Homeಮುಖಪುಟಅನಗತ್ಯ ಇತಿಹಾಸದ ಪಠ್ಯ ಕೈಬಿಟ್ಟು 1975ರ ಎಮರ್ಜೆನ್ಸಿ ಸೇರಿಸುತ್ತೇವೆ: ವಿನಯ್ ಸಹಸ್ರಬುದ್ದೆ

ಅನಗತ್ಯ ಇತಿಹಾಸದ ಪಠ್ಯ ಕೈಬಿಟ್ಟು 1975ರ ಎಮರ್ಜೆನ್ಸಿ ಸೇರಿಸುತ್ತೇವೆ: ವಿನಯ್ ಸಹಸ್ರಬುದ್ದೆ

- Advertisement -
- Advertisement -

ಶಾಲಾ ಪಠ್ಯ ಪುಸ್ತಕಗಳಲ್ಲಿನ ಇತಿಹಾಸದ ಪಾಠಗಳನ್ನು ಬಲಾಯಿಸುವ ಕಾರ್ಯ ರಾಷ್ಟ್ರಮಟ್ಟದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಸರ್ಕಾರಗಳು ಬದಲಾದಾಗ ತಮಗೆ ಸರಿ ಎನಿಸಿದ ಇತಿಹಾಸವನ್ನು ಪಠ್ಯಗಳಲ್ಲಿ ಸೇರಿಸುತ್ತ ಬರುವುದು, ಬೇಡವಾದದ್ದನ್ನು ಕೈಬಿಡುವುದು ವಾಡಿಕೆಯ ಸಂಗತಿ. ಈಗ ದೇಶದ ಇತಿಹಾಸದ ಪಠ್ಯವನ್ನು ಸಮಗ್ರವಾಗಿ ಬದಲಾಯಿಸುವ ಅಗತ್ಯವಿದೆಯೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಪಾಶ್ಚಿಮಾತ್ಯ ದೃಷ್ಟಿಕೋನದ ಇತಿಹಾಸವನ್ನು ಸ್ವದೇಶಿಕರಣಗೊಳಿಸುವ ಪ್ರಯತ್ನದಲ್ಲಿ ತೊಡಗಿರುವುದಾಗಿ ನಿನ್ನೆ ಪಠ್ಯ ಪುಸ್ತಕ ಪರಿಷ್ಕರಿಸುತ್ತಿರುವ ಸಂಸದೀಯ ಸಮಿತಿ ತಿಳಿಸಿದೆ.

“ಇತಿಹಾಸಗಳ ಪಠ್ಯ ರೂಪಿಸುವ ಪ್ರಕ್ರಿಯೆಯಲ್ಲಿ ಸರಿಯಾದ ಇತಿಹಾಸವನ್ನು ಸೇರಿಸುವ ಮತ್ತು ತಪ್ಪಾದ ಇತಿಹಾಸವನ್ನು ತೆಗೆಯುವ ಕೆಲಸವೂ ಒಳಗೊಂಡಿದೆ. ಬಿಟ್ಟು ಹೋದ ಅನೇಕ ಇತಿಹಾಸದ ಘಟನೆಗಳಿಂದ ಮಕ್ಕಳು ವಂಚಿತರಾಗಿದ್ದಾರೆ. ಕೆಲವು ರಾಷ್ಟ್ರೀಯವಾದಿ ನಾಯಕರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಪಠ್ಯದಿಂದ ಬಿಟ್ಟುಹೋಗಿದೆ” ಎಂದು ಸಂಸದೀಯ ಸಮಿತಿಯ ಅಧ್ಯಕ್ಷ ವಿನಯ್ ಸಹಸ್ರಬುದ್ದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎಳೆಯ ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ಮತ್ತು ರಾಷ್ಟ್ರೀಯವಾದಿ ಚಿಂತನೆಗಳನ್ನು ಬೆಳೆಸುವ ಅಗತ್ಯವಿದ್ದು ಆ ಸಂಬಂಧ ಪ್ರೇರಣೆಯನ್ನು ನೀಡುವಂತೆ ಇತಿಹಾಸದ ಪಠ್ಯವನ್ನು ರೂಪಿಸಲಾಗುತ್ತಿದೆ. ಮಹಿಳಾ ಹೋರಾಟಗಾರರು ಮತ್ತು ಸ್ವದೇಶಿ ಚಿಂತನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೊಸ ಪಠ್ಯಕ್ರಮಗಳ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

1975ರ ಎಮರ್ಜೆನ್ಸಿ ಮತ್ತು 1998ರ ಫೋಖ್ರಾನ್ ಪರಮಾಣು ಸಂಶೋಧನೆಯನ್ನು ಇತಿಹಾಸದ ಪಠ್ಯದಲ್ಲಿ ಸೇರಿಸುವ ಅಗತ್ಯವಿದೆ ಎಂದು ಬಿಜೆಪಿ ಸಂಸದ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿ ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ತಿಳಿಸಿದ್ದಾರೆ.

ಸಂಸದೀಯ ಸಮಿತಿಯು ಶಿಕ್ಷಣ ತಜ್ಞರು, ಇತಿಹಾಸಕಾರರು, ಶಿಕ್ಷಕರು, ಮಕ್ಕಳು ಮತ್ತು ಸಾರ್ವಜನಿಕರಿಂದ ಸಲಹೆ ಸೂಚನೆಯನ್ನು ಆಹ್ವಾನಿಸಿದೆ. ಜೂನ್ 30 ಸಲಹೆ ಸೂಚನೆಗಳನ್ನು ನೀಡಲು ಕೊನೆಯ ದಿನವಾಗಿತ್ತು. ಕೋವಿಡ್ ಎರಡನೇ ಅಲೆಯ ಕಾರಣದಿಂದ ಅನೇಕ ತಜ್ಞರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈ ಅವಧಿಯನ್ನು ಜುಲೈ 15 ರ ವರೆಗೆ ವಿಸ್ತರಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

ಸಂಸದೀಯ ಸಮಿತಿಯ ವರದಿಯು ಈಗಾಗಲೇ ಅಂತಿಮಗೊಂಡಿದ್ದು ಕೆಲವು ತಜ್ಞರು ತಮ್ಮ ಸಲಹೆಗಳನ್ನು ಪರಿಗಣಿಸುವಂತೆ ಮನವಿ ಮಾಡಿದ್ದರಿಂದ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ. ರಾಜ್ಯಸಭೆ ಕಾರ್ಯಾಲಯವು ಈ ಹಿಂದೆ ಒಂದು ಪ್ರಕಟಣೆಯನ್ನು ಹೊರಡಿಸಿ ಪಠ್ಯ ಪುಸ್ತಕದ ಪರಿಷ್ಕರಣೆಯಲ್ಲಿ ಕೆಲವು ಚಾರಿತ್ರಿಕವಲ್ಲದ ಘಟನೆಗಳನ್ನು ಕೈಬಿಡುವುದು, ದೇಶದ ರಾಷ್ಟ್ರೀಯ ಚಿಂತಕರ ಮತ್ತು ನಾಯಕರ ಕುರಿತಾದ ಆಕ್ಷೇಪಿತ ವಿಷಯಗಳನ್ನು ಕೈಬಿಡುವುದನ್ನು ಒಳಗೊಂಡಿರಲಿದೆ ಎಂದು ಹೇಳಿತ್ತು. ಎಲ್ಲಾ ಕಾಲಘಟ್ಟದ ಇತಿಹಾಸಕ್ಕೆ ಸಮಾನ ಪ್ರಾಧಾನ್ಯತೆಯನ್ನು ನೀಡುವುದು ಮತ್ತು ಚಾರಿತ್ರಿಕ ಅಲ್ಲವೆಂದು ಇದುವರೆಗೆ ಪರಿಗಣಿಸಿದ್ದ ಚಾರಿತ್ರಿಕ ಘಟನೆಗಳನ್ನು ಇತಿಹಾಸದ ಪಠ್ಯದಲ್ಲಿ ಸೇರಿಸುವುದೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ನಡೆಯಲಿದೆ. ಗಾರ್ಗಿ, ಮೈತ್ರೇಯಿ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ರಾಣಿ ಚನ್ನಮ್ಮ, ಚಾಂದ್‌ ಬೀಬಿ, ಜಲ್ಕಾರಿ ಬಾಯಿ ಮುಂತಾದ ಮಹಿಳಾ ಹೋರಾಟಗಾರರ ವಿಷಯವನ್ನು ಪಠ್ಯಕ್ಕೆ ಸೇರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಸಲಾಗಿತ್ತು.

ಕೆಲವು ಇತಿಹಾಸಕಾರರ ಏಕಪಕ್ಷೀಯ ವಿಚಾರಧಾರೆಗಳಿಂದ ದೇಶದ ಇತಿಹಾಸದ ಪಠ್ಯಗಳು ತುಂಬಿ ಹೋಗಿವೆ. ನಿಜವಾದ ಇತಿಹಾಸವನ್ನು ಮರೆ ಮಾಚಲಾಗಿದ್ದು ಒಂದು ವರ್ಗದ ಇತಿಹಾಸವನ್ನು ವಿಜ್ರಂಭಿಸಿದ ಪಠ್ಯವನ್ನು ಮಕ್ಕಳು ಓದುತ್ತಿದ್ದಾರೆ. ಇದನ್ನು ಸುಧಾರಿಸುವ ಕ್ರಮವಾಗಿ ಇತಿಹಾಸದ ಪಠ್ಯಕ್ರಮದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲಾಗುವುದು ಎಂದು ಪಠ್ಯ ಪುಸ್ತಕ ರೂಪಿಸುತ್ತಿರುವ ಸಂಸದೀಯ ಸಮಿತಿ ಅಧ್ಯಕ್ಷ ವಿನಯ್‌ ಸಹಸ್ರಬುದ್ಧೆ ಈ ಸಂದರ್ಭದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಕೋವಿಶೀಲ್ಡ್‌ ಪಡೆದವರಿಗೆ ಯುರೋಪಿನ 9 ರಾಷ್ಟ್ರಗಳಲ್ಲಿ ಪ್ರವೇಶಕ್ಕೆ ಅನುಮತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರೀನ್ ಕೇವ್ ನಿಂದ ಪ್ರವಾಸಿಗರನ್ನು ದೂರವಿಡಿ: ಛತ್ತೀಸ್‌ಗಢ ಸರ್ಕಾರಕ್ಕೆ ಪರಿಸರವಾದಿಗಳ ಎಚ್ಚರಿಕೆ

ರಾಯ್‌ಪುರ: ಒಂದು ಕಾಲದಲ್ಲಿ ಮಾವೋವಾದಿ ಪೀಡಿತ ಬಸ್ತಾರ್ ಜಿಲ್ಲೆಯ ಕಾಂಗರ್ ಕಣಿವೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಅಪರೂಪದ ಮತ್ತು ಪರಿಸರ ಸೂಕ್ಷ್ಮ 'ಹಸಿರು ಗುಹೆ'ಯನ್ನು ಪ್ರವಾಸಿಗರಿಗೆ ತೆರೆಯಲು ಛತ್ತೀಸ್‌ಗಢ ಸರ್ಕಾರ ನಿರ್ಧರಿಸಿದ್ದು, ಈ ಕ್ರಮಕ್ಕೆ...

ಅಹಮದಾಬಾದ್: ಅಮೃತಸರದಿಂದ ಮುಂಬೈಗೆ ಚಲಿಸುತ್ತಿದ್ದ ರೈಲಿನಲ್ಲಿ ಭಾರೀ ಮೌಲ್ಯದ ಕೊಕೇನ್ ಜಾಲ ಪತ್ತೆ

ಅಹಮದಾಬಾದ್: ಅಮೃತಸರ-ಮುಂಬೈ ಗೋಲ್ಡನ್ ಟೆಂಪಲ್ ಮೇಲ್ ರೈಲಿನ ಮೇಲೆ ತಡರಾತ್ರಿ ನಡೆದ ದಾಳಿಯಲ್ಲಿ ಮಿಜೋರಾಂ ಯುವಕನೊಬ್ಬ 2.19 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಕೊಕೇನ್ ಮತ್ತು ಮೆಥಾಂಫೆಟಮೈನ್‌ನೊಂದಿಗೆ ಸಿಕ್ಕಿಬಿದ್ದ ನಂತರ ಬಹು ನಗರ,...

ನಿಲುವು ಬದಲಿಸಿದ ಸಿಪಿಐ(ಎಂ) : ವಿಎಸ್ ಅಚ್ಯುತಾನಂದನ್ ಅವರ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ನಿರ್ಧಾರ

ತನ್ನ ದೀರ್ಘಕಾಲದ ಸೈದ್ಧಾಂತಿಕ ನಿಲುವಿಗಿಂತ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಸಿಪಿಐ(ಎಂ), ಪಕ್ಷದ ದಂತಕಥೆ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಅವರಿಗೆ ಮರಣೋತ್ತರವಾಗಿ ನೀಡಲಾಗುವ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರ್ಧರಿಸಿದೆ. ಕಮ್ಯುನಿಸ್ಟರು ಆಡಳಿತ ಅಥವಾ...

2024ರ ಪ್ರತಿಭಟನೆ ದಮನ ಪ್ರಕರಣ: ಬಾಂಗ್ಲಾದೇಶದ ಮಾಜಿ ಪೊಲೀಸ್ ಮುಖ್ಯಸ್ಥ ಹಬೀಬುರ್ ರೆಹಮಾನ್‌ಗೆ ಮರಣದಂಡನೆ

ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಳ್ವಿಕೆಯಲ್ಲಿ ನಡೆದ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಾಂಗ್ಲಾದೇಶ ನ್ಯಾಯಾಲಯವು ಸೋಮವಾರ ಢಾಕಾದ ಮಾಜಿ ಪೊಲೀಸ್ ಮುಖ್ಯಸ್ಥ ಮತ್ತು ಇಬ್ಬರು ಹಿರಿಯ ಸಹೋದ್ಯೋಗಿಗಳಿಗೆ ಮರಣದಂಡನೆ ವಿಧಿಸಲಾಗಿದೆ.  ರಾಜಧಾನಿಯ...

ಕೇರಳ, ತಮಿಳುನಾಡು, ಪ. ಬಂಗಾಳದ 32 ಮಂದಿಗೆ ‘ಪದ್ಮ’ ಪ್ರಶಸ್ತಿ : ವಿಧಾನಸಭೆ ಚುನಾವಣೆ ಮೇಲೆ ಬಿಜೆಪಿ ಕಣ್ಣು?

ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾದ 131 'ಪದ್ಮ ಪ್ರಶಸ್ತಿ'ಗಳಲ್ಲಿ, 38 ಪ್ರಶಸ್ತಿಗಳು ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯ ಪಾಲಾಗಿವೆ. ದೇಶದ ಎರಡನೇ ಅತ್ಯುನ್ನತ...

‘ಏಕರೂಪ ಭಾರತವನ್ನಲ್ಲ, ಏಕೀಕೃತ ಭಾರತವನ್ನ ಸಂಭ್ರಮಿಸೋಣ’: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ 

ಚೆನ್ನೈ: ಗಣರಾಜ್ಯೋತ್ಸವವನ್ನು ಏಕರೂಪ ಭಾರತದಂತಲ್ಲದೇ ಏಕೀಕೃತ ಭಾರತವಾಗಿ ಆಚರಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ.  ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸ್ಟಾಲಿನ್, "ಏಕರೂಪದ ಭಾರತವಲ್ಲ, ಏಕೀಕೃತ ಭಾರತವನ್ನು...

ಗಣರಾಜ್ಯೋತ್ಸವ ಪರೇಡ್ : ಸಿಆರ್‌ಪಿಎಫ್ ಪುರುಷರ ತುಕಡಿ ಮುನ್ನಡೆಸಿ ಗಮನಸೆಳೆದ ಮಹಿಳಾ ಅಧಿಕಾರಿ ಸಿಮ್ರಾನ್ ಬಾಲಾ

ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ ಅವರು ಅರೆಸೈನಿಕ ಪಡೆಯ ಸಂಪೂರ್ಣ ಪುರುಷರ ತುಕಡಿಯನ್ನು ಮುನ್ನಡೆಸುವ ಮೂಲಕ ಇತಿಹಾಸ ನಿರ್ಮಿಸಿದರು. ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯವರಾದ...

ಉತ್ತರಾಖಂಡ: ಸೂಫಿ ಕವಿ ಬಾಬಾ ಬುಲ್ಲೆ ಶಾ ಅವರ ಮಂದಿರವನ್ನು ಧ್ವಂಸಗೊಳಿಸಿದ ಹಿಂದೂ ರಕ್ಷಣಾ ದಳದ ದುಷ್ಕರ್ಮಿಗಳು

ಉತ್ತರಾಖಂಡದ ಮಸ್ಸೂರಿಯಲ್ಲಿರುವ 18 ನೇ ಶತಮಾನದ ಸೂಫಿ ಕವಿ ಬಾಬಾ ಬುಲ್ಲೆಹ್ ಷಾ ಅವರ ದೇವಾಲಯವನ್ನು ಶುಕ್ರವಾರ ಹಿಂದೂ ರಕ್ಷಾ ದಳದೊಂದಿಗೆ ಸಂಪರ್ಕ ಹೊಂದಿರುವವರು ಧ್ವಂಸಗೊಳಿಸಿದ್ದಾರೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ. "ಜೈ...

ಅಕ್ಷರಧಾಮ ದೇವಾಲಯ ದಾಳಿ ಪ್ರಕರಣ: 6 ವರ್ಷಗಳ ನಂತರ ಮೂವರ ಮುಸ್ಲಿಂ ವ್ಯಕ್ತಿಗಳನ್ನು ಖುಲಾಸೆಗೊಳಿಸಿದ ಅಹಮದಾಬಾದ್ ಪೋಟಾ ನ್ಯಾಯಾಲಯ

ಅಕ್ಷರಧಾಮ ದೇವಾಲಯದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮೂವರು ಮುಸ್ಲಿಂ ಪುರುಷರನ್ನು ಕಳೆದ ವಾರ ಅಹಮದಾಬಾದ್‌ನ ವಿಶೇಷ ಭಯೋತ್ಪಾದನಾ ತಡೆ ಕಾಯ್ದೆ (ಪೋಟಾ) ನ್ಯಾಯಾಲಯವು ಖುಲಾಸೆಗೊಳಿಸಿದ್ದು, ವರ್ಷಗಳ ಕಾನೂನು ಪ್ರಕ್ರಿಯೆಗಳ ನಂತರ...

ಡಿಜಿ-ಐಜಿಪಿ ಎಂ.ಎ ಸಲೀಂ ವಿರುದ್ಧ ಸುಳ್ಳಾರೋಪ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು

ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ (ಡಿಜಿ-ಐಜಿಪಿ) ಎಂ.ಎ ಸಲೀಂ ಅವರ ವಿರುದ್ಧ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ದ ಬೆಂಗಳೂರಿನ ಸೈಬರ್ ಅಪರಾಧ ಪೊಲೀಸರು...