Homeಕರ್ನಾಟಕಬಿಬಿಎಂಪಿ: 243 ವಾರ್ಡ್‌ ವಿಂಗಡನೆಗೆ ಅಂತಿಮ ಅಧಿಸೂಚನೆ

ಬಿಬಿಎಂಪಿ: 243 ವಾರ್ಡ್‌ ವಿಂಗಡನೆಗೆ ಅಂತಿಮ ಅಧಿಸೂಚನೆ

- Advertisement -
- Advertisement -

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 243 ವಾರ್ಡ್‌ಗಳ ಅಂತಿಮ ಡಿಲಿಮಿಟೇಶನ್ ವರದಿಯನ್ನು ರಾಜ್ಯ ಸರ್ಕಾರ ಗುರುವಾರ ಅಧಿಸೂಚನೆ ನೀಡಿದೆ. ಬಿಬಿಎಂಪಿ ಚುನಾವಣೆಯನ್ನು ಎರಡು ವರ್ಷಗಳ ಕಾಲ ವಿಳಂಬಗೊಳಿಸಿದ್ದ ಕಸರತ್ತು ಕೊನೆಗೂ ಪೂರ್ಣಗೊಂಡಿದೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಒಂದು ವಾರ್ಡ್‌ಗೆ ಸ್ಯಾಂಡಲ್‌ವುಡ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿದೆ ಎಂಬುದು ವರದಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. 3,833 ಆಕ್ಷೇಪಣೆಗಳ ಪೈಕಿ 1,800 ಕ್ಕಿಂತ ಹೆಚ್ಚು ಆಕ್ಷೇಪಣೆಗಳನ್ನು ಅಂತಿಮ ವರದಿಯಲ್ಲಿ ಪರಿಗಣಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

243 ವಾರ್ಡ್‌ಗಳಿಗೆ ಗಡಿಗಳ ಅಂತಿಮಗೊಳಿಸುವಿಕೆಯು ಬಿಬಿಎಂಪಿಗೆ ಚುನಾವಣಾ ಪ್ರಕ್ರಿಯೆಯನ್ನು ವೇಗವಾಗಿ ಮಾಡುವ ನಿರೀಕ್ಷೆಯಿದೆ. ಬಿಬಿಎಂಪಿಯ ಅವಧಿಯು ಸೆಪ್ಟೆಂಬರ್ 2020 ರಲ್ಲಿ ಮುಕ್ತಾಯಗೊಂಡಿತ್ತು. ಉಳಿದಿರುವಂತೆ, ವಾರ್ಡ್‌ಗಳ ಮೀಸಲಾತಿಯನ್ನು ಮುಂದಿನ ಒಂದು ಅಥವಾ ಎರಡು ವಾರಗಳಲ್ಲಿ ಪ್ರಕಟಿಸಬಹುದು ಎಂದು ವರದಿಯಾಗಿದೆ.

ನಾಗರಿಕರು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸಿ ಸಿದ್ಧಪಡಿಸಿದ ಅಂತಿಮ ವರದಿಯಲ್ಲಿ ಕನಿಷ್ಠ 18 ವಾರ್ಡ್‌ಗಳ ಹೆಸರನ್ನು ಬದಲಾಯಿಸಲಾಗಿದೆ. ಜೊತೆಗೆ 42 ವಾರ್ಡ್‌ಗಳಿಗೆ ಮತ್ತೊಮ್ಮೆ ಗಡಿಯನ್ನು ಮರು ರಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್‌‌ ವರದಿ ತಿಳಿಸಿವೆ. ಆಕ್ಷೇಪಣೆಗಳ ಆಧಾರದ ಮೇಲೆ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3,833 ಆಕ್ಷೇಪಣೆಗಳಲ್ಲಿ ಅರ್ಧದಷ್ಟು ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಂದಿವೆ. ಇವುಗಳಲ್ಲಿ ಹೆಚ್ಚಿನ ಆಕ್ಷೇಪಣೆಗಳು ವಾರ್ಡ್‌ನ ಹೆಸರು ಬದಲಾವಣೆಗೆ ವಿರುದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಆರ್ ಪುರಂನಿಂದ 479 ಆಕ್ಷೇಪಣೆಗಳು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹುತಾತ್ಮ ಚೌಕ ಸಂರಕ್ಷಣೆಗೆ ಆಗ್ರಹ; ಸಹಿ ಸಂಗ್ರಹ ಅಭಿಯಾನ ಆರಂಭ

ಗಾಂಧಿನಗರ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರಗಳಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ ಎಂಬುದು ಕುತೂಹಲ ಮೂಡಿಸಿದೆ. ಆಕ್ಷೇಪಣೆಗಳನ್ನು ಅಧ್ಯಯನ ಮಾಡಲು ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿಯ ವಿಶೇಷ ಆಯುಕ್ತ (ಕಂದಾಯ) ದೀಪಕ್ ಆರ್ ಎಲ್ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಿದೆ.

ಹೆಚ್ಚಿನ ಆಕ್ಷೇಪಣೆಗಳು ಹೊಸ ಗಡಿಗಳಿಗೆ ಸಂಬಂಧಿಸಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. “ವಾರ್ಡ್‌ನ್ನು ಎರಡು ಭಾಗಗಳಾಗಿ ವಿಭಜಿಸುವ ರಾಷ್ಟ್ರೀಯ ಹೆದ್ದಾರಿ ಗೊಂದಲಕ್ಕೆ ಕಾರಣವಾಗಲಿದೆ ಎಂದು ಕೆಲವು ನಿವಾಸಿಗಳು ಆಕ್ಷೇಪಿಸಿದ್ದಾರೆ. ಆ ಆಕ್ಷೇಪಣೆಗಳ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸಲಿದೆ” ಎಂದು ಹೇಳಿದ್ದಾರೆ.

ಕರ್ನಾಟಕ ನಗರಾಭಿವೃದ್ಧಿ ಇಲಾಖೆ ಜೂನ್ 23 ರಂದು ವಿಂಗಡಣೆ ಮಾಡಲಾದ ವಾರ್ಡ್‌ಗಳ ಕರಡನ್ನು ಅಧಿಸೂಚಿಸಿತ್ತು. ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243 ಕ್ಕೆ ಹೆಚ್ಚಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿತ್ತು.

ಇದನ್ನೂ ಓದಿ: ಬೆಂಗಳೂರು ವಿವಿ: ಪ್ರವೇಶಾತಿ ಅನುಮೋದನೆ ನೀಡದೆ ಪ್ರಾಧ್ಯಾಪಕರಿಂದ ತೊಂದರೆ; ವಿದ್ಯಾರ್ಥಿಗಳ ಆರೋಪ

ಹಿಂದಿನ ವಾರ್ಡ್‌ಗಳು 28,000 ರಿಂದ 1 ಲಕ್ಷದವರೆಗಿನ ಜನಸಂಖ್ಯೆಯೊಂದಿಗೆ ಭಾರಿ ಅಸಮಾನತೆಯನ್ನು ಹೊಂದಿದ್ದರೆ, ಹೊಸ ವಾರ್ಡ್‌ಗಳು ಸರಾಸರಿ 34,700 ಜನಸಂಖ್ಯೆಯನ್ನು ಹೊಂದಿವೆ. ಆದಾಗ್ಯೂ, 2011 ರ ಜನಗಣತಿಯ ಆಧಾರದ ಮೇಲೆ ಡಿಲಿಮಿಟೇಶನ್ ಪ್ರಕ್ರಿಯೆಯು ಹಳೆಯ ಜನಸಂಖ್ಯೆಯ ಆಧಾರವಾಗಿ ಮಾಡಲಾಗಿದೆ ಎಂಬ ಟೀಕೆಗೆ ಒಳಗಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...