Homeಚಳವಳಿಹರಿಯಾಣದ ಎಲ್ಲಾ ಬಿಜೆಪಿ, ಜೆಜೆಪಿ ಮುಖಂಡರ ಸಾಮಾಜಿಕ ಬಹಿಷ್ಕಾರಕ್ಕೆ ರೈತರ ನಿರ್ಧಾರ

ಹರಿಯಾಣದ ಎಲ್ಲಾ ಬಿಜೆಪಿ, ಜೆಜೆಪಿ ಮುಖಂಡರ ಸಾಮಾಜಿಕ ಬಹಿಷ್ಕಾರಕ್ಕೆ ರೈತರ ನಿರ್ಧಾರ

ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ಸರ್ಕಾರದ ಪರವಾಗಿ ಮತ ಚಲಾಯಿಸಿದ ಅಸೆಂಬ್ಲಿ ಸದಸ್ಯರ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದೆ.

- Advertisement -
- Advertisement -

ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರ ಅವಿಶ್ವಾಸ ನಿರ್ಣಯವನ್ನು ಗೆದ್ದ ನಂತರ, ಆಡಳಿತ ಪಕ್ಷದ ಶಾಸಕರು, ಜೆಜೆಪಿ ಮತ್ತು ಸ್ವತಂತ್ರ ಶಾಸಕರು ಪ್ರತಿಭಟನಾ ನಿರತ ರೈತರ ಕೋಪವನ್ನು ಎದುರಿಸುತ್ತಿದ್ದಾರೆ. ಗುರುವಾರ ಒಬ್ಬ ಶಾಸಕರ ನಿವಾಸದ ಹೊರಗೆ ಪ್ರತಿಭಟನೆ ನಡೆಸಲಾಗಿದೆ.

106 ದಿನಗಳಿಂದ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಸಂಯುಕ್ತ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಅವಿಶ್ವಾಸ ಮತ ನೀಡಿ, ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಕರೆ ನೀಡಿತ್ತು.

ಆದರೆ, ನಿನ್ನೆ (ಮಾರ್ಚ್ 10) ಹರಿಯಾಣ ವಿಧಾನಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಬಿಜೆಪಿ ಗೆದ್ದುಕೊಂಡಿದೆ. ಇದರಿಂದ ತೀವ್ರ ಹೋರಾಟಕ್ಕೆ ಸಜ್ಜಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ಸರ್ಕಾರದ ಪರವಾಗಿ ಮತ ಚಲಾಯಿಸಿದ ಅಸೆಂಬ್ಲಿ ಸದಸ್ಯರ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದೆ.

ಇದನ್ನೂ ಓದಿ: ಹರಿಯಾಣ ವಿಧಾನಸಭೆ: ಅವಿಶ್ವಾಸ ನಿರ್ಣಯ ಗೆದ್ದ ಬಿಜೆಪಿ-ಜೆಜೆಪಿ ಮೈತ್ರಿ

ಸ್ಥಳೀಯ ಶಾಸಕ ಅಸೀಮ್ ಗೋಯೆಲ್ ಅವರ ಅಂಬಾಲಾ ನಿವಾಸದ ಹೊರಗೆ ರೈತರು ಇಂದು ಪ್ರತಿಭಟನೆ ನಡೆಸಿದರು. ನಿನ್ನೆ ವಿಧಾನಸಭೆಯಲ್ಲಿ ಅವರು ಮಾಡಿದ ಭಾಷಣದಲ್ಲಿ, ಜನವರಿ 26 ರ ಕೆಂಪು ಕೋಟೆಯ ಹಿಂಸಾಚಾರವನ್ನು ಅವರು ಉಲ್ಲೇಖಿಸಿ, ಪ್ರತಿಭಟನಾ ನಿರತ ರೈತರು “ರಾಷ್ಟ್ರ ವಿರೋಧಿ” ಅಂಶಗಳನ್ನು ಸೂಚಿಸುತ್ತಾರೆ ಎಂದಿದ್ದರು. ನಂತರ, “ನಾನು ರೈತರನ್ನು ಹಾಗೆ ಕರೆಯಲಿಲ್ಲ. ನವದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ವಿವಾದಾತ್ಮಕ ಘೋಷಣೆಗಳನ್ನು ಉಲ್ಲೇಖಿಸಿದ್ದೇನೆ” ಎಂದು ಸ್ಪಷ್ಟಪಡಿಸಿದ್ದರು.

ಸರ್ಕಾರಕ್ಕೆ ಮತ ಚಲಾಯಿಸಿದ ಹರಿಯಾಣ ಲೋಖಿತ್ ಪಕ್ಷದ ಮುಖ್ಯಸ್ಥರಾಗಿರುವ ಸ್ವತಂತ್ರ ಶಾಸಕ ಗೋಪಾಲ್ ಗೋಯಲ್ ಕಂದಾ ಅವರ ಮನೆಯ ಹೊರಗೆ ಪ್ರತಿಭಟನೆ ನಡೆದಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ.

ಜನ್ನಾಯಕ್ ಜನತಾ ಪಕ್ಷ (ಜೆಜೆಪಿ) ಮತ್ತು ಇತರ ಸ್ವತಂತ್ರ ಶಾಸಕರು ಮುಖ್ಯಮಂತ್ರಿ ಖಟ್ಟರ್ ಅವರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಉಲ್ಲೇಖಿಸಿರುವ ಎಸ್‌ಕೆಎಂ ಮುಖಂಡರು, “ರೈತರಿಗೆ ಮತ್ತು ಅವರು ತಮಗೆ ಮಾಡಿಕೊಂಡಿರುವ ದೊಡ್ಡ ದ್ರೋಹ” ಎಂದು ಕರೆದಿದ್ದಾರೆ.

ಇದನ್ನೂ ಓದಿ: ಟೈಟಾನಿಕ್ ಚಲನಚಿತ್ರ ನೋಡಿದ್ದೀರಾ?- ಲಸಿಕೆ ಆದ್ಯತೆಯ ಬಗ್ಗೆ ಬಾಂಬೆ ಹೈಕೋರ್ಟ್ ಹೇಳಿದ್ದೇನು?

ಸಂಯುಕ್ತ ಕಿಸಾನ್ ಮೋರ್ಚಾ ತಮ್ಮ ಪತ್ರಿಕಾ ಹೇಳಿಕೆಯಲ್ಲಿ, ’ತಮ್ಮನ್ನು ಕೃಷಿ ಸಮುದಾಯಕ್ಕೆ ಸೇರಿದ ಪಕ್ಷ ಎಂದು ಬಣ್ಣಿಸುವ ಜೆಜೆಪಿಯ ರೈತ ವಿರೋಧಿ ಮುಖ ಸಂಪೂರ್ಣವಾಗಿ ಬಹಿರಂಗವಾಗಿದೆ. ಈಗ ನಡೆಯುತ್ತಿರುವ ಚಳುವಳಿಯಿಂದಾಗಿ ಈ ಶಾಸಕರಿಗೆ ಯಾವುದೇ ರಾಜಕೀಯ ಭವಿಷ್ಯವಿಲ್ಲ’ ಎಂದು ಹೇಳಿದೆ.

’ಈ ಶಾಸಕರ ರೈತ ವಿರೋಧಿ ಕೆಲಸಗಳ ವಿರುದ್ಧ ರೈತರು ವಿರೋಧ ಮತ್ತು ಪ್ರತಿರೋಧದ ಬೀಜಗಳನ್ನು ಬಿತ್ತಿದ್ದಾರೆ ಮತ್ತು ಶೀಘ್ರದಲ್ಲೇ ಕೊಯ್ಲು ಮಾಡಲಾಗುವುದು ಎಂದಿದೆ. ಹರಿಯಾಣದ ರೈತರು ಎಲ್ಲಾ ಬಿಜೆಪಿ ಮತ್ತು ಜೆಜೆಪಿ ಮುಖಂಡರನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ಮೂಲಕ ಈ ಪ್ರತಿಭಟನೆಯನ್ನು ತೀವ್ರಗೊಳಿಸಲು ಉದ್ದೇಶಿಸಿದ್ದಾರೆ’ ಎಂದು ಎಸ್‌ಕೆಎಂ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

10 ಶಾಸಕರಿರುವ ಜೆಜೆಪಿಯನ್ನು ಹರಿಯಾಣದಲ್ಲಿ ಕೃಷಿ ಸಮುದಾಯದಲ್ಲಿ ಬಲವಾದ ಬೇರುಗಳನ್ನು ಹೊಂದಿರುವ ಪಕ್ಷವಾಗಿ ನೋಡಲಾಗುತ್ತದೆ. ಇದು ಹರಿಯಾಣದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರ ಮೊಮ್ಮಗ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

ಈ ಶಾಸಕರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು, ಅವರಿಗೆ ಕಪ್ಪು ಧ್ವಜಗಳನ್ನು ತೋರಿಸಬೇಕು ಮತ್ತು ಸಭೆ ನಡೆಸಲು ಬಿಡಬಾರದು ಎಂದು ರೈತ ಸಂಘವು ಜನರಿಗೆ, ಅದರಲ್ಲೂ ವಿಶೇಷವಾಗಿ ರೈತರಿಗೆ ಕರೆ ನೀಡಿದೆ.

ಹರಿಯಾಣ ವಿಧಾನಸಭೆಯ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರದ ಪರ 55 ಮತಗಳು ಚಲಾವಣೆಯಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ಪರ 32 ಮತಗಳು ಬಿದ್ದಿವೆ.


ಇದನ್ನೂ ಓದಿ: Breaking: ಮಾ. 26ಕ್ಕೆ ಸಂಪೂರ್ಣ ಭಾರತ್ ಬಂದ್ – ಹೋರಾಟನಿರತ ರೈತರ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...