Homeಅಂತರಾಷ್ಟ್ರೀಯNATO ಸದಸ್ಯತ್ವಕ್ಕೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ; ಮಾತುಕತೆಗೆ ಒಪ್ಪಿಕೊಂಡ ಝೆಲೆನ್ಸ್ಕಿ!

NATO ಸದಸ್ಯತ್ವಕ್ಕೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ; ಮಾತುಕತೆಗೆ ಒಪ್ಪಿಕೊಂಡ ಝೆಲೆನ್ಸ್ಕಿ!

- Advertisement -
- Advertisement -

ಭುಗಿಲೆದ್ದಿರುವ ಯುದ್ಧದ ನಡುವೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌‌ ಝೆಲೆನ್ಸ್ಕಿ ಅವರು ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವಕ್ಕಾಗಿ ಇನ್ನು ಮುಂದೆ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಷ್ಯಾ ಸರ್ಕಾರ ಉಕ್ರೇನ್‌ ವಿರುದ್ದ ಯುದ್ಧ ಘೋಷಣೆ ಮಾಡಲು ಪ್ರಮುಖ ಕಾರಣ ‘ನ್ಯಾಟೊ’ ಆಗಿದೆ ಎಂದು ಎಎಫ್‌ಪಿ ಮಂಗಳವಾರ ವರದಿ ಮಾಡಿದೆ.

“ನಾವು ಅದನ್ನು ಅರ್ಥಮಾಡಿಕೊಂಡಿದ್ದು, ಈ ಪ್ರಶ್ನೆಗೆ ಸಂಬಂಧಿಸಿದಂತೆ ಬಹಳ ಹಿಂದೆಯೇ ನಾನು ಸುಮ್ಮನಾಗಿದ್ದೇನೆ… ನ್ಯಾಟೊ ಉಕ್ರೇನ್ ಅನ್ನು ಸ್ವೀಕರಿಸಲು ಸಿದ್ಧವಾಗಿಲ್ಲ” ಎಂದು ABC ನ್ಯೂಸ್‌ನಲ್ಲಿ ಸೋಮವಾರ ರಾತ್ರಿ ಪ್ರಸಾರವಾದ ಸಂದರ್ಶನದಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ.

“ನ್ಯಾಟೋ ಮೈತ್ರಿಯು ವಿವಾದಿತ ಸಂಗತಿಗಳಿಂದ ದೂರ ಉಳಿದಿದ್ದು, ರಷ್ಯಾ ಜೊತೆಗಿನ ಸಂಘರ್ಷಕ್ಕೆ ಹೆದರುತ್ತಿದೆ” ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ನಾಟಕೀಯ ವಿಡಿಯೊವನ್ನು ನಿಜ ಘಟನೆ ಎಂದು ಬಿಂಬಿಸಿ ‘ಸುಳ್ಳು ಸುದ್ದಿ’ ಪ್ರಕಟಿಸಿದ ನ್ಯೂಸ್‌‌18 ಕನ್ನಡ!

ರಷ್ಯಾವನ್ನು ಸಮಾಧಾನಪಡಿಸುವ ರೀತಿಯಲ್ಲಿ ಮಾತನಾಡಿರುವ ಝೆಲೆನ್ಸ್ಕಿ, “ಫೆಬ್ರವರಿ 24 ರಂದು ಆಕ್ರಮಣವನ್ನು ಪ್ರಾರಂಭಿಸುವ ಮೊದಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ವತಂತ್ರವೆಂದು ಗುರುತಿಸಿದ ಎರಡು ಪ್ಯಾಂತ್ಯಗಳಾದ ಡೊನೆಟ್‌ಸ್ಕ್ ಮತ್ತು ಲುಗಾನ್‌ಸ್ಕ್ ಪ್ರದೇಶಗಳನ್ನು ಸ್ವಾಯತ್ತ ಪ್ರಾಂತ್ಯ ಎಂದು ಒಪ್ಪಿ ತಾನು ರಾಜಿ ಮಾಡಿಕೊಳ್ಳಲು ಮುಕ್ತವಾಗಿದ್ದೇನೆ” ಎಂದು ಹೇಳಿದ್ದಾರೆ.

NATO ಸದಸ್ಯತ್ವವನ್ನು ಉಲ್ಲೇಖಿಸಿದ ಝೆಲೆನ್ಸ್ಕಿ, “ಮೊಣಕಾಲುಗಳನ್ನು ಊರಿ ಬೇಡಿಕೊಳ್ಳುವ ದೇಶದ ಅಧ್ಯಕ್ಷನಾಗಲು ನಾನು ಬಯಸುವುದಿಲ್ಲ” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯು, ಅಮೆರಿಕಾ ನೇತೃತ್ವದ NATO ಮಿತ್ರರಾಷ್ಟ್ರಗಳ ನಿಲುವಿನ ಬಗ್ಗೆ ನಿರಾಶೆಯನ್ನು ಪ್ರತಿಬಿಂಬಿಸುತ್ತದೆ.

ಸೋವಿಯತ್ ಒಕ್ಕೂಟದಿಂದ ಯುರೋಪ್ ಅನ್ನು ರಕ್ಷಿಸಲು ಶೀತಲ ಸಮರದ ಪ್ರಾರಂಭದಲ್ಲಿ ರಚಿಸಲಾದ ಒಕ್ಕೂಟವಾಗಿದೆ NATO. ಈ ನ್ಯಾಟೊಗೆ ನೆರೆಯ ಉಕ್ರೇನ್ ಸೇರುವುದನ್ನು ತಾನು ಇಷ್ಟ ಪಡುವುದಿಲ್ಲ ಎಂದು ರಷ್ಯಾ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ನ್ಯಾಟೊ ರಷ್ಯಾದ ಸುತ್ತಮುತ್ತಲಿನ ದೇಶಗಳಲ್ಲಿ ತನ್ನ ಪ್ರಭಾವನ್ನು ವಿಸ್ತರಿಸಿತ್ತು. ಇದು ರಷ್ಯಾವನ್ನು ಕೆರಳಿಸಿತ್ತು. ರಷ್ಯಾ ದೇಶವು NATO ವಿಸ್ತರಣೆಯನ್ನು ತನ್ನ ದೇಶಕ್ಕೆ ಬೆದರಿಕೆಯಾಗಿ ನೋಡುತ್ತದೆ. ಯಾಕೆಂದರೆ ನ್ಯಾಟೊ ತನ್ನ ಮಿತ್ರ ರಾಷ್ಟ್ರಗಳಲ್ಲಿ ಮಿಲಿಟರಿಗಳನ್ನು ನೆಲೆಯನ್ನು ವಿಸ್ತರಿಸುತ್ತಾ, ತನ್ನ ಬಾಗಿಲಿಗೆ ಬರುತ್ತದೆ ಎಂಬುವುದು ರಷ್ಯಾದ ವಾದವಾಗಿದೆ.

ಇದನ್ನೂ ಓದಿ: ಉಕ್ರೇನ್‌ನಿಂದ ಬಂದಿರುವ ವೈದ್ಯ ವಿದ್ಯಾರ್ಥಿಗಳ ಭವಿಷ್ಯವೇನು?: ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಉಕ್ರೇನ್‌ ಆಕ್ರಮಣಕ್ಕೆ ಆದೇಶ ನೀಡುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸುವ ಸ್ವಲ್ಪ ಸಮಯದ ಮೊದಲು, ರಷ್ಯಾ ಅಧ್ಯಕ್ಷ ಪುಟಿನ್ ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಎಂಬ ಎರಡು ಪ್ರತ್ಯೇಕತಾವಾದಿ ಪ್ರಾಂತ್ಯಗಳನ್ನು ರಷ್ಯನ್‌ ಪರ “ಗಣರಾಜ್ಯಗಳು” ಎಂದು ಗುರುತಿಸಿಕೊಂಡಿದ್ದರು. ಈ ಎರಡು ಪ್ರಾಂತ್ಯಗಳು 2014 ರಿಂದ ಉಕ್ರೇನ್ ವಿರುದ್ದ ಸಂಘರ್ಷದಲ್ಲಿದೆ. ಉಕ್ರೇನ್ ಕೂಡ ತಮ್ಮನ್ನು ಸಾರ್ವಭೌಮ ಮತ್ತು ಸ್ವತಂತ್ರ ಎಂದು ಗುರುತಿಸಿಕೊಳ್ಳಲಿ ಎಂದು ಪುಟಿನ್‌ ಬಯಸುತ್ತಿದ್ದಾರೆ.

ರಷ್ಯಾದ ಈ ಬೇಡಿಕೆಯ ಬಗ್ಗೆ ಎಬಿಸಿ ಸಂದರ್ಶನದಲ್ಲಿ ಮಾತನಾಡಿದ ಝೆಲೆನ್ಸ್ಕಿ, ತಾನು ಮಾತುಕತೆಗೆ ಮುಕ್ತನಾಗಿದ್ದೇನೆ ಎಂದು ಹೇಳಿದ್ದಾರೆ. “ನಾನು ಭದ್ರತಾ ಖಾತರಿಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಎರಡು ಪ್ರದೇಶಗಳು ಮುಂದೆ ಹೇಗಿರಬೇಕು ಎನ್ನುವ ಕುರಿತು ನಾವು ಚರ್ಚಿಸುತ್ತೇವೆ ಮತ್ತು ರಾಜಿ ಮಾಡಿಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.

“ಉಕ್ರೇನ್‌ನ ಭಾಗವಾಗಲು ಬಯಸುವ, ಉಕ್ರೇನ್‌ನಲ್ಲಿ ಇರುವ ಆ ಪ್ರಾಂತ್ಯಗಳಲ್ಲಿನ ಜನರು ಹೇಗೆ ಬದುಕುತ್ತಾರೆ ಎಂಬುದು ನನಗೆ ಮುಖ್ಯವಾದುದು. ಆದ್ದರಿಂದ ಈ ಪ್ರಶ್ನೆಯನ್ನು ಸರಳವಾಗಿ ಒಪ್ಪಿಕೊಳ್ಳುವುದು ಹೆಚ್ಚು ಕಷ್ಟವಾಗಿದೆ. ಅಧ್ಯಕ್ಷ ಪುಟಿನ್ ಮಾತನಾಡಲು ಪ್ರಾರಂಭಿಸಲು ಏನು ಮಾಡಬೇಕು, ಮಾತುಕತೆ ಪ್ರಾರಂಭಿಸಿ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ದೌರ್ಬಲ್ಯದಿಂದಾಗಿ ನಮ್ಮ ಜನ ಸಾಯುತ್ತಿದ್ದಾರೆ: ನೋ-ಫ್ಲೈ ಝೋನ್ ಹೇರದ NATO ವಿರುದ್ಧ ಕಿಡಿಕಾರಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...