ಕೋವಿಶೀಲ್ಡ್‌ ಪಡೆದವರಿಗೆ ಯುರೋಪಿನ 9 ರಾಷ್ಟ್ರಗಳಲ್ಲಿ ಪ್ರವೇಶಕ್ಕೆ ಅನುಮತಿ | Naanu gauri
PC: WHO

ಯುರೋಪಿನ 9 ರಾಷ್ಟ್ರಗಳು ಕೋವಿಶೀಲ್ಡ್‌ ಲಸಿಕೆಗಳನ್ನು ಪಡೆದವರಿಗೆ ಮುಕ್ತಪ್ರವೇಶಕ್ಕೆ ಅವಕಾಶ ನೀಡಲಿವೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಕೋವಿಶೀಲ್ಡ್‌ ಲಸಿಕೆಗಳನ್ನು ತೆಗೆದುಕೊಂಡ ಜನರ ಪ್ರಯಾಣಕ್ಕೆ ಅವಕಾಶ ನೀಡುವ ದೇಶಗಳಲ್ಲಿ ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್‌‌ಲ್ಯಾಂಡ್‌, ಐರ್‌ಲ್ಯಾಂಡ್‌ ಮತ್ತು ಸ್ಪೇನ್‌‌ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಸ್ವಿಟ್ಜರ್ಲೆಂಡ್ ಸಹ ಕೋವಿಶೀಲ್ಡ್ ಪಡೆದವರನ್ನು ಸ್ವೀಕರಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಇಷ್ಟೇ ಅಲ್ಲದೆ, ಎಸ್ಟೋನಿಯಾ ತಮ್ಮ ದೇಶಕ್ಕೆ ಭಾರತ ಸರ್ಕಾರವು ಅನುಮೋದಿಸಿರುವ ಯಾವುದೆ ಲಸಿಕೆಯನ್ನು ಪಡೆದ ಭಾರತೀಯರಿಗೆ ಅನುಮತಿಸುವುದಾಗಿ ದೃಡಪಡಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮತದಾನ ನಂತರದ ಹಿಂಸಾಚಾರ: ಚುನಾವಣಾ ಆಯೋಗ, ಬಂಗಾಳ ಮತ್ತು ಒಕ್ಕೂಟ ಸರ್ಕಾರಕ್ಕೆ ಸುಪ್ರೀಂನಿಂದ ನೋಟಿಸ್‌

ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ಪಡೆದುಕೊಂಡು ಯುರೋಪಿಗೆ ಪ್ರಯಾಣಿಸಲು ಬಯಸುವ ಭಾರತೀಯರಿಗೆ ಅವಕಾಶ ನೀಡುವುದನ್ನು, ಪ್ರತ್ಯೇಕವಾಗಿ ಪರಿಗಣಿಸುವಂತೆ ಭಾರತವು ಈಗಾಗಲೇ ಯುರೋಪಿಯನ್‌‌ ಸದಸ್ಯ ರಾಷ್ಟ್ರಗಳನ್ನು ಕೇಳಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಮುಕ್ತ ಸಂಚಾರವನ್ನು ಸುಲಭಗೊಳಿಸುವ ಉದ್ದೇಶದಿಂದ ಯುರೋಪಿಯನ್ ಯುನಿಯನ್‌ ಒಕ್ಕೂಟದ ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಅಥವಾ “ಗ್ರೀನ್ ಪಾಸ್” ಗುರುವಾರದಿಂದ ಜಾರಿಗೆ ಬರುತ್ತಿದೆ.

ಈ ಚೌಕಟ್ಟಿನಡಿಯಲ್ಲಿ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ)ಯಿಂದ ಅಧಿಕೃತ ಲಸಿಕೆಗಳನ್ನು ಪಡೆದುಕೊಂಡ ವ್ಯಕ್ತಿಗಳಿಗೆ ಯುರೋಪಿಯನ್‌ ಯುನಿಯನ್‌ ದೇಶಗಳ ಪ್ರಯಾಣ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗುತ್ತದೆ.

ಇದನ್ನೂ ಓದಿ: ಭಯೋತ್ಪಾದನೆ ಆರೋಪ ಸಾಬೀತು ಪಡಿಸಲು ಪೊಲೀಸರು ವಿಫಲ: 11 ವರ್ಷಗಳ ಬಳಿಕ ಮನೆ ಸೇರಿದ ವ್ಯಕ್ತಿ

LEAVE A REPLY

Please enter your comment!
Please enter your name here