ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ್ದ ಪ್ರಸ್ತಾಪವನ್ನು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (AIKSCC) ತಿರಸ್ಕರಿಸಿದ್ದು, ರೈತರ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದೆ ಎಂದು ಮಾಧ್ಯಮ ಬುಲೆಟಿನ್‌ನಲ್ಲಿ ತಿಳಿಸಿದೆ.
ಮೋದಿ ಸರ್ಕಾರವು ಹಳೆಯ ಪ್ರಸ್ತಾಪಗಳನ್ನೇ ಹೊಸ ಬಟ್ಟೆ ಧರಿಸಿದಂತೆ ಮಾಡಿ ಅವುಗಳನ್ನೆ ಮತ್ತೆ ಕೊಟ್ಟಿದೆ. ಇವುಗಳನ್ನು ಎಲ್ಲಾ ರೈತ ಸಂಘಟನೆಗಳು ಒಮ್ಮತವಾಗಿ ತಿರಸ್ಕರಿಸಿವೆ ಎಂದು ಮಾಧ್ಯಮ ಬುಲೆಟಿನ್‌ನಲ್ಲಿ AIKSCC ಹೇಳಿದೆ.
AIKSCC ಮತ್ತು ಎಲ್ಲಾ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಮತ್ತು ವಿದ್ಯತ್ ಕಾಯ್ದೆ 2020 ಅನ್ನು ರದ್ದುಗೊಳಿಸುವ ತಮ್ಮ ಬೇಡಿಕೆಯನ್ನು ಮತ್ತೆ ಸರ್ಕಾರದ ಮುಂದಿಡುತ್ತಿವೆ ಎಂದಿದೆ. ಜೊತೆಗೆ ಪ್ರತಿಭಟನೆಗೆ ದೆಹಲಿಯಲ್ಲಿ ಹೆಚ್ಚಿನ ರೈತರು ಸೇರಬೇಕು ಎಂದು ಕರೆ ನೀಡಿದೆ. ಇಲ್ಲವಾದಲ್ಲಿ ಎಲ್ಲಾ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದ ರೈತ ಧರಣಿಗಳನ್ನುಪ್ರಾರಂಭಿಸಲು ಕರೆ ನೀಡಿದೆ.
ಇದನ್ನೂ ಓದಿ: ಯಾವುದೇ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಕೇಂದ್ರ ಘೋಷಿಸಬಹುದು: ಸುಪ್ರೀಂಕೋರ್ಟ್
We reject the government's proposals: Darshan Pal, President of Krantikari Kisan Union at Singhu (Delhi-Haryana border)#FarmLaws pic.twitter.com/FmBgyqAiU2
— ANI (@ANI) December 9, 2020
ಎಐಸಿಸಿಸಿಯ ರಾಷ್ಟ್ರೀಯ ಕಾರ್ಯನಿರತ ಸಂಘವು ಸಭೆ ಸೇರಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.
೧. ಎಐಕೆಎಸ್‌ಸಿಸಿ ಕೇಂದ್ರ ಸರ್ಕಾರದ “ಹೊಸ” ಪ್ರಸ್ತಾಪವನ್ನು ರೈತ ಸಂಘಟನೆಗಳು ನಿಷ್ಠುರ ಮತ್ತು ಸೊಕ್ಕಿನ ಪ್ರಸ್ತಾಪ ಎಂದು ಕರೆದು ಅದನ್ನು ಖಂಡಿಸಿ, ತಿರಸ್ಕರಿಸಿದ್ದಾರೆ.
೨. ರೈತ ಸಂಘಟನೆ ಎಐಕೆಎಸ್‌ಸಿಸಿ ಮೋದಿ ಸರ್ಕಾರವನ್ನು ಬಹಿರಂಗ ಪಡಿಸಲು, ರಾಷ್ಟ್ರವ್ಯಾಪಿ “ಸರ್ಕಾರ್ ಕಿ ಅಸ್ಲಿ ಮಜ್ಬೂರಿ – ಅದಾನಿ, ಅಂಬಾನಿ, ಜಮಾಖೋರಿ (ಸರ್ಕಾರದ ನಿಜವಾದ ಅಸಹಾಯಕತೆ-ಅದಾನಿ, ಅಂಬಾನಿ, ಜಮಾಖೋರಿ) ಎಂಬ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಪ.ಬಂಗಾಳ: ಬಿಜೆಪಿ ನಾಯಕರ ಮೇಲೆ ಜಾಮೀನು ರಹಿತ ಪ್ರಕರಣದಲ್ಲಿ ಎಫ್‌ಐಆರ್ ದಾಖಲು!
೩. ಎಐಕೆಎಸ್‌ಸಿಸಿ ಎಲ್ಲಾ ಜಿಲ್ಲೆಗಳು ಮತ್ತು ರಾಜ್ಯ ರಾಜಧಾನಿಗಳಲ್ಲಿ ನಿರಂತರ ರೈತ ಪ್ರತಿಭಟನೆ ಆಯೋಜಿಸಲು ರೈತ ಸಂಘಟನೆಗಳಿಗೆ ಕರೆ ನೀಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ರೈತರಿಗೆ ಬೆಂಬಲ ನೀಡುವ ಇತರ ಸಂಸ್ಥೆಗಳೊಂದಿಗೆ ಜಂಟಿಯಾಗಿ ಧರಣಿ ಆರಂಭಿಸಲು ಕರೆ ನೀಡಿದೆ.
೪. ಡಿಸೆಂಬರ್ 8 ರ ’ಭಾರತ್ ಬಂದ್’ ಜನಪ್ರಿಯ ರೈತರ ಪ್ರತಿಭಟನೆಯಾಗಿ ಯಶಸ್ವಿಯಾಗಿದೆ. ರೈತ ಸಂಘಟನೆ ಎಲ್ಲಾ ವರ್ಗದವರ ಬೆಂಬಲವನ್ನು ಅಭಿನಂದಿಸುತ್ತದೆ ಎಂದಿದೆ.
೫. ಭಾರತ್ ಬಂದ್‌ನಲ್ಲಿ ಸಾಮೂಹಿಕ ಭಾಗವಹಿಸುವಿಕೆಯನ್ನು ಗಮನಿಸಿದ ರೈತ ಸಂಘವು ಪ್ರತಿಭಟನೆ ತೀವ್ರಗೊಳಿಸಲು ದೆಹಲಿಗೆ “ಫಾರ್ಮರ್ಸ್ ಮಾರ್ಚ್” ಆಯೋಜಿಸಲು ಎಲ್ಲಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಕರೆ ನೀಡಿದೆ.
ಇನ್ನೂ, ಡಿಸೆಂಬರ್ 12 ರಂದು ಪ್ರತಿಭಟನೆ ನಡೆಸಿ ದೆಹಲಿ-ಜೈಪುರ ಮತ್ತು ದೆಹಲಿ-ಆಗ್ರಾ ಹೆದ್ದಾರಿಗಳನ್ನು ನಿರ್ಬಂಧಿಸುತ್ತೇವೆ ಎಂದು ಸಿಂಘ ಗಡಿಯಲ್ಲಿ ರೈತ ಮುಖಂಡರು ಹೇಳಿಕೆ ನೀಡಿದ್ದಾರೆ.


