HomeಮುಖಪುಟUAPA ಪ್ರಕರಣಗಳಲ್ಲಿ ತೀವ್ರ ಹೆಚ್ಚಳ: ಐದು ವರ್ಷಗಳಲ್ಲಿ 5,128 ಪ್ರಕರಣ- 7,050 ಜನರ ಬಂಧನ!

UAPA ಪ್ರಕರಣಗಳಲ್ಲಿ ತೀವ್ರ ಹೆಚ್ಚಳ: ಐದು ವರ್ಷಗಳಲ್ಲಿ 5,128 ಪ್ರಕರಣ- 7,050 ಜನರ ಬಂಧನ!

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2015ರಿಂದ 5 ವರ್ಷಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. 2015-2019ರ ಅವಧಿಯಲ್ಲಿ UAPA ಅಡಿಯಲ್ಲಿ 5,128 ಪ್ರಕರಣಗಳು ದಾಖಲಾಗಿದ್ದು, 7,050 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ.

ರಾಜ್ಯಸಭಾ ಸದಸ್ಯ ಅಬ್ದುಲ್ ವಹಾಬ್‌ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವರು ಲಿಖಿತ ಉತ್ತರ ನೀಡಿದ್ದು, ಅದರಲ್ಲಿ 2019ರಲ್ಲಿ 1,226 ಪ್ರಕರಣಗಳಲ್ಲಿ 1,948 ಜನರನ್ನು ಬಂಧಿಸಲಾಗಿದೆ. ಅದೇ ವರ್ಷ ಕೇಂದ್ರ ಸರ್ಕಾರದ ಸಿಎಎ-ಎನ್‌ಆರ್‌ಸಿ ಯನ್ನು ವಿರೋಧಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದನ್ನು ಗಮನಿಸಬಹುದಾಗಿದೆ.

2019ರವರೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಸಂಪೂರ್ಣ ವರದಿ ಮಾಡಿದೆ. ಅದರಂತೆ 2015ರಿಂದ 2019ರವರೆಗೆ ಕ್ರಮವಾಗಿ 897, 922, 901, 1,182 1,226 ಪ್ರಕರಣಗಳು (ಒಟ್ಟು 5,128) ದಾಖಲಾಗಿವೆ. ಅದೇ ರೀತಿ 1,128, 999, 1,554, 1,421, 1,948 ಬಂಧನಗಳಾಗಿವೆ (ಒಟ್ಟು7,050).

ಈ ಪ್ರಕರಣಗಳಲ್ಲಿ ಅತಿ ಹೆಚ್ಚಿನವು 2019ರಲ್ಲಿ ದಾಖಲಾಗಿರುವುದು ಗಮನಿಸಬೇಕಾದ ಅಂಶವಾಗಿದೆ. ಆ ವರ್ಷ ಮಣಿಪುರದಲ್ಲಿ 306, ತಮಿಳುನಾಡಿನಲ್ಲಿ 270, ಜಮ್ಮು ಮತ್ತು ಕಾಶ್ಮಿರದಲ್ಲಿ 255, ಜಾರ್ಖಂಡ್‌ನಲ್ಲಿ 105 ಮತ್ತು ಅಸ್ಸಾಂನಲ್ಲಿ 87 ಪ್ರಕರಣಗಳು ವರದಿಯಾಗಿವೆ. ಇದೇ 5 ವರ್ಷಗಳ ಅವಧಿಯಲ್ಲಿ 229 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಬಂಧನವಾದವರು ಜಾಮೀನು ಪಡೆಯುವುದು ಕಠಿಣವಾಗಿದೆ. ಅಲ್ಲದೇ ವಿಚಾರಣಾ ಸಂಸ್ಥೆಗಳು ಆರು ತಿಂಗಳವರೆಗೂ ಜಾರ್ಜ್ ಶೀಟ್‌ ಸಲ್ಲಿಸದೇ ಬಂಧನದಲ್ಲಿಟ್ಟುಕೊಳ್ಳಬಹುದಾಗಿದೆ.


ಇದನ್ನೂ ಓದಿ: ಮೋದಿ-ಆದಿತ್ಯನಾಥ್ ವಿರುದ್ದ ಟೀಕೆ: 293 ಭಾರತೀಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...