Homeಅಂತರಾಷ್ಟ್ರೀಯIMF ನವ ಉದಾರವಾದಿ ಅಜೆಂಡಾ ವಿರುದ್ಧ ಹೋರಾಡಿ ಗೆದ್ದ ಈಕ್ವಡೋರ್‌ನ ಮೂಲನಿವಾಸಿಗಳು

IMF ನವ ಉದಾರವಾದಿ ಅಜೆಂಡಾ ವಿರುದ್ಧ ಹೋರಾಡಿ ಗೆದ್ದ ಈಕ್ವಡೋರ್‌ನ ಮೂಲನಿವಾಸಿಗಳು

ದಕ್ಷಿಣ ಅಮೇರಿಕಾ ಖಂಡದ ವಾಯವ್ಯ ಕರಾವಳಿಯಲ್ಲಿರುವ ಪುಟ್ಟ ರಾಷ್ಟ್ರ ಈಕ್ವಡೋರ್‌ನ ಮೂಲನಿವಾಸಿ ಜನರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಜೊತೆ ಸೇರಿ ನಡೆಸಿದ ಎರಡು ವಾರಗಳ ಉಗ್ರ ಪ್ರತಿಭಟನೆಯ ಬಳಿಕ ಸರಕಾರವನ್ನು ಮಣಿಸಿ, ಐಎಂಎಫ್ ಹೇರಿದ್ದ ಆರ್ಥಿಕ 'ಸುಧಾರಣೆ'ಗಳನ್ನು ತಿರಸ್ಕರಿಸುವಂತೆ ಮಾಡಿದ್ದಾರೆ.

- Advertisement -
- Advertisement -

ಮೂಲ: ಸ್ವಾತಿ ಶುಕ್ಲಾ

ಅನುವಾದ: ನಿಖಿಲ್ ಕೋಲ್ಪೆ

ಈಕ್ವಡೋರ್ ರಾಜಧಾನಿ ಕ್ವಿಟೋ ಕಳೆದ ಎರಡು ವಾರಗಳಿಂದ ರಣರಂಗವಾಗಿಬಿಟ್ಟಿತ್ತು. ಕಾರಣವೆಂದರೆ, ಇಂಧನ ಸಬ್ಸಿಡಿಯ ಹಿಂತೆಗೆತವನ್ನು ಮೂಲ ನಿವಾಸಿ ಜನರು ಖಂಡತುಂಡವಾಗಿ ಪ್ರತಿಭಟಿಸಿದ್ದರು. ಇಂಧನ ಸಬ್ಸಿಡಿಯನ್ನು ಹಿಂತೆಗೆದುಕೊಂಡಿರುವುದಾಗಿ ಅಧ್ಯಕ್ಷ ಲೆನಿನ್ ಮೊರೆನೊ ಘೋಷಿಸಿದ ಬೆನ್ನಲ್ಲೇ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದೀಗ ಪ್ರತಿಭಟನಕಾರರಿಗೆ ಮಣಿದಿರುವ ಸರಕಾರ, ಐಎಂಎಫ್ ಹೇರಿದ್ದ ಪ್ಯಾಕೇಜನ್ನು ಹಿಂತೆಗೆದುಕೊಂಡಿದೆ.

ಮೊರೆನೊ ಸರಕಾರವು ಪ್ರಸ್ತಾಪಿಸಿದ್ದ ಹಲವಾರು ನವ ‘ಉದಾರವಾದಿ’ ಕ್ರಮಗಳಲ್ಲಿ ತೈಲ ಸಬ್ಸಿಡಿ ಹಿಂತೆಗೆತವೂ ಒಂದಾಗಿತ್ತು. ಮೂಲನಿವಾಸಿ ಗುಂಪುಗಳು ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆಗಳು ಹಾಗೂ ವಿದ್ಯಾರ್ಥಿ ಚಳವಳಿಗಳ ಜೊತೆ ಸೇರಿ ರಾಷ್ಟ್ರೀಯ ಮುಷ್ಕರವನ್ನು ಆಯೋಜಿಸಿದ್ದು, ಮಿಲಿಟರಿ ಮತ್ತು ಪೊಲೀಸ್ ಪಡೆಗಳು ಅತ್ಯಂತ ದಮನಕಾರಿಯಗಿ ಪ್ರತಿಭಟನೆಯನ್ನು ಬಗ್ಗುಬಡಿಯಲು ಯತ್ನಿಸಿದ್ದವು.

ಮೊದಲಾಗಿ ಇಂಧನ ಸಬ್ಸಿಡಿ ಹಿಂತೆಗೆತದ ವಿರುದ್ಧ ಆರಂಭವಾದ ಪ್ರತಿಭಟನೆಗಳು ಮೂಲನಿವಾಸಿ ಗುಂಪುಗಳ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತು ಅದರ ಧಣಿಗಳು ಹೇರಿರುವ ‘ನವ ಉದಾರವಾದಿ’ ಮಾದರಿಯ ವಿರುದ್ಧದ ಪ್ರತಿಭಟನೆಯಾಗಿ ಪರಿವರ್ತನೆಗೊಂಡು ಉಗ್ರರೂಪ ತಳೆಯಿತು.

ಲೆನಿನ್ ಮೊರೆನೊ

ಮಾರ್ಚ್ 2019ರಲ್ಲಿ ಐಎಂಎಫ್ ಹಲವು ಶರತ್ತುಗಳೊಂದಿಗೆ ಈಕ್ವಡೋರ್‌ಗೆ 4.2 ಬಿಲಿಯನ್ (420 ಕೋಟಿ) ಡಾಲರ್‌ಗಳ ಸಾಲ ನೀಡಿತ್ತು. ಇಂತಹ ಶರತ್ತುಗಳಲ್ಲಿ ಹಲವು ಅಂತರರಾಷ್ಟ್ರೀಯ ಹಗರಣಗಳನ್ನು ಬಯಲು ಮಾಡಿದ ವೀಕೀಲೀಕ್ಸ್ ಸಂಪಾದಕ ಜೂಲಿಯನ್ ಅಸ್ಸಾಂಜೆಯನ್ನು ಯುಎಸ್‌ಎಗೆ ಬಿಟ್ಟುಕೊಡಬೇಕು ಎಂಬುದೂ ಒಂದಾಗಿತ್ತು.

“ನಾವು ಈಕ್ವಡೋರ್‌ಗೆ ನೆರವಾಗಲು ಇಲ್ಲಿದ್ದೇವೆ. ನಮ್ಮ ಉದ್ದೇಶ ಎಂದರೆ, ಆರ್ಥಿಕತೆಯನ್ನು ಆಧುನಿಕರಣಗೊಳಿಸಲು ಈಕ್ವಡೋರಿಗೆ ನೆರವಾಗಿ, ಸುದೃಢ, ಸುಸ್ಥಿರ ಮತ್ತು ನ್ಯಾಯಸಮ್ಮತ ಅಭಿವೃದ್ಧಿಗೆ ದಾರಿಮಾಡಿಕೊಡುವುದು” ಎಂದು ಐಎಂಎಫ್ ಆಡಳಿತ ಮಂಡಳಿ ತನ್ನ ಎಂದಿನ ಬಂಡವಾಳಶಾಹಿ ಶೈಲಿಯಲ್ಲಿ ಬುರುಡೆ ಬಿಟ್ಟಿತ್ತು. ಇದರ ಬೆನ್ನಲ್ಲೇ ಹಲವಾರು “ಸಂಯಮದ” “ಸುಧಾರಣಾ” ಕ್ರಮಗಳನ್ನು ಹೇರಲಾಗಿತ್ತು.

ಐಎಂಎಫ್ ಜೊತೆ ಕಳೆದ ವರ್ಷ ನಡೆಸಿದ ಒಪ್ಪಂದಕ್ಕೆ ಅನುಗುಣವಾಗಿ ಮೊರೆನೊ ಸರಕಾರ ಸೆಪ್ಟೆಂಬರ್ 30ರಂದು ಪೆಟ್ರೋಲ್ ಮತ್ತು ಡೀಸೆಲ್ ಸಬ್ಸಿಡಿಯನ್ನು ಹಿಂತೆಗೆದುಕೊಂಡಿತ್ತು. ಇದರಿಂದ ಸಹಜವಾಗಿ ಇವೆರಡರ ಬೆಲೆಗಳು ಗಗನಕ್ಕೇರಿದ್ದವು.

ಇಂಧನ ಸಬ್ಸಿಡಿ ಹಿಂತೆಗೆತದ ಅರ್ಥವೆಂದರೆ, ಬಡವರು ಮತ್ತು ದುಡಿಯುವ ವರ್ಗದವರು ಇಂಧನಕ್ಕೆ ಹೆಚ್ಚು ಬೆಲೆ ತೆರಬೇಕಾದರೆ, ಖಾಸಗಿ ಇಂಧನ ಸಂಸ್ಥೆಗಳು ಹೆಚ್ಚು ಲಾಭವನ್ನು ದೋಚಬಹುದು.

“ಸರಕಾರ ಮಾಡಿರುವುದು ಏನೆಂದರೆ, ದೊಡ್ಡ ಬ್ಯಾಂಕುಗಳು, ಬಂಡವಾಳಶಾಹಿಗಳಿಗೆ ಬಹುಮಾನ ನೀಡಿ, ಬಡ ಈಕ್ವಡೋರಿಯನ್ನರಿಗೆ ಶಿಕ್ಷೆ ನೀಡಿರುವುದು” ಎಂದು ಕಾರ್ಮಿಕರ ಸಂಘಟನೆಗಳ ಒಕ್ಕೂಟವಾಗಿರುವ ವರ್ಕರ್ಸ್ ಯುನೈಟೆಡ್ ಫ್ರಂಟ್‌ನ ಮುಖ್ಯಸ್ಥ ಮೆಸಿಯಾಸ್ ಟಟಮುಯೆಸ್ ಹೇಳಿದ್ದಾರೆ.

ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಏಕೆಂದರೆ, ಇಂಧನ ಬೆಲೆ ಏರಿಕೆಯಿಂದ ಆಹಾರ ಮತ್ತು ಸಾರಿಗೆ ದರಗಳು ಗಗನಕ್ಕೇರಿದ್ದು, ಮೂಲ ನಿವಾಸಿ ಜನರು ಎಲ್ಲರಿಗಿಂತಲೂ ಹೆಚ್ಚು ಬಾಧಿತರಾಗಿದ್ದಾರೆ ಎಂದು ಪ್ರತಿಭಟನೆಯ ನಾಯಕರು ಹೇಳುತ್ತಾರೆ.

ಪ್ರತಿಭಟನಕಾರರು ಅಧ್ಯಕ್ಷೀಯ ಅರಮನೆಯ ಸುತ್ತಲಿನ ತಡೆಗಳನ್ನು ಭೇದಿಸಿ ಮುನ್ನುಗ್ಗುವ ವಿಫಲ ಪ್ರಯತ್ನ ನಡೆಸಿದ ಬಳಿಕ ಹೆದರಿದ ಮೊರೆನೊ, ತನ್ನ ಸರಕಾರವನ್ನು, ಆಡಳಿತವನ್ನು ಅಕ್ಟೋಬರ್ 7ರಂದು ಬಂದರು ನಗರ ಗ್ವಾಯಾಗುಲಿಗೆ ಸ್ಥಳಾಂತರಿಸಬೇಕಾಗಿ ಬಂದಿತ್ತು.

ಮಾಜಿ ಅಧ್ಯಕ್ಷ ರಫಾಯೆಲ್ ಕೊರ್ರಿಯಾ ಮೇ, 2017ರಂದು ಅಧಿಕಾರ ತೊರೆದ ಮೇಲೆ ಮೊರೆನೊ ಸರಕಾರ ದೇಶವನ್ನು ಬಲಪಂಥದತ್ತ ಒಯ್ಯುತ್ತಿದೆ. ಈಗ ಮೊರೆನೊ, ಉದ್ಯಮಿಗಳು ಮತ್ತು ಸೇನೆಯ ಬೆಂಬಲ ಹೊಂದಿದ್ದರೂ, ಅವರ ಜನಪ್ರಿಯತೆ 2017ರಲ್ಲಿದ್ದ 70 ಶೇಕಡಾದಿಂದ 30 ಶೇಕಡಾಕ್ಕೆ ಕುಸಿದಿದೆ. ಮೊರೆನೊ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಅಧ್ಯಕ್ಷ ರಫಾಯೆಲ್ ಕೊರ್ರಿಯಾ ಸರಕಾರ ತಂದಿದ್ದ ಹಲವು ಪ್ರಗತಿಪರ ಕ್ರಮಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.

ಪ್ರತಿಭಟನೆಯು ಎರಡನೇ ವಾರ ಪ್ರವೇಶಿಸುತ್ತಿದ್ದಂತೆ, ಮೂಲ ನಿವಾಸಿ ಪ್ರತಿಭಟನಕಾರರು ತಾವು ವಶಕ್ಕೆ ತೆಗೆದುಕೊಂಡ ಕೆಲವು ಪೊಲೀಸರನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಮೊರೆನೊ ಸರಕಾರಕ್ಕೆ ತಾವು ಅಂಜುವುದಿಲ್ಲ ಎಂಬ ದಿಟ್ಟ ಸಂದೇಶ ನೀಡಿದ್ದರು.

ಮೂಲನಿವಾಸಿಗಳ ಪ್ರತಿಭಟನೆಗಳು 1997ರಲ್ಲಿ ಅಬ್ದಲಾ ಬುಕಾರಮ್, 2000ದಲ್ಲಿ ಜಮಿಲ್ ಮಹುವದ್ ಮತ್ತು 2005ರಲ್ಲಿ ಲೂಸಿಯೋ ಗುಟಿಯೆರೆಝ್ ಸಹಿತ ಹಲವಾರು ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ಇದೀಗ ಪ್ರತಿಭಟನೆಗೆ ಮಣಿದಿರುವ ಮೊರೆನೊ ಸರಕಾರವು ಮೂಲನಿವಾಸಿಗಳೊಂದಿಗೆ ಬುಧವಾರ ಒಪ್ಪಂದಕ್ಕೆ ಬಂದಿದ್ದು, ಐಎಂಎಫ್ ಹೇರಿಕೆಯ ‘ಸುಧಾರಣಾ ಕ್ರಮ’ಗಳನ್ನು ಹಿಂತೆದುಕೊಳ್ಳಲು ಒಪ್ಪಿದೆ. ಇದರೊಂದಿಗೆ ಆರ್ಥಿಕತೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿ, ಏಳು ಜನರ ಸಾವಿಗೆ ಕಾರಣವಾದ ಹೆಚ್ಚುಕಡಿಮೆ ಎರಡು ವಾರ ಕಾಲದ ಪ್ರತಿಭಟನೆ ಕೊನೆಗೊಳ್ಳಲಿದೆ.

ಒಪ್ಪಂದದ ಪ್ರಕಾರ, ತೈಲ ಬೆಲೆ ತೀವ್ರ ಏರಿಕೆಗೆ ಕಾರಣವಾದ ಡಿಕ್ರಿ 883 ಎಂದು ಕರೆಯಲ್ಪಡುವ ಐಎಂಎಫ್ ಪ್ರೇರಿತ ಪ್ಯಾಕೇಜನ್ನು ಮೊರೆನೊ ಸರಕಾರ ಹಿಂತೆಗೆದುಕೊಳ್ಳಲಿದೆ. ಇದಕ್ಕೆ ಬದಲಾಗಿ, ಪ್ರತಿಭಟನೆ ಮತ್ತು ರಸ್ತೆ ತಡೆಯನ್ನು ಹಿಂತೆಗೆದುಕೊಳ್ಳುವಂತೆ ಮೂಲ ನಿವಾಸಿ ಗುಂಪುಗಳ ನಾಯಕರು ತಮ್ಮ ಬೆಂಬಲಿಗರಿಗೆ ಕರೆ ನೀಡಲಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...