Homeನಿಜವೋ ಸುಳ್ಳೋFact check: ಕಟ್ಟಡದ ಮೇಲೆ ಒಟ್ಟಾಗಿ ನಮಾಜ್ ಮಾಡುತ್ತಿರುವುದು ನಿಜವೇ??

Fact check: ಕಟ್ಟಡದ ಮೇಲೆ ಒಟ್ಟಾಗಿ ನಮಾಜ್ ಮಾಡುತ್ತಿರುವುದು ನಿಜವೇ??

- Advertisement -
- Advertisement -

ಮುಸ್ಲಿಂ ಬಾಂಧವರು ಕಟ್ಟಡಗಳ ಟೆರೇಸ್‌ ಮೇಲೆ ಒಟ್ಟಾಗಿ ನಮಾಜ್ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದೆ. ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಚಿತ್ರವನ್ನು ಟ್ವೀಟ್ ಮಾಡಿ “ಇದು ಎಲ್ಲಿ ಎಂದು ಯಾರಿಗಾದರು ತಿಳಿದಿದೆಯೆ ?” ಎಂದು ಪ್ರಶ್ನೆ ಮಾಡಿದ್ದರು. ಈ ಟ್ವೀಟ್‌ ಅನ್ನು ಈವರೆಗೆ 6,000 ಬಾರಿ ರಿಟ್ವೀಟ್ ಮಾಡಲಾಗಿದೆ.

ಫೇಸ್‌ಬುಕ್ ನ ಹುಕ್ಕಾ ಔರ್ ಕಾಟ್ ಎಂಬ ಪೇಜ್ ನಲ್ಲಿ “ಇದು ಧರ್ಮ ಶ್ರದ್ಧೆ ಆಗಿರಬಹುದು ಆದರೆ ದೇಶದ್ರೋಹವಲ್ಲವೇ?” ಎಂಬ ಸಂದೇಶದೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಅನ್ನು ಸಹ ಈವರೆಗೆ 440 ಕ್ಕೂ ಹೆಚ್ಚು ಜನ ಹಂಚಿಕೊಂಡಿದ್ದಾರೆ. ಆದರೆ, ಈ ಚಿತ್ರದ ಮೂಲದ ಬಗ್ಗೆಯೋ? ಅಥವಾ ಈ ಚಿತ್ರ ತೆಗೆಯಲಾದ ಸ್ಥಳದ ಬಗ್ಗೆಯೋ? ಎಲ್ಲೂ ಉಲ್ಲೇಖಿಸಿಲ್ಲ. ಆದರೂ, ಅದು ಭಾರತದ ಮುಸ್ಲಿಂ ಸಮುದಾಯವನ್ನು ಸೂಚಿಸುತ್ತಿದೆ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.

ಕನ್ನಡದ ಕೆಲವು ಫೇಸ್‌ಬುಕ್ ಪೇಜ್‌ಗಳಲ್ಲೂ ಸಹ ಈ ಫೊಟೋವನ್ನು ಕನ್ನಡ ತಲೆ ಬರಹದ ಜೊತೆಗೆ ಹಂಚಿಕೊಳ್ಳಲಾಗಿದೆ. ನಮೋ ಮತ್ತು ಮೋದಿ ಕಿಂಗ್ ಡಮ್  ಎಂಬ ಫೇಸ್ ಬುಕ್ ಪೇಜ್‌ಗಳು  “ಆರೋಗ್ಯ, ಸಮಾಜ ಹಾಗೂ ವೈಜ್ಞಾನಿಕತೆ ಬಗ್ಗೆ ಕೆಲವರಿಗೆ ಮನವರಿಕೆ ಮಾಡುವುದು, ಕತ್ತೆ ಮುಂದೆ ಕಿನ್ನರಿ ಬಾರಿಸಿದಂತೆ” ಎಂದು ಬರೆದುಕೊಂಡಿವೆ. ಈ ಫೇಸ್‌ಬುಕ್ ಪೇಜಿನ ಪೋಸ್ಟ್‌ಗಳನ್ನು ಕ್ರಮವಾಗಿ,2100 ಹಾಗೂ 2800 ಜನರು ಹಂಚಿಕೊಂಡಿದ್ದಾರೆ.

ಇದಲ್ಲದೆ ಇದೇ ಚಿತ್ರವನ್ನು ಇಟ್ಟುಕೊಂಡು ಬೇರೆ ಬೇರೆ ಸಂದೇಶಗಳೊಂದಿಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಿಯಬಿಡಲಾಗುತ್ತಿದೆ.

ಈ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸುವಂತೆ “ಆಲ್ಟ್ ನ್ಯೂಸ್” ಗೆ ಹಲವಾರು ದೂರುಗಳು ಬಂದುದರಿಂದ ಆಲ್ಟ್ ನ್ಯೂಸ್ ಈ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿ ಅದರ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ. ಆಲ್ಟ್ ನ್ಯೂಸ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿ ಇದನ್ನು ಈ ಹಿಂದೆ ಸೌದಿ ಅರೇಬಿಯಾ ಮತ್ತು ಕುವೈತ್‌ನಲ್ಲಿ ಹಂಚಿಕೊಳ್ಳಲಾಗಿರುವ ಫೋಟೋ ಎಂಬುದನ್ನು ಪತ್ತೆಹಚ್ಚಲಾಗಿದೆ. ಈ ದೇಶಗಳ ಅನೇಕ ವ್ಯಕ್ತಿಗಳು ಮಾಡಿದ ಟ್ವೀಟ್‌ಗಳನ್ನು ಆಲ್ಟ್ ನ್ಯೂಸ್ ಕಂಡುಕೊಂಡಿದೆ. ಆದರೆ ಸ್ಥಳವನ್ನು ಮಾತ್ರ ಕಂಡುಹಿಡಿಯಲು ಸಾಧ್ಯವಿಲ್ಲ.

ಚಿತ್ರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ “ಆಲ್ಟ್ ನ್ಯೂಸ್” ಮಸೀದಿ, ನೀರಿನ ಭಾಗ (ಬಹುಶಃ ಸಮುದ್ರ), ಹಿನ್ನಲೆಯಲ್ಲಿ ಗೋಚರಿಸುವ ದೋಣಿಯನ್ನು ಗೂಗಲಿನಲ್ಲಿ ಹುಡುಕಾಡಿದ “ಆಲ್ಟ್ ನ್ಯೂಸ್” ಅದು ದುಬೈ ಇರಬಹುದು ಎಂದು ಹೇಳಿದೆ.

ದುಬೈಯ ಕೊಲ್ಲಿಯ ಬಳಿ ಚಿತ್ರದ ಹಿನ್ನೆಲೆಯಲ್ಲಿ ಎತ್ತರದ ಕಟ್ಟಡವನ್ನು ಕಾಣಬಹುದು. ಯುಎಇಯ ದುಬೈ ಆರ್ಕಿಟೆಕ್ಚರಲ್ ಹೆರಿಟೇಜ್ ಇಲಾಖೆ ವೆಬ್ಸೈಟಿನಲ್ಲಿ ಗುಮ್ಮಟ ಮತ್ತು ಮಿನಾರಗಳ ರಚನೆಗಳು ಕಾಣಬಹುದಾಗಿದೆ. ಕೆಳಗೆ ತೋರಿಸಿದ ಹೋಲಿಕೆಯಂತೆ, ವೈರಲ್ ಚಿತ್ರದಲ್ಲಿ ಕಂಡುಬರುವ ಅದೇ ರಚನೆ ಮತ್ತು ಗೂಗಲ್‌ನಲ್ಲಿ ಲಭ್ಯವಿರುವ ವಾಸ್ತುಶಿಲ್ಪ ಹೆರಿಟೇಜ್ ಇಲಾಖೆಯ ಚಿತ್ರವನ್ನು ಗಮನಿಸಬಹುದಾಗಿದೆ.

ಇದಲ್ಲದೆ, ಈ ಕಟ್ಟಡಗಳ ಗೂಗಲ್ ಅರ್ಥ್ ವೀಕ್ಷಣೆಯಲ್ಲಿ ವೈರಲ್ ಚಿತ್ರದಲ್ಲಿ ಕಂಡುಬರುವ ಶೆಡ್ ಅಥವಾ ಕವರ್‌ಗಳನ್ನು ಕಾಣಬಹುದಾಗಿದೆ (ಶೆಡ್‌ಗಳನ್ನು ನೇರಳೆ ಪಟ್ಟೆಗಳಿಂದ ಹೈಲೈಟ್ ಮಾಡಲಾಗಿದೆ).

ಗೂಗಲ್ ಅರ್ಥ್‌ನ ಮತ್ತೊಂದು ಚಿತ್ರವು ಈ ಕಟ್ಟಡಗಳ ಮೇಲಿನ ನೋಟ ಮತ್ತು ಚಿತ್ರವನ್ನು ಚಿತ್ರೀಕರಿಸಿದ ಕೋನವನ್ನು ತೋರಿಸುತ್ತದೆ.

ಕೆಳಗಿನ ತೋರಿಸಿರುವ ಹೋಲಿಕೆಯಲ್ಲಿ, ಈ ಕಟ್ಟಡಗಳ ಹಿನ್ನೆಲೆಯಲ್ಲಿ ಕಂಡುಬರುವ ಶಾಪಿಂಗ್ ಮಾಲ್‌ಗೆ ಹೊಂದಾಣಿಕೆ ಮಾಡಲು ಮತ್ತು ಸ್ಥಳವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮೇಲಿನ ಎಡಭಾಗದಲ್ಲಿರುವ ಚಿತ್ರವು ಗೂಗಲ್ ಸ್ಟ್ರೀಟ್ ವ್ಯೂ ಆಗಿದ್ದರೆ ಬಲಭಾಗದಲ್ಲಿ ಶಾಪಿಂಗ್ ಮಾಲ್‌ನ ಗೂಗಲ್ ಅರ್ಥ್ ವೀಕ್ಷಣೆ ಇದೆ. ಕೆಳಭಾಗದಲ್ಲಿ ಇರುವ ಚಿತ್ರವು ವೈರಲ್ ಚಿತ್ರದಲ್ಲಿ ಕಂಡುಬರುವ ಅದೇ ಶಾಪಿಂಗ್ ಮಾಲ್ ಅನ್ನು ತೋರಿಸುತ್ತದೆ.

ಈ ಚಿತ್ರದ ಸ್ಥಳವನ್ನು ಸರಿಯಾಗಿ ಪರಿಶೀಲಿಸಬಹುದಾದರೂ, ಇದು ಇತ್ತೀಚಿನದೇ ಅಥವಾ ಹಳೆಯದೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಆಲ್ಟ್ ನ್ಯೂಸ್ ಹೇಳಿದೆ.

ಒಟ್ಟಿನಲ್ಲಿ ದುಬೈಯ ಚಿತ್ರವನ್ನು ಮುಂದಿಟ್ಟು ಭಾರತದಲ್ಲಿ ಲಾಕ್‌ಡೌನ್ ಪ್ರೋಟೋಕಾಲ್ ಅನ್ನು ಮುಸ್ಲಿಮರು ಉಲ್ಲಂಘಿಸುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಮಾಡಿ ಕೋಮುದ್ವೇಷ ಹರಡುತ್ತಿರುವುದು ಆಲ್ಟ್‌ನ್ಯೂಸ್‌ ರಿಯಾಲಿಟಿ ಚೆಕ್‌ನಿಂದ ಬಯಲಾಗಿದೆ. ಆದರೆ, ಹೀಗೆ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸರ್ಕಾರ ಯಾವ ಕಾನೂನು ಕ್ರಮ ಜರುಗಿಸಲಿದೆ? ಎಂಬುದು ಮಾತ್ರ ಚಿದಂಬರ ರಹಸ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೌದು, ಇದು ದುಬೈ ಕಟ್ಟಡಗಳೆ. ಶುಕ್ರವಾರ ಮಸೀದಿಯಲ್ಲಿ ಜಾಗ ಇಲ್ಲದೆ ಕಟ್ಟಡಗಳ ಮೇಲೆ ನಮಾಜ್ ಮಾಡುವ ದ್ರಶ್ಯಗಳು. ಎಲ್ಲ ಕಟ್ಟಡಗಳಿಗು AC ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...