Homeಮುಖಪುಟಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯರನ್ನು ಅಪ್ಪಿಕೊಳ್ಳುವುದು ಅಪರಾಧವಲ್ಲ: ನ್ಯಾಯಾಲಯದಲ್ಲಿ ಬ್ರಿಜ್‌ಭೂಷಣ್ ಹೇಳಿಕೆ

ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯರನ್ನು ಅಪ್ಪಿಕೊಳ್ಳುವುದು ಅಪರಾಧವಲ್ಲ: ನ್ಯಾಯಾಲಯದಲ್ಲಿ ಬ್ರಿಜ್‌ಭೂಷಣ್ ಹೇಳಿಕೆ

- Advertisement -
- Advertisement -

ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ಅಪ್ಪಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಬುಧವಾರ ದೆಹಲಿ ನ್ಯಾಯಾಲಯದಲ್ಲಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ಮುಂದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಮ್ಮ ಮೇಲಿನ ಆರೋಪಗಳ ಕುರಿತು ವಾದ ಮಾಡುವ ವೇಳೆ ಬ್ರಿಜ್‌ಭೂಷಣ್ ಈ ವಿಷಯ ತಿಳಿಸಿದ್ದಾರೆ.

”ಕುಸ್ತಿಯಲ್ಲಿ ಅಂತಹ ಒಂದು ಘಟನೆ ನಡೆದಿದೆ. ಈ ಕ್ರೀಡಯಲ್ಲಿ ಹೆಚ್ಚಾಗಿ ತರಬೇತುದಾರರು ಪುರುಷರೇ ಇರುತ್ತಾರೆ. ಮಹಿಳಾ ಕೋಚ್‌ಗಳಿರುವುದು ಅಪರೂಪ. ಕೋಚ್, ಸಂತೋಷದಿಂದ, ಸಾಧನೆಯ ನಂತರ, ಆಟಗಾರನನ್ನು ತಬ್ಬಿಕೊಂಡರೆ, ಅದು ಅಪರಾಧದ ವರ್ಗಕ್ಕೆ ಬರುವುದಿಲ್ಲ” ಎಂದು ಸಿಂಗ್ ಅವರನ್ನು ಪ್ರತಿನಿಧಿಸುವ ವಕೀಲ ರಾಜೀವ್ ಮೋಹನ್ ನ್ಯಾಯಾಲಯಕ್ಕೆ ತಿಳಿಸಿದರು.

ದೆಹಲಿಯ ಸಿರಿ ಫೋರ್ಟ್‌ನಲ್ಲಿ ಮಹಿಳಾ ಕುಸ್ತಿಪಟುವಿಗೆ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಮೋಹನ್ ಉಲ್ಲೇಖಿಸಿ, ”ತನ್ನ ಕ್ಲೈಂಟ್ ಯಾವುದೇ ಲೈಂಗಿಕ ಉದ್ದೇಶವನ್ನು ಹೊಂದಿರಲಿಲ್ಲ, ಆ ಘಟನೆಯು ಕೇವಲ ಅಪ್ಪಿಕೊಳ್ಳುವಿಕೆಯನ್ನು ಒಳಗೊಂಡಿತ್ತು” ಎಂದು ಅವರು ಹೇಳಿದ್ದಾರೆ.

ಕೆಲವು ಪ್ರಕರಣಗಳು ದೆಹಲಿ ನ್ಯಾಯಾಲಯದ ವ್ಯಾಪ್ತಿಯ ಹೊರಗೆ ನಡೆದಿವೆ ಎಂದು ಆರೋಪಿಸಲಾಗಿದೆ. ಇನ್ನೂ ಕೆಲವು ಆರೋಪಗಳು ಭಾರತದ ಹೊರಗೆ ನಡೆದಿವೆ ಎಂದು ಹೇಳಲಾದ ಘಟನೆಗಳಿಗೆ ಸಂಬಂಧಿಸಿವೆ ಮತ್ತು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ನ್ಯಾಯಾಲಯದಿಂದ ವಿಚಾರಣೆ ನಡೆಸಲಾಗುವುದಿಲ್ಲ ಎಂದು ಎಂದು ಮೋಹನ್ ವಾದಿಸಿದರು.

”ಲೈಂಗಿಕ ಕಿರುಕುಳವು ಕ್ಷಣಿಕ ಅಪರಾಧವಾಗಿದೆ ಮತ್ತು ಮುಂದುವರೆಯುವ ಅಪರಾಧವಲ್ಲ” ಎಂದು ಸಿಂಗ್ ಪರ ವಕೀಲರು ವಾದಿಸಿದರು.

ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ಗುರುವಾರ ನಡೆಸಲಿದೆ.

ಜುಲೈ 20ರಂದು, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಸಿಂಗ್ ಜಾಮೀನು ಪಡೆದರು. ದೂರುದಾರರು ಅಥವಾ ಸಾಕ್ಷಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕಬಾರದು ಮತ್ತು ಅನುಮತಿಯಿಲ್ಲದೆ ದೇಶವನ್ನು ತೊರೆಯಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಬಿಜೆಪಿ ಸಂಸದರೂ ಆಗಿರುವ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥರ ವಿರುದ್ಧ ಆರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಮತ್ತು ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಜನವರಿಯಲ್ಲಿ ಸಿಂಗ್ ವಿರುದ್ಧ ಮೊದಲು ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಪ್ರಕರಣದ ತನಿಖೆಗಾಗಿ ಕ್ರೀಡಾ ಸಚಿವಾಲಯ ರಚಿಸಿದ್ದ ಮೇಲ್ವಿಚಾರಣಾ ಸಮಿತಿಯು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಪ್ರತಿಭಟನೆ ಪುನರಾರಂಭವಾಯಿತು.

ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ನಂತರವೇ ದೆಹಲಿ ಪೊಲೀಸರು ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಜೂನ್ 15ರಂದು ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: ಬ್ರಿಜ್ ಭೂಷಣ್‌ಗೆ ಜಾಮೀನು ನೀಡುವುದನ್ನು ದೆಹಲಿ ಪೊಲೀಸರೇಕೆ ವಿರೋಧಿಸಲಿಲ್ಲ? – ಸಂಸದೆ ಮಹುವ ಮೊಯಿತ್ರ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಸರ್ಕಾರ ರಚನೆಗೆ ‘ಇಂಡಿಯಾ ಮೈತ್ರಿಕೂಟ’ಕ್ಕೆ ಟಿಎಂಸಿಯಿಂದ ಬಾಹ್ಯ ಬೆಂಬಲ: ಮಮತಾ ಬ್ಯಾನರ್ಜಿ

0
ಕೇಂದ್ರದಲ್ಲಿ ಸರ್ಕಾರ ರಚಿಸಲು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ತಮ್ಮ ಪಕ್ಷವು ಬಾಹ್ಯ ಬೆಂಬಲ ನೀಡಲಿದೆ ಪ.ಬಂಗಾಳ ಸಿಎಂ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಹೂಗ್ಲಿಯ ಚಿನ್ಸುರಾದಲ್ಲಿ ನಡೆದ ಚುನಾವಣಾ...