Homeಮುಖಪುಟಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ...

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ…

- Advertisement -
- Advertisement -

ಜೀವನ ಕಲೆಗಳು : ಅಂಕಣ – 13

ಸಮರ್ಪಕ ಸಂವಹನ ಕಲೆ –2 ಮಾತನಾಡುವುದು,  ಓದುವುದು ಮತ್ತು ಬರೆಯುವುದು.

ಸಂವಹನ ಪ್ರಕ್ರಿಯೆಯಲ್ಲಿ ನಾವು ಸುಮಾರು 45% ಸಮಯ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿರುತ್ತೇವೆ, ಕೇವಲ 30% ಸಮಯ ಮಾತನಾಡುತ್ತಿರುತ್ತೇವೆ, 16% ಸಮಯ ಓದುತ್ತಿರುತ್ತೇವೆ ಮತ್ತು 9% ಸಮಯ ಬರೆಯುತ್ತೇವೆ ಎಂದು ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಅದೇ ರೀತಿ ಸಕ್ರಿಯ ಕೇಳಿಸಿಕೊಳ್ಳುವಿಕೆಯ ಬಗ್ಗೆಯೂ ತಿಳಿಸಿದ್ದೆ.

ಮಾತನಾಡುವ ಸಮಯದಲ್ಲಿ ನಾವು ಮೂರು ಮಾಧ್ಯಮಗಳನ್ನು ಬಳಸುತ್ತೇವೆ. ಅವೆಂದರೆ ಬ್ಯಾಷ್ಯಾತೀತ ದೈಹಿಕಭಾಷೆ ಅಥವಾ ಬಾಡಿಲಾಂಗ್ವೇಜ್, ಎರಡನೆಯದು ಸ್ವರಬೇಧ/ಶಬ್ದಾಧರಿತ ಧ್ವನಿಗಳ ಏರಿಳಿತ (ಇನ್ಟೊನೇಶನ್). ಮೂರನೆಯದು ಸಂಪೂರ್ಣ ಭಾಷೆಯನ್ನು ಆಧರಿಸಿದ ಮಾತುಕತೆ, ಅದನ್ನು ನಾವು ಓದುವ/ಬರೆಯುವ ಕಲೆ ಎನ್ನಲೂಬಹುದು. ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಬಗ್ಗೆ ಪ್ರತ್ಯೇಕವಾಗಿ ಮುಂದೆತಿಳಿಸುತ್ತೇನೆ.

ಟೋನ್ ಅಥವಾ ನಾದವನ್ನು ಆಧರಿಸಿದ ಧ್ವನಿಯ ಸಮರ್ಪಕ ಏರಿಳಿತದಿಂದ ಸಂವಹನದಲ್ಲಿ ಸಮಯಕ್ಕೆ/ಸಂದರ್ಭಕ್ಕೆ ತಕ್ಕ ಪರಿಣಾಮವನ್ನು ಸೃಷ್ಟಿಸಬಹುದು. ಇದನ್ನು ಸಣ್ಣ ಮಕ್ಕಳು ತಮ್ಮ ಸುತ್ತಮುತ್ತ ಇರುವವರ ಜೊತೆ ಸಂವಹನಕ್ಕೆ ಬಳಕೆ ಮಾಡುವುದನ್ನು ನೋಡಿರಬಹುದು. ಮೂಕ ಪ್ರಾಣಿಗಳು ಸಹ ತಮ್ಮ ವಿವಿಧ ಸದ್ದಿನಿಂದ ತಮ್ಮ ಭಾವನಾತ್ಮಕ ಸಂದೇಶ ರವಾನಿಸುತ್ತವೆ. ಧ್ವನಿಯ ಏರಿಳಿತ, ಉಚ್ಚಾರಣೆಯ ವಿಧಾನ ಮತ್ತು ಕಂಪನಗಳ ನಿಯಂತ್ರಣದಿಂದ ಸಂದೇಶಕ್ಕೆ ಹೆಚ್ಚಿನ ಬಲ ಸಿಕ್ಕು, ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ. ಇದನ್ನು ಭಾವನಾತ್ಮಕ ವಾಚನ ಎಂದೂ ಕರೆಯಬಹುದು. ಗಾಯನ ಸಹ ಇದೇ ಗುಂಪಿಗೆ ಸೇರುತ್ತದೆ. ಧ್ವನಿಯ ಏರಿಳಿತ, ಕಂಪನ ನಿಯಂತ್ರಣವಿಲ್ಲದಿದ್ದರೆ ಭಾಷೆ ನೀರಸ ಮತ್ತು ಏಕತಾನೀಯವಾಗುತ್ತದೆ.

ಮಾತನಾಡುತ್ತಿರುವವರು ನಮ್ಮ ಕಣ್ಮುಂದೆ ಇಲ್ಲದಿದ್ದರೂ ಸ್ವರಬೇಧದಿಂದ ನಾವು ಅವರ ಭಾವನೆಗಳನ್ನು ಅರಿಯಬಹುದು. ಧ್ವನಿಯು ಗದ್ಗದಿತವಾಗಿದ್ದಲ್ಲಿ ಅವರು ದುಃಖದಲ್ಲಿರಬಹುದೆಂತಲೂ, ಮೌನವಾಗಿದ್ದರೆ ಅತೀವ ಸಂತೋಷವಾದಾಗ ಮಾತು ಹೊರಡಲಿಲ್ಲವೇನೋ ಎಂದುಕೊಳ್ಳಬಹುದು. ಭಾವನೆಗಳ ಜೊತೆಗೆ, ವಾಕ್ಯ ಕೇವಲ ಹೇಳಿಕೆಯೋ ಅಥವಾ ಪ್ರಶ್ನಾರ್ಥಕವೋ ಎಂಬುದನ್ನೂ ಸ್ವರಭೇದ ಸೂಚಿಸುತ್ತದೆ. ಆಸಕ್ತಿ, ಉತ್ಸಾಹ ಮುಂತಾದ ಭಾವನೆಗಳನ್ನೂ ಸ್ವರಬೇಧ ಹೊರತರುತ್ತದೆ. ಪದದ ಅರ್ಥ ಪದದಲ್ಲಿ ಅಡಗಿರುವುದಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಒಂದು ವಾಕ್ಯದಲ್ಲಿ ಸಾಮಾನ್ಯವಾಗಿ ನಾಮಪದ, ಕ್ರಿಯಾಪದ, ಗುಣವಾಚಕ ಅಥವಾ ಕ್ರಿಯಾ ವಿಶೇಷಣ, ಸಂಧಿ, ಉಪಸರ್ಗ ಮುಂತಾದ ಪದಗಳಿರುತ್ತವೆ. ಯಾವ ಪದದ ಮೇಲೆ ಹೆಚ್ಚು ಒತ್ತು ಬೀಳುತ್ತದೋ ಅದೇ ರೀತಿಯಲ್ಲಿ ವಾಕ್ಯದ ಅರ್ಥ ಬದಲಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಅರ್ಥ ಹೇಳುವವರ ಅಥವಾ/ಮತ್ತು ಕೇಳುವವರ ಮನಸ್ಸಿನಲ್ಲಿ ಅಡಗಿರುತ್ತದೆ. ಮನಃಸ್ಥಿತಿಯ ವ್ಯತ್ಯಾಸದಿಂದ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ತಪ್ಪಾಗಿ ಅರ್ಥೈಸಬಹುದು. ಕೆಲವೊಮ್ಮೆ ಕೇವಲ ಒಂದು ಪದದಲ್ಲಿ ಅನೇಕ ಅರ್ಥಗಳು ಗೂಢೈಸಿರಬಹುದು. ಅದೇ ರೀತಿ ಕಿರುಚುವಿಕೆ ಅಥವಾ ದ್ವನಿಯ ಗಡಸುತನವೂ ಶಕ್ತಿ ಸಾಮರ್ಥ್ಯವನ್ನು ಸೂಚಿಸುತ್ತದೆ. ಮಾತನಾಡುವ ವೇಗದಿಂದಲೂ ನಮ್ಮ ಉದ್ವೇಗ, ನಿರಾಸಕ್ತಿಯನ್ನು ತೋರಿಸಬಹುದು.

ದೃಶ್ಯ ಮಾಧ್ಯಮದ ಬಳಕೆಯಿಲ್ಲದೇ ಭಾವನೆಗಳ ನವರಸಗಳನ್ನು (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ) ಧ್ವನಿಯಲ್ಲಿ ಮೂಡಿಸಬಹುದು. ಅಷ್ಟೇ ಅಲ್ಲ, ಯಾರು ತಮ್ಮ ಧ್ವನಿಯ ಕಂಪನವನ್ನು, ನಿಯಂತ್ರಣದಲ್ಲಿ, ಮೇಲೆ-ಕೆಳಗೆ ಸಮರ್ಪಕವಾಗಿ ಮಾಡಬಲ್ಲರೋ ಅವರು ಇನ್ನೋರ್ವ ವ್ಯಕ್ತಿಯ ಧ್ವನಿಯನ್ನೂ ಪ್ರತಿರೂಪಿಸಬಲ್ಲರು. ಸಿನಿಮಾ/ಟಿವಿ ಯಲ್ಲಿ ಇದನ್ನು “ವಾಯ್ಸ್ ಆರ್ಟಿಸ್ಟ್” ಗಳು ಸಮರ್ಪಕವಾಗಿ ಬಳಸುತ್ತಾರೆ. ಕೀರಲು-ಗಡಸು ಧ್ವನಿಯಿಂದ ಅವರು ಹೆಂಗಸು ಮತ್ತು ಗಂಡಸಿನ ಧ್ವನಿಯಲ್ಲಿ ಹಾಡಲೂ ಬಲ್ಲರು. ಈ ನಿಯಂತ್ರಣ ಅವರಿಗೆ ಸಾಕಷ್ಟು ಪರಿಶ್ರಮದಿಂದ ಬಂದಿರುತ್ತದೆ, ಹಾಗಾಗಿ ಈ ಕಲೆಯನ್ನು ಎಲ್ಲರೂ ಕಲಿಯಬಹುದು.

ಕೆಲವು ಭಾಷೆಗಳಲ್ಲಿ ಹೆಚ್ಚಿನ ನಾದಗಳ (ಟೋನ್) ಬಳಕೆ ಇರುತ್ತದೆ, ಉದಾ: ಚೈನೀಸ್ ಭಾಷೆಯಲ್ಲಿ ಸಾಧಾರಣವಾಗಿ ನಾಲ್ಕು ನಾದಗಳಿದ್ದರೆ, ಲಾಓಸ್, ಥಾಯ್ಲೆಂಡ್, ವಿಯಟ್ನಾಮ್, ಚೈನಾ ಪ್ರದೇಶದಲ್ಲಿ ಮಾತನಾಡುವ ಹಮೊಂಗ್ (ಚೈನೀಸ್) ಭಾಷೆಯಲ್ಲಿ ಉನ್ನತ, ಮಧ್ಯಮ, ಕೆಳಮಟ್ಟದ, ಏರುತ್ತಿರುವ, ಇಳಿಯುತ್ತಿರುವ  ನಾದಗಳ ಸಂಯೋಗದಿಂದ ಒಂದೇ ಪದಕ್ಕೆ ಎಂಟು ಅರ್ಥ ಕಲ್ಪಿಸಬಹುದು. ಆದ್ದರಿಂದ ಧ್ವನಿಯ  ಏರಿಳಿತಗಳನ್ನು ಸರಿಯಾಗಿ ತಿಳಿದಿರಬೇಕು. ಚೈನೀಸ್ ಭಾಷೆಗೆ ಹೋಲಿಸಿದರೆ ಇಂಗ್ಲಿಷ್ ಭಾಷೆಯನ್ನು ನಾದರಹಿತ ಭಾಷೆ ಎಂದೇ ಕರೆಯಬಹುದು. ಆದ್ದರಿಂದ ಇಂಗ್ಲಿಷ್ ಭಾಷಾ ಮೂಲದ ಜನರಿಗೆ ಚೈನೀಸ್ ಭಾಷೆ ಕಲಿಯುವುದು ಕಷ್ಟಕರ ಎನಿಸಬಹುದು. ಒಂದು ಭಾಷೆ ಕರತಲಾಮಲಕವಾಗಿರುವವರಿಗೆ ಇನ್ನೊಂದು ವಿಭಿನ್ನ ಭಾಷೆಯ ಪದಗಳನ್ನು ಉಚ್ಚಾರ ಮಾಡುವುದೂ ಕಷ್ಟವೆನಿಸಬಹುದು. ಉತ್ತರ ಭಾರತದವರು ದಕ್ಷಿಣದ ರಾಜ್ಯಗಳನ್ನು ಕರ್ನಾಟಕ್, ಕೇರಳ್, ಎನ್ನುವುದನ್ನು ನೀವು ಕೇಳಿರಬಹುದು.

ಓದುವುದೂ ಸಹ ಒಂದು ಕಲೆ. ಭಾವನಾತ್ಮಕವಾಗಿ ಬರೆದ ವಾಕ್ಯವನ್ನು ನಿರ್ಜೀವವಾಗಿಸಿ ಓದುವ ಸುದ್ದಿವಾಚಕರೂ ಇದ್ದಾರೆ, ಅದೇ ರೀತಿ ಏನೂ ಇಲ್ಲದ ಸುದ್ದಿಯನ್ನು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಬ್ರೇಕಿಂಗ್ ನ್ಯೂಸ್ ಎಂದು ಅರಚುವವರೂ ಇದ್ದಾರೆ. ಆದ್ದರಿಂದ ಗಟ್ಟಿಯಾಗಿ ಓದುವ ಮುಂಚೆ, ಬರೆದಿರುವ ವಾಕ್ಯವನ್ನಷ್ಟೇ ಅಲ್ಲ, ಸಂಪೂರ್ಣ ಪರಿಚ್ಛೇದವನ್ನು ಮನಸ್ಸಿನಲ್ಲಿ ಒಮ್ಮೆ ಓದಿಕೊಂಡು, ಅದರ ಭಾವಾರ್ಥ ಅರಗಿಸಿಕೊಂಡು, ಯಾವ ಪದಗಳಿಗೆ ಎಷ್ಟು ಒತ್ತು ನೀಡಿ, ಯಾವ ಭಾವನೆ ವ್ಯಕ್ತ ಪಡಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಓದಿದಷ್ಟು ಭಾಷಾಜ್ಞಾನ ಹೆಚ್ಚುತ್ತದೆ. ಬೇರೆ ಬೇರೆ ಲೇಖಕರು ಭಾಷೆಯನ್ನು ಹೇಗೆ ಶಕ್ತಿಶಾಲಿಯಾಗಿ ಬಳಸುತ್ತಾರೆ ಎಂಬುದನ್ನು ಕಲಿಯಬಹುದು.

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ ಬರೆಯಬೇಕೆಂದಿರುವ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಸಾಕಷ್ಟು ಸಂಶೋಧನೆ ಇಲ್ಲದ ಬರವಣಿಗೆಯಲ್ಲಿ ಶಕ್ತಿ ಇರುವುದಿಲ್ಲ. ಹತ್ತು ಪುಟಗಳಷ್ಟು ಓದಿದರೆ ಒಂದು ಪುಟದಷ್ಟು ಸಾರಾಂಶ ಮಾಡಿಕೊಳ್ಳಬಹುದು. ಹತ್ತು ಪುಟದ ಸಾರಾಂಶವನ್ನು ಬರೆಯಲು ಪ್ರಾರಂಬಿಸಿದರೆ ಒಂದು ಪುಟದ ಲೇಖನವಾಗುತ್ತದೆ. ಅಂದರೆ ಒಂದು ಪುಟ ಬರೆಯಲು ನೂರು ಪುಟ ಓದಬೇಕು. ಆದ್ದರಿಂದ ನಾವು ಬರೆಯುವುದಕ್ಕಿಂತ ಹೆಚ್ಚು ಏಕೆ ಓದುತ್ತೇವೆ ಅಥವಾ ಹೆಚ್ಚು ಮಾತನಾಡುತ್ತೇವೆ ಎಂಬುದು ಸ್ಪಷ್ಟವಾಗಿರಬಹುದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...