Homeಕರ್ನಾಟಕಫ್ಯಾಕ್ಟ್‌ಚೆಕ್‌: ಈ ಚ್ರಿತ್ರಗಳು ಬೆಂಗಳೂರು ಹಿಂಸಾಚಾರದ್ದಲ್ಲ, ದೆಹಲಿಯದ್ದು..

ಫ್ಯಾಕ್ಟ್‌ಚೆಕ್‌: ಈ ಚ್ರಿತ್ರಗಳು ಬೆಂಗಳೂರು ಹಿಂಸಾಚಾರದ್ದಲ್ಲ, ದೆಹಲಿಯದ್ದು..

ದೆಹಲಿಗಲಭೆಯ ಚಿತ್ರವನ್ನು ಬೆಂಗಳೂರಿನ ಗಲಭೆಯ ಚಿತ್ರವೆಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

- Advertisement -
- Advertisement -

ಇದೇ 11 ರ ಮಂಗಳವಾರ, ಪೂರ್ವ ಬೆಂಗಳೂರಿನಲ್ಲಿ ಪ್ರವಾದಿ ಮೊಹಮ್ಮದ್‍ ಅವರನ್ನು ಫೇಸ್‍ಬುಕ್ ಪೋಸ್ಟ್ ಒಂದರಲ್ಲಿ ಅವಹೇಳನ ಮಾಡಲಾಗಿದೆ ಎಂದು ಪ್ರತಿಭಟನೆ ನಡೆದಿದ್ದವು. ಈ ಪ್ರತಿಭಟನೆ ನಂತರ ಹಿಂಸಾಚಾರಕ್ಕೆ ನಾಂದಿ ಹಾಡಿದ್ದು ಪೊಲೀಸ್ ಠಾಣೆ ಮತ್ತು ಶಾಸಕರ ಮನೆಯ ಮೇಲೆ ದಾಳಿಗಳು ನಡೆದಿತ್ತು. ಅಂದಿನ ಹಿಂಸಾಚಾರದ ಚಿತ್ರಗಳು ಎಂದು ಹಲವಾರು ಸಾಮಾಜಿಕ ಬಳಕೆದಾರರು ದೆಹಲಿ ಗಲಭೆಯ ಚಿತ್ರಗಳನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ಮಸೀದಿ ಜಾಗದಲ್ಲಿ ಬಾಬ್ರಿ ಆಸ್ಪತ್ರೆ ಸ್ಥಾಪನೆ? ಈ ಸುದ್ದಿ ನಿಜವೆ?

ಅಲ್ಲದೆ ವೈರಲ್ ಸಂದೇಶದಲ್ಲಿ ಗಲಭೆಗೆ ಕಾರಣ ಬಿಜೆಪಿ ಶಾಸಕನ ಪುತ್ರ ಎಂದು ಉಲ್ಲೇಖಿಸಲಾಗಿದೆ. ವೈರಲ್ ಸಂದೇಶದಲ್ಲಿ, “ಬಿಜೆಪಿ ಶಾಸಕರ ಪುತ್ರ ಪ್ರವಾದಿ ಮುಹಮ್ಮದ್ (ಸ) ಅವರನ್ನು ಅವಮಾನಿಸಿದ್ದಾರೆ. 60 ಪೊಲೀಸರು ಗಾಯಗೊಂಡಿದ್ದಾರೆ, 2 ನಾಗರಿಕರು ಸಾವಿಗೀಡಾಗಿದ್ದಾರೆ, ಸೆಕ್ಷನ್ 144 ವಿಧಿಸಲಾಗಿದೆ (ಸಿಕ್)” ಎಂದು ದೆಹಲಿ ಗಲಭೆಯ ಎರಡು ಚಿತ್ರಗಳ ಜೊತೆ ವೈರಲಾಗಿದೆ.

ಫ್ಯಾಕ್ಟ್‌ಚೆಕ್

ಮೊದಲೆನೆಯದ್ದಾಗಿ ಗಲಭೆಗೆ ಕಾರಣವಾದ ಘಟನೆ ಪ್ರವಾದಿ ಮೊಹಮ್ಮದರ ಅವಹೇಳನವಾಗಿದ್ದರೂ ಅದಕ್ಕೆ ಕಾರಣ ಬಿಜೆಪಿ ಶಾಸಕನ ಮಗ ಅಲ್ಲ. ನವೀನ್ ಎಂಬಾತ ಇದರ ಆರೋಪಿಯಾಗಿದ್ದು ಆತ ಕಾಂಗ್ರೆಸ್ ಶಾಸಕರ ಅಕ್ಕನ ಮಗನಾಗಿದ್ದಾರೆ. ಅಲ್ಲದೆ ಈ ಕಾಂಗ್ರೆಸ್ ಶಾಸಕ ತನಗೂ ತನ್ನ ಅಕ್ಕನ ಮಗನಿಗೂ ಕಳೆದ ಹತ್ತು ವರ್ಷದಿಂದ ಸಂಪರ್ಕ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಭೂಮಿಪೂಜೆಯಂದು ಇಂಗ್ಲೆಂಡ್‌ ಪ್ರಧಾನಿ ರಾಮನ ವಿಗ್ರಹಕ್ಕೆ ಅಭಿಷೇಕ ಮಾಡಿದರೆ?

ಎರಡನೆಯದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಗಳು ನಿಜಕ್ಕೂ ಹಳೆಯ ಚಿತ್ರಗಳಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದ ಸಮಯದಲ್ಲಿ ನಡೆದ ಈಶಾನ್ಯ ದೆಹಲಿಯ ಹಿಂಸಾಚಾರದ್ದಾಗಿದೆ.

ಒಂದನೇ ಚಿತ್ರ;

ಮೇಲಿನ ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಾಡಿದಾಗ ಈ ಚಿತ್ರದ ಬಗೆಗಿನ ಹಲವಾರು ವರದಿಗಳನ್ನು ನೋಡಬಹುದಾಗಿದೆ.

ನ್ಯೂಸ್ 18 ವರದಿಯೊಂದು, “ದೆಹಲಿ ಹಿಂಸಾಚಾರ: ಸಿಎಎ ಪ್ರತಿಭಟನೆಗಳ ನಂತರ ಭೀಕರ ಗಲಭೆಗಳು ಭುಗಿಲೆದ್ದವು; ಚಿತ್ರಗಳನ್ನು ನೋಡಿ” ಎಂಬ ಶೀರ್ಷಿಕೆಯ ಅಡಿಯಲ್ಲಿ ಮೇಲಿನ ಚಿತ್ರವನ್ನು ಕಾಣಬಹುದಾಗಿದೆ.

ಚಿತ್ರವನ್ನು ಪಿಟಿಐ ಛಾಯಾಗ್ರಾಹಕ ರವಿ ಚೌಧರಿ ಕ್ಲಿಕ್ ಮಾಡಿದ್ದಾರೆ.

ಎರಡನೇ ಚಿತ್ರ

ಈ ಚಿತ್ರವನ್ನು ಕೂಡಾ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ ದೆಹಲಿಯ ಹಿಂಸಾಚಾರದ ಕುರಿತು ಹಲವಾರು ಸುದ್ದಿಗಳಲ್ಲಿ ಇದನ್ನು ನೋಡಬಹುದು.

ಪುಣೆ ಮಿರರ್ ಪ್ರಕಟಿಸಿದ ಲೇಖನವೊಂದರಲ್ಲಿ, “ಜಿ ಕಿಶನ್ ರೆಡ್ಡಿ: ಡೊನಾಲ್ಡ್ ಟ್ರಂಪ್ ಅವರ ಭೇಟಿಯ ಸಮಯದಲ್ಲಿ ಭಾರತದ ಚಿತ್ರಣವನ್ನು ಕೆಡಿಸುವ ಗುರಿಯನ್ನು ಹೊಂದಿರುವ ದೆಹಲಿ ಗಲಭೆಗಳು” ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಪ್ರಕಟಿಸಲಾಗಿದೆ.

ಛಾಯಾಚಿತ್ರವನ್ನು ಟೈಮ್ಸ್ ಆಫ್ ಇಂಡಿಯಾದ ಫೋಟೊ ಜರ್ನಲಿಸ್ಟ್ ಅನಿಂದ್ಯಾ ಚಟ್ಟೋಪಾಧ್ಯಾಯ ಕ್ಲಿಕ್ ಮಾಡಿದ್ದಾರೆ.

ಸ್ಪಷ್ಟವಾಗಿ ಹೇಳಬೇಕಾದರೆ, ಬೆಂಗಳೂರಿನಲ್ಲಿ ಹಿಂಸಾಚಾರ ಎಂದು ಹಂಚಿಕೊಂಡ ಚಿತ್ರಗಳು ವಾಸ್ತವವಾಗಿ ಹಳೆಯದು ಮತ್ತು ದೆಹಲಿ ಹಿಂಸಾಚಾರದ ಚಿತ್ರಗಳಾಗಿವೆ.


ಓದಿ: ಕೊರೊನಾ ನೆಪದಲ್ಲಿ ಈ ವೈದ್ಯ ಕಿಡ್ನಿ ಕದಿಯುತ್ತಿದ್ದರೆ? ಏನಿದು ಪ್ರಕರಣ?


pic

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...