Homeಮುಖಪುಟನಾಮಪತ್ರ ತಿರಸ್ಕೃತ - ಅಸ್ಸಾಂನ ಮಾಜಿ ಶಾಸಕ ಆಸ್ಪತ್ರೆಗೆ ದಾಖಲು

ನಾಮಪತ್ರ ತಿರಸ್ಕೃತ – ಅಸ್ಸಾಂನ ಮಾಜಿ ಶಾಸಕ ಆಸ್ಪತ್ರೆಗೆ ದಾಖಲು

- Advertisement -
- Advertisement -

ಅಸ್ಸಾಂನ ಮಾಜಿ ಶಾಸಕ ಅಲೋಕ್‌ ಕುಮಾರ್‌ ಘೋಷ್‌ ವಿಧಾನಸಭಾ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರ ತಿರಸ್ಕೃತಗೊಂಡ ಕೆಲವೆ ಗಂಟೆಗಳಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಜಿ ಶಾಸಕರಾಗಿದ್ದ ಅವರು ಈ ಹಿಂದಿನಿಂದಲೂ ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

2004 ರಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿ ಎರಡು ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ್ದ ಘೋಷ್‌‌, ಹೊಸದಾಗಿ ಉದಯವಾಗಿರುವ ಅಸೋಮ್ ಜತಿಯ ಪರಿಷತ್ (ಎಜೆಪಿ) ಅಭ್ಯರ್ಥಿಯಾಗಿ ಮರಿಯಾನಿ ಸ್ಥಾನದಿಂದ ನಾಮಪತ್ರ ಸಲ್ಲಿಸಿದ್ದರು.

ಇದನ್ನೂ ಓದಿ: ವಿದೇಶದಿಂದ ಬಸ್ ಖರೀದಿಯಲ್ಲೂ ಲಂಚ: ಎಲ್ಲ ಗೊತ್ತಿದ್ದರೂ ಮಲಗೇ ಇರುವ ದೊಡ್ಡ ಮೀಡಿಯಾ!

ನಾಮಪತ್ರದ ಎರಡು ಪುಟಗಳು ಕಾಣೆಯಾಗಿದೆ ಎಂದು ರಿಟರ್ನಿಂಗ್‌ ಅಧಿಕಾರಿ ತಿಳಿಸಿದ್ದಾರೆಂದು ವರದಿಯಾಗಿದೆ.

62 ವರ್ಷದ ಘೋಶ್‌‌ ಈ ಹಿಂದೆ ಆಡಳಿತಾರೂಢ ಬಿಜೆಪಿಯೊಂದಿಗಿದ್ದರು. ಅವರು ಮತ್ತೆ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದರು ಆದರೆ ಕೊನೆಯ ಕ್ಷಣದಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಇದರಿಂದ ಅವರು ಎಜೆಪಿಗೆ ಸೇರಿದ್ದು, ಚುನಾವಣೆಗೆ ಸ್ಪರ್ಧಿಸಲು ಹೊರಟಿದ್ದಾರೆ. ಒಂದು ಉಪಚುನಾವಣೆ ಸೇರಿದಂತೆ ಅವರು ಇದುವರೆಗೂ ಐದು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರುಪ್‌ಜ್ಯೋತಿ ಕುರ್ಮಿ ಅವರ ವಿರುದ್ದ ಸೋತಿದ್ದರು.

ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಘೋಷ್‌ ಅವರನ್ನು ಗುರುವಾರ ಬೆಳಿಗ್ಗೆ ಜೋರ್ಹತ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ಅವರು ಕೆಲವು ಸಮಯದಿಂದ ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.


 

ಇದನ್ನೂ ಓದಿ: UAPA ಪ್ರಕರಣಗಳಲ್ಲಿ ತೀವ್ರ ಹೆಚ್ಚಳ: ಐದು ವರ್ಷಗಳಲ್ಲಿ 5,128 ಪ್ರಕರಣ- 7,050 ಜನರ ಬಂಧನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...