ದೆಹಲಿಯ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರಿಗೆ ಜಮೀನ್ದಾರ ವಿದ್ಯಾರ್ಥಿ ಸಂಸ್ಥೆ (ಜೆಎಸ್‌ಒ) ಆಯೋಜಿಸಿದ್ದ ವತಿಯಿಂದ ಕಾಂಗ್ರೆಸ್ ಮುಖಂಡ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ರೈತರಿಗೆ ಆಹಾರ ವಿತರಿಸಿದ್ದಾರೆ.
ರೈತ ವಿರೋಧಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಾಕ್ಸಿಂಗ್ ಚಾಂಪಿಯನ್ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ವಿಜೇಂದರ್ ಸಿಂಗ್ ಬೆಂಬಲ ನೀಡಿದ್ದಾರೆ.
“ನಾವು ನಮ್ಮ ದೇಶದ ರೈತರಿಗೆ ಸೇವೆ ಸಲ್ಲಿಸಲು ನಾವು ಇಲ್ಲಿದ್ದೇವೆ. ನಮ್ಮ ಹೋರಾಟವು ಸರ್ಕಾರದ ವಿರುದ್ಧವಲ್ಲ. ಆದರೆ, ಆ ಮೂರು ಕರಾಳ ಕಾನೂನುಗಳ ವಿರುದ್ಧ” ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.
Delhi: Congress leader & boxer, Vijender Singh distributes food at langar organised by Jamindara Student Organization (JSO) for protesting farmers at Tikri Border
"We are here to serve the farmers of our country. Our fight is not against the govt but the 3 black laws," he says pic.twitter.com/FPu4i1i8R2
— ANI (@ANI) December 18, 2020
ಇದನ್ನೂ ಓದಿ: ರೈತರ ಹೋರಾಟ ಮುಂದುವರೆಯಲಿ. ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಸುಪ್ರೀಂ ಕೋರ್ಟ್
ರೈತರ ಪ್ರತಿಭಟನೆಗೆ ಬೆಂಬಲ ಕೊಟ್ಟ ಕ್ರೀಡಾಪಟುಗಳಲ್ಲಿ ಒಲಂಪಿಯನ್ ವಿಜೇಂದರ್ ಸಿಂಗ್ ಕೂಡ ಒಬ್ಬರು. ಕರಾಳ ಕೃಷಿ ನೀತಿಯನ್ನು ಹಿಂಪಡೆಯದಿದ್ದರೆ ತನಗೆ ಸಿಕ್ಕಿರುವ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನವನ್ನು ಹಿಂದಿರುಗಿಸುವುದಾಗಿ ಅವರು ಘೋಷಿಸಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಜೇಂದರ್ ಸಿಂಗ್ “ನಾನು ಪಂಜಾಬ್‌ನಲ್ಲಿ ತರಬೇತಿ ಪಡೆದಿದ್ದೇನೆ ಮತ್ತು ಅಲ್ಲಿನ ರೊಟ್ಟಿ ತಿಂದಿದ್ದೇನೆ. ಇಂದು ರೈತರು ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ನಾನು ಅವರ ಸೋದರನಾಗಿ ಬಂದಿದ್ದೇನೆ. ಹರಿಯಾಣದ ಇತರ ಕ್ರೀಡಾಪಟುಗಳು ಕೂಡಾ ಪ್ರತಿಭಟನಾ ಸ್ಥಳಕ್ಕೆ ಬರಲು ಬಯಸಿದ್ದರು. ಆದರೆ ಅವರಿರುವ ಸರ್ಕಾರಿ ಉದ್ಯೋಗಳು ಅವರಿಗೆ ಬರದಂತೆ ತಡೆಯುತ್ತಿವೆ. ಅವರೂ ರೈತರ ಪರವಿದ್ದಾರೆ” ಎಂದು ಹೇಳಿದ್ದಾರೆ.
ಹರಿಯಾಣದ ವಿಜೇಂದರ್ ಸಿಂಗ್ ಅವರು ಒಲಿಂಪಿಕ್‌ನ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಬಾಕ್ಸರ್. ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿ ಸೋತಿದ್ದರು.
ಇದನ್ನೂ ಓದಿ: ಕೃಷಿ ಕಾನೂನು ಹಿಂಪಡೆಯದಿದ್ದರೆ ಖೇಲ್ ರತ್ನ ಪ್ರಶಸ್ತಿ ವಾಪಾಸ್: ಬಾಕ್ಸರ್ ವಿಜೇಂದರ್ ಸಿಂಗ್


