Homeಮುಖಪುಟಬ್ರಿಜ್ ಭೂಷಣ್‌ಗೆ ಜಾಮೀನು ನೀಡುವುದನ್ನು ದೆಹಲಿ ಪೊಲೀಸರೇಕೆ ವಿರೋಧಿಸಲಿಲ್ಲ? - ಸಂಸದೆ ಮಹುವ ಮೊಯಿತ್ರ ಪ್ರಶ್ನೆ

ಬ್ರಿಜ್ ಭೂಷಣ್‌ಗೆ ಜಾಮೀನು ನೀಡುವುದನ್ನು ದೆಹಲಿ ಪೊಲೀಸರೇಕೆ ವಿರೋಧಿಸಲಿಲ್ಲ? – ಸಂಸದೆ ಮಹುವ ಮೊಯಿತ್ರ ಪ್ರಶ್ನೆ

- Advertisement -
- Advertisement -

ಖ್ಯಾತ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಮತ್ತು ಕುಸ್ತಿ ಫೆಡರೆಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್‌ಗೆ ಜಾಮೀನು ನೀಡುವುದನ್ನು ದೆಹಲಿ ಪೊಲೀಸರೇಕೆ ವಿರೋಧಿಸಲಿಲ್ಲ ಎಂದು ಟಿಎಂಸಿ ಸಂಸದೆ ಮಹುವ ಮೊಯಿತ್ರ ಪ್ರಶ್ನಿಸಿದ್ದಾರೆ.

“ದೆಹಲಿ ಪೊಲೀಸರು ಜಾಮೀನನ್ನು ವಿರೋಧಿಸಲಿಲ್ಲ. ಲೈಂಗಿಕ ಕಿರುಕುಳ ಮತ್ತು ಹಲ್ಲೆಗಾಗಿ ಜಾಮೀನು ಪಡೆದ ನಂತರ ವಿಜಯೋತ್ಸವ ಮತ್ತು ಸಂಭ್ರಮದಿಂದ ಆರೋಪಿ ಬಿಜೆಪಿ ಸಂಸದ ನಿನ್ನೆ ಸಂಸತ್ತಿಗೆ ಪ್ರವೇಶಿಸಿದ್ದು ಹೀಗೆ.. ಮೌನ ಗುರು ಗೌರವಾನ್ವಿತ ಪ್ರಧಾನಮಂತ್ರಿಗಳೆ, ದಯವಿಟ್ಟು ಈ ಚಿತ್ರವನ್ನು ನೋಡಿ ಕುಸ್ತಿಪಟುಗಳಿಗೆ ಹೇಗೆ ಅನಿಸುತ್ತದೆ ಎಂದು ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ” ಎಂದು ಬ್ರಿಜ್ ಭೂಷಣ್ ಮಾನ್ಸೂನ್ ಅಧಿವೇಶನಕ್ಕಾಗಿ ಸಂಸತ್ತಿಗೆ ಬಂದ ಫೋಟೊವನ್ನು ಮೊಯಿತ್ರ ಟ್ವೀಟ್ ಮಾಡಿದ್ದಾರೆ.

ಗುರುವಾರ ಜಾಮೀನು ಪಡೆಯುತ್ತಲೇ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಹಾಜರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ನಗುತ್ತಲೇ ಕಾರು ಹತ್ತಿ ಹೋಗಿದ್ದರು. ಆ ಫೋಟೊವನ್ನು ಹಂಚಿಕೊಂಡಿರುವ ಮಹುವ ಮೊಯಿತ್ರ ಈ ಫೋಟೊ ನೋಡಿದ ಸಂತ್ರಸ್ತ ಕುಸ್ತಿಪಟುಗಳಿಗೆ ಎಷ್ಟು ನೋವಾಗಿರಬೇಡ ಎಂದಿದ್ದಾರೆ.

ಆಲ್ಟ್‌ನ್ಯೂಸ್ ಸಂಸ್ಥಾಪಕ ಪ್ರತೀಕ್ ಸಿನ್ಹಾ ಸಹ ದೆಹಲಿ ಪೊಲೀಸರ ನಡೆಯನ್ನು ವಿರೋಧಿಸಿದ್ದಾರೆ. “ಮೊಹಮ್ಮದ್ ಜುಬೇರ್ ಪ್ರಕರಣದಲ್ಲಿ ಅದು ಸಹ 1983ರ ಸಿನಿಮಾದಲ್ಲಿನ ದೃಶ್ಯವೊಂದನ್ನು ರಾಜಕೀಯ ವಿಡಂಬನೆಯ ಕಾರಣಕ್ಕೆ ಟ್ವೀಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ದೆಹಲಿ ಪೊಲೀಸರು ಅವರ ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೆ ಬ್ರಿಜ್ ಭೂಷಣ್ ಪ್ರಕರಣದಲ್ಲಿ ಹಲವಾರು ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪವಿದ್ದರೂ ಸಹ ಅವರಿಗೆ ಕೋರ್ಟ್ ಜಾಮೀನು ನೀಡುವಂತಹ ಸುಲಭ ಮಾರ್ಗವನ್ನು ಆಯ್ದುಕೊಂಡರು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರ ನಿರ್ದೇಶನದ ಮೇರೆಗೆ ಅವರು ಬ್ರಿಜ್ ಭೂಷಣ್‌ರವರ ಜಾಮೀನು ಅರ್ಜಿಯನ್ನು ವಿರೋಧಿಸಲಿಲ್ಲ ಎಂದು ಹಲವರು ದೂರಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್‌ಭೂಷಣ್ ಸಿಂಗ್‌ಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...