Homeಮುಖಪುಟರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’ ಘೋಷಣೆ...

ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’ ಘೋಷಣೆ ಹಿಂದಿರುಗಿದೆಯೇ?

'ಮುಜಫರ್ ನಗರ ಗಲಭೆಯಿಂದಾಗಿ 2013ರಲ್ಲಿ ಪಶ್ಚಿಮ ಯುಪಿಯಲ್ಲಿ ಬಿಜೆಪಿ ಬೆಳೆಯಿತು, ಈಗ ಅದರ ಕುಸಿತವು ಅದೇ ಮುಜಫರ್ ನಗರದಿಂದ ಪ್ರಾರಂಭವಾಗುತ್ತದೆಯೇ?

- Advertisement -
- Advertisement -

ಮೂಲ – Raiot.in

ನಕುಲ್ ಸಿಂಗ್ ಸಾಹ್ನಿ, 

ರಾಕೇಶ್ ಟಿಕಾಯತ್ ಸುತ್ತಮುತ್ತಲಿನ ಸಂಭ್ರಮದ ಬಗ್ಗೆ ಕಳೆದ ಕೆಲವು ದಿನಗಳಿಂದ ಜನರು ಆತಂಕ ಮತ್ತು ಕೋಪವನ್ನು ವ್ಯಕ್ತಪಡಿಸುತ್ತಿರುವ ಹಲವಾರು ಪೋಸ್ಟ್‌ಗಳನ್ನು ನಾನು ಓದಿದ್ದೇನೆ. ಈ ಕೋಪಕ್ಕೆ ಕಾರಣವೇನು? ಮುಜಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ 2013 ರಲ್ಲಿ ನಡೆದ ಕೋಮುವಾದಿ ಸಂಘರ್ಷದ ಹಿಂಸಾಚಾರದ ಸಂದರ್ಭದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಹಿಸಿದ ಬೇಜವಾಬ್ದಾರಿ ಪಾತ್ರ ನೆನೆಸಿಕೊಂಡರೆ, ಆ ಹುಚ್ಚು (ಅಥವಾ ಮತಾಂಧತೆ) ಪಶ್ಚಿಮ ಯುಪಿಯನ್ನು ಆವರಿಸಿಕೊಂಡು ಏಳೂವರೆ ವರ್ಷಗಳಾಗಿವೆ. ಈ ಕಾರಣಕ್ಕೆ ಬಿಕೆಯು ಹೋಳಾಗಿದ್ದನ್ನು ಮತ್ತು ಅನೇಕ ಹೊಸ ಬಣಗಳು ಹೊರಹೊಮ್ಮಿದನ್ನು ನಾವು ನೋಡಿದ್ದೇವೆ. ಗಮನಾರ್ಹವಾದ ವಿಭಜನೆಯೆಂದರೆ ಬಿಕೆಯುನ ಅತಿದೊಡ್ಡ ಮುಸ್ಲಿಂ ಮುಖಂಡ ಗುಲಾಮ್ ಮೊಹಮ್ಮದ್ ಜೌಲಾ ಬಿಕೆಯುನಿಂದ ಹೊರಗೆ ಹೋಗಿದ್ದು. ಜೌಲಾ ಅವರನ್ನು ‘ಬಾಬಾ’ ಟಿಕಾಯತ್ ಅವರ ಬಲಗೈ ಮನುಷ್ಯ ಎಂದು ಪರಿಗಣಿಸಲಾಗುತ್ತದೆ.

ಕುತೂಹಲಕಾರಿ ಸಂಗತಿಯೆಂದರೆ, ಒಮ್ಮೆ ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿ ಅವರು 2014ರಲ್ಲಿ ಚುನಾವಣೆಯಲ್ಲಿ ಸೋತಾಗ, ಈ ಪ್ರದೇಶದ ಅನೇಕ ಹಳೆಯ ಜಾಟ್‌ಗಳು ಕೋಪಗೊಂಡಿದ್ದರು. ಅವರಲ್ಲಿ ಹಲವರು ‘ಹಮ್ನೆ ಚೌಧರಿ ಸಾಬ್ ಕೊ ಕೈಸೆ ಹರಾ ದಿಯಾ’ (ನಾವು ಚೌಧರಿ ಸಾಬ್ ಅವರನ್ನು ಸೋಲಿಸಿಬಿಟ್ಟೆವಲ್ಲ?) ಎಂದು ಗಲಾಟೆ ಮಾಡಿದರು. ಅನೇಕ ಜಾಟ್‌ಗಳು (ವಿಶೇಷವಾಗಿ ಹಳೆಯ ತಲೆಮಾರಿನವರು) 2013ರ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಕ್ಕಾಗಿ ತಮ್ಮ ಯುವ ಪೀಳಿಗೆಯೊಂದಿಗೆ ಯಾವಾಗಲೂ ಅಸಮಧಾನಗೊಂಡಿದ್ದರು. ರಹಸ್ಯವಾಗಿ, ಅವರು ಆಗಾಗ್ಗೆ ಹೇಳುತ್ತಿದ್ದರು, ‘ನಮ್ಮ ಯುವಕರು ತಾವು ಎಲ್ಲಿಗೆ ಹೋಗಿ ತಲುಪಿದ್ದೇವೆಂದು ಮತ್ತು ತಮ್ಮ ತಪ್ಪನ್ನು ತಿಳಿದುಕೊಳ್ಳಲು ಇನ್ನೂ ತಡವಾಗಿಲ್ಲ’ ಎಂದು.

ಇದರಿಂದ ಸಮುದಾಯದ ಹಿರಿಯರು ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಬಿಕೆಯು ಮತ್ತು ಆರ್‌ಎಲ್‌ಡಿಯ ಉತ್ತುಂಗ ದಿನಗಳನ್ನು ನೊಡಿದವರಿಗೆ ಆ ಹುಚ್ಚುತನದ ನಿರರ್ಥಕತೆ ಅರ್ಥವಾಗುತ್ತದೆ. ಈ ಪ್ರದೇಶದ ಮುಸ್ಲಿಮರು, ತಮ್ಮ ಅಸ್ತಿತ್ವದ ಬೇರ್ಪಡಿಸಲಾಗದ ಭಾಗವೆಂದು ಅವರು ಅರ್ಥಮಾಡಿಕೊಂಡಿದ್ದರು. (ಅದರೊಳಗೆ ಈ ಪ್ರದೇಶದಲ್ಲಿ ಮುಸ್ಲಿಮರಲ್ಲಿ ಜಾತಿಯ ವಿರೋಧಾಭಾಸಗಳಿವೆ. ಆದರೆ ಅದು ಚರ್ಚೆಯ ಮತ್ತೊಂದು ವಿಷಯವಾಗಿದೆ).

ವಿಪಿನ್ ಸಿಂಗ್ ಬಲಿಯಾನ್ ಅವರಂತಹ ಕೆಲವು ಸ್ಥಳೀಯ ಮಟ್ಟದ ಜಾಟ್ ನಾಯಕರು ಹಿಂದೂ-ಮುಸ್ಲಿಂ ಬಿರುಕನ್ನು ಕಡಿಮೆ ಮಾಡಲು ಯತ್ನಿಸಿದ್ದಾರೆ. ಅಂತಹ ಪ್ರಯತ್ನಗಳು ಶ್ಲಾಘನೀಯವಾದರೂ, ದ್ವೇಷ ಮತ್ತು ಕಹಿ ಸಾಗರವಾಗಿ ಮಾರ್ಪಟ್ಟ ಪಶ್ಚಿಮ ಯುಪಿಯಲ್ಲಿ ಆ ಪ್ರಯತ್ನ ಒಂದು ಸಣ್ಣ ಹನಿ ಮಾತ್ರ.

ಗಲಭೆಯ ಸುಮಾರು ಐದು ವರ್ಷಗಳ ನಂತರ, ಠಾಕೂರ್ ಪುರಾನ್ ಸಿಂಗ್, ಗುಲಾಮ್ ಮೊಹಮ್ಮದ್ ಜೌಲಾ ಮುಂತಾದವರ ನೇತೃತ್ವದಲ್ಲಿ ಜಂಟಿ ಹಿಂದೂ-ಮುಸ್ಲಿಂ ಕಿಸಾನ್ ಪಂಚಾಯಿತಿಗಳು ನಡೆದವು.

ಅಂತಿಮವಾಗಿ, 2019 ರ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ರಾಕೇಶ್ ಟಿಕಾಯತ್ ನೇತೃತ್ವದ ಬೃಹತ್ ರ‍್ಯಾಲಿಯು 10 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿಗೆ ಬಂದಿತು. ಆ ರ‍್ಯಾಲಿಯಲ್ಲಿ ಹಿಂದೂ ಮತ್ತು ಮುಸ್ಲಿಂ ರೈತರು ಭಾಗವಹಿಸಿದ್ದರು. ಅನೇಕ ಇತರ ಒಕ್ಕೂಟಗಳು ಚಳವಳಿಗೆ ಬೆಂಬಲವನ್ನು ನೀಡಿದ್ದವು. ದೆಹಲಿ ಮತ್ತೆ ಮುತ್ತಿಗೆಗೆ ಒಳಗಾಗಿತ್ತು. ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೂ ಸಹ, ರ‍್ಯಾಲಿಯನ್ನು ಸ್ಥಗಿತಗೊಳಿಸಲಾಗಿತು. ಹಲವರು ಅಸಮಾಧಾನಗೊಂಡರು. ಅವರನ್ನು (ಟಿಕಾಯತ್) ಬಿಜೆಪಿ ಖರೀದಿಸಿದೆ ಎಂದು ಹಲವರು ಭಾವಿಸಿದರು.

2019ರ ನಂತರ ಮುಜಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಬಿಕೆಯು ನೇತೃತ್ವದಲ್ಲಿ ಅನೇಕ ಪ್ರತಿಭಟನೆಗಳು ನಡೆದವು. ಪ್ರತಿಭಟನಾ ಪ್ರದರ್ಶನಗಳಲ್ಲಿ ಅನೇಕ ಮುಸ್ಲಿಂ ರೈತರು ಇದ್ದುದು ಕುತೂಹಲಕಾರಿಯಾಗಿದೆ. ಅವರಲ್ಲಿ ಅನೇಕರು ಬಿಕೆಯುನ ವಿವಿಧ ಸಂಘಟನಾ ಸ್ಥಾನಗಳಲ್ಲಿದ್ದರು. ರಾಕೇಶ್ ಟಿಕಾಯತ್ ಬಿಕೆಯುಅನ್ನು ಪುನಶ್ಚೇತನಗೊಳಿಸಲು ಶ್ರಮಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆ ಕಾರಣಕ್ಕೆ ನರೇಶ್ ಟಿಕಾಯತ್ ಅವರನ್ನು ಪಕ್ಕಕ್ಕೆ ಸರಿಸಲಾಗಿದೆ.

2013ರ ಮಹಾಪಂಚಾಯತ್‌ನಲ್ಲಿ ಬಿಜೆಪಿ ಬಿಕೆಯುನಿಂದ ವೇದಿಕೆಯನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿತ್ತು ಮತ್ತು ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡವರು ನರೇಶ್ ಟಿಕಾಯತ್. 2013ರ ಹಿಂಸಾಚಾರದ ನಂತರವೂ ಅವರು (ನರೇಶ್) ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇದ್ದರು.

ಕಳೆದ 2-3 ವರ್ಷಗಳಲ್ಲಿ, ರಾಕೇಶ್ ಅವರು ಬಿಕೆಯು ಆಡಳಿತವನ್ನು ವಹಿಸಿಕೊಂಡಿದ್ದಾರೆ. ಕೋಮುವಾದಿ ರಾಜಕಾರಣದೊಂದಿಗಿನ ಸಹವಾಸದ ಕಾರಣಕ್ಕೆ ನರೇಶ್ ಅವರನ್ನು ಕಡೆಗಣಿಸಿದ್ದಾರೆ. ಇದು ಇಬ್ಬರು ಸಹೋದರರ ನಡುವಿನ ಸೈದ್ಧಾಂತಿಕ ಘರ್ಷಣೆಯೋ ಅಥವಾ ಯುದ್ಧತಂತ್ರ ನಡೆದಿದೆಯೋ ಎಂಬುದು ಅವರಿಬ್ಬರಿಗೆ ಮಾತ್ರ ತಿಳಿದಿದೆ.

ಅಂತಿಮವಾಗಿ, ಕೃಷಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ದೆಹಲಿಯ ಗಡಿಯನ್ನು ತಲುಪಿದ ನಂತರ, ಪ್ರತಿಯೊಬ್ಬರೂ ಗಾಜಿಪುರ ಗಡಿಯತ್ತ ಧಾವಿಸುವ ಹುಮ್ಮಸ್ಸಿನಲ್ಲಿದ್ದರು. ಆರಂಭದಲ್ಲಿ ಅದೇ ತೀವ್ರತೆ ಮತ್ತು ಉತ್ಸಾಹದಿಂದ ಪಶ್ಚಿಮ ಯುಪಿ ಏಕೆ ಪ್ರತಿಭಟನೆಯಲ್ಲಿ ಸೇರಲಿಲ್ಲ? ನಿಜ ಹೇಳಬೇಕೆಂದರೆ, ಅನೇಕ ರೈತರು ಆಂದೋಲನಕ್ಕೆ ಸೇರಲು ಬಹಳ ಉತ್ಸುಕರಾಗಿದ್ದರು. ಆದರೆ, ರಾಕೇಶ್ ಟಿಕಾಯತ್ ಬಗ್ಗೆ ಅವರಿಗೆ ನಂಬಿಕೆಯ ಕೊರತೆಯಿತ್ತು. ರಾಕೇಶ್ ಬಿಜೆಪಿ ಏಜೆಂಟ್‌ರಾಗಿದ್ದು, ಯಾವ ಕ್ಷಣದಲ್ಲಿಯಾದರೂ ಅವರು ಯಾವ ಕಡೆಗಾದರೂ ತಿರುಗಬಹುದೆಂಬ ಸಂಶಯ ಬಹಳಷ್ಟು ರೈತರಿಗೆ ಇತ್ತು.

ಆದರೆ, ಗಾಜಿಪುರ ಗಡಿಯಲ್ಲಿ ಜನೆವರಿ 27ನೇ ರಾತ್ರಿ ನಡೆದ ಘಟನೆಗಳು ಆ ಗ್ರಹಿಕೆಯನ್ನು ಬದಲಿಸಿದೆ. ಪ್ರತಿಭಟನಾ ನಿರತ ರೈತರನ್ನು ಗಾಜಿಪುರ ಗಡಿಯಿಂದ ತೆಗೆದುಹಾಕಲು ದೊಡ್ಡ ಪೊಲೀಸ್ ಪಡೆ ಹೊರಟಿತು. ರಾಕೇಶ್ ಟಿಕಾಯತ್ ಕಣ್ಣೀರಾಕುತ್ತಾ ನೀಡಿದ ವೀಡಿಯೊ ಸಂದೇಶದಲ್ಲಿ ಮಾಡಿದ ಭಾವನಾತ್ಮಕ ಮನವಿಯು ಪಶ್ಚಿಮ ಯುಪಿ ರೈತರನ್ನು ಪ್ರಚೋದಿಸಿದೆ. ಟಿಕಾಯತ್ ಅಂದು ಪ್ರಮುಖವಾಗಿ, ಬಿಜೆಪಿಯನ್ನು ಹಿಂದೊಮ್ಮೆ ಬೆಂಬಲಿಸಿದ ತಪ್ಪನ್ನು ಒಪ್ಪಿಕೊಂಡಿದ್ದು, ಅದಕ್ಕಾಗಿ ಯಾವಾಗಲೂ ವಿಷಾದಿಸುತ್ತೇವೆ ಎಂದು ಹೇಳಿದರು. ಆ ರಾತ್ರಿಯೇ ಸಾವಿರಾರು ಜನರು ಮುಜಫರ್‌ನಗರ ಜಿಲ್ಲೆಯ ಸಿಸೌಲಿ ಗ್ರಾಮದಲ್ಲಿರುವ ಟಿಕಾಯತ್ ಮನೆಯ ಹೊರಗೆ ಜಮಾಯಿಸಿದರು. ಎರಡು ದಿನಗಳ ನಂತರ, ಜನವರಿ 29, 2021ರಂದು ಸಿಸೌಲಿ ಗ್ರಾಮದಲ್ಲಿ ಐತಿಹಾಸಿಕ ಮಹಾಪಂಚಾಯತ್ ನಡೆಯಿತು. ಆ ಪಂಚಾಯತ್‌ನಲ್ಲಿ ಹಲವಾರು ಸಾವಿರ ಜನರು ಭಾಗವಹಿಸಿದ್ದರು.

ಪಂಚಾಯತ್‌ನಲ್ಲಿ ಪ್ರಮುಖ ಭಾಷಣಕಾರರಲ್ಲಿ ಗುಲಾಮ್ ಮೊಹಮ್ಮದ್ ಜೌಲಾ ಕೂಡ ಒಬ್ಬರು. ಜೌಲಾ ಯಾವುದನ್ನೂ ನುಂಗಿಕೊಳ್ಳದೆ ಎರಡು ಮುಖ್ಯ ಮಾತುಗಳನ್ನು ಹೇಳಿದರು: ‘ನೀವು ಇಲ್ಲಿಯವರೆಗೆ ಮಾಡಿದ ಎರಡು ದೊಡ್ಡ ತಪ್ಪುಗಳು: ‘ಒಂದು, ನೀವು ಅಜಿತ್ ಸಿಂಗ್ ಅವರನ್ನು ಸೋಲಿಸಿದ್ದೀರಿ, ಮತ್ತು ಎರಡನೇದು, ನೀವು ಮುಸ್ಲಿಮರನ್ನು ಕೊಂದಿದ್ದೀರಿ’.

ಕುತೂಹಲಕರವೆಂದರೆ, ಅಲ್ಲಿ ಜೌಲಾ ಮಾತಿಗೆ ಯಾರೂ ಆಕ್ಷೇಪ ಮಾಡಲಿಲ್ಲ, ತಡೆ ಒಡ್ಡಲಿಲ್ಲ. ಬದಲಿಗೆ ಅಲ್ಲಿ ಅಗಾಧ ಮೌನವಿತ್ತು, ಅಲ್ಲಿ ಆತ್ಮಾವಲೋಕನ ಶುರುವಾಗಿತ್ತು.

ಇತರ ಭಾಷಣಕಾರರು ‘ನಾವು ಇನ್ನೆಂದೂ ಬಿಜೆಪಿಯಿಂದ ಮೋಸ ಹೋಗಲಾರೆವು’ ಎಂದು ಹೇಳಿದರು. ಐತಿಹಾಸಿಕ ಪಂಚಾಯತ್‌ನಲ್ಲಿ ಬಿಜೆಪಿಯನ್ನು ಬಹಿಷ್ಕರಿಸಲು ಬಹಳ ಅಪರೂಪದ ಮತ್ತು ಹಿಂದೆಂದೂ ಕೇಳರಿಯದ ನಿರ್ಧಾರ ತೆಗೆದುಕೊಳ್ಳಲಾಯಿತು. ಮಹಾಪಂಚಾಯತ್‌ಗಳು ರಾಜಕೀಯ ಪಕ್ಷವನ್ನು ಸಾರ್ವಜನಿಕವಾಗಿ ನಿರಾಕರಿಸುವುದು ಅಪರೂಪ ಎಂಬುದನ್ನು ಇಲ್ಲಿ ಗಮನಿಸಿ.

ಇಂದಿಗೂ ಸಹ ಗಾಜಿಪುರ ಗಡಿಯಲ್ಲಿ ರೈತರ ಬೆಂಬಲ ಹೆಚ್ಚಾಗುತ್ತಿರುವಾಗ, ಬಾಗಪತ್, ಮುಜಾಫರ್ ನಗರ, ಶಾಮ್ಲಿ, ಮೀರತ್ ಮುಂತಾದ ಜಿಲ್ಲೆಗಳಿಂದ, ಇದೇ ರೀತಿಯ ಅಭಿಪ್ರಾಯಗಳು ಪ್ರತಿಧ್ವನಿಸುತ್ತಿರುವುದನ್ನು ನೀವು ಕೇಳುತಿದ್ದೀರಿ. ‘2013 ಮಹಾನ್ ತಪ್ಪು’, ‘ಬಿಜೆಪಿ ನಮಗೆ ಮೋಸ ಮಾಡಿತು’, ‘2013 ರ ಪರಿಸ್ಥಿತಿಗೆ ಬಿಜೆಪಿ ಮತ್ತು ಎಸ್‌ಪಿ ಕಾರಣ’ – ಈ ಮಹತ್ವದ ರಾಜಕೀಯ ಪ್ರಜ್ಞೆ ಅಲ್ಲೀಗ ಮೊಳಕೆಯೊಡೆದಿದೆ. ಮುಖ್ಯವಾಗಿ, ‘ಮುಜಫರ್ ನಗರ ಗಲಭೆಯಿಂದಾಗಿ 2013ರಲ್ಲಿ ಪಶ್ಚಿಮ ಯುಪಿಯಲ್ಲಿ ಬಿಜೆಪಿ ಬೆಳೆಯಿತು, ಈಗ ಅದರ ಕುಸಿತವು ಅದೇ ಮುಜಫರ್ ನಗರದಿಂದ ಪ್ರಾರಂಭವಾಗುತ್ತದೆ’ ಎಂಬ ದಟ್ಟ ಜನಾಭಿಪ್ರಾಯ ರೂಪುಗೊಂಡಿದೆ. 1988ರಲ್ಲಿ ಬೋಟ್ ಕ್ಲಬ್ ಪ್ರತಿಭಟನೆ ಮೂಲಕ ಪ್ರತಿಧ್ವನಿಸಿದ ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’ ಎಂಬ ಬಿಕೆಯುನ ಪ್ರಮುಖ ಘೋಷಣೆಗಳು ಶೀಘ್ರದಲ್ಲೇ ಹಿಂತಿರುಗಬಹುದು.

ಇದು ಹಿಂದಿನದನ್ನು ಸುಲಭವಾಗಿ ಅಳಿಸುತ್ತದೆಯೇ?

ಇದು 2013ರ ಗಾಯಗಳನ್ನು ಗುಣಪಡಿಸುತ್ತದೆಯೇ?

2013ರ ಮುಜಫರ್ ನಗರ ಗಲಭೆಯ ಕುರಿತು ಸಾಕ್ಷ್ಯಚಿತ್ರ ಮಾಡಿದ ಮತ್ತು ಆ ಗಲಭೆ ಉಂಟುಮಾಡಿದ ಆಘಾತ, ವಿನಾಶ ಮತ್ತು ಧ್ರುವೀಕರಣವನ್ನು ನೋಡಿದ ನನ್ನ ಬಳಿ ಇದಕ್ಕೆ ಉತ್ತರವಿಲ್ಲ. (https://www.netflix.com/title/81035103)

ಮೇಲಿನ ಪ್ರಶ್ನೆಗಳಿಗೆ ಉತ್ತರ, ‘ಇರಬಹುದು ಅಥವಾ ಪ್ರಾಯಶಃ ಇಲ್ಲ.’ 2013ರ ಗಲಭೆ ಕಾರಣದಿಂದ 60,000 ಜನರು, ಮುಖ್ಯವಾಗಿ ಮುಸ್ಲಿಮರು, ಸ್ಥಳಾಂತರಗೊಂಡರು ಮತ್ತು ಎಂದಿಗೂ ತಮ್ಮ ಸ್ವಂತ ಹಳ್ಳಿಗಳಿಗೆ ಅವರು ಹೋಗಲಾರರು. 2013ರಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದ ಹಲವರು ಇಂದು ವಿಷಾದ ವ್ಯಕ್ತಪಡಿಸಿದರೆ ಅವರ ಅಪರಾಧಕ್ಕೆ ಕ್ಲೀನ್ ಚಿಟ್ ನೀಡಬೇಕೇ? ಇದು ನಿಜವಾದ ಪರಿಹಾರವೇ? ನನಗೆ ಗೊತ್ತಿಲ್ಲ.

ನನಗೆ ತಿಳಿದಿರುವ ಸಂಗತಿಯೆಂದರೆ, 2013ರ ಹಿಂಸಾಚಾರದಿಂದಾಗಿ ಪಶ್ಚಿಮ ಯುಪಿ ಅಪಾರ ನಷ್ಟವನ್ನು ಅನುಭವಿಸಿದೆ. ಭಿನ್ನ ನೆಲೆಗಳಲ್ಲಿನ, ಒಂದಕ್ಕೊಂದು ಬೆಸೆದಂತಹ ಘಟನೆಗಳ ಪರಿಣಾಮಗಳು ಗಂಭೀರವಾಗಿವೆ. ಅನೇಕರು ಈಗಲೂ ಬಳಲುತ್ತಿದ್ದಾರೆ. 2013ರ ಆ ಕರಾಳ ವಿದ್ಯಮಾನ ಸಂಭವಿಸದೆ ಇದ್ದರೆ, ಇವತ್ತು ಯೋಗಿ ಸಿಎಂ ಆಗಿರುತ್ತಿರಲಿಲ್ಲ ಮತ್ತು ಬಹುಶಃ ಮೋದಿ ಪ್ರಧಾನ ಮಂತ್ರಿಯೂ ಆಗಿರುತ್ತಿರಲಿಲ್ಲ. ನನಗೆ ತಿಳಿದಿರುವ ಸಂಗತಿಯೆಂದರೆ, ಪಶ್ಚಿಮ ಯುಪಿಯಲ್ಲಿನ ಇತ್ತೀಚಿನ ಘಟನೆಗಳು, ಅಲ್ಲಿ ಸಮಸ್ಯೆಯಿರುವ ಪ್ರದೇಶಗಳನ್ನು ಗುಣಪಡಿಸುವ ಮತ್ತು ಅಲ್ಲಿ ಸ್ವಲ್ಪ ಶಾಂತಿಯನ್ನು ತರುವಲ್ಲಿ ಕೊಡುಗೆ ನೀಡಿದ್ದು, ಅವು ದೀರ್ಘಕಾಲೀನವಾಗಲಿವೆ. ಹಿಂದೂ ಮತ್ತು ಮುಸ್ಲಿಮರ ನಡುವಿನ ವೈಯಕ್ತಿಕ ಸಂಬಂಧಗಳು ಮತ್ತೆ ಸೌಹಾರ್ದವಾಗಿ ಏರ್ಪಡಲು ಇಲ್ಲಿ ಮಾತುಕತೆಗಳ ಅಗತ್ಯವಿದೆ. ಇದು ಎಲ್ಲವನ್ನೂ ಬದಲಾಯಿಸುತ್ತದೆ ಎಂದು ಅರ್ಥವಲ್ಲ. ಆದರೆ ಅಂತಹ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಹೆಜ್ಜೆ ತನ್ನದೇ ಮಹತ್ವ ಹೊಂದಿದೆ.

ರಾಕೇಶ್ ಟಿಕಾಯತ್ ಬಗ್ಗೆ ಅನೇಕರು ಈಗಲೂ ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅದು ಬಹುಶಃ ಸರಿಯಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಗುಂಪು ಈಗ ತಾಳ್ಮೆಯಿಂದಿರಲು ನಾನು ಮನವಿ ಮಾಡುತ್ತೇನೆ. ಇದು ಕಷ್ಟದ ಸಮಯ ಮತ್ತು ಇಂತಹ ನಿರ್ಣಯ ಕೆಲವೊಮ್ಮೆ ಅಗತ್ಯ. ಭಾರತಕ್ಕೆ ಬಿಜೆಪಿ ಮಾಡಿರುವ ಹಾನಿಯನ್ನು ಸರಿಪಡಿಸಲು ಬಹಳ ಸಮಯ ಬೇಕು. ಕೆಲವೊಮ್ಮೆ ಈ ಸರಿಪಡಿಸುವಿಕೆಯ ಪ್ರಕ್ರಿಯೆ ವಿರೋಧಾಭಾಸಗಳಿಂದ ಕೂಡಿರಬಹುದು. ಹಠಾತ್ ಪ್ರತಿಕ್ರಿಯೆಗಳು ಯಾರಿಗೂ ಸಹಾಯ ಮಾಡುವುದಿಲ್ಲ.

ಪಶ್ಚಿಮ ಯುಪಿಯಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಮಿಲಿಟಂಟ್ ಗುಣ ಹೊಂದಿರುವ ರೈತ ಸಂಘಗಳು ಹಲವು ದಶಕಗಳಿಂದ ಪಂಜಾಬ್‌ನಲ್ಲಿ ಸಕ್ರಿಯವಾಗಿವೆ. ಇದಕ್ಕೆ ಭಿನ್ನವಾಗಿ, ಹರಿಯಾಣ ಮತ್ತು ಪಶ್ಚಿಮ ಯುಪಿಯ ರೈತ ಸಂಘಟನೆಗಳು (ಬಿಕೆಯು ಸೇರಿದಂತೆ) ರೈತರನ್ನು ಸಜ್ಜುಗೊಳಿಸಲು ಖಾಪ್‌ಗಳನ್ನು ಅವಲಂಬಿಸಿವೆ. ಊಳಿಗಮಾನ್ಯ ವರ್ತನೆಗಳನ್ನು ಒಡೆಯಲು ಸಮಯ ಬೇಕು. ಆದರೆ 2021 ರ ಜನವರಿ 29 ರಂದು ನಡೆದ ಮಹಾಪಂಚಾಯತ್, ಆ ಸಮಾಜದ ಪ್ರಜಾಪ್ರಭುತ್ವೀಕರಣದತ್ತ ಒಂದು ಖಚಿತವಾದ, ಸಣ್ಣ ಆದರೆ ಮಹತ್ವದ ಹೆಜ್ಜೆಯಾಗಿದೆ.

(ನಕುಲ್ ಸಿಂಗ್ ಸಾಹ್ನಿ, ಸ್ವತಂತ್ರ ಸಾಕ್ಷ್ಯಚಿತ್ರ ನಿರ್ಮಾಪಕರು. ಅವರ ಗಮನಾರ್ಹ ಸಾಕ್ಷ್ಯಚಿತ್ರಗಳಲ್ಲಿ, ‘ಇಜ್ಜತ್‌ನಗರಿ ಕಿ ಅಸಭ್ಯ ಭೇಟಿಯಾಂ’ ಮತ್ತು ‘ಮುಜಫರ್‌ನಗರ್ ಬಾಕಿ ಹೈ’ ಸೇರಿವೆ. ಅವರು ಪಶ್ಚಿಮ ಯುಪಿಯಲ್ಲಿ ಚಲ್ಚಿತ್ರ್ ಅಭಿಯಾನ್ ಎಂಬ ಚಲನಚಿತ್ರ ಮಾಧ್ಯಮ ಅಭಿಯಾನದ ಸ್ಥಾಪಕರಾಗಿದ್ದಾರೆ.)


ಇದನ್ನೂ ಓದಿ: ಟಿಕಾಯತ್ ಮನವಿಗೆ ಭಾರೀ ಬೆಂಬಲ: ರೈತರೊಟ್ಟಿಗೆ ಹರಿದುಬರುತ್ತಿರುವ ಸಾವಿರಾರು ಯುವಜನರು

ಇದನ್ನೂ ಓದಿ: ಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್: ಸುಳ್ಳು, ಸಂಚು, ದಮನಗಳೇ ತಿರುಗುಬಾಣವಾದ ಗಳಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...