Homeಮುಖಪುಟಡ್ರಗ್ಸ್ ಕೇಸ್‌ನಲ್ಲಿ ಬಿಜೆಪಿ ಕೈವಾಡವಿದೆ ಎಂದು ಕಿಡಿ ಕಾರಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್

ಡ್ರಗ್ಸ್ ಕೇಸ್‌ನಲ್ಲಿ ಬಿಜೆಪಿ ಕೈವಾಡವಿದೆ ಎಂದು ಕಿಡಿ ಕಾರಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್

ನಟ ಶಾರುಖ್ ಖಾನ್ ಮೇಲೆ ದಾಳಿ ನಡೆಸಲು ಬಿಜೆಪಿ ಅವರ ಮಗ ಆರ್ಯನ್‌ರನ್ನು ಗುರಿಯಾಗಿಸಿದೆ ಎಂದು ಆರೋಪಿಸಿದ್ದಾರೆ.

- Advertisement -
- Advertisement -

ಭಾನುವಾರ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಡೆಸಿದ ದಾಳಿಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಹಿರಿಯ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಗುರುವಾರ ಆರೋಪಿಸಿದ್ದಾರೆ. ಬಿಜೆಪಿ ಪದಾಧಿಕಾರಿ ಮತ್ತು ಖಾಸಗಿ ತನಿಖಾಧಿಕಾರಿ ಖಾಸಗಿಯಾಗಿ ಭಾಗವಹಿಸಿದ್ದಾರೆ ಎಂದು  ನವಾಬ್ ಮಲಿಕ್ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ.

ರಾಜ್ಯ ಸರ್ಕಾರದ ಕ್ಯಾಬಿನೆಟ್ ಮಂತ್ರಿಯೂ ಆಗಿರುವ ನವಾಬ್ ಮಲಿಕ್, ಕೆಪಿ ಗೋಸಾವಿ ಮತ್ತು ಬಿಜೆಪಿ ಪದಾಧಿಕಾರಿ ಮನೀಶ್ ಭಾನುಶಾಲಿ ಇಬ್ಬರು ಹಡಗಿನ ಮೇಲೆ ದಾಳಿ ನಡೆದ ತಡರಾತ್ರಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಚೇರಿಗೆ ಹೋಗುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಭಾನುವಾರ ತಡರಾತ್ರಿ ಇಬ್ಬರು ಬಿಳಿ ಕಾರಿನಿಂದ ಇಳಿದು ಡ್ರಗ್ ಏಜೆನ್ಸಿಯ ಮುಂಬೈ ಕಚೇರಿಗೆ ಹೋಗುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಸ್ಪಷ್ಟವಾಗಿ ಕಾಣಿಸುತ್ತಾರೆ.

ಇದನ್ನೂ ಓದಿ: ಡ್ರಗ್ಸ್ ಪಾರ್ಟಿ: ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್‌ ಎನ್‌ಸಿಬಿ ವಶಕ್ಕೆ

ಈ ವಿಡಿಯೊವನ್ನು ಟ್ವೀಟ್ ಮಾಡಿರುವ ನವಾಬ್ ಮಲಿಕ್, ’ಕ್ರೂಸ್ ಹಡಗಿನ ಮೇಲೆ ದಾಳಿ ನಡೆದ ದಿನ ಕಿರಣ್ ಪಿ ಗೋಸಾಯಿ ಮತ್ತು ಮನೀಶ್ ಭಾನುಶಾಲಿ ಇಬ್ಬರು ಎನ್‌ಸಿಬಿ ಕಚೇರಿಗೆ ಭೇಟಿ ನೀಡುತ್ತಿರುವ ದೃಶ್ಯ’ ಎಂದಿದ್ದಾರೆ.

ಇನ್ನೊಂದು ವಿಡಿಯೊ ಪೋಸ್ಟ್ ಮಾಡಿರುವ ಎನ್‌ಸಿಪಿ ನಾಯಕ, ಹಿರಿಯ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಅವರ ಹೇಳಿಕೆಗಳಲ್ಲಿನ ವ್ಯತ್ಯಾಸಗಳನ್ನು ಹೊರಗೆಳೆದಿದ್ದಾರೆ.

” ಎಂಟು ಜನರನ್ನು ಬಂಧಿಸಿರುವಾಗ, 8 ರಿಂದ 10 ಜನರನ್ನು ಬಂಧಿಸಲಾಗಿದೆ ಎಂದು ಸಮೀರ್ ವಾಂಖೇಡೆ ಹೇಳಿಕೆ ನೀಡಿದ್ದಾರೆ. ಅವರಿಗೆ ಅವರ ಮಾತುಗಳ ಮೇಲೆ ಏಕೆ ಹಿಡಿತವಿಲ್ಲ? ಹಾಗಾದರೇ ಅವರಿಗೆ ಇನ್ನೂ ಇಬ್ಬರನ್ನು ಬಂಧಿಸುವ ಉದ್ದೇಶವಿದೆಯೇ?” ಎಂದು ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, “ಮಹಾರಾಷ್ಟ್ರವನ್ನು ದುರ್ಬಳಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು. ಬಾಲಿವುಡ್ ನಟ ಶಾರುಖ್ ಖಾನ್ ಮೇಲೆ ದಾಳಿ ನಡೆಸಲು ಬಿಜೆಪಿ ಅವರ ಮಗ ಆರ್ಯನ್ ಖಾನ್‌ರನ್ನು ಗುರಿಯಾಗಿಸಿದೆ ಎಂದು ಆರೋಪಿಸಿದ್ದಾರೆ.

“ಕಳೆದ ಒಂದು ತಿಂಗಳಿನಿಂದ, ಮುಂದಿನ ಗುರಿ ನಟ ಶಾರುಖ್ ಖಾನ್ ಎಂದು ಕ್ರೈಮ್ ವರದಿಗಾರರಿಗೆ ಮಾಹಿತಿ ರವಾನಿಸಲಾಗುತ್ತಿದೆ. ಕ್ರೂಸ್ ಹಡಗಿನಲ್ಲಿ ಎನ್‌ಸಿಬಿ ದಾಳಿಯ ನಂತರ ಬಂಧಿತರಾದ ಎಂಟು ಜನರಲ್ಲಿ ಆರ್ಯನ್ ಖಾನ್ ಒಬ್ಬರಾಗಿದ್ದಾರೆ. ಆದರೆ, ಆತನ ಬಳಿಯಿಂದ ಯಾವುದೇ ಔಷಧಗಳನ್ನು ವಶಪಡಿಸಿಕೊಳ್ಳಲಾಗಿಲ್ಲ” ಎಂದು ಹೇಳಿದ್ದರು.

ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಭಾಗವಾಗಿರುವ ಎನ್‌ಸಿಪಿಯ ಮಲಿಕ್, ಹೊರಗಿನವರಿಗೆ ಎನ್‌ಸಿಬಿಯ ಕಾರ್ಯಾಚರಣೆಗೆ ಹೇಗೆ ಅವಕಾಶ ನೀಡಲಾಗಿದೆ ಎಂಬುದಕ್ಕೆ ಉತ್ತರ ನೀಡಬೇಕು. ಮಹಾರಾಷ್ಟ್ರವನ್ನು ದುರುಪಯೋಗಪಡಿಸಿಕೊಳ್ಳಲು ಬಿಜೆಪಿ ಎನ್‌ಸಿಬಿಯನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಪದಾಧಿಕಾರಿ ಮನೀಶ್ ಭಾನುಶಾಲಿ ಅವರು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋಗೆ (ಎನ್‌ಸಿಬಿ) ಎಚ್ಚರಿಕೆಯ ನಾಗರಿಕರಾಗಿ ಡ್ರಗ್ಸ್ ಪಾರ್ಟಿಯ ಬಗ್ಗೆ ಮಾಹಿತಿ ನೀಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸಚಿವ ನವಾಬ್ ಮಲಿಕ್ ತಮ್ಮ ಗುರುತನ್ನು ಬಹಿರಂಗಪಡಿಸಿರುವುದರಿಂದ ಡ್ರಗ್ ಪೆಡ್ಲರ್‌ಗಳಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ರಕ್ಷಣೆ ಕೋರಿದ್ದಾರೆ.

ಆರೋಪಗಳಿಗೆ ಪ್ರತಿಕ್ರಿಯಿಸಿರುವ ಎನ್‌ಸಿಬಿ ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್, ಇಬ್ಬರು ಏಜೆನ್ಸಿಯ ಕಾನೂನುಗಳ ಪ್ರಕಾರವೇ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು “ಸ್ವತಂತ್ರ ಸಾಕ್ಷಿಗಳು” ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ: ಮಗನ ಡ್ರಗ್ಸ್‌ ಪ್ರಕರಣದ ವಿಚಾರದಲ್ಲಿ ಶಾರುಖ್ ಮೇಲಿನ ದಾಳಿ ಅಸಹ್ಯವಾಗಿದೆ: ಶಶಿ ತರೂರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...