Homeಅಂಕಣಗಳುಫೇಕು ಪತ್ರ: ಪೋಸ್ಟ್ಕಾರ್ಡಿನ ಮಹೇಶ ಹೆಗೆಡೆ ವಿಚಾರಣೆ ಬಾಯಿಬಡುಕಿ ಶೃತಿ ಬೆಳ್ಳಕ್ಕಿ ಬಂಧನ

ಫೇಕು ಪತ್ರ: ಪೋಸ್ಟ್ಕಾರ್ಡಿನ ಮಹೇಶ ಹೆಗೆಡೆ ವಿಚಾರಣೆ ಬಾಯಿಬಡುಕಿ ಶೃತಿ ಬೆಳ್ಳಕ್ಕಿ ಬಂಧನ

- Advertisement -
- Advertisement -

 

ಪೋಸ್ಟ್ಕಾರ್ಡ್ ನ್ಯೂಸ್ ಎಂಬ ಫೇಕ್‌ನ್ಯೂಸ್ ಪೋರ್ಟಲ್‌ನ ಸಂಸ್ಥಾಪಕ ಮಹೇಶ ವಿಕ್ರಮ ಹೆಗಡೆಯನ್ನು ಸಿಐಡಿ ಪೊಲೀಸರು ಫೇಕ್ ಪತ್ರದ ಸೃಷ್ಟಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಈ ಸುದ್ದಿ ರಾಜ್ಯಾದ್ಯಂತ ತಲುಪುವ ಮೊದಲೇ ಬಿಜೆಪಿಯ ಒಂದಿಬ್ಬರು ನಾಯಕರು ಟ್ವೀಟ್ ಮಾಡಿ, ಮಹೇಶ ಬಂಧನ ಖಂಡನೀಯ ಎಂದಿದ್ದರು!! ಪೋಸ್ಟ್ಕಾರ್ಡ್ ಎನ್ನುವುದು ಬಿಜೆಪಿ ಪ್ರಾಯೋಜಿತ ಪೋರ್ಟಲ್ ಎಂಬುದಂತೂ ಹೊಸ ವಿಷಯವೇನಲ್ಲ ಬಿಡಿ…

ಸಚಿವ ಎಂಬಿ, .ಪಾಟೀಲರ ಹೆಸರಿನಲ್ಲಿ ಫೋರ್ಜರಿ ಪತ್ರವನ್ನು ಸೃಷ್ಟಿಸಿದ ಪ್ರಕರಣದ ವಿಚಾರಣೆ ತೀವ್ರಗೊಂಡಿದ್ದು, ಅದರ ಭಾಗವಾಗಿ ನಿನ್ನೆ ಏಪ್ರಿಲ್ 24ರಂದು ಧಾರವಾಡ ಪೊಲೀಸರು ಶೃತಿ ಬೆಳ್ಳಕ್ಕಿ ಎಂಬ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಶೃತಿ ಧಾರವಾಡ ಬಿಜೆಪಿ ಗ್ರಾಮೀಣ ವಿಭಾಗದ ಅಧ್ಯಕ್ಷ ಪರಮೇಶ ಉಳವಣ್ಣವರ್ ಪತ್ನಿಯಾಗಿದ್ದು, ಸೋನಿಯಾರಿಗೆ ಎಂ. ಬಿ. ಪಾಟೀಲರು ಬರೆದಿದ್ದ ‘ಫೇಕ್’ ಪತ್ರವನ್ನು ಉಲ್ಲೇಖಿಸಿ, ಕಾಂಗ್ರೆಸ್ ವಿರುದ್ಧ ಚುನಾವಣಾ ಭಾಷಣ ಮಾಡುವ ಸಂದರ್ಭದಲ್ಲಿ ಸಮುದಾಯಗಳಿಗೆ ಅವಮಾನವಾಗುವಂತೆ ಮಾತಾಡಿದ್ದರು. ತಮ್ಮ ಆ ಭಾಷಣವನ್ನು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದರು. ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿರುದ್ಧ ಪುತೂರಿ ನಡೆಸಲು ಬಿಜೆಪಿ ನಾಯಕರು ಈ ಕಾರ್ಯಕರ್ತೆಯನ್ನು ಬಳಸಿಕೊಂಡು, ವಿಜಯವಾಣಿಯಲ್ಲಿ ಬಂದಿದ್ದ ಫೇಕ್ ಪತ್ರದ ಕುರಿತು ಸುದ್ದಿ ಹರಡಲು ಯತ್ನಿಸಿದ್ದರು.

ಹಾಗೆಯೇ ನಿನ್ನೆ ‘ಫೇಕ್’ ಪತ್ರದ ರೂವಾರಿ ಎನ್ನಲಾದ ಪೋಸ್ಟ್ಕಾರ್ಡ್ನ ಮಹೇಶ ಹೆಗಡೆಯ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.

ಹಿನ್ನೆಲೆ ಕೆದಕುತ್ತ….

ಈ ಫೇಕ್ ಪತ್ರ ಮೊದಲ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತಕ್ಕೆ ಬಂದಿದ್ದು 2017ರಲ್ಲಿ ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ
ಚಳವಳಿ ಜೋರಾಗಿದ್ದ ಸಂದರ್ಭದಲ್ಲಿ. ನಂತರ ಕಳೆದ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ. ಕಾಂಗ್ರೆಸ್ ಅಧ್ಯಕ್ಷೆಗೆ ಅಂದಿನ ಜಲ ಸಂಪನ್ಮೂಲ ಸಚಿವ (ಈಗಿನ ಗೃಹ ಸಚಿವ) ಬರೆದ ಪತ್ರ ಇದೆಂದು ಸೃಷ್ಟಿಸಲಾಗಿತ್ತು. ಜಾಗತಿಕ ಕ್ಯಾಥೋಲಿಕ್ ಸಂಘಟನೆಗಳ ಆಶಯದಂತೆ ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಉದ್ದೇಶಕ್ಕಾಗಿ ಎಂ.ಬಿ. ಪಾಟೀಲರು ಸೋನಿಯಾ ಗಾಂಧಿಯವರಿಗೆ ಭಿನ್ನವಿಸುವ
ರೀತಿಯಲ್ಲಿ ಪತ್ರವನ್ನು ಸೃಷ್ಟಿಸಲಾಗಿತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಹಿಂದೆ ಸೋನಿಯಾ ಗಾಂಧಿ ಮತ್ತು ಕ್ಯಾಥೊಲಿಕ್ ಸಂಘಟನೆಗಳ ಕೈವಾಡ ಇದೆ ಎಂದೂ, ಹಿಂದೂ ಧರ್ಮಕ್ಕೆ ಅಪಾಯ ಕಾದಿದೆ ಎಂದೂ ಸುಳ್ಳು ಹರಡಲಾಗಿತ್ತು. ಇದನ್ನು ಮುಂಚೂಣಿಗೆ ತಂದಿದ್ದು ಪೋಸ್ಟ್ಕಾರ್ಡ್ ನ್ಯೂಸ್ ಎಂಬ ಫೇಕು ಖ್ಯಾತಿಯ ಪೋರ್ಟಲ್.

ಆಗಲೇ ಅನೇಕ ಫ್ಯಾಕ್ಟ್ ಚೆಕಿಂಗ್ ಪೋರ್ಟಲ್‌ಗಳು ಈ ಪತ್ರ ನಕಲಿ ಎಂದು ಪ್ರೂವ್ ಮಾಡಿದ್ದವು. ಬಿಎಲ್‌ಡಿಇಎ ಸಂಸ್ಥೆಯ ಲೆಟರ್‌ಹೆಡ್‌ನ ಫೋರ್ಜರಿ ಮಾಡಲಾಗಿತ್ತಲ್ಲದೇ, ಎಂ.ಬಿ. ಪಾಟೀಲರ ಸಹಿಯನ್ನೂ ಫೋರ್ಜರಿ ಮಾಡಲಾಗಿತ್ತು. ಆಗ ಚುನಾವಣೆ ಗದ್ದಲದಲ್ಲಿ ಪೊಲೀಸರೂ ಬಹಳ ತಲೆ ಕೆಡಿಸಿಕೊಂಡಿರಲಿಲ್ಲ. ರಾಜ್ಯ ಬಿಜೆಪಿ ಘಟಕವೂ ಅದೇ ಪತ್ರ ಬಳಸಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿತ್ತು.

ಈಗ ಅದೇ ಪತ್ರವನ್ನು ಕಳೆದ ವಾರ ಏಪ್ರಿಲ್ 16ರಂದು ಮತ್ತೆ ವಿಜಯವಾಣಿ ಪ್ರಕಟಿಸಿ ಎಂ.ಬಿ. ಪಾಟೀಲರ ಆಕ್ರೋಶಕ್ಕೆ ಗುರಿಯಾಗಿತ್ತು. ಇದನ್ನು ನಾನುಗೌರಿ.ಕಾಮ್ ಸವಿವರವಾಗಿ ವರದಿ ಮಾಡಿ, ಫೇಕ್‌ನ್ಯೂಸ್ ಎಂಬುದನ್ನು ಜನರ ಗಮನಕ್ಕೆ ತಂದಿತ್ತು.

ಈಗ ಎಂ.ಬಿ. ಪಾಟೀಲರೇ ಗೃಹ ಸಚಿವರಾಗಿರುವುದರಿಂದ ಪೊಲೀಸರು ತನಿಖೆಯನ್ನು ಕ್ಷಿಪ್ರವಾಗಿ ನಡೆಸುತ್ತಿರುವಂತೆ ಕಾಣುತ್ತಿದೆ. ತನಿಖೆ ಫೇಕುವೀರರ ಬುಡಕ್ಕೆ ತಲುಪಿದರಷ್ಟೇ ಹಿಂದಿರುವ ‘ನಾಯಕರ’ ಬಣ್ಣ ಬಯಲಾದೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೇ.56 ರ ಮೀಸಲಾತಿ ಅನುಸಾರ ನೇಮಕಾತಿ ಅಧಿಸೂಚನೆ ಹೊರಡಿಸಬಾರದು..’; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

"ಚಾಲ್ತಿಯಲ್ಲಿರುವ ಶೇ.50ರ ಮೀಸಲಾತಿಯ ಅನ್ವಯ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಶೇ.56 ಕ್ಕೆ ಮೀಸಲಾತಿ ಹೆಚ್ಚಿಸಿರುವುದರ ಅನುಸಾರ ಹೊಸದಾಗಿ ಅಧಿಸೂಚನೆ ಹೊರಡಿಸಬಾರದು" ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌...

ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾದ ಸರ್ಕಾರ : ವಿದ್ಯಾರ್ಥಿ ಸಂಘಟನೆಗಳಿಂದ ಆಕ್ರೋಶ

ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಎಡ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಬುಧವಾರ (ಜ.21) ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಎಐಎಸ್ಎಫ್,...

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ನಿರಾಕರಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಜನವರಿ 22 ರಿಂದ ನಡೆಯಲಿರುವ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬುಧವಾರ ನಿರಾಕರಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಗೆಹ್ಲೋಟ್ ಅವರೊಂದಿಗೆ...

ಒಡಿಶಾ| ಪಾದ್ರಿ ಮೇಲೆ ಗುಂಪು ಹಲ್ಲೆ ನಡೆಸಿ ಅವಮಾನ; ಎರಡು ವಾರವಾದರೂ ಆರೋಪಿಗಳನ್ನು ಬಂಧಿಸದ ಪೊಲೀಸರು

ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ಬಜರಂಗದಳ ಸದಸ್ಯರಿಂದ ಕ್ರೂರವಾಗಿ ಹಲ್ಲೆಗೊಳಗಾಗಿ ಸಾರ್ವಜನಿಕವಾಗಿ ಅವಮಾನಕ್ಕೆ ಒಳಗಾದ ಕ್ರಿಶ್ಚಿಯನ್ ಪಾದ್ರಿಯೊಬ್ಬರು, ತನ್ನ ಮೇಲೆ ದಾಳಿ ಮಾಡಿದವರನ್ನು ಕ್ಷಮಿಸಲು ನಿರ್ಧರಿಸಿದ್ದಾರೆ. ಘಟನೆ ನಡೆದು ಎರಡು ವಾರಗಳಿಗಿಂತ ಹೆಚ್ಚು ಕಾಲ...

ಕೆನಡಾ: ಸುಲಿಗೆ ಪ್ರಕರಣಗಳಲ್ಲಿ 111 ವಿದೇಶಿ ಪ್ರಜೆಗಳ ಪಾತ್ರದ ಬಗ್ಗೆ ತನಿಖೆ: ಹೆಚ್ಚಿನವರು ಪಂಜಾಬ್ ನಿಂದ ಬಂದ ಭಾರತೀಯರೆಂದು ವರದಿ  

ಚಂಡಿಗ್ರಾ: ಬ್ರಿಟಿಷ್ ಕೊಲಂಬಿಯಾ ಸುಲಿಗೆ ಕಾರ್ಯಪಡೆಯು ಕೆಳ ಮೇನ್‌ಲ್ಯಾಂಡ್‌ನಲ್ಲಿನ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಂಕಿಸಲಾಗಿರುವ 111 ವಿದೇಶಿ ಪ್ರಜೆಗಳ ತನಿಖೆ ನಡೆಸುತ್ತಿದೆ. ಇದರಲ್ಲಿ ಹೆಚ್ಚಿನವರು ಪಂಜಾಬ್‌ನಿಂದ ಬಂದಿರುವ ಭಾರತೀಯ...

ವಿಡಿಯೋ ವೈರಲ್ ಬಳಿಕ ವ್ಯಕ್ತಿ ಆತ್ಮಹತ್ಯೆ ಪ್ರಕರಣ : ಆರೋಪಿ ಮಹಿಳೆಯನ್ನು ಬಂಧಿಸಿದ ಪೊಲೀಸರು

ಬಸ್‌ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬಳಿಕ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಕೇರಳದ ಕೋಝಿಕ್ಕೋಡ್ ಪೊಲೀಸರು ಬಂಧಿಸಿದ್ದಾರೆ. 42 ವರ್ಷದ ಸೇಲ್ಸ್...

ಪ್ರಿಯಕರನೊಂದಿಗೆ ವಾಸಿಸಲು ‘ಸುಳ್ಳು ಗೋಹತ್ಯೆ ಪ್ರಕರಣ’ದಲ್ಲಿ ಗಂಡನನ್ನು ಸಿಲುಕಿಸಿದ ಪತ್ನಿ

ತನ್ನ ಪ್ರಿಯಕರನೊಂದಿಗೆ ವಾಸಿಸಲು ವಿವಾಹಿತ ಮಹಿಳೆಯೊಬ್ಬಳು ಮಾಡಿದ ದುಷ್ಕೃತ್ಯವೊಂದರಲ್ಲಿ ಆಕೆಯ ಪತಿ ಸುಳ್ಳು ಗೋಹತ್ಯೆ ಪ್ರಕರಣಗಳಲ್ಲಿ ಎರಡು ಬಾರಿ ಪೊಲೀಸರಿಂದ ಬಂಧನಕ್ಕೆ ಒಳಗಾಗಬೇಕಾದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಇದೇ ಪ್ರಕರಣದ...

ಎಲ್‌ಐಸಿ ಕಚೇರಿ ಬೆಂಕಿ ಪ್ರಕರಣಕ್ಕೆ ತಿರುವು : ಅಕ್ರಮ ಮುಚ್ಚಿ ಹಾಕಲು ಸಹೋದ್ಯೋಗಿಯಿಂದ ವ್ಯವಸ್ಥಾಪಕಿಯ ಕೊಲೆ ಎಂದ ತನಿಖೆ

ಡಿಸೆಂಬರ್‌ನಲ್ಲಿ ಮಧುರೈನ ಜೀವ ವಿಮಾ ನಿಗಮ (ಎಲ್‌ಐಸಿ) ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಆರಂಭದಲ್ಲಿ ನಂಬಿದಂತೆ ಅದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ತಮಿಳುನಾಡು ಪೊಲೀಸರು ತೀರ್ಮಾನಿಸಿದ್ದಾರೆ....

‘ಅಕ್ರಮ ಗಣಿಗಾರಿಕೆ ಸರಿಪಡಿಸಲಾಗದ ಹಾನಿಗೆ ಕಾರಣವಾಗಬಹುದು’: ಅರಾವಳಿ ಸಮಗ್ರ ಪರೀಕ್ಷೆಗೆ ತಜ್ಞರ ಸಮಿತಿ ರಚಿಸಲು ಸುಪ್ರೀಂ ಸೂಚನೆ

ನವದೆಹಲಿ: ಅಕ್ರಮ ಗಣಿಗಾರಿಕೆಯಿಂದ ಸರಿಪಡಿಸಲಾಗದ ಹಾನಿ ಉಂಟಾಗಬಹುದು ಎಂದು ಗಮನಿಸಿದ ಸುಪ್ರೀಂ ಕೋರ್ಟ್, ಅರಾವಳಿಯಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ಸಮಸ್ಯೆಗಳ ಸಮಗ್ರ ಪರೀಕ್ಷೆಯನ್ನು ಕೈಗೊಳ್ಳಲು ಡೊಮೇನ್ ತಜ್ಞರನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸುವುದಾಗಿ...

ಮೋದಿ ಕಾರ್ಯಕ್ರಮದಲ್ಲಿ ಸಮೋಸ ವಿತರಣೆಗೆ 2 ಕೋಟಿ ರೂ. ಖರ್ಚು : ಬಿಜೆಪಿ ವಿರುದ್ಧ ಕೇಜ್ರಿವಾಲ್ ಆರೋಪ

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಗುಜರಾತ್‌ನ ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಕಾರ್ಯಕ್ರಮಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್...