ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮತಯಂತ್ರಗಳನ್ನು ಇಟ್ಟಿದ್ದ ಕೇಂದ್ರದಿಂದ ಮತಯಂತ್ರಗಳನ್ನು ಕಳವು ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷ ಮಂಗಳವಾರ ಆರೋಪಿಸಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ವಾರಣಾಸಿಯ ಹಿರಿಯ ಆಡಳಿತ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ತರಬೇತಿ ಇವಿಎಂಗಳ ಸಾಗಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕುರಿತು ವಾರಣಾಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಕೆ. ಸಿಂಗ್ ವಿರುದ್ಧ ಕ್ರಮಕ್ಕೆ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ ತಿಳಿಸಿವೆ. ನಿನ್ನೆ ಆಗಿರುವ ತಪ್ಪನ್ನು ನಗರ ಪೊಲೀಸ್ ಕಮಿಷನರ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಗೋವಾ: ಅಧಿಕಾರಕ್ಕಾಗಿ ಟಿಎಂಸಿ ಮಿತ್ರ ಪಕ್ಷ ಎಂಜಿಪಿ ಜೊತೆ ಚರ್ಚೆ ಆರಂಭಿಸಿದ ಬಿಜೆಪಿ!
ಎನ್.ಕೆ. ಸಿಂಗ್ ಅವರ ಮೇಲಾಧಿಕಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರು ಇಂದು ನೀಡಿರುವ ಹೇಳಿಕೆಯಲ್ಲಿ,“ಇವಿಎಂಗಳನ್ನು ಇಂದು ಬೆಳಿಗ್ಗೆ ಸ್ಥಳಾಂತರಿಸಬೇಕಾಗಿತ್ತು. ಆದರೆ ಈಗ ಅಮಾನತುಗೊಂಡಿರುವ ಅಧಿಕಾರಿ, ಯಾರಿಗೂ ತಿಳಿಸದೆ ಹಿಂದಿನ ರಾತ್ರಿ ಅವುಗಳನ್ನು ಹೊರತೆಗೆದಿದ್ದಾರೆ” ಎಂದು ತಿಳಿಸಿದ್ದಾರೆ.
ವಾರಣಾಸಿಯಲ್ಲಿ ನಿನ್ನೆ ಪಕ್ಷದ ಕಾರ್ಯಕರ್ತರು ಮತದಾನ ಯಂತ್ರಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಅಡ್ಡಗಟ್ಟಿದ ನಂತರ ಸಮಾಜವಾದಿ ಪಕ್ಷವು “ಮತದಾನವನ್ನು ಕದಿಯಾಲಾಗುತ್ತಿದೆ” ಎಂದು ಆರೋಪಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು 2017 ರಲ್ಲಿ ಸುಮಾರು 50 ಸ್ಥಾನಗಳನ್ನು ಬಿಜೆಪಿ 5000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದುಕೊಂಡಿತ್ತು ಎಂದು ಗಮನಸೆಳೆದಿದ್ದರು. ವಿವಿಧ ಜಿಲ್ಲೆಗಳಿಂದ ಇವಿಎಂ ಅನ್ನು ಉಲ್ಲಂಘನೆ ಮಾಡಿರುವ ಮಾಹಿತಿ ಬರುತ್ತಿದ್ದು, ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ: Poll of Exit polls 2022: ಉತ್ತರ ಪ್ರದೇಶದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಆಪ್ ಅಧಿಕ್ಕಾರಕ್ಕೇರುವ ಸಾಧ್ಯತೆ
ಇಂದು, ಸಮಾಜವಾದಿ ಪಕ್ಷವು ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಅವರು ಕರ್ತವ್ಯದಲ್ಲಿ ಲೋಪವಾಗಿರುವುದನ್ನು ಒಪ್ಪಿಕೊಂಡಿರುವ ವೀಡಿಯೊವನ್ನು ಟ್ವೀಟ್ ಮಾಡಿದೆ. ಆದರೆ, ಅಗರ್ವಾಲ್ ಅವರು ವಿಡಿಯೊದಲ್ಲಿ ನಿರ್ದಿಷ್ಟ ಲೋಪಗಳನ್ನು ಉಲ್ಲೇಖಿಸಿಲ್ಲ. ಪ್ರಸ್ತುತ ಯಂತ್ರಗಳು ತರಬೇತಿ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು ಸಮರ್ಥಿಸಿಕೊಂಡಿದ್ದಾರೆ.
EVM मूवमेंट में चुनाव आयोग के प्रोटोकॉल का पालन नहीं किया गया- कमिश्नर वाराणसी
कई जिलों में ईवीएम में हेरा-फेरी की जानकारी प्राप्त हो रही है। ये किसके इशारे पर हो रहा है? क्या अधिकारियों पर सीएम ऑफिस से दबाव बनाया जा रहा है?
चुनाव आयोग कृपया स्पष्ट करे @ECISVEEP @ceoup pic.twitter.com/D71xr8h8Tu
— Samajwadi Party (@samajwadiparty) March 9, 2022
ಇದನ್ನೂ ಓದಿ: ತಮಿಳುನಾಡು: ಕಾಂಗ್ರೆಸ್ ಪಕ್ಷದಿಂದ ಕುಂಭಕೋಣಂ ಪಾಲಿಕೆ ಮೇಯರ್ ಆದ ಆಟೋರಿಕ್ಷಾ ಚಾಲಕ
“ನೀವು ಇವಿಎಂಗಳ ಕೊಂಡೊಯ್ಯುದರ ಪ್ರೋಟೋಕಾಲ್ ಬಗ್ಗೆ ಮಾತನಾಡಿದರೆ, ಪ್ರೋಟೋಕಾಲ್‌ನಲ್ಲಿ ಲೋಪವಾಗಿದೆ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ನಿಮಗೆ ಖಾತರಿ ನೀಡಬಲ್ಲೆ, ಮತದಾನದಲ್ಲಿ ಬಳಸುವ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ಅಸಾಧ್ಯ” ಎಂದು ಅವರು ವೀಡಿಯೊದಲ್ಲಿ ಹೇಳಿರುವುದು ಕೇಳಿಬರುತ್ತಿದೆ.
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಮಾಜವಾದಿ ಪಕ್ಷವು ಪ್ರೋಟೋಕಾಲ್ ಅನ್ನು ಅನುಸರಿಸಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದೆ.
“ತರಬೇತಿ ಅಥವಾ ಮೀಸಲು ವಿದ್ಯುನ್ಮಾನ ಮತಯಂತ್ರಗಳನ್ನು ಸ್ಥಳಾಂತರಿಸಿದಾಗ, ಅಭ್ಯರ್ಥಿಗಳು ಅಥವಾ ಪಕ್ಷದ ಕಾರ್ಯಕರ್ತರಿಗೆ ತಿಳಿಸಬೇಕು ಮತ್ತು ಇದನ್ನು ಮಾಡಲಾಗಿಲ್ಲ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ವಿವಾದದ ಬಗ್ಗೆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನಾಟಕೀಯ ವಿಡಿಯೊವನ್ನು ನಿಜ ಘಟನೆ ಎಂದು ಬಿಂಬಿಸಿ ‘ಸುಳ್ಳು ಸುದ್ದಿ’ ಪ್ರಕಟಿಸಿದ ನ್ಯೂಸ್18 ಕನ್ನಡ


