Homeಅಂತರಾಷ್ಟ್ರೀಯ‘ಜಾತಿ ಸಮಾನತೆ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯ’ ಎಂದ ಉದ್ಯೋಗಿಗಳು: ದಲಿತ ಹೋರಾಟಗಾರ್ತಿಯ ಭಾಷಣ ರದ್ದು...

‘ಜಾತಿ ಸಮಾನತೆ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯ’ ಎಂದ ಉದ್ಯೋಗಿಗಳು: ದಲಿತ ಹೋರಾಟಗಾರ್ತಿಯ ಭಾಷಣ ರದ್ದು ಮಾಡಿದ ಗೂಗಲ್!

ಗೂಗಲ್‌ ಜಾತಿ ಧರ್ಮಾಂಧತೆ ಮತ್ತು ಕಿರುಕುಳವನ್ನು ಅತಿರೇಕವಾಗಿ ನಡೆಸಲು ಅವಕಾಶ ಮಾಡಿಕೊಟ್ಟಿದೆ ತೆನ್ಮೋಳಿ ಸೌಂದರರಾಜನ್ ಅವರ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ

- Advertisement -
- Advertisement -

“ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ” ಎಂದು ಹೇಳಿಕೊಂಡ ಉದ್ಯೋಗಿಗಳ ಒತ್ತಡಕ್ಕೆ ಮಣಿದು ಅಮೆರಿಕಾ ಮೂಲದ ದಲಿತ ಹೋರಾಟಗಾರ್ತಿ “ತೆನ್ಮೋಳಿ ಸೌಂದರರಾಜನ್’’ ಅವರ ನಿಗದಿತ ಭಾಷಣವನ್ನು ಗೂಗಲ್ ರದ್ದುಮಾಡಿದೆ. ಕಂಪನಿಯ ಡೈವರ್ಸಿಟಿ ಇಕ್ವಿಟಿ ಇನ್ಕ್ಲೂಸಿವಿಟಿ (DEI) ಕಾರ್ಯಕ್ರಮದ ಭಾಗವಾಗಿ ಉದ್ಯೋಗಿಗಳ ಸಂವೇದನಾಶೀಲತೆಗಾಗಿ ಅವರು ಈ ಭಾಷಣವನ್ನು ಮಾಡಬೇಕಾಗಿತ್ತು.

ಈಕ್ವಾಲಿಟಿ ಲ್ಯಾಬ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ತೆನ್ಮೋಳಿ ಅವರನ್ನು ‘‘ಹಿಂದೂ ಫೋಬಿಕ್’’ ಮತ್ತು “ಹಿಂದೂ ವಿರೋಧಿ” ಎಂದು ಕರೆದಿರುವ ಗೂಗಲ್‌ನ ಉದ್ಯೋಗಿಗಳ ಗುಂಪುಗಳು ಕಂಪನಿಯ ಇಂಟ್ರಾನೆಟ್ ಮೂಲಕ ಸಾಮೂಹಿಕ ಇಮೇಲ್‌ಗಳನ್ನು ಕಳುಹಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಬಹಿರಂಗಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಂದುತ್ವ ಪರ ಗುಂಪುಗಳ ಅಪಪ್ರಚಾರದಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ. ಗೂಗಲ್‌ನ ಹಿರಿಯ ಮ್ಯಾನೇಜರ್ ತನುಜಾ ಗುಪ್ತಾ ಅವರು ತೆನ್ಮೋಳಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದ್ದನ್ನು ವಿರೋಧಿಸಿ ಗೂಗಲ್‌ನಿಂದ ಹೊರಬಂದ ನಂತರ ಈ ಸಮಸ್ಯೆಯು ಮತ್ತಷ್ಟು ಬಿಗಡಾಯಿಸಿತ್ತು.

ಇದನ್ನೂ ಓದಿ: ಉತ್ತರಾಖಾಂಡ್‌: ದಲಿತ ಮಹಿಳೆ ಬೇಯಿಸಿದ ಆಹಾರ ಸೇವಿಸಲು ಮತ್ತೆ ನಿರಾಕರಿಸಿದ ಸವರ್ಣೀಯ ವಿದ್ಯಾರ್ಥಿಗಳು

ತೇನ್ಮೋಳಿ ಅವರ ಭಾಷಣವನ್ನು ವಿರೋಧಿಸಿರುವ ಗೂಗಲ್ ಉದ್ಯೋಗಿಗಳು ‘‘ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ’’ ಎಂದು ಹೇಳಿದ್ದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. 8,000 ಜನರಿರುವ ದಕ್ಷಿಣ ಏಷ್ಯಾದ ಉದ್ಯೋಗಿಗಳ ಗುಂಪಿಗೆ ಮೇಲ್ ಹೋಗಿದೆ ಎಂದು ವರದಿ ಹೇಳಿದೆ.

ಕಾರ್ಯಕ್ರಮವನ್ನು ರದ್ದು ಮಾಡಿದ ನಂತರ ತನುಜಾ ಗುಪ್ತಾ ಅವರು ಅರ್ಜಿಯ ಲಿಂಕ್ ಅನ್ನು ಮತ್ತೊಮ್ಮೆ ಪೋಸ್ಟ್ ಮಾಡಿದಾಗ, ಗ್ರೂಪ್‌ನಲ್ಲಿರುವ ಜನರು ‘ಅಮೆರಿಕದಲ್ಲಿ ಜಾತಿ ಇಲ್ಲ, ಜಾತಿ ತಾರತಮ್ಯ ಅಸ್ತಿತ್ವದಲ್ಲಿಲ್ಲ, ತುಳಿತಕ್ಕೊಳಗಾದ ಜಾತಿಗಳ ಜನರು ಕಡಿಮೆ ವಿದ್ಯಾವಂತರು’ ಸೇರಿದಂತೆ ಹಲವು ಚರ್ಚೆಗಳನ್ನು ನಡೆಸಿದ್ದಾರೆ ಎಂದು ವಾಶಿಂಗ್ಟನ್‌ ಪೋಸ್ಟ್‌ ತನ್ನ ವರದಿಯಲ್ಲಿ ಹೇಳಿದೆ. ಭಾರತದ ಮೀಸಲಾತಿ ವ್ಯವಸ್ಥೆಯು ‘ಮೇಲ್ಜಾತಿಗಳ ವಿರುದ್ಧ ಹಿಮ್ಮುಖ ತಾರತಮ್ಯ’ ಎಂದು ಅವರು ಕರೆದಿದ್ದಾರೆ ಎಂದು ವರದಿ ಹೇಳಿದೆ.

ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಾದ್ಯಂತ ಘಟಕಗಳನ್ನು ಹೊಂದಿರುವ ಅಂಬೇಡ್ಕರ್‌ವಾದಿಗಳ ಸಂಘದ (AANA) ಅಧ್ಯಕ್ಷರಾಗಿರುವ ತೇನ್ಮೋಳಿ ಅವರು ಜಾಗತಿಕವಾಗಿ ಗುರುತಿಸಲ್ಪಟ್ಟ ಜಾತಿ ವಿರೋಧಿ ಹೋರಾಟಗಾರ್ತಿಯಾಗಿದ್ದು, ದಕ್ಷಿಣ ಏಷ್ಯಾದಲ್ಲಿನ ಜಾತಿ ತಾರತಮ್ಯವನ್ನು ಅಂತರರಾಷ್ಟ್ರೀಯ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್

ಗೂಗಲ್‌ನ ನಡೆಯನ್ನು ವಿರೋಧಿಸಿರುವ ತೇನ್ಮೋಳಿ, “ಗೂಗಲ್‌ ಕಾನೂನು ಬಾಹಿರವಾಗಿ ಜಾತಿ ಇಕ್ವಿಟಿಯ ಬಗ್ಗೆ ಮಾತನಾಡುವುದನ್ನು ರದ್ದುಗೊಳಿಸಿದೆ. ಅದರ ಕ್ರಮಗಳು ತನ್ನ ಉದ್ಯೋಗಿಗಳಿಗೆ ಮತ್ತು ನನ್ನ ಕಡೆಗೆ ಎಷ್ಟು ಆಘಾತಕಾರಿ ಮತ್ತು ತಾರತಮ್ಯದಿಂದ ಕೂಡಿವೆ ಎಂಬುದನ್ನು ವ್ಯಕ್ತಪಡಿಸಲು ನನಗೆ ಪದಗಳು ಸಿಗುತ್ತಿಲ್ಲ. ಈ ದಾಳಿಗಳು ಸಂಭವಿಸಲು ಮತ್ತು ಮುಂದುವರೆಯಲು ಅನುವು ಮಾಡಿಕೊಡುವ ತನ್ನ ಉದ್ಯೋಗಿಗಳ ಜಾತೀಯತೆಯನ್ನು ಗೂಗಲ್ ಪರಿಹರಿಸಬೇಕು” ಎಂದು ಹೇಳಿದ್ದಾರೆ.

ಏಪ್ರಿಲ್ 18ರ ‘ದಲಿತ ಇತಿಹಾಸ ಮಾಸ’ದ ಅಂಗವಾಗಿ ತೇನ್ಮೋಳಿ ಅವರು ಈ ಭಾಷಣವನ್ನು ನೀಡಲು ನಿರ್ಧರಿಸಿದ್ದರು ಆದರೆ ಅದನ್ನು ಮುಂದೂಡಲಾಗಿದೆ ಎಂದು ಮೊದಲಿಗೆ ತಿಳಿಸಲಾಗಿತ್ತು. ಈ ಬೆಳವಣಿಗೆಯಿಂದ ತಾನು ತೊಂದರೆಗೀಡಾಗಿದ್ದು, ತನ್ನ ಮಾತುಗಳು ಗೂಗಲ್‌‌ನ ಉದ್ಯೋಗಿಗಳಿಗೆ ಸಮಸ್ಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ನಂತರ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದ್ದರು.

“ಜಾತಿ ತಾರತಮ್ಯವನ್ನು ಗುರುತಿಸಲಾಗದಿದ್ದರೆ ಅದು ವ್ಯಾಪಾರಕ್ಕೆ ಕೆಟ್ಟದು ಮಾಡುತ್ತದೆ. ಇದು ಕೆಲಸದ ಸ್ಥಳಗಳನ್ನು ಅಸುರಕ್ಷಿತ ಮತ್ತು ಪ್ರತಿಕೂಲವಾಗಿಸುತ್ತದೆ. ಗೂಗಲ್‌ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ, ದಲಿತರು ಕನಿಷ್ಠ 25 ರಿಂದ 30% ಮಾರುಕಟ್ಟೆಯನ್ನು ಹೊಂದಿದ್ದಾರೆ” ಎಂದು ಅವರು ಪಿಚೈಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಬ್ರಿಟನ್‌ನ ಮೊದಲ ದಲಿತ ಮಹಿಳಾ ಮೇಯರ್ ಆಗಿ ಮೊಹಿಂದರ್ ಮಿಧಾ ಆಯ್ಕೆ

ಆದಾಗ್ಯೂ, ಉದ್ಯೋಗಿಗಳ ಗುಂಪಿನ ಪ್ರತಿರೋಧದಿಂದಾಗಿ ಅವರ ಭಾಷಣವನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ತನುಜಾ ಗುಪ್ತಾ ಅವರು ತೇನ್ಮೋಳಿ ಅವರ ಭಾಷಣವನ್ನು ಸಂಘಟಿಸಲು ಸಹಕರಿಸುತ್ತಿದ್ದ ಗೂಗಲ್ ಉದ್ಯೋಗಿಯನ್ನು ಗುರಿ ಮಾಡಲಾಗಿದೆ.

ತೇನ್ಮೋಳಿ ಅವರ ಭಾಷಣವನ್ನು ರದ್ದು ಮಾಡಿರುವುದನ್ನು ‘ಈಕ್ವಾಲಿಟಿ ಲ್ಯಾಬ್ಸ್’ ಖಂಡಿಸಿದ್ದು, ಗೂಗಲ್‌ನ ಈ ವರ್ತನೆಯು ಜಾತಿವಾದಿಯಾಗಿದೆ ಎಂದು ಬಣ್ಣಿಸಿದೆ. ಗೂಗಲ್‌ನ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಉಪಕ್ರಮದ ನ್ಯಾಯಸಮ್ಮತತೆಯನ್ನು ಅದು ಪ್ರಶ್ನಿಸಿದ್ದು, “ಗೂಗಲ್‌ ಜಾತಿ ಧರ್ಮಾಂಧತೆ ಮತ್ತು ಕಿರುಕುಳವನ್ನು ಅತಿರೇಕವಾಗಿ ನಡೆಸಲು ಅವಕಾಶ ಮಾಡಿಕೊಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮನುವಾದಿಗಳು ಪ್ರಬಲರಾಗುತ್ತಿರುವುದಕ್ಕೆ ಇದೊಂದು ಉದಾಹರಣೆ.

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...