Homeಮುಖಪುಟಪಠ್ಯಪುಸ್ತಕಗಳಲ್ಲಿ ನಮ್ಮ ಹೆಸರು ಕೈಬಿಡಿ: ಎನ್‌ಸಿಇಆರ್‌ಟಿಗೆ ಪತ್ರ ಬರೆದ 33 ತಜ್ಞರು

ಪಠ್ಯಪುಸ್ತಕಗಳಲ್ಲಿ ನಮ್ಮ ಹೆಸರು ಕೈಬಿಡಿ: ಎನ್‌ಸಿಇಆರ್‌ಟಿಗೆ ಪತ್ರ ಬರೆದ 33 ತಜ್ಞರು

- Advertisement -
- Advertisement -

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ರಾಜ್ಯಶಾಸ್ತ್ರದ ಪಠ್ಯಗಳನ್ನು “ಗುರುತಿಸಲಾಗದಷ್ಟು ವಿರೂಪಗೊಳಿಸಲಾಗಿದೆ” ಹಾಗಾಗಿ ತಮ್ಮ ಹೆಸರನ್ನು ಕೈಬಿಡುವಂತೆ ದೇಶದ ಪ್ರತಿಷ್ಠಿತ ವಿವಿಗಳ 33 ವಿದ್ವಾಂಸರ ಗುಂಪು ಒತ್ತಾಯಿಸಿದೆ.

ಇತ್ತೀಚೆಗೆ ತಾನೇ ಮುಖ್ಯ ಸಲಹೆಗಾರರ ಮಂಡಳಿಯಿಂದ ಕೈಬಿಡುವಂತೆ ಶಿಕ್ಷಣ ತಜ್ಞ ಸುಹಾಸ್ ಪಾಲ್ಶಿಕರ್ ಮತ್ತು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಸಹ ಒತ್ತಾಯಿಸಿದ್ದರು. ಸದ್ಯ ಪತ್ರ ಬರೆದ 33 ಶಿಕ್ಷಣ ತಜ್ಞರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಮುಜಾಫರ್ ಅಸ್ಸಾದಿ, ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಸಂದೀಪ್‌ ಶಾಸ್ತ್ರಿ ಕೂಡ ಸೇರಿದ್ದಾರೆ.

‘ವಿಭಿನ್ನ ದೃಷ್ಟಿಕೋನಗಳ ಹೊರತಾಗಿಯೂ ನಾವೆಲ್ಲರೂ ಶಾಲಾ ಪಠ್ಯಪುಸ್ತಕಗಳ ರಾಜಕೀಯ ಶಾಸ್ತ್ರದಲ್ಲಿ ಗಮನಾರ್ಹವಾದ ಪಠ್ಯ ರಚಿಸುವಿಕೆಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಆದಾಗ್ಯೂ, ಎನ್‌ಸಿಇಆರ್‌ಟಿ ಈಗ ಈ ಪಠ್ಯಪುಸ್ತಕಗಳಲ್ಲಿ ಹಲವು ನಿರ್ಣಾಯಕ ಬದಲಾವಣೆಗಳನ್ನು, ತಿರುಚುವಿಕೆ ಮತ್ತು ಅಳಿಸುವಿಕೆಗಳನ್ನು ಮಾಡಿದೆ. ಇವುಗಳು ಯಾವುದೂ ಸ್ವೀಕಾರಾರ್ಹವಲ್ಲ ಮತ್ತು ಅಪೇಕ್ಷಣೀಯ ವಿಷಯಗಳನ್ನು ಯಾವುದೇ ಪ್ರಮುಖ ಕಾರಣ ನೀಡದೆ ಮುದ್ರಿಸಲಾಗಿದೆ. ಇವು ಶೈಕ್ಷಣಿಕ ಜ್ಞಾನ ಉತ್ಪಾದನೆಗೆ ಆಧಾರವಾಗಿರುವ ಪಾರದರ್ಶಕತೆಯನ್ನು ಉಲ್ಲಂಘಿಸುವುದರ ಜೊತೆ ವಿವಾದವನ್ನು ಸೃಷ್ಟಿಸುತ್ತದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

‘ಮೂಲ ಪಠ್ಯಗಳಲ್ಲಿ ಹಲವಾರು ವಿಷಯಾಧಾರಿತ ಪರಿಷ್ಕರಣೆಗಳು ಇರುವುದರಿಂದ, ಅವುಗಳನ್ನು ವಿಭಿನ್ನ ಪುಸ್ತಕಗಳಾಗಿ ಮಾಡುವುದರಿಂದ ನಾವು ತಯಾರಿಸಿದ ಪುಸ್ತಕಗಳು ಎಂದು ಹೇಳಿಕೊಳ್ಳುವುದು ಮತ್ತು ನಮ್ಮ ಹೆಸರನ್ನು ಅವುಗಳೊಂದಿಗೆ ಸಂಯೋಜಿಸುವುದು ನಮಗೆ ಕಷ್ಟಕರವಾಗಿದೆ. ಬದಲಾವಣೆಯಿಂದ ಪಠ್ಯಪುಸ್ತಕಗಳನ್ನು ಗುರುತಿಸಲಾಗದಷ್ಟು ವಿರೂಪಗೊಳಿಸಲಾಗಿದೆ ಮತ್ತು ಅವುಗಳನ್ನು ಶೈಕ್ಷಣಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಈಗ ಕೈಗೊಂಡಿರುವ ಸೃಜನಾತ್ಮಕ ಸಾಮೂಹಿಕ ಪ್ರಯತ್ನವು ಅಪಾಯದಲ್ಲಿದೆ ಎಂದು ನಾವು ಈಗ ನಂಬುತ್ತೇವೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸ್ವರಾಜ್ ಅಭಿಯಾನದ ರಾಜಕೀಯ ಪಕ್ಷದ ಸಂಸ್ಥಾಪಕರಾದ ಪಾಲ್ಶಿಕರ್ ಮತ್ತು ಯಾದವ್ ಅವರನ್ನು 9 ರಿಂದ 12 ನೇ ತರಗತಿಯ NCERT ಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಿಗೆ ಮುಖ್ಯ ಸಲಹೆಗಾರರಾಗಿ ಹೆಸರು ಸೇರಿಸಲಾಗಿದೆ.

ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಮಕ್ಕಳಿಗೆ ಪಠ್ಯ ಹೊರೆಯಾಗಬಾರದೆಂದು ಕಡಿಮೆ ಮಾಡುವು ಉದ್ದೇಶದಿಂದ ಎನ್‌ಸಿಇಆರ್‌ಟಿಯು ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಆದರೆ ಆ ಸಂದರ್ಭದಲ್ಲಿ ಭಾರತದ ಇತಿಹಾಸದ ಪ್ರಮುಖ ವಿವರಗಳನ್ನು ಕೈಬಿಟ್ಟಿದೆ.

ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರನ್ನು ಹತ್ಯೆ ಮಾಡಲು ಹಿಂದೂ ಉಗ್ರಗಾಮಿಗಳು ನಡೆಸಿದ ಪ್ರಯತ್ನಗಳು ಮತ್ತು ಅವರ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾದ ನಿಷೇಧದ ಪ್ಯಾರಾಗಳನ್ನು ಎನ್‌ಸಿಇಆರ್‌ಟಿ ಪಠ್ಯದಿಂದ ಕೈಬಿಡಲಾಗಿದೆ.

ಕಳೆದ ವರ್ಷ, NCERT 2002ರ ಗುಜರಾತ್ ಗಲಭೆಗಳು, ಭಾರತದಲ್ಲಿ ಮೊಘಲ್ ಆಳ್ವಿಕೆ ಮತ್ತು 1975ರಲ್ಲಿ ಹೇರಲಾದ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ವಿಷಯವನ್ನು ಸಹ ಕೈಬಿಟ್ಟಿತು. ಈಗ NCERT ಪಠ್ಯಪುಸ್ತಕದಲ್ಲಿ ಗುಜರಾತ್ ಗಲಭೆಯ ಬಗ್ಗೆ ಯಾವುದೇ ಉಲ್ಲೇಖಗಳು ಇಲ್ಲದಂತಾಗಿದೆ.

ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಅವರಿಗೆ ಗುರುವಾರ ಪಾಲ್ಶಿಕರ್ ಮತ್ತು ಯಾದವ್ ಅವರು ಪತ್ರ ಬರೆದಿದ್ದು, ”ತಮ್ಮ ಜೊತೆ ಯಾವುದೇ ಚರ್ಚೆನಡೆಸದೇ ಅಥವಾ ಪಠ್ಯ ಕೈಬಿಡುವ ವಿಚಾರ ತಿಳಿಸಿಲ್ಲ” ಎಂದು ಅವರು ಹೇಳಿದರು.

ಎನ್‌ಸಿಇಆರ್‌ಟಿಯು ಈ ರೀತಿ ಪಠ್ಯ ಕೈಬಿಡುವುದರ ಹಿಂದೆ ಯಾವುದೇ ಶೈಕ್ಷಣಿಕ ತಾರ್ಕಿಕತೆಯನ್ನು ನೋಡಲಾಗಿಲ್ಲ ಎಂದು ಪಾಲ್ಶಿಕರ್ ಮತ್ತು ಯಾದವ್ ಅವರು ಹೇಳಿದ್ದಾರೆ.

”ಪಠ್ಯಪುಸ್ತಕಗಳು ಪಕ್ಷಪಾತದ ರೀತಿಯಲ್ಲಿ ರೂಪಿಸಬಾರದು ಮತ್ತು ಸಮಾಜ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ವಿಮರ್ಶೆ ಮತ್ತು ಪ್ರಶ್ನಿಸುವ ಮನೋಭಾವವನ್ನು ತಗ್ಗಿಸಬಾರದು” ಎಂದು ಪತ್ರದಲ್ಲಿ ಸೇರಿಸಲಾಗಿದೆ.

“ವಿರೂಪಗೊಂಡ ಮತ್ತು ಶೈಕ್ಷಣಿಕವಾಗಿ ಕಾರ್ಯನಿರ್ವಹಿಸದ ಪಠ್ಯಪುಸ್ತಕಗಳಿಗೆ” ತಮ್ಮ ಹೆಸರುಗಳನ್ನು ಮುಖ್ಯ ಸಲಹೆಗಾರರಾಗಿ ಉಲ್ಲೇಖಿಸಿರುವುದು “ಮುಜುಗರ” ಎಂದು ಶಿಕ್ಷಣತಜ್ಞ ಮತ್ತು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಇದನ್ನೂ ಓದಿ; ಸಿಎಎ, ಎನ್‌ಆರ್‌ಸಿ ಟೀಕಿಸಿ ನಾಟಕ ಪ್ರದರ್ಶನ: ಬೀದರ್‌ನ ಶಾಹೀನ್ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣ… ರದ್ದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...