ್‌ ಪೋಸ್ಟ್‌ ವಿಚಾರಕ್ಕೆ ಗಲಭೆಯಾದ ಮಾರನೇಯ ದಿನವೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ನಿಂತು ‘ಹಿಂದೂಗಳನ್ನು ಟಾರ್ಗೆಟ್‌ ಮಾಡಿ ದಾಳಿ ಮಾಡಲಾಗಿದೆ. ಪಿಎಫ್‌ಐ, ಎಸ್‌ಡಿಪಿಐನವರು ಇದಕ್ಕೆ ಕಾರಣ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು’ ಆಗ್ರಹಿಸಿದ್ದಾರೆ. ವಿಶೇಷವೆಂದರೆ ಗಲಭೆಗೆ ಕಾರಣವಾದ ಪ್ರವಾದಿ ನಿಂದನೆ ಪೋಸ್ಟ್, ಅದನ್ನು ಮಾಡಿದವರನ್ನು ಅವರು ಅಪ್ಪಿ ತಪ್ಪಿಯೂ ವಿರೋಧಿಸಿಲ್ಲ!

ಚಿಕ್ಕಮಗಳೂರಿನ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ವಿಷಕಾರಿ ಅಂಶವಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವು ಅಫಿಡವಿಟ್‌ ಅನ್ನು ಹಿಂಪಡೆಯಬೇಕು ಮತ್ತು ಅಡಿಕೆಗೆ ಸ್ಥಿರ ಬೆಲೆ ಒದಗಿಸಬೇಕೆಂದು ಅಡಿಕೆ ಬೆಳೆಗಾರರು ಹಲವು ವರ್ಷಗಳಿಂದ ಕೇಳುತ್ತಿದ್ದಾರೆ. ಶೋಭಾ ಕರಂದ್ಲಾಚೆಯವರು ಈ ಕುರಿತು ಕೇಂದ್ರ ಆರೋಗ್ಯ ಮಂತ್ರಿಗಳಿಗೆ ಒಂದು ಮನವಿ ಕೊಟ್ಟಿದ್ದು ಬಿಟ್ಟರೆ ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಈ ಸದ್ಯ ಭಾರೀ ಮಳೆಯಿಂದಾಗಿ ತಮ್ಮ ಕ್ಷೇತ್ರದ ಕೊಪ್ಪ, ಶೃಂಗೇರಿ, ಕಳಸ ಭಾಗದ ಗ್ರಾಮಸ್ಥರು ಸಂಕಷ್ಟದಲ್ಲಿದ್ದರು ಅತ್ತ ಗಮನಹರಿಸದ ಅವರು ಸೀದಾ ಬೆಂಗಳೂರಿನ ಕೆ.ಜಿ ಹಳ್ಳಿಗೆ ಭೇಟಿ ನೀಡಿದ್ದಾರೆ. ಹಿಂದೂ ದೇವಾಲಯದ ಮೇಲೆ ಎಸ್‌ಡಿಪಿಐ ಬಾವುಟ ಹಾಕಿದ್ದಾರೆ ಎಂಬುದರ ವಿರುದ್ಧ ಹೋರಾಡುತ್ತಿದ್ದಾರೆ!

ಅನಂತ್ ಕುಮಾರ್ ಹೆಗಡೆ

ಹಿಂದೂ ಹುಡುಗಿ ಮುಟ್ಟಿದವರ ಕೈ ಇರಬಾರದು‘. ಈ ಪ್ರಚೋದನಾಕಾರಿ ಹೇಳಿಕೆ ಮಾಜಿ ಸಚಿವ, ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಯವರದು. ಬ್ರೀಟಿಷರು ಉಪವಾಸಕ್ಕೆ ಹೆದರಿ ಓಡಿಹೋಗಲಿಲ್ಲ, ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂಬುದು ಇವರ ಮತ್ತೊಂದು ಅಣಿಮುತ್ತು. ನಾವು ಬಂದಿರುವುದು ಸಂವಿಧಾನ ಬದಲಿಸಲ್ಲಿಕ್ಕೆ ಎಂಬ ದೌಲತ್ತು ಬೇರೆ. ಕೇಂದ್ರ ಕೌಶಲ ಅಭಿವೃದ್ದಿ ಸಚಿವರಾದರೂ ನಯಾ ಪೈಸೆ ಕೆಲಸ ಮಾಡದ ಇವರು ಯುವಜನರಿಗೆ ಉದ್ಯೋಗ ಸಿಗದಿರುವುದಕ್ಕೆ ಕೌಶಲ ಇರದಿರುವುದೇ ಕಾರಣ ಎಂದು ಹೇಳಿ ಟೀಕೆಕ್ಕೊಳಗಾಗಿದ್ದರು.

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದಿರುವ ಇವರು ರಾಜ್ಯದ ಅಭಿವೃದ್ದಿಯ ಪರವಾಗಿ ಮಾತನಾಡಿದ್ದು ಕಡಿಮೆ. ಇವರ ದ್ವೇಷ ಭಾಷಣ, ಕೋಮು ಪ್ರಚೋದಿತ ಹೇಳಿಕೆಗಳಿಂದಾಗಿ ಟ್ವಿಟ್ಟರ್‌ ಖಾತೆಯನ್ನು ಅಮಾನತ್ತು ಮಾಡಿತ್ತು.

ನಳಿನ್ ಕುಮಾರ್ ಕಟೀಲ್;

ಮಂಗಳೂರಿನ ಸಂಸದರು, ಹಾಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಆದ ನಳಿನ್ ಕುಮಾರ್ ಕಟೀಲ್‌ರವರು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ 1 ಡಾಲರ್ ಮೌಲ್ಯ 15ರೂ ಆಗುತ್ತದೆ ಎಂದಿದ್ದರು. ಆದರೆ ನರೇಂದ್ರ ಮೋದಿಯವರು 2ನೇ ಬಾರಿ ಅಧಿಕಾರಕ್ಕೆ ಬಂದರೂ ಸಹ 1 ಡಾಲರ್ ಮೌಲ್ಯ 74ರೂ ಆಗಿದೆ. ಪಂಪ್‌ವೇಲ್‌ ಮೇಲ್ಸೇತುವೆ ಕಟ್ಟಲು ಹಲವು ಬಾರಿ ಗಡುವುಗಳನ್ನು ವಿಧಿಸಿದ್ದ ಅವರು ಕೊನೆಗೂ ಹತ್ತು ವರ್ಷದ ನಂತರ ಪೂರ್ಣಗೊಳಿಸಿದ್ದರು.

ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುವ ಮೂಲಕ…..ನಮ್ಮ ಹೆಮ್ಮೆ ನಮ್ಮ ಎಂಪಿ ????

Posted by Satya_Meva_Jayate on Tuesday, March 26, 2019

ಆದರೆ ಬಿಜೆಪಿ ಕಾರ್ಯಕರ್ತ ಕಾರ್ತಿಕ್‌ ರಾಜ್ ಎಂಬ ಹುಡುಗನ ಕೊಲೆ ವಿಚಾರವೊಂದರಲ್ಲಿ ಇವರು ಆರೋಪಿಗಳನ್ನು ಹತ್ತು ದಿನದಲ್ಲಿ ಬಂಧಿಸದಿದ್ದರೆ ಇಡೀ ಮಂಗಳೂರಿಗೆ ಬೆಂಕಿ ಹಚ್ಚುತ್ತೇವೆ ಎಂದು ಪ್ರಚೋದನೆ ನೀಡಿದ್ದರು. ವಿಡಿಯೋ ವೈರಲ್ ಆಗಿತ್ತು. ನಂತರ ತನಿಖೆಯಿಂದ ತಿಳಿದ್ದಿದ್ದೇನೆಂದರೆ ಕೊಲೆ ಆರೋಪಿ ಕಾರ್ತಿಕ್ ರಾಜ್‌ನ ಸ್ವತಃ ಸಹೋದರಿಯಾಗದ್ದಳು.

ಪ್ರತಾಪ್ ಸಿಂಹ:

ಮೈಸೂರು-ಕೊಡಗು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿರು ಪ್ರತಾಪ್‌ ಸಿಂಹರವರು ಪ್ರವಾಹ ಪರಿಹಾರವನ್ನು ಯಾರೂ ತಮ್ಮ ಕಿಸೆಯಿಂದ ಕೊಡಲಾಗುವುದಿಲ್ಲ ಎಂದಿದ್ದರು. ಅಷ್ಟು ಮಾತ್ರವಲ್ಲದೇ ಪ್ರವಾಹ ಪರಿಹಾರ ಕೇಳುವುದೇ ತಪ್ಪು ಎನ್ನುವ ಅಭಿಪ್ರಾಯ ಇರುವ ಪ್ರತಾಪ್ ಸಿಂಹ ಹನುಮಾ ಜಯಂತಿ ಮಾಡಿಯೇ ತೀರುತ್ತೇವೆ ಎಂದು ಕರ್ಫ್ಯೂ ಉಲ್ಲಂಘಿಸಿದ್ದರು.

ಚಿಕ್ಕಮಗೂರಿನ ಬಾಬಬುಡನ್ ಗಿರಿ ವಿಚಾರವಾಗಿ ಅದನ್ನು ದತ್ತಪೀಠ ಮಾಡೆಬೇಕೆನ್ನುತ ಅಧಿಕಾರಕ್ಕೆ ಸಿ.ಟಿ ರವರು ಅಭಿವೃದ್ದಿ ವಿಷಯ ಮಾತನಾಡಿದ್ದು ಕಡಿಮೆ. ಇದಲ್ಲದೇ ಬಿಜೆಪಿಯ ಕೆ.ಎಸ್ ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ತೇಜಸ್ವಿ ಸೂರ್ಯ ಸೇರಿದಂತೆ ಇತರರು ಅಭಿವೃದ್ದಿ ಕುರಿತ ಮಾತುಗಳಿಗಿಂತ ಕೋಮು ಪ್ರಚೋದಿತ ಹೇಳಿಕೆ ನೀಡುವುದರಲ್ಲೇ ನಿಸ್ಸೀಮರಾಗಿದ್ದಾರೆ.


ಇದನ್ನೂ ಓದಿ: ಗಲಭೆಕೋರರು ಹಚ್ಚಿದ ಬೆಂಕಿ ಮತ್ತು ಮಾಧ್ಯಮಗಳು ಹಚ್ಚುತ್ತಿರುವ ಬೆಂಕಿ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...