Homeಚಳವಳಿರೈತ ಹೋರಾಟ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ಆರ್ಥಿಕ ನೆರವು ಬೇಕಿದೆ: ಕೇಸರಿ ಹರವು

ರೈತ ಹೋರಾಟ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ಆರ್ಥಿಕ ನೆರವು ಬೇಕಿದೆ: ಕೇಸರಿ ಹರವು

ಐತಿಹಾಸಿಕ ಹೋರಾಟವೊಂದರ ಸಮಗ್ರ ದಾಖಲೆಯಾಗಿ ಉಳಿಯಲಿರುವ ಈ ಸಾಕ್ಷ್ಯಚಿತ್ರಕ್ಕೆ ಆರ್ಥಿಕ ನೆರವು ಲಭ್ಯವಾದರೆ ಮಹತ್ವದ ಪ್ರಯತ್ನಕ್ಕೆ ಜೊತೆಯಾದ ಎಲ್ಲರಿಗೂ ಒಂದು ಸಾರ್ಥಕ ಭಾವ ಉಳಿಯುತ್ತದೆ.

- Advertisement -
- Advertisement -

ಕಳೆದ ಒಂಬತ್ತು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟ ಐತಿಹಾಸಿಕ ಎಂದೇ ಪರಿಗಣಿಸಲಾಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ರೀತಿಯ ಸಂಘಟಿತವಾದ, ಅಹಿಂಸಾತ್ಮಕವಾದ, ಇಷ್ಟು ದೊಡ್ಡ ಹೋರಾಟ ದೀರ್ಘಕಾಲ ನಡೆದ ಇನ್ನೊಂದು ಉದಾಹರಣೆ ಇಲ್ಲ.

ಇಂಥ ಹೋರಾಟವನ್ನು ದಾಖಲಿಸುವ ಮಹತ್ವದ ಕೆಲಸಕ್ಕೆ ಮುಂದಾದ ಕನ್ನಡದ ಸಿನಿಮಾ ನಿರ್ದೇಶಕ ಕೇಸರಿ ಹರವು ಅವರು ದೆಹಲಿ ರೈತ ಹೋರಾಟ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದ್ದು, ಈ ಸಾಕ್ಷ್ಯಚಿತ್ರ ಪೂರೈಸಲು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಇದುವರೆಗೂ ಮೂರು ಬಾರಿ ದೆಹಲಿಗೆ ತೆರಳಿ 18 ದಿನಗಳ ಕಾಲ ದೆಹಲಿಯ ಗಡಿಗಳಲ್ಲಿ ರೈತ ಹೋರಾಟಗಾರರೊಂದಿಗೆ ನೆಲೆಸಿ ಅಲ್ಲಿನ ಹೋರಾಟದ ದೃಶ್ಯಗಳನ್ನು ಸೆರೆಹಿಡಿದಿರುವ ಹರವು ಅವರು, ನಂತರದಲ್ಲಿ ಪಂಜಾಬ್‌ ಮತ್ತು ಹರ್ಯಾಣಗಳಲ್ಲಿ ಓಡಾಡಿ, ಅಲ್ಲಿನ ರೈತರು, ಕೃಷಿ ಪರಿಸ್ಥಿತಿಗಳನ್ನು ಚಿತ್ರಿಸಿಕೊಂಡು ಬಂದಿದ್ದಾರೆ. ಕರ್ನಾಟಕದ ಹೋರಾಟಗಳು ಸೇರಿದಂತೆ ಸುಮಾರು 28 ದಿನಗಳ ಕಾಲ ಮೂರು ಕೃಷಿ ಕಾಯ್ದೆ ವಿರುದ್ಧದ ಹೋರಾಟ ಬಹುಮುಖ್ಯ ಸಂಗತಿಗಳನ್ನು ತಮ್ಮ ಕೆಮೆರಾ ಮೂಲಕ ಸೆರೆಹಿಡಿದಿದ್ದಾರೆ.

ಮೂಲತಃ ಸಿನಿಮಾ ನಿರ್ದೇಶಕರಾದ ಅವರು ‘ಭೂಮಿಗೀತ’, ‘ಒಳ್ಳೆಯವನು’ ಚಿತ್ರಗಳನ್ನು, 12 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.

ಜನ-ಜೀವನಕ್ಕೆ ಸಂಬಂಧಿಸಿದ ವಿಷಯಗಳಿಗೆ ಸ್ಪಂದಿಸುವ ಕೇಸರಿ ಹರವು ಅವರು ನಿರ್ಮಿಸಿದ ‘ಅಘನಾಶಿನಿ ಮತ್ತು ಮಕ್ಕಳು’, ‘ನಗರ ಮತ್ತು ನಗರ ಕಣಿವ’ ಸಾಕ್ಷ್ಯಚಿತ್ರಗಳು ಹೋರಾಟದ ಭಾಗವಾಗಿ ರೂಪುಗೊಂಡ ಸಾಕ್ಷ್ಯಚಿತ್ರಗಳು.

ಅಘನಾಶಿನಿ ಮತ್ತು ಮಕ್ಕಳು, ಸಾಕ್ಷ್ಯಚಿತ್ರದಲ್ಲಿ ತದಡಿ ಬಳಿ ಉಷ್ಣಸ್ಥಾವರ ನಿರ್ಮಿಸುವ ಕುರಿತು ಮಾಡಿದೆವು. ಅದರ ವಿರುದ್ಧ ನಡೆದ ಹೋರಾಟವನ್ನು ಸಾಕ್ಷ್ಯಚಿತ್ರದಲ್ಲಿ ತಂದೆ. ಪರಿಸರ ಮತ್ತು ಸಾಮಾಜಿಕ, ಸ್ಥಳೀಯ ಆರ್ಥಿಕತೆಯ ಉಳಿಯುವ ಪ್ರಶ್ನೆಯಾಗಿ ಈ ಸಾಕ್ಷ್ಯಚಿತ್ರದಲ್ಲಿ ಮಹತ್ವದ ಸಂಗತಿಗಳನ್ನು ದಾಖಲಿಸುವ ಪ್ರಯತ್ನ ಮಾಡಿದೆ.

ನಗರ ಮತ್ತು ನದಿ ಕಣಿವೆ ಸಾಕ್ಷ್ಯಚಿತ್ರದಲ್ಲಿ ಗೊಂಡ್ಯಾ ಜಲವಿದ್ಯುತ್‌ ಯೋಜನೆ ಜಾರಿಗೆ ಬರುತ್ತಿತ್ತು. ಪಶ್ಚಿಮ ಘಟ್ಟದಲ್ಲಿ ತನ್ನದೇ ಮಹತ್ವ ಹೊಂದಿರುವ ಗೊಂಡ್ಯಾ ಕಾಡಿನ ಬಗ್ಗೆ, ಅಲ್ಲಿನ ಜೀವವೈವಿಧ್ಯದ ಬಗ್ಗೆ, ಅದನ್ನು ಸಂರಕ್ಷಿಸುವ ಕುರಿತು ಸಾಕ್ಷ್ಯಚಿತ್ರದಲ್ಲಿ ದಾಖಲಿಸಿದ್ದಾರೆ.

ಅವರ ತುಡಿತ ರೈತ ಪರ ವಿಚಾರಗಳಲ್ಲೂ ಎದ್ದು ಕಾಣುವುದು ರೈತ ನಾಯಕ ಕೆ ಎಸ್‌ ಪುಟ್ಟಣ್ಣಯ್ಯ ಅವರ ನೆನಪಿನಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರದಲ್ಲಿ. ಪುಟ್ಟಣ್ಣಯ್ಯ ಜೀವನ ಮತ್ತು ಹೋರಾಟದ ಜೊತೆಗೆ ರೈತ ಹೋರಾಟ, ರೈತ ಸಮಸ್ಯೆಗಳನ್ನು ಬಿಂಬಿಸಿದರು. ಇದರ ವಿಸ್ತರಣೆಯಂತೆಯೇ ದೆಹಲಿ ಹೋರಾಟದ ಸಾಕ್ಷ್ಯಚಿತ್ರದ ಆಲೋಚನೆ ಅವರನ್ನು ಕಾಡಿದ್ದು.

”ಕೊರೊನಾ ಬಿಕ್ಕಟ್ಟಿನ ನಡುವೆ ಕೇಂದ್ರವು ಸುಗ್ರೀವಾಜ್ಞೆ ಮೂಲಕ ಬಹಳ ಅಸಂವಿಧಾನಿಕವಾಗಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಇದನ್ನು ವಿರೋಧಿಸಿ ಪಂಜಾಬಿ ರೈತರು ಒಗ್ಗಟ್ಟಾಗಿ ಪ್ರತಿಭಟಿಸಿದ ರೀತಿ, ಕಾಯ್ದೆಗಳನ್ನು ಅರ್ಥ ಮಾಡಿಕೊಂಡ ರೀತಿ, ರೈತರಿಗೆ ಮಾರಕ ಎಂಬುದನ್ನ ಗ್ರಹಿಸಿದ ರೀತಿಯನ್ನು ನಾನು ತಿಳಿದುಕೊಳ್ಳುತ್ತಿದ್ದೆ. ನವೆಂಬರ್‌ನಲ್ಲಿ 26ಕ್ಕೆ ದೆಹಲಿ ಚಲೋಗೆ ನಿರ್ಧರಿಸಿದರೊ, ಆಗ ಈ ಚಳವಳಿ ದೊಡ್ಡದಾಗಿ ಬೆಳೆಯುತ್ತದೆ. ಇದನ್ನು ಸಾಕ್ಷ್ಯಚಿತ್ರ ಮಾಡಬೇಕೆಂದು ಅನ್ನಿಸಿತು” ಎಂದು ರೈತ ಹೋರಾಟದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಪ್ರೇರಣೆಯ ಸಂದರ್ಭವನ್ನು ಅವರು ‘ಅನ್ನದ ಋಣ’ ವೆಬ್ ಸೈಟ್ ನೊಂದಿಗೆ ಹಂಚಿಕೊಂಡಿದ್ದಾರೆ.

ಈ ಎಲ್ಲ ಚಿತ್ರೀಕರಣವೂ ಹಲವು ಸಮಾನ ಆಸಕ್ತ, ಸಮಾನ ಮನಸ್ಕರ ನೆರವಿನೊಂದಿಗೆ ಕೈಗೊಂಡ ಕೇಸರಿ ಹರವು ಅವರು ಇನ್ನಷ್ಟು ಮಹತ್ವದ ಸಂಗತಿಗಳನ್ನು ದಾಖಲಿಸಬೇಕೆಂಬ ಇಚ್ಚೆ ಹೊಂದಿದ್ದಾರೆ.

”ಬಿಹಾರ್‌ ಮತ್ತು ಕೇರಳದಲ್ಲಿ ಎಪಿಎಂಸಿಗಳಿಲ್ಲ. ಬಿಹಾರದಲ್ಲಿ ರೈತ ಉತ್ಪನ್ನಗಳ ಮಾರುಕಟ್ಟೆಯದ್ದು ಅತ್ಯಂತ ದಾರುಣ ಸ್ಥಿತಿ. ಆದರೆ ಕೇರಳದಲ್ಲಿ ಎಪಿಎಂಸಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವೆರಡನ್ನೂ ಅಧ್ಯಯನ ಮಾಡಬೇಕು. ಅಲ್ಲಿನ ರೈತರನ್ನು ಮಾತನಾಡಿಸಬೇಕು. ದೆಹಲಿ ಹೋರಾಟಕ್ಕೆ ಸಂಬಂಧಿಸಿದ ಅಲ್ಲಿನ ಕೆಲ ತಜ್ಞ-ಚಿಂತಕರ ಮಾತುಗಳನ್ನು ಸೆರೆಹಿಡಿಯಬೇಕು. ಇದು ಸಾಧ್ಯವಾಗುವುದಾದರೆ, ಇಲ್ಲಿಯವರೆಗಿನ ಶ್ರಮ ಸಾರ್ಥಕವಾಗುತ್ತದೆ” ಎನ್ನುತ್ತಾರೆ ಕೇಸರಿ ಹರವು.

”ಈ ಸಾಕ್ಷ್ಯಚಿತ್ರದಲ್ಲಿರುವುದು ಕೇವಲ ರೈತ ಸಮಸ್ಯೆಗಳನ್ನು ಬಿಂಬಿಸುವ ಪ್ರಯತ್ನವಷ್ಟೇ ಅಲ್ಲ, ದೇಶದ ಸಾರ್ವಭೌಮತ್ವ, ಸಾಮಾಜಿಕ ಸಾರ್ವಭೌಮತ್ವ ಮತ್ತು ಪರಿಸರದ ಅಂಶಗಳನ್ನು ಈ ರೈತರ ಹೋರಾಟ ಹೊಂದಿದೆ ಎಂಬುದನ್ನೂ ದಾಖಲಿಸುತ್ತದೆ. ಇದು ರೈತರಿಗಷ್ಟೇ ಅಲ್ಲ, ಎಲ್ಲರಿಗೂ ಸಂಬಂಧಿಸಿದ್ದು. ಈ ಮೂರು ಕಾಯ್ದೆಗಳಿಂದ ಖಾಸಗೀಕರಣಕ್ಕೆ ಅನುಕೂಲವಾಗುತ್ತದೆ. ಇದರಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾರ್ವಭೌಮತ್ವವನ್ನು ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಇದು ರೈತರ ಸಮಸ್ಯೆಯಲ್ಲ, ಪ್ರತಿಯೊಬ್ಬರ ಸಮಸ್ಯೆಯಾಗಲಿದೆ, ಪ್ರತಿಯೊಂದು ಕಸುಬಿನ ಸಮಸ್ಯೆಯಾಗಲಿದೆ. ಇದು ದೇಶವ್ಯಾಪಿ ಹರಡುತ್ತಿದೆ. ಹರಡಬೇಕು. ಆದರೆ ಈ ವರೆಗೆ ರೈತರು ಮಾತ್ರ ಹೋರಾಟದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮಿಕ್ಕೆಲ್ಲರೂ ಈ ಹೊರಾಟದಲ್ಲಿ ಪಾಲ್ಗೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತದೆ” ಎಂದು ಸಾಕ್ಷ್ಯಚಿತ್ರದ ಆಶಯ ಮತ್ತು ಅಗತ್ಯಗಳನ್ನು ಹರವು ಅವರು ವಿವರಿಸುತ್ತಾರೆ.

ಇದನ್ನೂ ಓದಿ: ಸೆ.13ಕ್ಕೆ ವಿಧಾನಸೌಧ ಮುತ್ತಿಗೆ, ಸೆ. 17ಕ್ಕೆ ಕರ್ನಾಟಕ ಬಂದ್: ಕೋಡಿಹಳ್ಳಿ ಚಂದ್ರಶೇಖರ್‌

ಐತಿಹಾಸಿಕ ಹೋರಾಟವೊಂದರ ಸಮಗ್ರ ದಾಖಲೆಯಾಗಿ ಉಳಿಯಲಿರುವ ಈ ಸಾಕ್ಷ್ಯಚಿತ್ರಕ್ಕೆ ಆರ್ಥಿಕ ನೆರವು ಲಭ್ಯವಾದರೆ ಮಹತ್ವದ ಪ್ರಯತ್ನಕ್ಕೆ ಜೊತೆಯಾದ ಎಲ್ಲರಿಗೂ ಒಂದು ಸಾರ್ಥಕ ಭಾವ ಉಳಿಯುತ್ತದೆ. ರೈತ ಹೋರಾಟ ಕುರಿತ ಗೊಂದಲ, ಅಪಪ್ರಚಾರಗಳಿಗೆ ತೆರೆ ಎಳೆಯುವ, ಕಾರ್ಪೊರೆಟ್‌ ವ್ಯವಸ್ಥೆಯೊಂದರ ಸಂಚುಗಳು, ರೈತ ಹೋರಾಟ ಇಡೀ ದೇಶದ ಹೋರಾಟವೆಂಬುದನ್ನು ಹೇಳುವ ಎಲ್ಲ ಅಂಶಗಳೂ ಈ ಸಾಕ್ಷ್ಯಚಿತ್ರ ಅನಾವರಣ ಮಾಡುವ ಉದ್ದೇಶ ಮತ್ತು ಬದ್ಧತೆಯನ್ನು ಹೊಂದಿದೆ ಎಂಬುದು ಹರವು ಅವರ ವಿಶ್ವಾಸದ ಮಾತು. ಈ ಸಾಕ್ಷ್ಯಚಿತ್ರ ಪೂರ್ಣಗೊಳಿಸಲು ಅಗತ್ಯವಿರುವ ಆರ್ಥಿಕ ನೆರವಿಗೆ ಎಲ್ಲ ಸದಾಶಯವುಳ್ಳ ಸಹೃದಯರು ಮುಂದಾಗಬಹುದು. ಈ ಕೆಳಗಿನ ಹರವು ಅವರ ಬ್ಯಾಂಕ್‌ ಖಾತೆ ಮತ್ತು ಯುಪಿಐ ವಿವರಗಳಿವೆ. ಸೂಕ್ತ ರೀತಿಯಲ್ಲಿ ನೆರವಾಗುವ ಮೂಲಕ ಸಾಕ್ಷ್ಯಚಿತ್ರ ಪೂರ್ಣಗೊಳ್ಳಲು ಸಹಕರಿಸಬೇಕು.

UPI: kesari.haravoo@oksbi
Kesari Haravu: Bank details:
Kesari Harvoo
Ac. No. 30260889394
SBI, Nagarabhavi (AED) Branch
IFSC: SBIN0009050

ವರದಿ ಕೃಪೆ: ಅನ್ನದ ಋಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...