Homeಮುಖಪುಟತತ್ತಿನ ತುತ್ತಿನ ತಾರತಮ್ಯ

ತತ್ತಿನ ತುತ್ತಿನ ತಾರತಮ್ಯ

- Advertisement -
- Advertisement -

ಭಾರದ್ವಾಜ ಮುನಿಗಳ ಆದೇಶದಂತೆ ಪಾಯಸವನ್ನು ಹೊತ್ತ ನದಿಯೊಂದು ಭರತನತ್ತ ಮುಖಮಾಡಿ ಹರಿಯಲಾರಂಭಿಸಿತು. ನದಿಯ ಎರಡೂ ದಡಗಳಲ್ಲಿ ಭವ್ಯ ಮತ್ತು ಸುಂದರವಾದ ಮನೆಗಳು ಸೃಷ್ಟಿಯಾದವು. ಅತ್ತ ಬ್ರಹ್ಮನ ಆದೇಶದಂತೆ ಇಪ್ಪತ್ತು ಸಾವಿರ ಸುಂದರಿಯರು ಭುವಿಗಿಳಿದರು. ಇನ್ನೊಂದೆಡೆ ಕುಬೇರನ ಆದೇಶದಂತೆ ಇಪ್ಪತ್ತು ಸಾವಿರ ಸುಂದರಿಯರು ಚಿನ್ನ ಆಭರಣ ಮುತ್ತುರತ್ನಗಳನ್ನು ಧರಿಸಿ ಧರೆಗಿಳಿದರು. ನಂದನದಿಂದ ಇಪ್ಪತ್ತು ಸಾವಿರ ಅಪ್ಸರೆಯರು ಬಂಧಿಳಿದ್ದಿದ್ದಾಯ್ತು. ಅವರನ್ನು ಸೋಕಿದವರೆಲ್ಲ ಸುರೆಪಾನ ಮಾಡಿದಂತಾಡುತ್ತಿದ್ದರು. ನಾರದ, ತುಂಬುರು, ಗೋಪ, ಪಾರ್ವತ ಮತ್ತು ಸೂರ್ಯ ವರ್ಚಸ ಈ ರೀತಿಯ ಗಂಧರ್ವ ರಾಜರು ಭರತನ ಮುಂದೆ ಹಾಡಲಾರಂಭಿಸಿದರು. ಭರತನ ಆಜ್ಞೆಯಂತೆ ಆಲಂಬೂಸ, ಮಿಶ್ರಕೇಶಿ, ಪುಂಡರೀಕ ಮತ್ತು ವಾಮನರು ನೃತ್ಯ ಆರಂಭಿಸಿದರು. ಈ ರೀತಿ ವಿವಿಧ ಸಂಗೀತ ನೃತ್ಯ ವಿವಿಧ ಭಂಗಿಗಳಲ್ಲಿ ಮುಂದುವರೆಯುತ್ತಿದ್ದಂತೆ ಭಾರದ್ವಾಜ ಮುನಿಗಳು ಸುರೆಯ ನದಿಯನ್ನು ತೋರಿಸಿ ಅದನ್ನು ಕುಡಿದು ಆನಂದಿಸಿ ಎಂದರು. ಹಸಿವಾದವರು ಪಾಯಸವನ್ನು ಕುಡಿಯಿರಿ, ಇನ್ನೊಂದೆಡೆ ತಾಜಾ ಮಾಂಸದ ರಾಶಿಯೇ ಬಿದ್ದಿದೆ, ನಿಮ್ಮ ಆತ್ಮ ತೃಪ್ತಿಯಾಗುವವರೆಗೂ ತಿಂದು ಕುಡಿದು ಕುಪ್ಪಳಿಸಿ ಎಂದು ಆಜ್ಞೆ ಇತ್ತರು. ಭರತ ಮತ್ತು ಆತನ ಒಟ್ಟು ಸೈನ್ಯಕ್ಕೆ ಸುಂದರಿಯರ ಗುಂಪೇ ಬಂದು ಕೂಡಿ, ಒಬ್ಬೊಬ್ಬರಿಗೂ ಎಂಟು ಮಹಿಳೆಯರು ಎಣ್ಣೆ ನೀವುತ್ತಾ ನದಿಯಲ್ಲಿ ಸ್ನಾನ ಮಾಡಿಸಿ ಸುರೆಯನ್ನು ಕುಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಕುದುರೆಗಳನ್ನು ನೋಡಿಕೊಳ್ಳುತ್ತಿದ್ದವರು ತಮ್ಮ ಕುದುರೆ ಯಾವುದೆಂದು, ಆನೆಗಳನ್ನು ನೋಡಿಕೊಳ್ಳುತ್ತಿದ್ದವರು ತಮ್ಮ ಆನೆ ಯಾವುದೆಂದು ಗುರುತಿಸಲೇ ಆಗುತ್ತಿಲ್ಲ. ಅಲ್ಲಿ ಕಾಡುಹಂದಿ ಮಾಂಸ, ಕುರಿ ಮೇಕೆ ಮಾಂಸಗಳನ್ನು ಹಣ್ಣಿನ ರಸಗಳಲ್ಲಿ ಬೇಯಿಸಿ ಮೃದುಗೊಳಿಸಲಾಗಿತ್ತು. ಭರತನ ಸೈನ್ಯ ಕುಡಿದು ಕುಣಿದು ಕುಪ್ಪಳಿಸಿ ತನ್ನ ಎಲ್ಲ ಆಸೆಗಳನ್ನು ತೀರಿಸಿಕೊಂಡಿತು. ಇದನ್ನೆಲ್ಲಾ ಅನುಭವಿಸಿದ ಭರತ, ಭಾರದ್ವಾಜ ಮುನಿಗಳಿಗೆ ಇದು ಭೂಮಿಯ ಮೇಲಿನ ಸ್ವರ್ಗವೇ ಸರಿ ಎಂದು ಧನ್ಯ ಭಾವನೆಯನ್ನು ವ್ಯಕ್ತಪಡಿಸಿದನು.

ಇದು ವಾಲ್ಮೀಕಿ ರಾಮಾಯಣದಲ್ಲಿ ಬರುವ ಪ್ರಸಂಗದ ಒಂದು ತುಣುಕು. ಭರತ ಕಾಡಿನಲ್ಲಿದ್ದ ರಾಮನನ್ನು ನೋಡಲು ತನ್ನ ಸೈನ್ಯದೊಂದಿಗೆ ಹೋದಾಗ ಕಾಡಿನಲ್ಲಿದ್ದ ಭಾರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿಕೊಟ್ಟಾಗ, ಅವರು ಭರತನಿಗೆ ಏರ್ಪಡಿಸಿದ್ದ ಔತಣಕೂಟ.

ನಿಜವಾಗಿಯೂ ಗಮನಿಸಿದರೆ ಇಂಥದ್ದೊಂದು ಔತಣಕೂಟ ಈ ಭೂಮಿಯ ಮೇಲೆ ಸಾಧ್ಯವೇ ಇಲ್ಲ ಎನ್ನುವಂತೆ ಭಾಸವಾಗುತ್ತದೆ. ಇದು ಒಂದು ರೀತಿಯಲ್ಲಿ ಭಾರತದ ಸಂಸ್ಕೃತಿಯಲ್ಲಿ ಕಂಡುಬರುವ ಗ್ರಾಂಡ್ ಪಾರ್ಟಿ. ನಮ್ಮಲ್ಲಿ ರಸ, ರುಚಿ ಮತ್ತು ಆನಂದಮಯ ಬದುಕಿಗೆ ಯಾವ ಅಡ್ಡಿ ಆತಂಕಗಳೂ ಇರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಡಿಡಿ ಕೋಸಂಬಿ ಅವರನ್ನು ಉಲ್ಲೇಖಿಸಿ ಕೆಟಿ ಅಚ್ಚಯ್ಯ ಬರೆದಿರುವಂತೆ ಯಾಜ್ಞವಲ್ಕ್ಯ ಮುನಿಗಳಿಗೆ ಹಸುವಿನ ಮಾಂಸವನ್ನು ಭಕ್ಷಿಸುವುದು ಪಾಪವೆಂದು ಹೇಳಿದಾಗ, ಅದು ಹಾಗಿರಬಹುದು, ಆದರೆ ನನಗೆ ಕರುವಿನ ಮಾಂಸ (ಆಂಶಾಲಾ) ಸಿಕ್ಕರೆ ಭಕ್ಷಿಸುತ್ತೇನೆ ಎನ್ನುತ್ತಾರೆ.

ಹೀಗೆ ನಮ್ಮ ಪುರಾತನ ಪುರಾಣ ಕತೆಗಳಲ್ಲಿ ಮಾಂಸದ ಭಕ್ಷಣೆಯ ಬಗ್ಗೆ ಅದ್ಭುತವಾದ ವಿವರಣೆಗಳಿವೆ. ಇಂತವುಗಳನ್ನೇ ಒಟ್ಟುಗೂಡಿಸಿ ಡಿ ಎನ್ ಜಾ ’ಮಿಥ್ ಆಫ್ ಹೋಲಿ ಕೌ’ ಎನ್ನುವ ಪುಸ್ತಕವನ್ನು ಬರೆದಿರುವರು.

ಬೃಹದಾರಣ್ಯಕ ಉಪನಿಷತ್ತಿನಲ್ಲಿಯೂ ಸಹ ಶೂಲಗಾಯಿಯ ಉಲ್ಲೇಖವಿದೆ. ಅಂದರೆ ಹಸುವಿನ ಮಾಂಸವನ್ನು ಶೂಲಕ್ಕೇರಿಸಿ ಬೆಂಕಿಯಲ್ಲಿ ಬೇಯಿಸಿ ತಿನ್ನುವ ಕ್ರಮ. ’ಫೀಡಿಂಗ್ ಡ ಡೆಡ್’ ಎನ್ನುವ ಪುಸ್ತಕದಲ್ಲಿ ಆಪಸ್ತಂಭ ಸ್ಮೃತಿಗಳನ್ನು ಉಲ್ಲೇಖಿಸಿ ಪಿತೃಗಳಿಗೆ ಮೊಸಳೆಯ ಮಾಂಸವನ್ನು ಕೊಟ್ಟರೆ ಹೆಚ್ಚು ಕಾಲ ಸ್ವರ್ಗದಲ್ಲಿರಲು ಸಾಧ್ಯವಾಗುತ್ತದೆ ಎಂಬ ಉಲ್ಲೇಖವಿದೆ. ಚರಕ, ಶುಶೃತ ಸಂಹಿತೆಗಳಲ್ಲೂ ಮಾಂಸವನ್ನು ಔಷಧಿಯ ರೂಪದಲ್ಲಿ ಹೇಗೆ ಬಳಸಬೇಕು ಎನ್ನುವ ಪಥ್ಯದ ವಿವರಗಳಿವೆ.

ಹೀಗಿದ್ದರೂ ಸಹ ಸಾಮಾನ್ಯವಾಗಿ ಭಾರತೀಯರು ಸಸ್ಯಾಹಾರಿಗಳು ಎನ್ನುವ ಸಾರ್ವಜನಿಕ ಅಭಿಪ್ರಾಯ ಮುಂಚೂಣಿಯಲ್ಲಿದೆ. ದೇಶವಿದೇಶಗಳಲ್ಲಿ ಅನೇಕ ಸಮ್ಮೇಳನಗಳಲ್ಲಿ ಈ ರೀತಿಯಾಗಿ ಉದ್ಘರಿಸುವುದನ್ನು ಕೇಳಬಹುದು. ಶೇಕಡಾ ಅರವತ್ತರಷ್ಟು ಭಾರತೀಯರು ಮಾಂಸಾಹಾರಿಗಳಾಗಿದ್ದು, ಉಳಿದ ನಲವತ್ತಷ್ಟರಲ್ಲಿ ಅನೇಕರು ಸಂಪೂರ್ಣವಾಗಿ ಸಸ್ಯಾಹಾರಿಗಳಲ್ಲ. ಬಂಗಾಳದ ಬ್ರಾಹ್ಮಣರೂ ಸಹ ಮೀನನ್ನು ಬಳಸುತ್ತಾರೆ. ಆದರೆ ಅವರು ಜಾಣ್ಮೆಯಿಂದ ಇವು ನದಿಗಳಲ್ಲಿ ಬಿಡುವ ಫಲಪುಷ್ಟಗಳು ಎನ್ನುತ್ತಾರೆ. ಕೊಂಕಣಿ, ಗೌಡ ಸಾರಸ್ವತ್, ಕಶ್ಮೀರ, ಉತ್ತರಾಕಾಂಡ ಹೀಗೆ ಅನೇಕ ರಾಜ್ಯಗಳಲ್ಲಿ ಹೊರನೋಟಕ್ಕೆ ಸಸ್ಯಾಹಾರಗಳೇ ಎಂದು ಬಿಂಬಿಸಲ್ಪಟ್ಟ ಬ್ರಾಹ್ಮಣರೂ ಸಹ ಮಾಂಸಾಹಾರಿಗಳಾಗಿರುತ್ತಾರೆ. ಇನ್ನು ಮನೆಯಲ್ಲಿ ಸಸ್ಯಾಹಾರಿಗಳಾಗಿದ್ದು, ಹೊರಗಡೆ ಮಾಂಸಾಹಾರಿಗಳಾಗಿರುವವರು ಅನೇಕರಿದ್ದಾರೆ. ಇನ್ನು ಕೆಲವರು ಸಸ್ಯಾಹಾರಿಗಳಾಗಿದ್ದರು ಹಾಲು ಮತ್ತು ಮೊಟ್ಟೆಯನ್ನು ಬಳಸುವ ಲ್ಯಾಕ್ಟೋ ಓವಾ ವೆಜಿಟೇರಿಯನ್ಸ್ ಎಂದೆನಿಸಿಕೊಳ್ಳುತ್ತಾರೆ. ಅಂದರೆ ಹಾಲು ಮತ್ತು ಮೊಟ್ಟೆಯನ್ನು ಬಳಸುವ ಸಸ್ಯಾಹಾರಿಗಳೆಂದು. ಅಮೆರಿಕಾದ ವೀಗನ್‌ಗಳು ಹಾಲನ್ನೂ ಕೂಡಾ ದ್ರವರೂಪದ ಮಾಂಸವೆಂದೇ ವರ್ಗಿಕರಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಸಸ್ಯಾಹಾರಿಗಳಲ್ಲಿ ವಿಟಮಿನ್ ಬಿ12 ಕೊರತೆ ಭಾರತದಲ್ಲಿ ಕಾಣದಿರಲು ಒಂದು ವಿಚಿತ್ರ ಕಾರಣದ ಉಲ್ಲೇಖವಾಗಿತ್ತು. ಅದೇನೆಂದರೆ ತಮಗೆ ತಿಳಿಯದೇ ದವಸಧಾನ್ಯಗಳ ಮೂಲಕ ಕೀಟಭಕ್ಷಣೆಯಾಗುವುದರಿಂದೆಂದು. ದವಸಧಾನ್ಯಗಳಿಗೆ ಕೀಟಬಾಧೆ ಸಹಜ. ಎಲ್ಲಾ ಮನೆಗಳಲ್ಲೂ ಇದು ತಿಳಿದಿರುವ ವಿಷಯ. ಕೀಟ ಹೊರಟುಹೋದರೂ ಕೈಕಾಲುಗಳು ಉದುರಿಹೋಗಿ ನಮ್ಮ ಉದರಕ್ಕೆ ಸೇರುವ ಎಲ್ಲಾ ಸಾಧ್ಯತೆಗಳು ಉಂಟು. ಹಿಂದಿನ ಆಹಾರ ಕಾಯಿದೆಯಲ್ಲಿಯೇ ಇಷ್ಟು ಕೀಟದ ಅಂಶ ಇದ್ದರೆ ತೊಂದರೆ ಇಲ್ಲ ಎನ್ನುವ ಉಲ್ಲೇಖವಿತ್ತು. ಭಾರತೀಯರು ಸಸ್ಯಾಹಾರಿಗಳೆನ್ನುವ ತಪ್ಪು ಕಲ್ಪನೆ ಮತ್ತು ಆ ಮನೋಧೋರಣೆಯ ಗರ್ವಕ್ಕೆ ವಿರುದ್ಧವಾಗಿ ಸುಮಾರು ಎರಡುಸಾವಿರದ ಆರುನೂರು ರೀತಿಯ ಕೀಟಭಕ್ಷಣೆಯೂ ಕೂಡಾ ಆಹಾರ ಸಂಸ್ಕೃತಿಯ ಭಾಗವೇ ಸರಿ.

ಮೂಲತಃ ನಾವು ಸಾವಿರಾರು ವರ್ಷಗಳ ಕಾಲ ಶಿಕಾರಿ ಮಾಡಿ ಬದುಕಿದ ಜೀವಿಗಳು. ಹಳೆಯ ಪಳೆಯುಳಿಕೆಯ ಮೂಳೆ ಮತ್ತು ಹಲ್ಲನ್ನು ಪರೀಕ್ಷಿಸಿ, ಸ್ಟೇಬಲ್ ಐಸೋಟೋಪ್‌ಗಳ ಬಳಕೆ ವಿಧಾನದಿಂದ ಅವನ ಆಹಾರ ಪದ್ಧತಿ ಏನೆಂದು ವೈಜ್ಞಾನಿಕವಾಗಿ ಗುರುತಿಸಬಹುದು. ಸುಮಾರು ಮೂರು ನಾಲ್ಕು ಸಾವಿರ ವರ್ಷ ಹಿಂದಿನ ಮನುಷ್ಯನ ಮೂಳೆ ಮತ್ತು ಹಲ್ಲಿನ ವಿಶ್ಲೇಷಣೆಯ ಪ್ರಕಾರ ಸಂಪೂರ್ಣ ಯಾವ ಮನುಷ್ಯನೂ ಸಸ್ಯಾಹಾರಿಗಳಾಗಿರುವುದು ಕಂಡುಬರುವುದಿಲ್ಲ.

ಡಾ. ಬಿ.ಆರ್. ಅಂಬೇಡ್ಕರ್ ಹೇಳುವಂತೆ ಬೌದ್ಧರು ಯಜ್ಞ ಯಾಗಗಳಲ್ಲಿ ಪ್ರಾಣಿವಧೆಯನ್ನು ಕಂಡು ಇದನ್ನು ತಮ್ಮ ಆಚರಣೆಯಲ್ಲಿ ನಿಷಿದ್ಧವೆಂದು ತೀರ್ಮಾನಿಸಿದರು. ಜೈನರು ಇದನ್ನು ಇನ್ನೂ ತೀವ್ರವಾಗಿ ಆಚರಿಸತೊಡಗಿದರು. ಈ ವಿಷಯದಲ್ಲಿ ಪೈಪೋಟಿಗಿಳಿದ ಹಿಂದೂ ವೈದಿಕರು ನಾವು ಯಜ್ಞಯಾಗಗಳಲ್ಲಿ ಮಾತ್ರವಲ್ಲದೆ ನಮ್ಮ ಆಹಾರ ಪದ್ಧತಿಯಿಂದಲೂ ಸಂಪೂರ್ಣ ನಿಷೇಧಿಸಿದ್ದೇವೆಂದು ಒಂದು ಹೆಜ್ಜೆ ಮುಂದೆ ಇಟ್ಟು ತಮ್ಮ ಶುದ್ಧತೆಯ ಶ್ರೇಷ್ಟತೆಯನ್ನು ಮೆರೆಯಲು ಹೊರಟರು. ಮೇಲು-ಕೀಳು ಎಂಬ ಶ್ರೇಣೀಕೃತ ವರ್ಗಕ್ಕೆ ಬುನಾದಿಯೇ ಈ ರೀತಿ ಆಚರಣೆಗೆ ಬಂದ ಆಹಾರಕ್ರಮವಾಯಿತು.

ಫ್ರಾನ್ಸ್ ದೇಶದ ಸಮಾಜಶಾಸ್ತ್ರಜ್ಞ ಪಿಯರ್ ಬರ್ಡ್ಯೂ (Pierre Bourdieu) ಹೇಳುವಂತೆ ಸಮಾಜದಲ್ಲಿ ವರ್ಗಭೇದ ಕಲ್ಪನೆಗೆ ಆಧಾರವಾಗುವಂತದ್ದು ಒಂದು ವರ್ಗ ಬಳಸುವ ಆಹಾರ ಕ್ರಮ ಮತ್ತು ಅಲ್ಲಿ ಕೃತಕವಾಗಿ ಕಟ್ಟಲ್ಪಟ್ಟ ಶ್ರೇಷ್ಠತೆ. ಅವುಗಳನ್ನೇ ಒಂದು ಸಾಮಾಜಿಕ ಬಂಡವಾಳವಾಗಿ ಬಳಸಲಾಗುತ್ತದೆ. ಈ ಕೃತಕ ಮತ್ತು ಕಲ್ಪಿತ ಶ್ರೇಷ್ಠತೆಯೇ ತಮ್ಮ ವರ್ಗದ ಸುತ್ತ ಸಾಮಾಜಿಕ ಬೇಲಿಯಾಗಿ ಮಾರ್ಪಾಡಾಗುತ್ತದೆ. ಇಂತದ್ದೇ ವಾದವನ್ನು ಲಿ ಬೆಸ್ಕೋ ಮತ್ತು ನೆಖರಾಟ್ಟೋ ತಮ್ಮ ಎಡಿಬಲ್ ಐಡಿಯಾಲಜೀಸ್ ಎನ್ನುವ ಪುಸ್ತಕದಲ್ಲಿ ವಿಸ್ತರಿಸುತ್ತಾರೆ. ಇಂತಹ ವಿವರಗಳನ್ನು ಗಮನಿಸಲು ಎಲೀಟ್ ಅಥೆಂಟಿಸಿಟಿ ಎನ್ನುವ ಪುಸ್ತಕವನ್ನು ಗಮನಿಸಬಹುದು.

ಇನ್ನೊಂದೆಡೆ ಸುಮಾರು ಏಳುನೂರು ಸಸ್ಯಗಳು ಮಾಂಸಭಕ್ಷಕರು ಎನ್ನುವುದನ್ನು ಅನೇಕರು ಗಮನಿಸುವುದಿಲ್ಲ. ಇತ್ತೀಚೆಗೆ ನೇಚರ್ ನಿಯತಕಾಲಿಕ ಹೊಸ ಕೀಟಭಕ್ಷಕ ಸಸ್ಯವೊಂದರ ಬಗ್ಗೆ ಉಲ್ಲೇಖಿಸಿತ್ತು. ಕೀಟಗಳು ಗಿಡದ ಕೊಂಬೆಯ ಮೇಲೆ ಹರಿದಾಡುತ್ತಿದ್ದರೆ ತನ್ನ ಸೂಕ್ಷ್ಮ ಮುಳ್ಳುಗಳಿಂದ ಅಲ್ಲಿಯೇ ಬಂಧಿಸಿ ಕರಗಿಸಿ ನುಂಗಿ ನೊಣೆಯುವ ಸಸ್ಯಗಳ ವಿವರ ಸೋಜಿಗವೇ ಸರಿ. ಇಲಿ, ಹೆಗ್ಗಣಗಳನ್ನೇ ತಿಂದು ತೇಗುವ ಸಸ್ಯಗಳಿವೆ. ಶುದ್ಧ ಸಸ್ಯಹಾರಿ ಎನ್ನುವವರಿಗೆ ಇದು ಆಘಾತಕಾರಿಯೇ ಸರಿ.

ವಿಷಯ ಇಂತೆಲ್ಲಾ ಇರುವಾಗ ಬಡಮಕ್ಕಳಿಗೆ ಮೊಟ್ಟೆ ಕೊಡಬಾರದೆಂದು ಹೋರಾಟಕ್ಕಿಳಿದಿರುವವರ ಬಗ್ಗೆ ಏನು ಹೇಳಬೇಕೋ ತಿಳಿಯದು. ದಲಿತರ ಮಕ್ಕಳು ಇತರರಿಗಿಂತ ಶೇಕಡಾ ಹತ್ತರಿಂದ ಹದಿನೈದು ಪಟ್ಟು ಹೆಚ್ಚು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಹಾಗೆಯೇ ದಲಿತರ ಜೀವಿತಾವಧಿ (Life expectancy at birth) ಕೂಡಾ ಉಳಿದವರಿಗಿಂತ ಸುಮಾರು ಹತ್ತು ವರ್ಷ ಕಮ್ಮಿಯಾಗಿರುವುದು ಸ್ವತಂತ್ರ್ಯ ಭಾರತದ ದುರಂತವೇ ಸರಿ. ಇಂದಿಗೂ ಹಸಿವು ಮತ್ತು ಅಪೌಷ್ಠಿಕತೆಯಿಂದ ಸುಮಾರು ಎಂಟು ಲಕ್ಷ ಮಕ್ಕಳು ಸಾವಿಗೀಡಾಗುತ್ತಾರೆ. ಕಡಿಮೆ ಆದಾಯವುಳ್ಳ ದೀನದಲಿತರಿಗೆ ಅತ್ಯಂತ ಹೆಚ್ಚು ಶಕ್ತಿ ಕೊಡುವ ಆಹಾರ ಪ್ರೊಟೀನ್ ಮತ್ತು ಕೊಬ್ಬುರಹಿತ ಏಕದಳ ಧಾನ್ಯಗಳೇ ಆಗಿರುತ್ತದೆ. ಪಾಲಿಷ್ ಮಾಡಿದ ಅಕ್ಕಿ ಮತ್ತು ತೌಡು ತೆಗೆದ ಗೋಧಿ ಹಿಟ್ಟು ನಿತ್ಯ ಆಹಾರಕ್ಕೆ ಬಳಸುವ ಪದಾರ್ಥಗಳಾಗಿರುವುದರಿಂದ, ಬಡವರಲ್ಲಿ ಪ್ರೊಟೀನ್ ಮತ್ತು ಕೊಬ್ಬಿನ ಕೊರತೆ ಎದ್ದು ಕಾಣೂತ್ತದೆ.

ನ್ಯಾಷನಲ್ ಸ್ಯಾಂಪಲ್ ಸರ್ವೆ ದತ್ತಾಂಶದ ಪ್ರಕಾರ ಇದು ಸ್ಪಷ್ಟವಾಗಿ ತಿಳಿದುಬರುತ್ತದೆ. ಇವರ ಬದುಕಿನಲ್ಲಿ ಕೊರತೆಯುಂಟಾಗಿರುವ ಪ್ರೊಟೀನ್ ಮತ್ತು ಕೊಬ್ಬನ್ನು ಒದಗಿಸುವಲ್ಲಿ ಮೊಟ್ಟೆ ಸರಿಯಾದ ಆಹಾರವಾಗಿರುತ್ತದೆ. ಬೇರೆ ಆಹಾರಗಳಲ್ಲಿ ಹೇರಳವಾಗಿ ದೊರಕುತ್ತಿರುವ ಕಾರ್ಬ್ಸ್ ಇಲ್ಲದಿರುವುದು ಮತ್ತು ಪ್ರೊಟೀನ್ ಮತ್ತು ಕೊಬ್ಬೇ ಹೆಚ್ಚಾಗಿ ಇರುವ ಏಕೈಕ ಆಹಾರವಾಗಿದೆ ಮೊಟ್ಟೆ. ಬೇಳೆಕಾಳುಗಳಲ್ಲಿ ಪ್ರೊಟೀನ್ ಇದ್ದರೆ ಕೊಬ್ಬು ಇರುವುದಿಲ್ಲ, ಎಣ್ಣೆ ಕಾಳುಗಳಲ್ಲಿ ಕೊಬ್ಬು ಮತ್ತು ಪ್ರೊಟೀನ್ ಇದ್ದರೂ ಮೊಟ್ಟೆಯಷ್ಟು ಸಾಂದ್ರತೆ ಮತ್ತು ಗುಣಮಟ್ಟ ಇರುವುದಿಲ್ಲ. ಇದಲ್ಲದೆ ಬಡವರಿಗೆ ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿಯೂ ಬಯಸುವ ಆಹಾರವಾಗಿರುತ್ತದೆ ಇದು. ವಿಶ್ವಸಂಸ್ಥೆಯ ಅಂಗಸಂಸ್ಥೆ ’ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್’ ತಿಳಿಸುವಂತೆ ಆಹಾರ ಭದ್ರತೆ ಆಹಾರ ಸಂಸ್ಕೃತಿಯ ಒಂದಕ್ಕೊಂದು ಪೂರಕವಾಗಿರತಕ್ಕದ್ದು. ಈ ಬಹುಜನರ ಆಹಾರದ ಆಯ್ಕೆ ಮತ್ತು ಬಯಕೆಯನ್ನು ಧಿಕ್ಕರಿಸುವ ಮತ್ತು ಕಸಿದುಕೊಳ್ಳುವ ಹುನ್ನಾರವನ್ನು ಗ್ರಹಿಸುವುದು ಕಷ್ಟವಾಗಲಾರದು. ಸಾಮಾನ್ಯವಾಗಿ ಹೀಗೆ ಹೇಳುವುದುಂಟು: “ನಿಮಗೆ ನಿಮ್ಮ ಕೈಬೀಸುವ ಎಲ್ಲಾ ಸ್ವಾತಂತ್ರ್ಯವೂ ಇದೆ, ಆದರೆ ನನ್ನ ಮೂಗಿಗೆ ತಗುಲಕೂಡದು” ಎಂದು.

ಬಡವರ ತಟ್ಟೆಗೆ ಕೈಹಾಕುವ ಈ ಪ್ರಯತ್ನ ನಿಜವಾಗಿಯೂ ಪ್ರಶ್ನಾರ್ಹವಾದುದು. ಮೇಲ್ವರ್ಗವೆಂದು ತಮಗೆ ತಾವೇ ಗ್ರಹಿಸಿಕೊಂಡಿರುವ ನಾವು ಬಹುಜನರ ಆಯ್ಕೆಯನ್ನು ನಾವೇ ನಿರ್ಧರಿಸುತ್ತೇವೆ. ಅದು ನಮ್ಮ ಹಕ್ಕು ಎನ್ನುವ ಅಹಂಕಾರವಿದೆ.

ಖ್ಯಾತ ಸಮಾಜಶಾಸ್ತ್ರಜ್ಞ ಆಂಡ್ರ್ಯೂ ಬೆಟೆಲ್ ಮಧುರೆಯ ಅಗ್ರಹಾರದಲ್ಲಿ ಕೆಲವು ಕಾಲ ಇದ್ದು, ನಾನು ಇನ್ನು ಕೆಲವು ಕಾಲ ದಲಿತರ ಬಗ್ಗೆ ಅಧ್ಯಯನ ಮಾಡಲು ಅವರ ಕೇರಿಯಲ್ಲಿ ವಾಸ ಮಾಡುತ್ತೇನೆ ಎಂದು ಅಗ್ರಹಾರದ ಮನೆಯ ಯಜಮಾನರಿಗೆ ಹೇಳಿ ಹೊರಟಾಗ, ಅವರು ಹೀಗೆನ್ನುತ್ತಾರೆ: “ಅವರ ಬಗ್ಗೆ ಅವರಿಗೇನು ಗೊತ್ತು? ನನ್ನನ್ನು ಕೇಳಿ ನಾನೇ ಹೇಳುತ್ತೇನೆ” ಎಂದು. ಇದಕ್ಕೇ ಇರಬೇಕು ಮಹಾತ್ಮ ಗಾಂಧಿ ಒಮ್ಮೆ ತಮಗೆ ಅತ್ಯಂತ ಕಾಡುವ ಪ್ರಶ್ನೆ ಏನೆಂದು ಕೇಳಿದಾಗ “ವಿದ್ಯಾವಂತರ ಕಲ್ಲುಹೃದಯ” ಎಂದಿದ್ದರಂತೆ.

ಸಸ್ಯಾಹಾರಿಗಳಿಗೆ ಮೊಟ್ಟೆಗೆ ತಕ್ಕ ಪರ್ಯಾಯ ಆಹಾರಗಳನ್ನು ಕೊಡತಕ್ಕದ್ದು. ಬಾಳೆಹಣ್ಣು ಒಂದಲ್ಲಾ ಹತ್ತು ಕೊಟ್ಟರೂ ಪರ್ಯಾಯವಲ್ಲ. ಬೇಳೆಕಾಳು, ಎಣ್ಣೆಕಾಳುಗಳನ್ನು ಸರಿದೂಗಿಸಿ ಕೊಡತಕ್ಕದ್ದು. ತಕ್ಷಣ ಕೆಲವರಿಗೆ ಅನ್ನಿಸಬಹುದು, ಇದನ್ನೇ ಅವರಿಗೂ ಕೊಡಬಹುದಲ್ಲಾ ಎಂದು. ಇಲ್ಲಿ ಅವರವರ ಸಾಂಸ್ಕೃತಿಕ ಆಯ್ಕೆ, ಬಯಕೆ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಮಾಪನ ಗಮನಿಸತಕ್ಕದ್ದು.ಕೊನೆಗೆ ಅಲ್ಲಮನ ವಚನವೊಂದನ್ನು ಅವಲೋಕಿಸುವುದು ಸೂಕ್ತ ಎನಿಸುತ್ತದೆ.

ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ, ನೀವು ಕೇಳಿರೆ.
ಮದ್ಯವಲ್ಲವೇನು ಅಷ್ಟಮದಂಗಳು
ಮಾಂಸವಲ್ಲವೇನು ಸಂಸಾರಸಂಗ?
ಈ ಉಭಯವನತಿಗಳದಾತನೆ
ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು||

-ಕೆ ಸಿ ರಘು, ಆಹಾರ ತಜ್ಞರು


ಇದನ್ನೂ ಓದಿ: ಬರಿದೇ ಬಾರಿಸದಿರು ತಂಬೂರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...