ಹರಿಯಾಣ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ರೈತರು ಆಮ್ಲಜನಕ, ಆಂಬ್ಯುಲೆನ್ಸ್ ಮತ್ತು ಇತರ ತುರ್ತು ಸೇವೆಗಳಿಗೆ ಉಚಿತ ಮಾರ್ಗವನ್ನು ನೀಡಲು ಸಿಂಘು ಗಡಿಯ ಒಂದು ಬದಿಯಲ್ಲಿನ ಬ್ಯಾರಿಕೇಡ್‌ಗಳನ್ನು ತೆಗೆಯಲು ನಿರ್ಧರಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ರೈತರು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸುತ್ತಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಸಭೆಯಲ್ಲಿ ಸೋನಿಪತ್ ಎಸ್ಪಿ, ಸಿಎಮ್ಒ , ಇತರ ಅಧಿಕಾರಿಗಳು ಮತ್ತು ಹಲವಾರು ಎಸ್‌ಕೆಎಂ ನಾಯಕರು ಭಾಗವಹಿಸಿದ್ದರು.
ದೆಹಲಿ ನಗರಕ್ಕೆ ಆಮ್ಲಜನಕ ಪೂರೈಕೆಯಾಗುವುದಕ್ಕೆ ಪ್ರತಿಭಟನಾ ನಿರತ ರೈತರು ಅಡ್ಡಿಪಡಿಸುತ್ತಿದೆ ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಆಧಾರರಹಿತವಾಗಿ ಆರೋಪಿಸುತ್ತಿದ್ದಾರೆ. ಪೊಲೀಸರು ವಾಹನಗಳಿಗೆ ಸರಿಯಾದ ಮಾರ್ಗ ಸೂಚಿಸುವ ಬದಲು ಪ್ರತಿಭಟನಾ ಸ್ಥಳಗಳ ಕಡೆಗೆ ಆಮ್ಲಜನಕ ಪೂರೈಕೆ ಟ್ರಕ್‌ಗಳನ್ನು ತಪ್ಪಾಗಿ ಮಾರ್ಗ ಸೂಚಿಸಿದ್ದಾರೆ ಎಂದು ಎಸ್‌ಕೆಎಂ ಆರೋಪಿಸಿದೆ.
ಇದನ್ನೂ ಓದಿ: ಪಿಎಂ-ಸಿಎಂ ಸಭೆ ಟಿವಿಯಲ್ಲಿ ಪ್ರಸಾರ: ಆಕ್ಷೇಪಿಸಿದ ಮೋದಿ, ವಿಷಾದಿಸಿದ ಕೇಜ್ರಿವಾಲ್!
ಈಗಾಗಲೇ ಸೂಚಿಸಿದಂತೆ, ರಸ್ತೆಗಳಿಗೆ ಬ್ಯಾರಿಕೇಡ್ ಹಾಕುವುದು ಮತ್ತು ವಾಹನ ಸಾಗಣೆಗೆ ಅಡ್ಡಿಯುಂಟುಮಾಡುವುದಕ್ಕೆ ಸರ್ಕಾರವನ್ನು ದೂಷಿಸಬೇಕಾಗಿದೆ. ಆದರೆ ಎಲ್ಲಾ ಪ್ರತಿಭಟನಾ ಸ್ಥಳಗಳಲ್ಲಿ, ರೈತರು ಈಗಾಗಲೇ ವಾಹನ ಸಂಚಾರಕ್ಕಾಗಿ ತುರ್ತು ಮಾರ್ಗವನ್ನು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಕೊರೊನಾ ಹಿನ್ನೆಲೆ ತಮ್ಮ ತಮ್ಮ ಊರುಗಳಿಗೆ ವಾಪಸ್ ಹೊರಟಿರುವ ವಲಸೆ ಕಾರ್ಮಿಕರಿಗೆ ಸಂಯುಕಗತ ಕಿಸಾನ್ ಮೋರ್ಚಾ ಆಹ್ವಾನ ನೀಡಿದೆ. ಇದು ದೆಹಲಿ ಗಡಿಯಲ್ಲಿ ಪ್ರತಿಭಟನಾಕಾರರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನವಲ್ಲ. ಆದರೆ ದೇಶಾದ್ಯಂತದ ಸರ್ಕಾರಗಳು ನಾಗರಿಕರನ್ನು ಶೋಚನೀಯ ಸ್ಥಿತಿಗೆ ತಳ್ಳುತ್ತಿರುವ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವುದು ಎಂದು ರೈತ ಸಂಘಟನೆ ಸ್ಪಷ್ಟ ಪಡಿಸಿದೆ.
ಗೋಧಿ ಕೊಯ್ಲಿಗೆ ಹೋದ ರೈತರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ಸ್ಥಳಗಳಿಗೆ ಉತ್ಸಾಹದಿಂದ ಹಿಂತಿರುಗುತ್ತಿದ್ದಾರೆ. ರೈತರ ಆಂದೋಲನಕ್ಕೆ ವಲಸೆ ಕಾರ್ಮಿಕರ ಅಗತ್ಯವಿಲ್ಲ. ಆದರೆ, ನಾವು ಅವರಿಗೆ ಆಹ್ವಾನ ನೀಡುತ್ತಿರುವುದು ಏಕೆಂದರೆ, ದೇಶಕ್ಕೆ ಅನ್ನ ನಿಡುವ ಅನ್ನದಾತರು ಈ ಕಾರ್ಮಿಕರ ಸಂಕಟವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಇದನ್ನೂ ಓದಿ: ಗೌರವಯುತ ಅಂತ್ಯ ಸಂಸ್ಕಾರಕ್ಕಾದರೂ ಕನಿಷ್ಠ ವ್ಯವಸ್ಥೆ ಮಾಡಿ-ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ


