Homeಕರ್ನಾಟಕಚುನಾವಣೆ ವಿಶ್ಲೇಷಣೆ: ಹಾನಗಲ್‌ನಲ್ಲಿ ಬಿಜೆಪಿ ಸೋತಿದ್ದೇಕೆ? ಕ್ಷೇತ್ರದ ಮತದಾರರ ವೈಶಿಷ್ಟ್ಯವೇನು?

ಚುನಾವಣೆ ವಿಶ್ಲೇಷಣೆ: ಹಾನಗಲ್‌ನಲ್ಲಿ ಬಿಜೆಪಿ ಸೋತಿದ್ದೇಕೆ? ಕ್ಷೇತ್ರದ ಮತದಾರರ ವೈಶಿಷ್ಟ್ಯವೇನು?

- Advertisement -
- Advertisement -

ಒಂದು ಕಡೆ ಬೆಲೆ ಏರಿಕೆ, ಮತ್ತೊಂದು ಕಡೆ ಸಂವಿಧಾನಿಕ ಚೌಕಟ್ಟು ಮೀರಿದ ರಾಜಕೀಯ ಮಾತುಗಾರಿಕೆ. ಇದರ ನಡುವೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯಾದ ಹಾವೇರಿಯ ಹಾನಗಲ್‌ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದೆ.

ಉಪಚುನಾವಣೆ ಎಂದ ಮೇಲೆ ಆಡಳಿತರೂಢ ಪಕ್ಷಕ್ಕೆ ಪ್ರತಿಷ್ಟೆಯದ್ದಾಗಿರುತ್ತದೆ. ಹಾವೇರಿ ಜಿಲ್ಲೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯೂ ಆಗಿರುವುದರಿಂದ ಹಾನಗಲ್‌ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು. ಅವರು ಮುಖ್ಯಮಂತ್ರಿಯಾದ ಬಳಿಕ ಎದುರಿಸಿದ ಮೊದಲ ವಿಧಾನಸಭಾ ಉಪ ಚುನಾವಣೆಯೂ ಇದಾಗಿದ್ದು, ಪ್ರತಿಷ್ಠೆಯ ಕಣವಾಗಿತ್ತು.

ಮಾಜಿ ಸಚಿವ ಸಿ.ಎಂ.ಉದಾಸಿಯವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರದಲ್ಲಿ, ಕಾಂಗ್ರೆಸ್‌ ಪಕ್ಷವು ಕ್ಷತ್ರೀಯ ಮರಾಠ ಸಮುದಾಯದ ಶ್ರೀನಿವಾಸ ಮಾನೆಯವರಿಗೆ ಟಿಕೆಟ್ ನೀಡಿತ್ತು. ಬಿಜೆಪಿಯಿಂದ ಗಾಣಿಗ ಸಮುದಾಯದ ಶಿವರಾಜ್‌ ಸಜ್ಜನರ್‌‌ ಕಣಕ್ಕಿಳಿದಿದ್ದರು. ಸಿ.ಎಂ. ಉದಾಸಿಯವರ ಭದ್ರಕೋಟೆಯಾಗಿದ್ದ ಹಾನಗಲ್‌ನಲ್ಲಿ ಅನೇಕ ಸಲ ಕಾಂಗ್ರೆಸ್ ಅಭ್ಯರ್ಥಿಗಳೂ ಮೇಲುಗೈ ಸಾಧಿಸಿದ್ದಾರೆ. ಈ ಹಿಂದೆ ಉದಾಸಿಯವರ ವರ್ಚಿಸ್ಸಿನಿಂದಾಗಿ ನೆಲೆ ಕಂಡಿದ್ದ ಜೆಡಿಎಸ್‌, ಮುಸ್ಲಿಂ ವ್ಯಕ್ತಿ ನಿಯಾಜ್‌ ಶೇಖ್‌ ಅವರನ್ನು ಈ ಬಾರಿ ಕಣಕ್ಕಿಳಿಸಿತ್ತು.

ಇದನ್ನೂ ಓದಿರಿ: ಬಂಗಾಳ ಉಪಚುನಾವಣೆ: ಎಲ್ಲಾ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಅಂತರಗಳಲ್ಲಿ ಸೋತ ಬಿಜೆಪಿ; ಭಾರಿ ಮುಖಭಂಗ!

ಸಿ.ಎಂ. ಉದಾಸಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದರೆ, ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ನಾಲ್ಕು ಬಾರಿ ಶಾಸಕರಾಗಿದ್ದರು. ಸಿ.ಎಂ. ಉದಾಸಿ ಜನತಾಪಕ್ಷ, ಜಾ.ದಳ, ಬಿಜೆಪಿ ಹಾಗೂ ಒಮ್ಮೆ ಪಕ್ಷೇತರರಾಗಿ ಗೆದ್ದಿದ್ದರು. ಹೀಗೆ ಸಿ.ಎಂ. ಉದಾಸಿಯವರಿಗೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು. ಬಿಜೆಪಿಯ ಭದ್ರಕೋಟೆಯಾಗಿಯೂ ಉದಾಸಿ ಕ್ಷೇತ್ರವನ್ನು ಬಲಪಡಿಸಿದ್ದರು. ಆದರೆ ಉದಾಸಿಯವರ ನಿಧನದ ನಂತರ ನಡೆದ ಚುನಾವಣೆ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಿದೆ.

ಶ್ರೀನಿವಾಸ ಮಾನೆ ಮತ್ತು ಶಿವರಾಜ್‌ ಸಜ್ಜನರ್‌‌

ಮತ ಎಣಿಕೆಯ 19ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯವರು 87,300 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್‌‌ 79,874 ಮತಗಳಿಗೆ ಸೀಮಿತವಾದರು. ಇನ್ನು ಜೆಡಿಎಸ್‌ನ ನಿಯಾಜ್ ಶೇಖ್ ಕೇವಲ 923 ಮತಗಳನ್ನು ಪಡೆದಿದ್ದಾರೆ. 7,426 ಮತಗಳ ಅಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.

ಬಿಜೆಪಿಯ ಸೋಲಿಗೆ ಕಾರಣಗಳು

  1. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಕೋವಿಡ್ ಸಮಯದಲ್ಲಿ ಮಾಡಿರುವ ಕೆಲಸಗಳು ಕಾಂಗ್ರೆಸ್‌ ಪರ ಮತದಾರರು ವಾಲಲು ಕಾರಣವಾಯಿತು. ಶ್ರೀನಿವಾಸ ಮಾನೆ ಹಾಗೂ ಮನೋಹರ ತಹಸಿಲ್ದಾರ್‌ ಬಣದ ನಡುವಿನ ಕಿತ್ತಾಟಗಳು ಕೊನೆ ಹಂತದಲ್ಲಿ ತಣ್ಣಗಾಗಿದ್ದವು.
  2. ಎಲ್ಲ ಪಕ್ಷಗಳ ಅಭ್ಯರ್ಥಿಗಳೂ ಹೊರಗಿನವರಾಗಿದ್ದರು. ದುಡ್ಡು ಹೊರಗಿನದ್ದಾಗಿತ್ತು. ಪ್ರಚಾರದಲ್ಲಿ ಪಾಲ್ಗೊಂಡ ಬಹುತೇಕ ಕಾರ್ಯಕರ್ತರೂ ಹೊರಗಿನವರಾಗಿದ್ದರು. ವಾಹನಗಳೂ ಹೊರಗಿನವು, ಘೋಷಣೆ ಕೂಗುವವರು ಹೊರಗಿನವರಾಗಿದ್ದರು. ಮಾನೆಯವರು ಕ್ಷೇತ್ರದ ಹೊರಗಿನವರಾದರೂ ದೀರ್ಘಕಾಲದ ಸಂಪರ್ಕ ಸಾಧಿಸಿ, ಜನರಿಗೆ ಹತ್ತಿರವಾಗಿದ್ದರು.ಇದನ್ನೂ ಓದಿರಿ: ನಾಲ್ಕೂ ಸ್ಥಾನ ಕಾಂಗ್ರೆಸ್ ಪಾಲು: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲು
  3. ಮಾನೆಯವರು ಕೋವಿಡ್ ಸಂದರ್ಭದಲ್ಲಿ ಮಾಡಿಸಿದ ಕೆಲಸಗಳನ್ನು ಮುನ್ನೆಲೆಗೆ ತಂದು ಪ್ರಚಾರ ಪಡೆದರು. ಶಿವರಾಜ್‌ ಸಜ್ಜನರ್‌ ಅವರು ದಿಢೀರನೆ ಕ್ಷೇತ್ರಕ್ಕೆ ಬಂದವರು. ಅವರ ಮೇಲೆ ಸಂಗೂರು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪಗಳಿದ್ದವು.
  4. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡರಲ್ಲೂ ಬಿ ಟೀಮ್‌ಗಳು ಕೆಲಸ ಮಾಡಿದ್ದವು. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಬಿ ಟೀಮ್‌ನ ಕೆಲಸಗಳು ಸ್ಪಲ್ಪ ಗೌಣವಾಗಿಯಿತು. ಬಿಜೆಪಿ ಕಾರ್ಯಕರ್ತರೇ ‘ಬಿ’ ಟೀಮ್‌ ಆಗಿ ಪರಿವರ್ತನೆಯಾಗಿದ್ದರು. ಶಿವರಾಜ್‌ ಸಜ್ಜನರ್‌ ಆರ್‌‌ಎಸ್‌ಎಸ್‌ ಕಾರ್ಯಕರ್ತನಲ್ಲ, ಕ್ಷೇತ್ರದ ವ್ಯಕ್ತಿಯಲ್ಲ. ಆತ ತಮ್ಮ ಸಂಪರ್ಕದಲ್ಲೇ ಇಲ್ಲ ಎಂಬ ಭಾವನೆ ಕಾರ್ಯಕರ್ತರಿಗಿತ್ತು. ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಯಾರನ್ನಾದರೂ ಚುನಾವಣೆಗೆ ನಿಲ್ಲಿಸಿದ್ದರೂ ಗೆಲುವು ಸಾಧಿಸಬಹುದಿತ್ತು ಎಂದು ಕೆಲವರು ಹೇಳುತ್ತಾರೆ.
  5. ಹಾನಗಲ್ ತಾಲ್ಲೂಕಿನಲ್ಲಿ ದುಡ್ಡು ಇಂದು ನಡೆದಿಲ್ಲ, ಹಿಂದೆಯೂ ನಡೆದಿಲ್ಲ, ಮುಂದೆಯೂ ನಡೆಯಲ್ಲ. ಸೋಲಿಸುವ ಚುನಾವಣೆಗಳನ್ನು ನಡೆಸುವುದು ಕ್ಷೇತ್ರದ ವೈಶಿಷ್ಟ್ಯ. ಸಿ.ಎಂ. ಉದಾಸಿಯವರ ಪುತ್ರ ಶಿವಕುಮಾರ್‌ ಉದಾಸಿಯವರ ಒಟ್ಟು ತಂಡವನ್ನು ಸೋಲಿಸುವ ಚುನಾವಣೆ ಇದಾಗಿತ್ತು. ಮಾನೆಯನ್ನು ಗೆಲ್ಲಿಸುವ ಚುನಾವಣೆ ಎಂಬುದಕ್ಕಿಂತ ಉದಾಸಿಯನ್ನು ಸೋಲಿಸುವ ಚುನಾವಣೆ ಇದಾಗಿತ್ತು ಎನ್ನುತ್ತಾರೆ ನೋಟಾ ಮತದಾನ ಜಾಗೃತಿ ಮೂಡಿಸುತ್ತಿರುವ ಪ್ರಶಾಂತ್‌ ಮುಚ್ಚಂಡಿ.
  6. ದುಡ್ಡು ತೆಗೆದುಕೊಂಡು ಬಂದು, ಜಾತಿ ಮುಂದೆ ಮಾಡಿ ಚುನಾವಣೆ ನಡೆಸುತ್ತೇನೆಂದರೆ ಇಲ್ಲಿ ನಡೆಯಲ್ಲ. ಕಡಿಮೆ ಅವಧಿಯ ತಂತ್ರಗಾರಿಕೆ ಫಲಿಸುವುದಿಲ್ಲ. ದೀರ್ಘಕಾಲೀನ ತಂತ್ರಗಾರಿಕೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಇದು ಸಿ.ಎಂ.ಉದಾಸಿಯವರಿಗೂ ತಿಳಿದಿತ್ತು. ಉದಾಸಿಯವರು ಒಮ್ಮೆ ಸೋತಾಗ ಬೆಳೆ ವಿಮೆ ಹೋರಾಟವನ್ನು ಆರಂಭಿಸಿದ್ದರು. ನಂತರದ ಚುನಾವಣೆಯಲ್ಲಿ ಅನಾಯಾಸವಾಗಿ ಗೆದ್ದರು. ಬೆಳೆ ವಿಮೆ ಹೋರಾಟ ಯಾವ ಮಟ್ಟಕ್ಕೆ ಆಗಿತ್ತೆಂದರೆ, ಹಣವನ್ನು ಹೆಚ್ಚಾಗಿ ಖರ್ಚು ಮಾಡುವ ಪ್ರಮೇಯವೇ ಅವರಿಗೆ ಬಂದಿರಲಿಲ್ಲ ಎಂದು ನೆನೆಯುತ್ತಾರೆ ಪ್ರಶಾಂತ್‌ ಮುಚ್ಚಂಡಿ.
  7. ಶಿವರಾಜ್ ಸಜ್ಜನರ್‌ ಅವರನ್ನು ಕ್ಷೇತ್ರಕ್ಕೆ ಕರೆತಂದಿದ್ದು ಬಿಜೆಪಿ ಮಾಡಿದ ತಪ್ಪೇನಲ್ಲ. ಆದರೆ ಕಡಿಮೆ ಅವಧಿಯಲ್ಲಿ ಸಜ್ಜನರ್‌ ಅವರನ್ನು ಕ್ಷೇತ್ರಕ್ಕೆ ತಂದರು. ಮೊದಲೇ ಕ್ಷೇತ್ರಕ್ಕೆ ಸಜ್ಜನರ್‌ ಬಂದು, ಜನರೊಂದಿಗೆ ಒಡನಾಡಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಾಷಣಗಳನ್ನು ಮಾಡಿ ವರ್ಚಸ್ಸು ವೃದ್ಧಿಸಿಕೊಳ್ಳಬೇಕಿತ್ತು. ಒಂದು ತಂಡವನ್ನು ರೂಪಿಸಿಕೊಳ್ಳಬೇಕಿತ್ತು, ಜನರಲ್ಲಿ ಭರವಸೆಗಳನ್ನು ಬಿತ್ತಬೇಕಿತ್ತು. ಇಷ್ಟಾದರೂ ಮಾಡಿದ್ದರೂ ಬಿಜೆಪಿಗೆ ಅನುಕೂಲವಾಗುತ್ತಿತ್ತು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ.

ಇದನ್ನೂ ಓದಿರಿ: ಹರಿಯಾಣ ಉಪಚುನಾವಣೆ: ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜೀನಾಮೆ ಕೊಟ್ಟಿದ್ದ ಅಭಯ್ ಚೌಟಾಲಾಗೆ ಗೆಲುವು

ಶಿವಕುಮಾರ್‌ ಉದಾಸಿ ಕಡೆಗಣಿಸಲು ಸಾಧ್ಯವೆ?

ಬಿಜೆಪಿ ಅಭ್ಯರ್ಥಿಯಾಗಿರುವ ಶಿವರಾಜ್‌ ಸಜ್ಜನರ್ ಉದಾಸಿಯವರ ಕುಟುಂಬಕ್ಕೆ ಆಪ್ತರು. ಸಿ.ಎಂ.ಉದಾಸಿಯವರ ಮಾನಸಪುತ್ರ ಎಂದೇ ಖ್ಯಾತರಾಗಿದ್ದರು. ಸಜ್ಜನರ್‌ ಅವರಿಗೆ ನೀಡಿದ ಟಿಕೆಟ್‌, ಉದಾಸಿ ಕುಟುಂಬಕ್ಕೇ ನೀಡಿದ ಟಿಕೆಟ್ ಅಲ್ಲದೇ ಬೇರೇನೂ ಅಲ್ಲ ಎಂದು ಭಾವಿಸಲಾಗಿತ್ತು. ಈ ಸೋಲಿನ ನಂತರ ಸಿ.ಎಂ. ಉದಾಸಿಯವರ ಪುತ್ರ ಶಿವಕುಮಾರ್ ಉದಾಸಿಯವರನ್ನು ಬಿಜೆಪಿ ಕಡೆಗಣಿಸಲಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಈ ಸೋಲಿನ ನಂತದಲ್ಲಿ ಶಿವಕುಮಾರ್‌ ಉದಾಸಿ ಅವರನ್ನು  ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ತಿರುಗುಬಾಣವೂ ಆಗಬಹುದು ಎನ್ನುತ್ತಾರೆ ಕ್ಷೇತ್ರದ ಮುಖಂಡರು. ಒಂದು ದೊಡ್ಡ ತಂಡವನ್ನೇ ಬೇರೆ ಪಕ್ಷಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಶಿವಕುಮಾರ್‌ ಉದಾಸಿಯವರಿಗಿದೆ. ಕಾಂಗ್ರೆಸ್‌ಗೆ ಹೋದರೂ ಹೋಗಬಹುದು. “ಎಂಎಲ್‌ಎ ಟಿಕೆಟ್‌ ನನ್ನ ಪತ್ನಿಗೆ ಕೊಡಿ, ಎಂಪಿ ಟಿಕೆಟ್‌ ನನಗೆ ಕೊಡಿ” ಎಂದು ಕಾಂಗ್ರೆಸ್‌ ಮುಂದೆ ಉದಾಸಿಯವರು ಬೇಡಿಕೆ ಇಡಬಹುದು. ಕಾಂಗ್ರೆಸ್‌ನವರು ಸುಲಭವಾಗಿ ಟಿಕೆಟ್‌ ಕೊಟ್ಟುಬಿಡುವ ಸಾಧ್ಯತೆಯೂ ಇದೆ. ಹೀಗಾಗಿ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡುವುದು ಖಚಿತ. ಒಂದು ವೇಳೆ ಉದಾಸಿಯವರನ್ನು ನಿರ್ಲಕ್ಷಿಸಿದರೆ ಕ್ಷೇತ್ರದಲ್ಲಿ ಬಿಜೆಪಿ ಒಡೆದುಹೋಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ವಿಶ್ಲೇಷಕರು.

ಮಾನೆ ಮುಂದಿದೆ ಸವಾಲು

ಶ್ರೀನಿವಾಸ ಮಾನೆಯವರ ಮುಂದೆ ಸಾಕಷ್ಟು ಸವಾಲುಗಳಿವೆ. ಕಡಿಮೆ ಅವಧಿಯಲ್ಲಿ ಮತ್ತೆ ಚುನಾವಣೆ ಎದುರಾಗಲಿದೆ. ಬಡವರ ಬೇಡಿಕೆಗಳನ್ನು ಬೇಗನೆ ಈಡೇರಿಸದಿದ್ದರೆ ಮುಂದಿನ ಚುಣಾವಣೆಯಲ್ಲಿ ಮಾನೆಯವರಿಗೆ ತಿರುಗುಬಾಣವಾಗಲು ಸಾಧ್ಯತೆಗಳಿವೆ. ಜೊತೆಗೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗದೆ ಇರಬಹುದು. ಹಾನಗಲ್‌ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿತವಾಗಲು ಇದು ಸರಿಯಾದ ಸಮಯ.


ಇದನ್ನೂ ಓದಿರಿ: ರಾಜ್ಯ ಉಪಚುನಾವಣೆ ಫಲಿತಾಂಶ: ಸಿಂದಗಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...