HomeUncategorizedಆರ್‌ಎಸ್‌ಎಸ್ ಆಳ ಮತ್ತು ಅಗಲ; ರಾಷ್ಟ್ರ ಸೇವೆಯ ಹೆಸರಿನಲ್ಲಿ ಜನರನ್ನು ಹಳ್ಳಕ್ಕೆ ಕೆಡವಬೇಡಿ

ಆರ್‌ಎಸ್‌ಎಸ್ ಆಳ ಮತ್ತು ಅಗಲ; ರಾಷ್ಟ್ರ ಸೇವೆಯ ಹೆಸರಿನಲ್ಲಿ ಜನರನ್ನು ಹಳ್ಳಕ್ಕೆ ಕೆಡವಬೇಡಿ

- Advertisement -
- Advertisement -

ಚಕ್ರವರ್ತಿ ಸೂಲಿಬೆಲೆಯವರೆ,

ಜುಲೈ 11ರ ವಿಜಯವಾಣಿ ಪತ್ರಿಕೆಯಲ್ಲಿ ‘ಆರ್‌ಎಸ್‌ಎಸ್ ಆಳ ನೋಡಲು ಹೋಗಿ ಹಳ್ಳಕ್ಕೆ ಬಿದ್ದವರು’ ಎಂಬ ತಮ್ಮ ಅಂಕಣ ಬರಹ ಓದಿದೆ. ವಾರದ ಹಿಂದ? ಪ್ರಕಟವಾಗಿ ಭಾರೀ ಸಂಚಲನ ಉಂಟುಮಾಡಿರುವ ದೇವನೂರ ಮಹಾದೇವ ಅವರ ‘ಆರ್‌ಎಸ್‌ಎಸ್ | ಆಳ ಮತ್ತು ಅಗಲ’ ಎಂಬ ಕಿರುಪುಸ್ತಿಕೆಗೆ ತಮ್ಮ ಅಂಕಣ ಬರಹದ ಮೂಲಕ (ಆರ್‌ಎಸ್‌ಎಸ್‌ನ ಅಧಿಕೃತ ವಕ್ತಾರರಂತೆ) ನೀವಾದರೂ ಪ್ರತಿಕ್ರಿಯಿಸಿದ್ದು ಒಳ್ಳೆಯದೇ ಆಯಿತು. ಯಾಕೆಂದರೆ ಈ ಕೃತಿಯಲ್ಲಿ ಚರ್ಚಿತವಾಗಿರುವ ಬಹಳ ಗಹನವಾದ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗಿ ‘ಧೂದ್ ಕಾ ಧೂದ್, ಪಾನಿ ಕಾ ಪಾನಿ’ ಯಾವುದೆಂದು ಈ ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕಾದ ಜರೂರು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.

ಈಗ ವಿಷಯಕ್ಕೆ ಬರೋಣ. ಮೊದಲಿಗೆ ತಾವು ನಾಡಿನ ಜನತೆಗೆ ಒಂದು ಸ್ಪಷ್ಟನೆ ನೀಡಬೇಕು.

ನೇರವಾಗಿ ಆರ್‌ಎಸ್‌ಎಸ್ ಬಗ್ಗೆ ಬರೆಯಲಾದ ಕೃತಿಗೆ ಅಧಿಕೃತವಾಗಿ ಆರ್‌ಎಸ್‌ಎಸ್‌ನವರು ಯಾಕೆ ಇದುವರೆಗೆ ಎಲ್ಲೂ ಬಾಯಿಬಿಚ್ಚಿಲ್ಲ? ಕನಿಷ್ಟ ಪಕ್ಷ ಒಂದು ಪತ್ರಿಕಾ ಹೇಳಿಕೆಯನ್ನಾದರೂ ನೀಡಿಲ್ಲ. ಆರ್‌ಎಸ್‌ಎಸ್ ನಾಯಕರು ಸುದೀರ್ಘ ರಜೆಯ ಮೇಲೆ ತೆರಳಿದ್ದಾರೆಯೆ? ಅಥವಾ ತಾವು ಆರ್‌ಎಸ್‌ಎಸ್‌ನ ಅಧಿಕೃತ ವಕ್ತಾರರೆ? ಅಥವಾ ತಮ್ಮನ್ನು ಈ ಮಹತ್ಕಾರ್ಯಕ್ಕಾಗಿ ಎರವಲು ಸೇವೆಯ ಆಧಾರದಲ್ಲಿ ನಿಯೋಜಿಸಲಾಗಿದೆಯೆ? ಈ ವಿಷಯದ ಬಗ್ಗೆ ಸ್ಪಷ್ಟತೆಯಿದ್ದರೆ ನಮ್ಮ ಮುಂದಿನ ಚರ್ಚೆಗೆ ಅನುಕೂಲವಾಗುತ್ತದೆ. ಇಲ್ಲವಾದರೆ ವೈಯಕ್ತಿಕವಾಗಿ ನಿಮ್ಮೊಂದಿಗೆ ಚರ್ಚೆ ಮಾಡುವುದು ನಿರರ್ಥಕವಾಗಿಬಿಡುತ್ತದೆ. ನಿಮ್ಮ ‘ಚಿನ್ನದ ರಸ್ತೆ’, ‘ರೂಪಾಯಿಗೊಂದು ಡಾಲರ್’, ‘ಮೂವತ್ತು ರೂಪಾಯಿಗೆ ಪೆಟ್ರೋಲ್’ ತರದ ಗಾಳಿಗೋಪುರಗಳಲ್ಲಿ ನಿಮ್ಮ ವಾದಗಳೂ ತೇಲಿಹೋಗಿಬಿಡುವುದರಿಂದ ಸಾರ್ವಜನಿಕರಿಗೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.

ಆದ್ದರಿಂದ ಫಲಪ್ರದವಾದ ಚರ್ಚೆ ಆಗಬೇಕೆಂದರೆ ಒಂದೋ ತಾವು ಅಧಿಕೃತ ವಕ್ತಾರನ ಸ್ಥಾನವನ್ನು ಕ್ಲೇಮ್ ಮಾಡಿಕೊಳ್ಳಿ. ಇಲ್ಲವೇ ನಿಮ್ಮ ಆರ್‌ಎಸ್‌ಎಸ್‌ನ ಅಧಿಕೃತ ನಾಯಕರು/ವಕ್ತಾರರು ಈ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಪ್ಲೀಸ್.

ಇನ್ನು ನಿಮ್ಮ ಅಂಕಣದ ಆಳ-ಅಗಲದ ಬಗ್ಗೆ ಸ್ವಲ್ಪ ಸಂಕ್ಷಿಪ್ತವಾಗಿ ಮಾತಾಡೋಣ. ನಿಮ್ಮ ಅಂಕಣದ ಹೂರಣ ಯಥಾಪ್ರಕಾರ ಸತ್ವವಿಲ್ಲದ ಶಬ್ದಾಡಂಬರ ಮತ್ತು ಅಪಪ್ರಚಾರದ ಮೊತ್ತ. ಸಾಲದ್ದಕ್ಕೆ ಸ್ವಯಂವೈರುಧ್ಯಪೂರ್ಣ ಬಡಬಡಿಕೆಗಳು. ನಿಮ್ಮ ಅಂಕಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನೊಬ್ಬ ತಪ್ಪಿಸಿಕೊಳ್ಳಲು ಹೆಣಗುತ್ತಿರುವಂತೆ ಭಾಸವಾಗುತ್ತಿದೆ. ಒಂದೊಂದೇ ಅಂಶ ನೋಡೋಣ.

ಇದನ್ನೂ ಓದಿ:ಬಿಬಿಎಂಪಿ: 243 ವಾರ್ಡ್‌ ವಿಂಗಡನೆಗೆ ಅಂತಿಮ ಅಧಿಸೂಚನೆ

ದೇವನೂರರ ಕಿರುಪುಸ್ತಿಕೆಯಲ್ಲಿ ಸರಳವಾಗಿ ವಿಂಗಡಣೆಯಾದ ಐದು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಗೋಲ್ವಾಳ್ಕಾರ್, ಸಾವರ್ಕರ್ ಅವರ ಅಧಿಕೃತ ಬರಹಗಳು ಹಾಗೂ ಆರ್‌ಎಸ್‌ಎಸ್ ಮುಖವಾಣಿ ಪತ್ರಿಕೆಯ ಬರಹಗಳ ಮೂಲಕ ‘ಆರ್‌ಎಸ್‌ಎಸ್ ಪ್ರಾಣ ಎಲ್ಲೆಲ್ಲಿದೆ?’ ಎಂಬುದನ್ನು ನಿರೂಪಿಸಲಾಗಿದೆ. ಇದರ ಸಂಸ್ಥಾಪಕರ ಚಾತುರ್ವರ್ಣ ಪದ್ಧತಿಯ ಆರಾಧನೆಯನ್ನು, ಬ್ರಾಹ್ಮಣರ ಸೇವೆಗೆ ಶೂದ್ರರು ತಮ್ಮ ಜೀವನವನ್ನೇ ಮುಡುಪಾಗಿಡಬೇಕೆಂಬ ಮನುಧರ್ಮಶಾಸ್ತ್ರದ ಕಟ್ಟಳೆಗಳನ್ನು ಇಂದಿಗೂ ಆಚರಿಸಬೇಕೆನ್ನುವ ಮನುಷ ವಿರೋಧಿ ನೀತಿಯ ಬಗ್ಗೆ ಅಧಿಕೃತ ಉಲ್ಲೇಖಗಳಿವೆ. ಹಿಟ್ಲರನ ನಾಝಿ ಪಕ್ಷ ಮತ್ತು ಫ್ಯಾಸಿಸ್ಟ್ ಸಿದ್ಧಾಂತಗಳನ್ನು ಕೊಂಡಾಡುವ ಆರ್‌ಎಸ್‌ಎಸ್ ನಾಯಕರ ನಾಝಿ ಪ್ರೇಮ ಮತ್ತು ಮೆಚ್ಚುಗೆಗಳ ಬಗ್ಗೆ ನಿರಾಕರಿಸಲಾಗದ ಸತ್ಯಗಳಿವೆ. ಹಾಗೆಯೇ ಭಾರತದ ಸಂವಿಧಾನವನ್ನು ಪಾಶ್ಚಿಮಾತ್ಯ ಎಂದು ಜರೆದು ಅದರ ಸ್ಥಾನದಲ್ಲಿ ಮನುಧರ್ಮಶಾಸ್ತ್ರವನ್ನು ಸ್ಥಾಪಿಸಬೇಕೆಂಬ ಅವರ ಬಯಕೆಯನ್ನು ಸ್ಪಷ್ಟ ಮಾತುಗಳಲ್ಲಿ ದಾಖಲಿಸುತ್ತದೆ. ಬಹುಭಾಷ, ಬಹುಸಂಸ್ಕೃತಿಯ ಭಾರತ ಒಕ್ಕೂಟದ ಸ್ವರೂಪವನ್ನೇ ನಾಶ ಮಾಡಿ ಮನುಧರ್ಮ ಶಾಸ್ತ್ರದಡಿಯಲ್ಲಿ ಏಕಭಾಷೆ, ಏಕಸಂಸ್ಕೃತಿಯ ನಿರಂಕುಶ ಪ್ರಭುತ್ವವನ್ನು ಹೇರಬಯಸುವ ಸರಸಂಘಚಾಲಕರ ಹಿಡನ್ ಅಜೆಂಡಾವನ್ನು ಪುಸ್ತಿಕೆ ಬಯಲು ಮಾಡಿದೆ. ಇದು ಸಾರಾಂಶ.

ಒಂದೋ ನೀವು ಈ ಮೇಲಿನ ಅಂಶಗಳನ್ನು ಆರ್‌ಎಸ್‌ಎಸ್ ಸಿದ್ಧಾಂತದ ಸಾರವೆಂದು ಒಪ್ಪಿಕೊಳ್ಳಬೇಕು. ಅಥವಾ ಇಂಥಾ ಜೀವವಿರೋಧಿ, ಮನುಷ ವಿರೋಧಿ ಸಿದ್ಧಾಂತವನ್ನು ನಿರಾಕರಿಸಬೇಕು. ಬದಲಿಗೆ ನೀವು ಮಾಡುತ್ತಿರುವುದೇನು? ಈ ಯಾವ ಅಂಶವನ್ನೂ ಕನಿಷ್ಟಪಕ್ಷ ಸೋಂಕಿಸಿಕೊಳ್ಳದೆ ಪಲಾಯನ ಮಾಡಿಬಿಟ್ಟಿದ್ದೀರಿ. ನಿಮ್ಮ ಇಕ್ಕಟ್ಟೂ ಕೂಡ ಅರ್ಥವಾಗುವಂಥದ್ದೇ. ಈ ವಿಚಾರಗಳ ಕುರಿತು ಕೆದಕುತ್ತಾ ಹೋದಂತೆಲ್ಲಾ ಆರ್‌ಎಸ್‌ಎಸ್‌ನ ಪ್ರಾಣಕ್ಕೇ ಕುತ್ತುಬರುತ್ತದೆ ಎಂಬುದೇ ಅಸಲಿ ವಿಚಾರ.

ಮುಂದಿನ ಅಧ್ಯಾಯದಲ್ಲಿ ಬರುವ ‘ಶ್ರೇಷ್ಟ  ಮನುಷ ತಳಿ’ಯೆಂಬ ಅಸಹ್ಯಕರ ಪರಿಕಲ್ಪನೆಯ ಬಗ್ಗೆಯಾಗಲಿ, ‘ಮುಸ್ಲಿಂ ವೇಷದಲ್ಲಿ ತಮ್ಮದೇ ಜನರನ್ನು ಕಳಿಸಿ ಹಿಂದೂಗಳ ಮೇಲೆ ಹಲ್ಲೆ ಮಾಡಿಸಿ ಹಿಂದೂ ಮುಸ್ಲಿಂ ಗಲಭೆಗಳನ್ನು ಹುಟ್ಟುಹಾಕುವ ಆರ್‌ಎಸ್‌ಎಸ್‌ನ ಕುಟಿಲ ತಂತ್ರಗಳ ಬಗ್ಗೆ ಚಾರಿತ್ರಿಕ ದಾಖಲೆಗಳ ಉಲ್ಲೇಖದ ಬಗ್ಗೆಯಾಗಲಿ, ಸ್ವಯಂಸೇವಕರ ಹೆಸರಿನಲ್ಲಿ ‘ವಿವೇಚನಾರಹಿತ ಮನುಷ ವಿರೋಧಿ ರೋಬೋಟ್‌ಗಳನ್ನು ತಯಾರಿಸುತ್ತಿರುವ’ ಅಂಶದ ಬಗ್ಗೆಯಾಗಲಿ ತುಟಿಪಿಟಕ್ ಅನ್ನುವುದಿಲ್ಲ. ಇರಲಿ ಬಿಡಿ; ಬಾಯಿಬಿಟ್ಟರೆ ಬಣ್ಣಗೇಡು ಅಂತ ನಮ್ಮ ಹಿರಿಯರು ಗಾದೆ ಮಾತು ಹೇಳಿದ್ದಾರೆ.

ಇನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣರಿಗೆ ಮಾಡಿದ ಚಾರಿತ್ರಿಕ ವಿಶ್ವಾಸದ್ರೋಹದ ಬಗ್ಗೆ ನಿಮ್ಮದು ಜಾಣ ಮೌನ. ಕಳೆದ ಎಂಟು ವರ್ಷಗಳಿಂದ ಪೊಳ್ಳು ಆಶ್ವಾಸನೆಗಳ ಮೂಲಕ ದೇಶದ ಜನರನ್ನು ಯಾಮಾರಿಸಿದ್ದರ ಬಗ್ಗೆ ನೀವು ಮಾತಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ಇದೇ ವಿಷಯದಲ್ಲಿ ತಾವು ಮೋದಿಯವರೊಂದಿಗೆ ತೀವ್ರ ಪೈಪೋಟಿಗೆ ಇಳಿದು ‘ಹೆಂಗ್ ಪುಂಗ್ಲಿ’ ಎಂಬ ಬಿರುದನ್ನು ಪಡೆದಿದ್ದೀರಿ. ದೇಶದ ಆರ್ಥಿಕತೆ ಹಳ್ಳ ಹಿಡಿದಿರುವ ಬಗ್ಗೆ, ವಿದೇಶಿ ಸಾಲ ಮೂರುಪಟ್ಟಾಗಿರುವ ಬಗ್ಗೆ, ನಿರುದ್ಯೋಗ ತಾರಕಕ್ಕೇರಿರುವ ಬಗ್ಗೆ ‘ಇಂದು, ವರ್ತಮಾನದಲ್ಲಿ’ ಎಂಬ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಊಹೂಂ? ಉಸಿರೇ ಇಲ್ಲ. ಇವೆಲ್ಲಾ ನಿಮಗೆ ಸಂಬಂಧಿಸಿದ ವಿಷಯಗಳಲ್ಲವೇ ಅಲ್ಲ. ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಧ್ವಂಸ ಮಾಡಿ ಹಿಂದುಳಿದ ಮತ್ತು ದಲಿತ ಮಕ್ಕಳನ್ನು ಶಿಕ್ಷಣದಿಂದ ಹೊರದಬ್ಬುವ ಹುನ್ನಾರಗಳು ಹೇಗೂ ಮನುಧರ್ಮಶಾಸ್ತ್ರವನ್ನು ಜಾರಿಗೆ ತರುವ ಹಿಡನ್ ಅಜೆಂಡಾದ ಭಾಗವಾಗಿರುವುದರಿಂದ ಆ ಬಗ್ಗೆ ನಿಮ್ಮಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?!

ಸ್ವಯಂವೈರುಧ್ಯಗಳು
ಈ ಹಿಂದೆ ಪದ್ಮ ಪ್ರಶಸ್ತಿ ಮಾರಾಟವಾಗುತ್ತಿದ್ದವೆಂದು ಉಲ್ಲೇಖಿಸಿದ್ದೀರಿ. ಇಂಥಾ ವಿಷಯಗಳ ಬಗ್ಗೆ ಆಕ್ಷೇಪಣೆ, ಟೀಕೆ ಒಳ್ಳೆಯದೇ. ಆದರೆ ಆರ್‌ಎಸ್‌ಎಸ್ ಕೃಪಾಶೀರ್ವಾದದ ಆಡಳಿತದಲ್ಲಿ ‘ಪ್ರಜಾಪ್ರಭುತ್ವದ ದೇಗುಲ’ ಎನಿಸಿಕೊಂಡಿರುವ ವಿಧಾನಸಭೆಗಳೇ ಮಾರಾಟವಾಗುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆ? ಒಂದೇ ಎರಡೇ, ಹತ್ತಾರು ರಾಜ್ಯಗಳಲ್ಲಿ ಶಾಸಕರ ವ್ಯಾಪಾರ ಸಂತೆಯಲ್ಲಿ ಕುರಿ ಕೋಳಿ ವ್ಯಾಪಾರಕ್ಕಿಂತ ಕಡೆಯಾಗಿದೆ. ಹೋಗಲಿ, ಕರ್ನಾಟಕದ ನಿಮ್ಮ ಪಕ್ಷದ ಹಿರಿಯ ನಾಯಕರೊಬ್ಬರು ‘2500 ಕೋಟಿ ಕೊಟ್ಟರೆ ನಿಮ್ಮನ್ನೇ ಸಿಎಂ ಮಾಡ್ತೀವಿ ಅಂತ ನಮ್ಮ ಪಕ್ಷದ ನಾಯಕರೊಬ್ಬರು ಹೇಳಿದರು’ ಅಂದ ವಿಷಯ ವೈರಲ್ ಆಗಿತ್ತಲ್ಲವೆ? ಪ್ರಜಾಪ್ರಭುತ್ವವನ್ನೇ ಮಾರಾಟಕ್ಕಿಟ್ಟುಬಿಟ್ಟರಲ್ಲಾ ಸ್ವಾಮಿ? ಬಹುಶಃ ಅವೆಲ್ಲಾ ನಿಮ್ಮ ಪಾಲಿಗೆ ಪವಿತ್ರ ಧರ್ಮಕಾರ್ಯಗಳಿರಬೇಕು!

ಅರಿಯಲಾಗದ ಆರ್‌ಎಸ್‌ಎಸ್‌ನ ಆಳದ ಬಗ್ಗೆ ಬರೆಯುತ್ತಾ ದೇವೇಗೌಡ, ಇಂದಿರಾಗಾಂಧಿಯವರ ನಿಗೂಢ ನಡೆಗಳನ್ನು ಎಳೆದು ತಂದಿದ್ದೀರಿ. ಅದೇ ವಾದ ಸರಣಿಯಲ್ಲಿ ಸನ್ಮಾನ್ಯ ಮೋದಿಯವರ ನಿಗೂಢ ನಡೆಗಳ ಬಗ್ಗೆ ದಾಖಲಿಸಿ ಪರೋಕ್ಷವಾಗಿ ಅವರು ಎಂಥಾ ಸರ್ವಾಧಿಕಾರಿ ಎಂಬುದನ್ನು ಬಿಚ್ಚಿಟ್ಟಿದ್ದೀರಿ. ನಮ್ಮದು ಪ್ರಜಾಪ್ರಭುತ್ವ ದೇಶ, ಇಲ್ಲಿ ಸಾಮೂಹಿಕ ಚರ್ಚೆಗಳ ಆಧಾರದಲ್ಲಿ ವಿವೇಚನಾಯುಕ್ತ ನಿರ್ಣಯಗಳಾಗಬೇಕೇ ಹೊರತು ಯಾರೋ ಒಬ್ಬ ಸರ್ವಾಧಿಕಾರಿಯ ಇಚ್ಛಾನುಸಾರ ಅಲ್ಲ ಎಂಬ ಪ್ರಾಥಮಿಕ ಜ್ಞಾನವೇ ನಿಮಗಿಲ್ಲದಿರುವುದು ವಿಷಾದನೀಯ. ರಾತ್ರೋರಾತ್ರಿ ನೋಟ್ ಬಂದ್ ಮಾಡಿದಾಗ ಹಣಕಾಸು ಸಚಿವರಿಗಾಗಲಿ, ರಿಸರ್ವ್ ಬ್ಯಾಂಕ್ ಗವರ್ನರ್‌ಗಳಿಗಾಗಲಿ ಸುಳಿವೇ ಇರಲಿಲ್ಲ. ರಫೇಲ್ ಖರೀದಿ ವ್ಯವಹಾರವನ್ನು ಎಚ್‌ಎಎಲ್‌ನಿಂದ ಕಸಿದು ಅಂಬಾನಿ ಒಡಲಿಗೆ ಹಾಕಿದ ನಿರ್ಣಯ ರಕ್ಷಣಾ ಸಚಿವರಿಗೆ ತಿಳಿದದ್ದು ಮಾಧ್ಯಮಗಳ ಮೂಲಕವೇ. ಇನ್ನು ಕೃಷಿ ಕಾನೂನುಗಳನ್ನು ತಂದಿದ್ದಾಗಲಿ, ರದ್ದು ಮಾಡಿದ್ದಾಗಲಿ ಎಲ್ಲವೂ ಏಕಪಕ್ಷೀಯ. ರೈಲ್ವೆ, ಎಲ್‌ಐಸಿ ಮುಂತಾದ ಸಂಸ್ಥೆಗಳ ಹರಾಜು ಕೂಡ ಇದೇ ಕತೆ. ಈಗಿನ ಅಗ್ನಿಪಥ್ ಯೋಜನೆ ಬಗ್ಗೆ ಸಂಬಂಧಿತ ಸಮಿತಿಗೇ ಮಾಹಿತಿಯಿಲ್ಲ. ಇಂಥಾ ಸರ್ವಾಧಿಕಾರದ ದುಷ್ಪರಿಣಾಮವನ್ನು ಈಗಾಗಲೇ ದೇಶ ಅನುಭವಿಸುತ್ತಿದೆ. ಹಾಳಾಗೋದು ದೇಶ ತಾನೇ? ನಿಮ್ಮ ಕ್ಯಾಂಪೇನ್ ಪೇಮೆಂಟ್‌ಗೆ ಯಾವುದೇ ಸಮಸ್ಯೆ ಇಲ್ಲ ಬಿಡಿ.

ಇದನ್ನೂ ಓದಿ: ಗೋವಾ ಕಾಂಗ್ರೆಸ್ ಶಾಸಕರ ಪಕ್ಷಾಂತರಕ್ಕೆ ತಾತ್ಕಾಲಿಕ ತಡೆ: ಬಿಜೆಪಿ ಸೇರಲು ತಲಾ 20 ಕೋಟಿ ರೂ ಆಮಿಷದ ಆರೋಪ

ಆರ್‌ಎಸ್‌ಎಸ್‌ನ ಕಾರ್ಯಾಚರಣೆಯ ಬಗ್ಗೆ ನಿಮ್ಮ ಸಮರ್ಥನೆ ನೋಡಿದರೆ ಮತ್ತಷ್ಟು ಅನುಮಾನಗಳು, ಪ್ರಶ್ನೆಗಳು ಮೂಡುತ್ತವೆ. “ನೂರುವರ್ಷ ಕಾಣುತ್ತಿರುವ ಸಂಘಟನೆಯೊಂದನ್ನು ಅರಿಯಲು ಎಷ್ಟು ಅಧ್ಯಯನ ಮಾಡಿದರೂ ಕಡಿಮೆಯೇ. ಇನ್ನೂ ವಿಸ್ತಾರದ ಅರಿವಾಗಬೇಕೆಂದರೆ ಅದರೊಟ್ಟಿಗೆ ಒಡನಾಡಿರಬೇಕು. ಆಗ ಮಾತ್ರ ಅದರ ಬಾಹುಗಳು ಚಾಚಿರುವ ರೀತಿಯನ್ನು ಅಂದಾಜಿಸಿಕೊಳ್ಳಬಹುದು” ಎಂದಿದ್ದೀರಿ. ಇದರೊಟ್ಟಿಗೆ ಒಡನಾಟವಿರಬೇಕು ಎಂದರೆ ಹೇಗೆ ಸಾಧ್ಯ? ಐಸಿಸ್, ಅಲ್ಕೈದಾಗಳಂತಹ ನಿಗೂಢ ಸಂಘಟನೆಗಳನ್ನು ಅರ್ಥ ಮಾಡಿಕೊಳ್ಳಲು ಅವರೊಡನೆ ಒಡನಾಟ ಇಟ್ಟುಕೊಳ್ಳಲು ಸಾಧ್ಯವೆ? ಹಾಗಂತ ಅದರ ಬಗ್ಗೆ ಅವುಗಳ ಬಗ್ಗೆ ತಾವು ಪುಟಗಟ್ಟಲೆ ಪುಂಗ್ತೀರಲ್ಲಾ, ಅವುಗಳ ಒಳಹೊಕ್ಕು ನೋಡಿದ್ದೀರಾ? ಆ ನಿಮ್ಮ ಲಾಜಿಕ್ ಹಾಗಿರಲಿ, ದಶಕಗಟ್ಟಲೆ ಒಡನಾಟವಿದ್ದದ್ದು ಮಾತ್ರವಲ್ಲ, ಸ್ವಯಂಸೇವಕರಾಗಿ ದಶಕಗಟ್ಟಲೆ ದುಡಿದ ಅನೇಕ ಶೂದ್ರರನ್ನೂ ಕೂಡ ಕತ್ತಲಲ್ಲೇ ಉಳಿಸಿ, ನಿಗೂಢ ಕಾರ್ಯಾಚರಣೆಗೆ ಮಾತ್ರ ಬಳಸಿಕೊಳ್ಳುತ್ತಿದ್ದ ವಿಧಾನವನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಕೋಟೆಯಿಂದ ಹೊರಬಂದವರ ನೋವಿನ ಕತೆಗಳನ್ನು ಕೇಳುವವರಾರು? ಅದೂ ಹಾಳಾಗಿ ಹೋಗಲಿ, ನೂರು ವರ್ಷ ಕಾಣುತ್ತಿರುವ ಸಂಘಟನೆಯ ನಾಯಕತ್ವ ಸ್ಥಾನಗಳಲ್ಲಿ ಕೇವಲ ಬ್ರಾಹ್ಮಣರೇ ತುಂಬಿರುವುದು ಯಾತಕ್ಕಾಗಿ? ಈ ಭಾರತಾಂಬೆಯ ಮಕ್ಕಳಾದ ದಲಿತ, ಶೂದ್ರ ಹಿನ್ನೆಲೆಯ ‘ಅರ್ಹ’ ಕಾರ್ಯಕರ್ತರು ನಿಮ್ಮ ಕಣ್ಣಿಗೇ ಬೀಳುತ್ತಿಲ್ಲವಲ್ಲಾ ಯಾಕೆ? ಅಥವಾ ಇದೂಕೂಡ ಮನಧರ್ಮವನ್ನು ಆಚರಿಸುವ ಹಿಡನ್ ಅಜೆಂಡಾದ ಭಾಗವೇ? ಹೀಗೆ ನಾನಾ ಪ್ರಶ್ನೆಗಳು ಏಳುತ್ತವೆ.

ದೇವನೂರು ಹೇಳಿರುವಂತೆ ಈ ಮಾಯಾವಿ ಸಂಘಟನೆಯನ್ನು ಅರ್ಥ ಮಾಡಿಕೊಳ್ಳಲು ಎಲ್ಲಿ ಅಧ್ಯಯನ ಮಾಡಿದರೂ ಕಡಿಮೆಯೇ. ನೀವೇ ಹೇಳಿರುವಂತೆ ಅದರ ಬಾಹುಗಳು ಚಾಚಿರುವ ರೀತಿ ಮತ್ತು ನಿಗೂಢ. ಗಾಂಧೀಜಿಯಿಂದ ಮೊದಲ್ಗೊಂಡು ಕಲ್ಬುರ್ಗಿ, ಗೌರಿ ಮುಂತಾದವರ ಹತ್ಯೆಗಳೂ, ಸಂಜೋತ, ಅಜ್ಮೇರ್ ಸ್ಫೋಟಗಳ ಸುತ್ತಾ ಎದ್ದಿರುವ ಜಟಿಲ ಪ್ರಶ್ನೆಗಳೇ ಇದಕ್ಕೆ ಸಾಕ್ಷಿ.

ದೇವನೂರರು ‘ಸಂಶೋಧನಾ ಕೃತಿ’ ರಚಿಸಿದ್ದಾರೆ ಎಂದುಕೊಂಡಿರುವ ತಮ್ಮ ವಿದ್ವತ್ತು ಕಂಡು ಯಾವಕಡೆಯಿಂದ ನಗಬೇಕೋ ತಿಳಿಯುತ್ತಿಲ್ಲ. ದೇವನೂರರೇ ಸ್ಪಷ್ಟ ಮಾತುಗಳಲ್ಲಿ ಹೀಗೆ ನುಡಿದಿದ್ದಾರೆ. “ಆರ್‌ಎಸ್‌ಎಸ್‌ನ ಗತಕಾಲದ ಪುರಾತನ ವಾಸನೆಯ ಬಾವಿಗೆ ಇಣುಕಿ ನೋಡಿದೆ. ಕಂಡ ದೃಶ್ಯ ಘೋರವಾಗಿದೆ. ಈ ಪುಟಾಣಿ ಪುಸ್ತಿಕೆಯಲ್ಲಿರುವುದು ಅದರ ಒಂದು ತುಣುಕು ಅಷ್ಟೇ. ಮುಂದೆ ವಿಸ್ತೃತವಾಗಿ ಬರೆಯುವವರಿಗೆ ಇದು ಒಂದಿಷ್ಟು ಪ್ರೇರಣೆಯಾದರೆ ಅದೇ ಸಾರ್ಥಕ”. ದೇವನೂರರ ಈ ಕಿರುಪುಸ್ತಿಕೆಯ ಆಘಾತಕ್ಕೆ ತತ್ತರಿಸಿ ಅಯೋಮಯವಾಗಿರುವ ನಿಮ್ಮಗಳ ಪರಿಸ್ಥಿತಿ ಅರ್ಥವಾಗುವಂಥದ್ದೇ.

ಆರ್‌ಎಸ್‌ಎಸ್ ಅರಿಯುವಲ್ಲಿ ‘ದೇವನೂರರ ಅಜ್ಞಾನ’ದ ಬಗ್ಗೆ ಲೇವಡಿ ಮಾಡಿದ್ದೀರಿ. ಇರಲಿ, ಹಾಗಾದರೆ ಆರ್‌ಎಸ್‌ಎಸ್ ಬಗ್ಗೆ ಜ್ಞಾನ ಎಲ್ಲಿದೆ ಸ್ವಾಮಿ? ಯಾವ ಕೃತಿಯಲ್ಲಿದೆ? ಯಾವ ದಾಖಲೆಯಲ್ಲಿದೆ? ಅಥವಾ ಯಾವ ಮಹಾನುಭಾವನ ಬಳಿಯಿದೆ? ಅದನ್ನಾದರೂ ಹೇಳಿ ಪುಣ್ಯ ಕಟ್ಟಿಕೊಳ್ಳಿ.

ಇಲ್ಲಾ ಅಂಥಾ ಯಾವ ಅಧಿಕೃತ ದಾಖಲೆಯೂ ಇಲ್ಲ. ಶತಮಾನಕ್ಕೆ ತಯಾರಿ ನಡೆಸಿರುವ ಮಾಯಾವಿ, ವೇಷಧಾರಿ ಆರ್‌ಎಸ್‌ಎಸ್‌ಗೆ ಒಂದು ಲಿಖಿತ ತತ್ವ ಪ್ರಣಾಳಿಕೆಯೇ ಇಲ್ಲ. ಸಂಘಟನಾತ್ಮಕ ನಿಯಮಗಳನ್ನು ನಿರೂಪಿಸಿರುವ ಒಂದು ಸಂವಿಧಾನವೂ ಇಲ್ಲ. ನಾಯಕತ್ವವನ್ನು ಆರಿಸುವ ಯಾವುದೇ ಲಿಖಿತ ಮಾನದಂಡವೂ ಇಲ್ಲ. ಇಷ್ಟುಗಳ ನನ್ನ ಪ್ರಯತ್ನದಲ್ಲಿ ಆರ್‌ಎಸ್‌ಎಸ್‌ನ ಯಾವುದೇ ಅಧಿಕೃತ ದಾಖಲೆ ಲಭ್ಯವಾಗಿಲ್ಲ. ಎಲ್ಲವೂ ನಿಗೂಢ.

ದೊಡ್ಡಿಪಾಳ್ಯ ನರಸಿಂಹಮೂರ್ತಿ

ಇದನ್ನೂ ಓದಿ: ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಮೀಸಲಾತಿ ಹೆಸರಲ್ಲಿ ಹಿಂದುಳಿದವರು ಎಂಬ ಹೆಸರಲ್ಲಿ ನೀವು ಮಾಡುತ್ತಿರುವ ಅನ್ಯಾಯ ಕಡಿಮೆನಾ? ಮಾತು ಮಾತಿಗೆ ಬ್ರಾಹ್ಮಣರು ಅನ್ನುವ ನೀವು ಜಾತ್ಯಾತೀತರೆ? ಆರ್ ಎಸ್ ಎಸ್ ನಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಎಲ್ಲೇ ಪ್ರವಾಹ ಇರಲಿ, ಮೊದಲು ಹೋಗಿ ಜನರನ್ನು ಕಾಪಾಡೋರು ಆರ್ ಎಸ್ ಎಸ್ ನವರು, ಅನ್ನೊ ಸತ್ಯಾನ ನೀವು ಮುಚ್ಚಿಡಕ್ಕಾಗಲ್ಲ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...