Homeಮುಖಪುಟಬ್ರಾಹ್ಮಣ ಸಮುದಾಯದ ನಿಂದನೆ ಆರೋಪ; ಛತ್ತೀಸ್‌ಘಡದ ಸಿಎಂ ಭೂಪೇಶ್ ತಂದೆ ಜೈಲಿಗೆ

ಬ್ರಾಹ್ಮಣ ಸಮುದಾಯದ ನಿಂದನೆ ಆರೋಪ; ಛತ್ತೀಸ್‌ಘಡದ ಸಿಎಂ ಭೂಪೇಶ್ ತಂದೆ ಜೈಲಿಗೆ

ನನ್ನ ಸರ್ಕಾರದಲ್ಲಿ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಮುಖ್ಯಮಂತ್ರಿಯವರ ತಂದೆಯಾದರೇನು? ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಕಾಪಾಡುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ- ಭೂಪೇಶ್ ಬಾಗೇಲ್

- Advertisement -
- Advertisement -

ಬ್ರಾಹ್ಮಣ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿದ ಆರೋಪದ ಮೇಲೆ ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್‌ ಬಾಗೇಲ್‌ ಅವರ ತಂದೆ ನಂದಕುಮಾರ್ ಬಾಗೇಲ್‌ ಅವರನ್ನು ಜೈಲಿಗೆ ಹಾಕಲಾಗಿದ್ದು, ಅವರನ್ನು 15 ದಿನಗಳ ಕಾಲ ಸೆರೆಮನೆಯಲ್ಲಿಡಲು ರಾಯಪುರ ನ್ಯಾಯಾಲಯ ಸೂಚಿಸಿದೆ.

ತಂದೆಯ ಬಂಧನದ ಬಳಿಕ ಪ್ರತಿಕ್ರಿಯಿಸಿರುವ ಭೂಪೇಶ್, “ನನ್ನ ಸರ್ಕಾರದಲ್ಲಿ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಮುಖ್ಯಮಂತ್ರಿಯವರ ತಂದೆಯಾದರೇನು? ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಕಾಪಾಡುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ. ಅವರು ಒಂದು ಸಮುದಾಯದ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ಕ್ಷಮೆಯಾಚಿಸುವೆ. ಆದರೆ ಮುಖ್ಯಮಂತ್ರಿಯಾಗಿ ಕಾನೂನು ಕ್ರಮ ಜರುಗಿಸುವೆ” ಎಂದಿದ್ದಾರೆ.

ಛತ್ತೀಸ್ ಘಡದ ಮುಖ್ಯಮಂತ್ರಿ ಭೂಪೇಶ್ ಬಾಗೇಲ್‌

“ನನ್ನ ತಂದೆಯೊಂದಿಗಿನ ನನ್ನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಎಲ್ಲರೂ ಬಲ್ಲರು. ನಮ್ಮ ರಾಜಕೀಯ ವಿಚಾರಗಳು, ನಂಬಿಕೆಗಳ ನಡುವೆ ವ್ಯತ್ಯಾಸಗಳಿವೆ. ಅವರ ಮಗನಾಗಿ ಅವರಿಗೆ ಗೌರವ ನೀಡುತ್ತೇನೆ. ಆದರೆ ಸಮಾಜದಲ್ಲಿ ಸಾಮರಸ್ಯ ಕದಡುವ ಅವರ ನಡೆಗಳನ್ನು ಮುಖ್ಯಮಂತ್ರಿಯಾಗಿ ಯಾವುದೇ ಕಾರಣಕ್ಕೂ ಮನ್ನಿಸುವುದಿಲ್ಲ. ಛತ್ತೀಸ್‌ಘಡ ಸರ್ಕಾರ ಎಲ್ಲ ಧರ್ಮ, ಜಾತಿ, ಸಮುದಾಯಗಳ ಭಾವನೆಗಳನ್ನು ಗೌರವಿಸುತ್ತದೆ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ” ಎಂದಿದ್ದಾರೆ.

ನಂದಕುಮಾರ್ ಬಾಗೇಲ್‌ ಅವರು ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ, ಬ್ರಾಹ್ಮಣ ಸಮುದಾಯವನ್ನು ಬಹಿಷ್ಕರಿಸುವಂತೆ ಹೇಳಿಕೆ ನೀಡಿದ್ದರು. ಅಲ್ಲದೇ ಬ್ರಾಹ್ಮಣರನ್ನು ವಿದೇಶಿಯರೆಂದು ವಿಶ್ಲೇಷಿಸಿ, ಅವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಂತೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಯುವಕನ ಮೇಲೆ ಹಲ್ಲೆಗೈದು, ಮೊಬೈಲ್ ಹೊಡೆದುಹಾಕಿದ ಜಿಲ್ಲಾಧಿಕಾರಿ: ಕ್ರಮಕ್ಕೆ ಮುಂದಾದ ಛತ್ತೀಸ್‌ ಘಡ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...