ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಸಾರ್ವಜನಿಕ ರ್‍ಯಾಲಿಯಲ್ಲಿ ಮಾಡಿದ ಭಾಷಣದ ತುಣುಕ್ಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ಸ್ಮೃತಿ ಇರಾನಿ ಥೋರಾ ಗುಂಗೆ ಬೆಹ್ರಿ ಹೋ ಗಯಾ ಹೈ, ಮೈನ್ ಉಂಕೋ ಕೆಹನಾ ಚಾಹ್ತಾ ಹೂ – ಉಸಿ ದಯಾನ್ ಕೋ, ಮೆಹೆಂಗಾಯಿ ದಯಾನ್ ಕೋ ಡಾರ್ಲಿಂಗ್ ಬನಾಕೆ ಬೆಡ್‌ರೂಮ್ ಮೇ ಬೈತಾನೆ ಕಾ ಕಾಮ್ ಕಿಯಾ ಹೈ” (ಸ್ಮೃತಿ ಇರಾನಿ ಮೂಕ ಮತ್ತು ಕಿವುಡರಾಗಿದ್ದಾರೆ. ಈಗ ಅದೇ ಮಾಟಗಾತಿ ಹಣದುಬ್ಬರವೆಂಬ ದೆವ್ವವನ್ನು ‘ಡಾರ್ಲಿಂಗ್’ ಆಗಿ ಪರಿವರ್ತಿಸಿ ಮಲಗುವ ಕೋಣೆಯಲ್ಲಿ ಇರಿಸಿದ್ದಾರೆ) ಎಂದು ಶ್ರೀನಿವಾಸ್ ಹೇಳಿರುವುದಾಗಿ ಈ ವಿಡಿಯೊ ಕ್ಲಿಪ್ ಮೂಲಕ ಪ್ರತಿಪಾದಿಸಲಾಗುತ್ತಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ. “ಈ ಅಸಭ್ಯ, ಸೆಕ್ಸಿಸ್ಟ್ ವ್ಯಕ್ತಿ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ” ಎಂದು ಬರೆದುಕೊಂಡಿದ್ದಾರೆ. ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಗೆದ್ದಿದ್ದಕ್ಕಾಗಿ ಸ್ಮೃತಿ ಇರಾನಿ ಅವರನ್ನು “ಡಾರ್ಲಿಂಗ್ ಬನಾ ಕರ್ ಬೆಡರೂಮ್ ಮೆನ್” ಎಂದು ಬಿ.ವಿ.ಶ್ರೀನಿವಾಸ್ ಹೇಳಿರುವುದಾಗಿ ಆರೋಪಿಸಿದ್ದಾರೆ.
This uncouth, sexist man is President of the Indian Youth Congress. डार्लिंग बना कर बेडरूम में… This is the level of discourse, when referring to a woman minister, just because she defeated Rahul Gandhi from Amethi.
A frustrated Congress is hurtling down the path of irrelevance. pic.twitter.com/7SPbJy6jLO— Amit Malviya (@amitmalviya) March 27, 2023
ಬಿಜೆಪಿ ಕರ್ನಾಟಕ ಕೂಡ ಇದೇ ವಿಡಿಯೊವನ್ನು ಟ್ವೀಟ್ ಮಾಡಿದೆ. ಅಮೇಥಿಯಲ್ಲಿ ರಾಹುಲ್ ಗಾಂಧಿಯವರಿಗೆ ಸ್ಮೃತಿ ಇರಾನಿ ಅವರು ಉಂಟುಮಾಡಿದ ಸೋಲನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷವು ಸ್ತ್ರೀದ್ವೇಷಿಯಾಗಿದೆ, ವಿಕೃತತೆಯ ಕೂಪವಾಗಿ ಮಾರ್ಪಟ್ಟಿದೆ ಎಂದು ದೂರಿದೆ.
The vile attack on @smritiirani ji by Criminal @RahulGandhi's sidekick @srinivasiyc is highly deplorable!
INC is still unable to digest the humiliating defeat Smriti Irani ji inflicted on Foreign Puppet Rahul Gandhi in Amethi.
INC has become a cesspit of misogyny & perversion pic.twitter.com/3z0KKddYpd
— BJP Karnataka (@BJP4Karnataka) March 27, 2023
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರೂ ಟ್ವೀಟ್ ಮಾಡಿದ್ದಾರೆ. “ಶ್ರೀನಿವಾಸ್ ಬಿ.ವಿ. ಅವರ ಟೀಕೆಗಳು ಶೋಚನೀಯವಾಗಿವೆ, ಕಾಮಪ್ರಚೋದಕವಾಗಿವೆ. ಪ್ರಿಯಾಂಕಾ ಗಾಂಧಿಯವರು ಈ ಭಾಷಣವನ್ನು ಖಂಡಿಸಬೇಕು” ಎಂದು ಆಗ್ರಹಿಸಿದ್ದಾರೆ. ಹೀಗೆ ಅನೇಕರು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
National President of Youth Wing of @INCIndia makes absolutely deplorable & sexist remarks on self-made woman leader who has come up through sheer hard work and merit.
Where is @priyankagandhi’s ‘Ladki Hoon, Lad Sakti Hoon’ gang now?
Not even a cursory condemnation? https://t.co/qlcn0F0kig
— Tejasvi Surya (@Tejasvi_Surya) March 27, 2023
ಸತ್ಯಾಂಶವೇನು?
ಈ ವಿಡಿಯೋ ಬಿಜೆಪಿ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ನಂತರ, ಶ್ರೀನಿವಾಸ್ ಬಿ.ವಿ. ಅವರು ತಮ್ಮ ಭಾಷಣದ ದೀರ್ಘ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ.
“ಸಂಘಿಗಳು ಸುಧಾರಿಸುವುದಿಲ್ಲ. ಪೂರ್ಣ ಹೇಳಿಕೆಯನ್ನು ಅಪೂರ್ಣವಾಗಿ ತೋರಿಸಿದ್ದಾರೆ. 2014 ರ ಮೊದಲು ನೀವು ನೀಡಿದ ಹೇಳಿಕೆಯನ್ನು ನಾನು ಉಲ್ಲೇಖಿಸಿದ್ದೇನೆ. ₹ 400 ಎಲ್‌ಪಿಜಿ ಸಿಲಿಂಡರ್‌ನ ಹಣದುಬ್ಬರವು ನಿಮಗೆ ‘ಮಾಟಗಾತಿ’ಯಂತೆ ಕಾಣಿಸುತ್ತಿತ್ತು. ಇಂದು ಎಲ್‌ಪಿಜಿ ಬೆಲೆ ₹ 1100 ರೂ. ಆಗಿದೆ. ಅಂದು ದಯಾನ್ (ಮಾಟಗಾತಿ/ದೆವ್ವ) ಆಗಿದ್ದ ಹಣದುಬ್ಬರ ‘ಡಾರ್ಲಿಂಗ್’ ಆಗಿದೆ” ಎಂದಿದ್ದಾರೆ.
संघी नही सुधरेंगे,
आधा अधूरा नही पूरा बयान चलाओ,मैंने 2014 के पहले दिए जाने वाले आप लोगों के बयान को ही Quote किया है
जो ₹400 LPG सिलिंडर वाली 'महंगाई' आप लोगों को 'डायन' नजर आती थी,
आज आप लोगों ने उसी 'डायन' महंगाई को ₹1100 LPG के रूप में 'डार्लिंग' बनाकर बैठाया हुआ है। pic.twitter.com/e4sxstLL95
— Srinivas BV (@srinivasiyc) March 27, 2023
ಶ್ರೀನಿವಾಸ್ ಅವರು ಸ್ಮೃತಿ ಇರಾನಿಯವರನ್ನು ಮಾಟಗಾತಿ (ದಯಾನ್) ಎಂದು ಉಲ್ಲೇಖಿಸಿಲ್ಲ. ಕೆಲವರು ಪ್ರತಿಪಾದಿಸುತ್ತಿರುವುದಕ್ಕೆ ವಿರುದ್ಧವಾಗಿ ಇಲ್ಲಿನ ವಿಡಿಯೊವಿದೆ. ಬಿಜೆಪಿ ರಾಜಕಾರಣಿಗಳು ತಮ್ಮ ಹಿಂಬಾಲಕರಿಗೆ ತಪ್ಪಾಗಿ ವಿಡಿಯೊವನ್ನು ಒದಗಿಸಿದ್ದಾರೆ. ‘ಮಹಾಂಗೈ ದಯಾನ್’ ಎಂಬ ಸಾಲು ಪೀಪ್ಲಿ ಲೈವ್ (2010) ಚಿತ್ರದ ನಂತರ ಪ್ರಸಿದ್ಧವಾಗಿದೆ. ಇದೇ ಸಾಲಿನ ಹಾಡು ಆ ಸಿನಿಮಾದಲ್ಲಿದೆ. ಬೆಲೆ ಏರಿಕೆಯಿಂದಾಗುವ ಪ್ರಮುಖ ಸಾಮಾಜಿಕ-ಆರ್ಥಿಕ ಸಮಸ್ಯೆಯ ಕಡೆಗೆ ಈ ಹಾಡು ಗಮನ ಸೆಳೆಯುತ್ತದೆ.
ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ವಾಕ್‌ಚಾತುರ್ಯದ ಭಾಗವಾಗಿ ಈ ಹಾಡನ್ನು ಹೆಚ್ಚಾಗಿ ಬಳಸಲಾಗುತ್ತದೆ. 2012ರ ಹಿಂದೆ ಮಾಜಿ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರು ‘ಮಹಾಂಗೈ ದಯಾನ್’ ಹಾಡನ್ನು ಗುನುಗಿದ್ದರು.
ಶ್ರೀನಿವಾಸ್ ಬಿ.ವಿ ಅವರೂ ಇದೇ ರೀತಿಯಲ್ಲಿ ರಾಜಕೀಯ ವಾಗ್ದಾಳಿ ನಡೆಸಿದ್ದಾರೆ. ಬೆಲೆ ಏರಿಕೆಯನ್ನು ಪ್ರಶ್ನಿಸಿದ್ದಾರೆ. 2014ಕ್ಕಿಂತ ಮೊದಲು ‘ಮಹಾಂಗೈ ದಯಾನ್’ ಹಾಡನ್ನು ಬಳಸಿದ ಅದೇ ಬಿಜೆಪಿ, ಈಗ ಹಣದುಬ್ಬರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
“ಹಣದುಬ್ಬರವನ್ನು ತಮ್ಮ ಮಲಗುವ ಕೋಣೆಗೆ ಬಿಜೆಪಿ ತಂದಿದೆ. ಅದನ್ನು ತಮ್ಮ ಪ್ರಿಯತಮೆಯನ್ನಾಗಿ ಮಾಡಿಕೊಂಡಂತಿದೆ” ಎಂದಿದ್ದಾರೆ. ಸ್ಮೃತಿ ಇರಾನಿ ಅವರು ಬಡವರ ಬೇಡಿಕೆಗಳಿಗೆ ಕಿವುಡರಾಗಿದ್ದಾರೆ ಎಂದು ಹೇಳುವ ಮೂಲಕ ಬಿ.ವಿ.ಶ್ರೀನಿವಾಸ್ ಅವರು ಟಾರ್ಗೆಟ್ ಆಗಿರುವುದು ನಿಜವಾದರೂ, ಅವರು ಮೇಲಿನ ಹೇಳಿಕೆಯನ್ನು ಕೇವಲ ರೂಪಕವಾಗಿ ಬಳಸಿರುವುದು ಸ್ಪಷ್ಟವಾಗುತ್ತದೆ.
‘ನಾನುಗೌರಿ.ಕಾಂ’ ಜೊತೆಯಲ್ಲಿ ಮಾತನಾಡಿದ ಬಿ.ವಿ.ಶ್ರೀನಿವಾಸ್ ಅವರು, “ಮನಮೋಹನ್ ಸಿಂಗ್ ಅವರು ಪ್ರಧಾನಿ ಮಂತ್ರಿಯಾಗಿದ್ದ ಅವಧಿಯಲ್ಲಿ ಇದೇ ಮಾತನ್ನು ಹೇಳಿದ್ದರು. ಗ್ಯಾಸ್ ಸಿಲಿಂಡರ್ ಬೆಲೆ 400 ರೂ ಇದ್ದಾಗ ‘ಮೆಹಂಗಾಯಿ ದಾಯನ್’ ಎಂದು ಹೇಳುತ್ತಿದ್ದ ಅವರು, ಈಗ ಬೆಲೆ 1100 ರೂ.ಗೆ ತಲುಪಿದಾಗ ಮಾತನಾಡುತ್ತಿಲ್ಲ. ಈ ‘ದಾಯನ್’ (ದೆವ್ವ) ಈಗ ಪ್ರಿಯತಮೆಯಾಗಿದೆ. ಇದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.
“ಅವರಿಗೆ ಹಳೆಯ ದಿನಗಳನ್ನು ನೆನಪಿಸಿದೆ. ಅವರಿಗೆ ಕಿವಿ ಕೇಳಿಸುವುದಿಲ್ಲ. ಬೆಲೆ ಏರಿಕೆಯೆಂದು ರಸ್ತೆಯಲ್ಲಿ ಕುಣಿಯುತ್ತಿದ್ದವರು ಈಗ ಎಲ್ಲಿ ಹೋಗಿದ್ದಾರೆ? ಸ್ಮೃತಿ ಇರಾನಿಯವರು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರಗಳಾದಾಗ ಇವರು ಮಾತನಾಡುವುದಿಲ್ಲ. ಹತ್ರಾಸ್ ಪ್ರಕರಣ ಇರಬಹುದು, ಉನ್ನಾವೋ ಪ್ರಕರಣ ಇರಬಹುದು- ಇದ್ಯಾವುಕ್ಕೂ ಪ್ರತಿಕ್ರಿಯಿಸಲಿಲ್ಲ. ಕಾನ್ಫುರದಲ್ಲಿ ತಾಯಿ ಮತ್ತು ಮಗಳನ್ನು ಬೆಂಕಿಯಲ್ಲಿ ಹಾಕಿ ಸುಡಲಾಯಿತು. ನಿಶಿಕಾಂತ್ ದುಬೆ ಎಂಬಾತ ಬಿಜೆಪಿಯ ಸಂಸದ. ಮತ್ತೊಬ್ಬ ಮಹಿಳಾ ಜನಪ್ರತಿನಿಧಿಗೆ ಹೀನಾಯವಾಗಿ ನಿಂದಿಸಿ, ಇವರೆಲ್ಲ ರೆಡ್‌ಲೈಟ್ ಪ್ರದೇಶದವರು ಎಂದನು. ಅದ್ಯಾವುದಕ್ಕೂ ಸ್ಮೃತಿಯವರು ಪ್ರತಿಕ್ರಿಯಿಸಲಿಲ್ಲ. ಮಹಿಳಾ ಇಲಾಖೆಗೆ ಅವರು ರಾಜೀನಾಮೆ ಕೊಡಬೇಕು” ಎಂದು ಒತ್ತಾಯಿಸಿದರು.
ಕಾನೂನು ಕ್ರಮಕ್ಕೆ ಚಿಂತನೆ
“ಯುವ ಕಾಂಗ್ರೆಸ್ ಅಧ್ಯಕ್ಷರ ಪ್ರತಿಷ್ಠೆಗೆ ಕಳಂಕ ತರುವ ಶೋಚನೀಯ ಪ್ರಯತ್ನವನ್ನು ನಾವು ಖಂಡಿಸುತ್ತೇವೆ. ಅಧಿಕಾರದಲ್ಲಿರುವ ಕೆಲವರು ಆರೋಪಿಸಿರುವ ಇಂತಹ ಯಾವುದೇ ಆಲೋಚನೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಈ ಸಂಬಂಧ ಕಾನೂನು ಕ್ರಮ ಜರುಗಿಸುತ್ತೇವೆ” ಎಂದು ಯುವ ಕಾಂಗ್ರೆಸ್ ಕಾನೂನು ಕೋಶದ ಅಧ್ಯಕ್ಷ ರೂಪೇಶ್ ಭದೌರಿಯಾ ತಿಳಿಸಿದ್ದಾರೆ.


