Homeಕರ್ನಾಟಕಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

ಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

- Advertisement -
- Advertisement -

| ನಹುಷ |
ಉಡುಪಿ-ಚಿಕ್ಕಮಗಳೂರು ಲೋಕಾ ರಣರಂಗದಲ್ಲಿ ಬಿಜೆಪಿಯ ಕೂಗುಮಾರಿ ಬ್ರಾಂಡಿನ ಶೋಭಾ ಕರಂದ್ಲಾಜೆ ಮತ್ತ ಜೆಡಿಎಸ್ ವೇಷದ ಕಾಂಗ್ರೆಸಿಗ ಪ್ರಮೋದ್ ಮಧ್ವರಾಜ್ ನಡುವೆ ಮುಖಾಮುಖಿ ಹಣಾಹಣಿ ನಡೆದಿದೆ. ಜನದ್ರೋಹದಿಂದ ಹೆಸರು ಕೆಡಿಸಿಕೊಂಡಿರುವ ಶೋಭಕ್ಕ ಹೋದಹೋದಲ್ಲಿ ಕಾರಿಂದ ಇಳಿಯಲಿಕ್ಕೂ ಸಾಧ್ಯವಾಗುತ್ತಿಲ್ಲ. ಆಕೆಗೆ ದಿನಗಳೆದಂತೆ ಸಂಕಟ ಹೆಚ್ಚಾಗುತ್ತಲೇ ಇದೆ. ಪ್ರಮೋದ್ ತನ್ನ ರಾಯಲ್ ದೌಲತ್ತಿನ ಹಮ್ಮು ಅಹಂಕಾರ ಬಿಟ್ಟು ಸಂಪ್ರದಾಯಿಕ ಶತ್ರುಗಳಿಗೆಲ್ಲಾ ಶರಣಾಗುತ್ತ ಅಖಾಡದಲ್ಲಿ ಗಟ್ಟಿಗೊಳ್ಳುತ್ತಿದ್ದಾರೆ. ಶೋಭಕ್ಕನ ಮೇಲಿರುವ ತಾತ್ಸಾರವನ್ನು ಹಿಂದೂತ್ವದ ಅಮಲಿಂದ ತಪ್ಪಿಸಿ ತಂದು ಓಟು ಮಾಡಿಕೊಳ್ಳಬೇಕಾದ ಸವಾಲು ಮೈತ್ರಿಕೂಟಕ್ಕೆ ಎದುರಾಗಿದೆ.

ಶೋಭಕ್ಕನ ದುಃಸ್ಥಿತಿ ಕಂಡು ಆರೆಸೆಸ್ ಬೆಚ್ಚಿಬಿದ್ದಿದೆ. ಈಯಮ್ಮನ ಫೀಲ್ಡಿಗೆ ಕಳಿಸಬೇಡಿ ಎಂದು ಬಿಜೆಪಿ ಲೀಡರ್‍ಗಳಿಗೆ ಆರೆಸೆಸ್ ಸೂತ್ರದಾರಿಗಳು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ನಾವೇ ಗೆಲ್ಲಿಸಲು ಪ್ರಯತ್ನ ಮಾಡ್ತೇವೆ, ಆದರೆ ಆಕೆ ತೆರೆಮರೆಯಲ್ಲೇ ಇರಬೇಕು, ಆಕೆ ಕಂಡರೆ ಮತದಾರರಿಗೆ ಆಕ್ರೋಶ ಉಕ್ಕುತ್ತದೆಂದು ಚೆಡ್ಡಿ ಚತುರರು ಅಲವತ್ತು ಕೇಳುತ್ತಿದ್ದಾರೆ. ಹುಸಿ ಹಿಂದೂತ್ವದ ದೆಸೆಯಿಂದ ಕರಾವಳಿಯಲ್ಲಿ ಒಂಚೂರು ಶೋಭಕ್ಕನಿಗೆ ಬೆಂಬಲ ಇದೆಯಾದರೂ ಮಲೆನಾಡಿನ ಭಾಗದಲ್ಲಿ ಆಕೆಗೆ ಮಾನ-ಮರ್ಯಾದೆಯೇ ಇಲ್ಲ ಬಿಜೆಪಿಉ ಸೆಕೆಂಡ್ ಕಿಂಗ್ ಅಮಿತ್ ಶಾ ತೆಂಗಿಗೆ ರೇಟು ಏರಿಸಿದಂತೆ ಅಡಿಕೆಗೂ ಬಂಪರ್ ಬೆಲೆಬರುವಂತೆ ಮಾಡುತ್ತೇನೆಂದು ಮೋಸ ಮಾಡಿದ್ದು ಚಿಕ್ಕಮಗಳೂರು ಕಡೆಯ ತೋಟಗಾರರನ್ನು ಕೆರಳಿಸಿದೆ. ಅಡಿಕೆ-ಕರಿಮೆಣಸು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಬಿಜೆಪಿ ಅಂದರೆ ಬುಸುಗುಡುತ್ತಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿಟಿ.ರವಿ “ಈಕೆ ಮತ್ತೆ ಗೆದ್ದರೆ ನಮಗೆ ಉಳಿಗಾಲವಿಲ್ಲವೆಂದು ಹೇಳುತ್ತಿರುವುದು, ಅತ್ತ ಉಡುಪಿ ಭಾಗದ ರಘುಪತಿ ಭಟ್ಟ, ಸುನೀಲ್ ಕುಮಾರ್ ಶೋಭಕ್ಕ ಸೋತುಹೋಗಲೆಂದು ಒಳಗೊಳಗೇ ಹರಕೆ ಹೊರುತ್ತಿದ್ದಾರೆ. ಓಟು ಕೇಳುವ ನೈತಿಕ ಧೈರ್ಯ ಶೋಭಕ್ಕನಿಗೆ ಇಲ್ಲ, ಆಕೆ ಮೋದಿಗಾಗಿ ಮತ ಹಾಕಿ ಎನ್ನುತ್ತಿದ್ದಾರೆ. ಆರೆಸೆಸ್ ತಂಡ ಹಿಂದೂತ್ವ ಉದ್ದೀತನಕ್ಕೆ ಬಿಜೆಪಿಗೆ ಓಟು ಅನಿವಾರ್ಯವೆಂದು ಪ್ರಚಾರ ನಡೆಸಿದೆ. ಯಡ್ಡಿಯನ್ನು ಕುಣಿಸಲು ಶೋಭಕ್ಕನ ಗೆಲ್ಲಿಸಿಕೊಳ್ಳಬೇಕಾದ ದರ್ದು ಚೆಡ್ಡಿ ಚೆತುರರ ಕಾಡುತ್ತಿದೆ. ಕೇಸರಿ ಪಡೆ ಏನೇ ಹೇಳಿದರೂ ಕಟ್ಟರ್ ಭಜರಂಗಿಳು “ನೋಟಾ” ಒತ್ತುವ ಸಾಧ್ಯತೆಯೇ ಜಾಸ್ತಿ ನೋಟಾ ಹೆಚ್ಚಾದಂತೆ ಮೈತ್ರಿ ಅಭ್ಯರ್ಥಿಯ ಸೋಲಿನ ಸಾಧ್ಯತೆ ಕಮ್ಮಿಯಾಗುತ್ತದೆ.

ಮಜಾ ಎಂದರೆ, ಕಾಂಗ್ರೆಸ್‍ನಲ್ಲಿ ಒಳ ಹೊಡೆತಗಳ ಆಟವಿಲ್ಲ ಕಾಪುನಲ್ಲಿ ಮಾಜಿ ಸಚಿವ ಸೊರಕೆ, ಉಡುಪುಯಲ್ಲಿ ಮಾಜಿ ಎಮ್ಮೆಲ್ಲೆ ಸಭಾಪತಿ, ಕಾರ್ಕಳದಲ್ಲಿ ಮೊಯ್ಲಿ ಮುನಿಯಾಲ್ ಬಣ, ಮಲೆನಾಡಲ್ಲಿ ಜೆಡಿಎಸ್-ಕಾಂಗ್ರೆಸ್ ತಂಡ ಮೊದಲಿನ ಹೊಟ್ಟೆಕಿಚ್ಚು ಬಿಟ್ಟು ದುಡಿಯುತ್ತಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದ ವೇಗವೀರರು ಸ್ವಜಾತಿ ಪ್ರಮೋದ್ ಪರ ಏಕಗಂಟಲ್ಲಿ ಓಟು ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಘಟ್ಟದ ಮೇಲಿನ ಒಕ್ಕಲಿಗರ ಮತಕ್ಕಾಗಿ ದೇವೇಗೌಡ-ಕುಮಾರಣ್ಣ ಸ್ಟ್ರೇಟಜಿ ಹೆಣೆಯುತ್ತಿದ್ದಾರೆ. ಶೋಭಕ್ಕನ ಪರವಾಗಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟ ಒಬ್ಬರ ಬಿಟ್ಟರೆ ಉಳಿದ ಎಮ್ಮೆಲ್ಲೆಗಳು ಮೊದಲಿನ ನಿಷ್ಠೆ-ನಿಯತ್ತು ತೋರಿಸುತ್ತಿಲ್ಲ. ಹೀಗಾಗಿ ಶೋಭಕ್ಕನಿಗೆ ಬಿಜೆಪಿ ಓಟ್ ಬ್ಯಾಂಕಿನ ಶೇ.25-30 ಮತ ಖೋತಾ ಆಗುವ ಲೆಕ್ಕಾಚಾರ ನಡೆದಿದೆ. ಮೈತ್ರಿ ಕೂಟ ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಪಡೆದ ಅಷ್ಟೂ ಮತ ಪಡೆದರೂ ಸಾಕು, ಗೆಲುವಿನ ಛಾನ್ಸ್‍ನ ಗ್ರಾಫ್ಟ್ ಏರಿಕೆಯಾಗುತ್ತದೆ.

ಶೋಭಕ್ಕನಿಗೆ ಮೋದಿ ಮಂಕು ಬೂದಿ ಬಿಟ್ಟರೆ ಮತ್ತ್ಯಾವ ಪ್ಲಸ್ ಪಾಯಿಂಟ್ ಇಲ್ಲ. ಸುಳ್ಯ ಕಡೆಯ ಆಕೆಗಿಲ್ಲ, ಸ್ವಜಾತಿ ಮತ ಬಾಂಧವರೂ ಇಲ್ಲ! ಕರಾವಳಿಯ ಬಿಲ್ಲವರು ಮತ್ತು ಬಂಟರಿಗೆ ಸಂಘಪರಿವಾರದ ಹಿಂದೂತ್ವದ ಅಸಲೀ ಆಟದ ಹಿಕಮತ್ತು ಶೂದ್ರರಿಗೆಷ್ಟು ಗಂಡಾಂತರಕಾರಿ ಎಂಬುದು ಅರ್ಥವಾಗಿದೆ. ಬಿಲ್ಲವರು ಪಾಪದ ಹುಡುಗರು ಹಿಂದೂತ್ವದ ಹೆಸರಲ್ಲಿ ಜೈಲು ಪಾಲಾಗಿರುವ ಕರುಣಾ ಕತೆ ಆ ಜಾತಿಯ ಹಿರಿಯರ ಕಣ್ಣು ತೆರೆಸಿದರೆ ಮೈತ್ರಿಕೂಟದ ಗೆಲುವು ಇನ್ನಷ್ಟು ನಿಚ್ಚಳವಾಗುತ್ತದೆ. ಫೋಟೋ ಫಿನಿಶ್ ಫಲಿತಾಂಶ ಉಡುಪಿ-ಚಿಕ್ಕಮಗಳೂರು ಈ ಬಾರಿ ಕೊಡುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...