ರಾಜ್ ಕುಂದ್ರಾ ಬಂಧನದ ಬಳಿಕ ವಿಚಾರಣೆಗೆ ಹಾಜರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ‘ಹಾಟ್‌ಶಾಟ್’ ಆಪ್‌ಗಳಲ್ಲಿನ ವಿಷಯದ ಬಗ್ಗೆ ತಿಳಿದಿಲ್ಲ. ಶೃಂಗಾರವು ಅಶ್ಲೀಲತೆಗಿಂತ ವಿಭಿನ್ನವಾದದ್ದು, ನನ್ನ ಪತಿ ನಿರಪರಾಧಿ ಎಂದಿದ್ದಾರೆ.
ಅಶ್ಲೀಲ ಚಿತ್ರಗಳನ್ನು ತಯಾರಿಸಿ ಅವುಗಳನ್ನು ಆ್ಯಪ್‌ಗಳ ಮೂಲಕ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಿರುವ ಮುಂಬೈ ಪೊಲೀಸರು, ಆಪ್‌ಗಳ ಮೂಲಕ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದ ಬಗ್ಗೆ ಶಿಲ್ಪಾ ಶೆಟ್ಟಿಗೆ ತಿಳಿದಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಉತ್ತರಿಸಿರುವ ಅವರು, ನನಗೆ ಆಪ್‌ನಲ್ಲಿರುವ ವಿಷಯಗಳ ಬಗ್ಗೆ ನಿಖರವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಶೃಂಗಾರ ಮತ್ತು ಅಶ್ಲೀಲತೆ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಒತ್ತಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಮುಂಬೈ ಪೊಲೀಸ್ ಮೂಲಗಳ ಪ್ರಕಾರ, ಶಿಲ್ಪಾ ತನ್ನ ಪತಿ ರಾಜ್ ಕುಂದ್ರಾ ನಿರಪರಾಧಿ ಎಂದು ಅಪರಾಧ ವಿಭಾಗ ಪೋಲಿಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಾಟ್‌ಶಾಟ್‌ಗಳ ಅಪ್ಲಿಕೇಶನ್ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ, ತನ್ನ ಪತಿ ರಾಜ್ ಕುಂದ್ರಾ ಯಾವುದೇ ರೀತಿಯ ಅಶ್ಲೀಲ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ
Shilpa Shetty said that she wasn't aware of the exact content of HotShots. She claimed that she has nothing to do with HotShots. She mentioned that erotica is different from porn & her husband Raj Kundra wasn't involved in producing porn content: Mumbai Police Sources
(File pic) pic.twitter.com/zNJSdzD4U7
— ANI (@ANI) July 24, 2021
ಜೊತೆಗೆ ಆ್ಯಪ್‌ನಲ್ಲಿ ಭಾಗಿಯಾಗಿದ್ದ ಲಂಡನ್ ಮೂಲದ ರಾಜ್ ಕುಂದ್ರಾ ಅವರ ಸೋದರ ಮಾವ ಪ್ರದೀಪ್ ಬಕ್ಷಿ ಈ ಪ್ರಕರಣದ ಆರೋಪಿ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ಎಎನ್‌ಐಗೆ ತಿಳಿಸಿವೆ.
ರಾಜ್ ಕುಂದ್ರಾ ಅವರನ್ನು ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಅವರಿಂದ 48 ಟಿಬಿ ಮೌಲ್ಯದ ಚಿತ್ರಗಳು ಮತ್ತು ವಿಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ವಯಸ್ಕರ ಚಿತ್ರಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೆಸ್ ಬ್ಯಾಂಕ್‌ನಲ್ಲಿರುವ ರಾಜ್ ಕುಂದ್ರಾ ಅವರ ಖಾತೆಯಿಂದ ಯುನೈಟೆಡ್ ಬ್ಯಾಂಕ್ ಆಫ್ ಆಫ್ರಿಕಾದಲ್ಲಿ ಒಂದು ವಹಿವಾಟು ನಡೆದಿದೆ. ಅಶ್ಲೀಲ ವಿಷಯದ ಮಾರಾಟದಿಂದ ಬಂದ ಹಣವನ್ನು ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ನು ರಾಜ್ ಕುಂದ್ರಾ ಅವರ ವಕೀಲ ಅಬದ್ ಪೋಂಡಾ, ಪೊಲೀಸರು ವಶಪಡಿಸಿಕೊಂಡಿರುವ ಚಿತ್ರಗಳು ಮತ್ತು ವಿಡಿಯೊಗಳನ್ನು ‘ಅಶ್ಲೀಲತೆ’ ಎಂದು ವರ್ಗೀಕರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಇದೇ ರೀತಿಯ ಕಂಟೆಂಟ್ ಲಭ್ಯವಿರುವುದರಿಂದ, ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಅಶ್ಲೀಲತೆ ವಿಷಯ ಬರಲು ಸಾಧ್ಯವಿಲ್ಲ ಎಂದು ವಕೀಲ ಅಬದ್ ಪೋಂಡಾ ಹೇಳಿದ್ದಾರೆ.
ಫೆಬ್ರವರಿ 4 ರಂದು ಮುಂಬೈನ ಉಪನಗರ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ಪೊಲೀಸರಿಗೆ ರಾಜ್ ಕುಂದ್ರಾ ವಿರುದ್ದ, ಉದ್ಯೋಗದ ಭರವಸೆ ನೀಡಿದ ನಂತರ ಅಶ್ಲೀಲ ಚಿತ್ರವೊಂದರಲ್ಲಿ ಭಾಗವಹಿಸಲು ಒತ್ತಾಯಿಸಲಾಯಿತು ಎಂದು ಆರೋಪ ಮಾಡಿದ ನಂತರ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳಿಂದ ಪ್ರತಿದಿನ 6 ರಿಂದ 8 ಲಕ್ಷ ಗಳಿಸುತ್ತಿದ್ದರು: ಮುಂಬೈ ಪೊಲೀಸರು


