- Advertisement -
- Advertisement -
ಆಂಧ್ರಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್ ಪಕ್ಷ ಭಾರೀ ಗೆಲುವಿನ ಹಾದಿಯಲ್ಲಿದೆ.
ಭಾನುವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಿದ್ದು, ವೈಎಸ್ ಆರ್ ಕಾಂಗ್ರೆಸ್ 8 ಮಹಾನಗರಪಾಲಿಕೆಗಳು, 61 ನಗರಸಭೆಗಳು ಹಾಗೂ ನಗರ ಪಂಚಾಯತ್ ಗಳಲ್ಲಿ ಮುನ್ನಡೆಯಲ್ಲಿದೆ. ತೆಲುಗು ದೇಶಂ ಪಕ್ಷ(ಟಿಡಿಪಿ)ಮೂರರಲ್ಲಿ ಮುನ್ನಡೆ ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಬೆಳಗ್ಗೆ 10:30ರ ತನಕ ಶೂನ್ಯ ಸಾಧನೆ ಮಾಡಿವೆ.
ವಿಶಾಖಪಟ್ಟಣಂ, ಗುಂಟೂರು ಮತ್ತು ವಿಜಯವಾಡ ಸೇರಿದಂತೆ 12 ಮಹಾನಗರ ಪಾಲಿಕೆಗಳು ಮತ್ತು 71 ಪುರಸಭೆಗಳು ಮತ್ತು ನಗರ ಪಂಚಾಯಿತಿಗಳಿಗೆ ಮಾರ್ಚ್ 10 ರಂದು ಮತದಾನ ನಡೆದಿತ್ತು.
ಅಪ್ಡೇಟ್ಸ್‌ಗಳಿಗಾಗಿ ನಿರೀಕ್ಷಿಸಿ…
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನಗೆ ರಕ್ಷಣೆ ಕೊಡಿ ಎಂದ ಯುವತಿ – ವೀಡಿಯೋ ವೈರಲ್


