Homeಕರ್ನಾಟಕತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

- Advertisement -
- Advertisement -

ಈ ವಿಶ್ವ ಒಂದು ಪುಟ್ಟ ಸ್ಥಳವೇ. ಇಲ್ಲವಾದರೆ ಇತ್ತೀಚಿಗೆ ಧ್ವಂಸಗೊಂಡ ಉಕ್ರೇನಿನ ಪೊಲ್ಟೊವಾ, ಕರ್ನಾಟಕದ ಶಿವಮೊಗ್ಗದಲ್ಲಿ ಒಂದು ಪರಿಚಿತವೆನ್ನಿಸುವ ಪ್ರತಿಧ್ವನಿಯನ್ನು ಏಕೆ ಸೃಷ್ಟಿಸಬೇಕಿತ್ತು? ಅಂದಹಾಗೆ, ವೊರ್ಸ್ಕ್ಲಾ ನದಿಯ ಪಕ್ಕದಲ್ಲಿರುವ ಪೊಲ್ಟೊವಾ ನಗರ ಮತ್ತು ತುಂಗೆ ಮತ್ತೆ ಭದ್ರೆಗೆ ಅಂಟಿಕೊಂಡಿರುವ ಶಿವಮೊಗ್ಗೆಯ ನಡುವೆ ಯಾವುದೇ ಸಂಬಂಧವೂ ಕಾಣುವುದಿಲ್ಲ. ಅಥವಾ ಒಂದು ದೂರದ ದ್ವೀಪದ 12ನೆಯ ಶತಮಾನದ ಹುಚ್ಚುತನದ ಮತ್ತು ಪ್ರೀತಿಯ ಕಥೆಯೊಂದು 21ನೆಯ ಶತಮಾನದ ಕರ್ನಾಟಕಕ್ಕೆ ಸಾವಿರ ವರ್ಷಗಳ ಅವಧಿಯನ್ನು ಮತ್ತು ಹಲವಾರು ಭೂಖಂಡಗಳ ದಾರಿಯನ್ನು ಕ್ರಮಿಸಿ ಬಂದಿದ್ದೇಕೆ?

ಈ ಕಥೆಯಲ್ಲಿ ಮೂವರು ಹೆಣ್ಣುಮಕ್ಕಳು ಮತ್ತು ಅವರ ಪ್ರೀತಿಯ ಅಪ್ಪನಿದ್ದಾನೆ. ಇದನ್ನು ಮೊದಲ ಬಾರಿಗೆ 12ನೆಯ ಶತಮಾನದ ಇತಿಹಾಸಕಾರನಾದ ಮೊನ್‌ಮೌತ್‌ನ ಜೆಫ್ರಿ ವರದಿ ಮಾಡಿದ್ದ. ಅದನ್ನು 16ನೆಯ ಶತಮಾನದಲ್ಲಿ ರಫೆಯಲ್ ಹೊಲಿನ್‌ಶೆಡ್ ಮರುಸೃಷ್ಟಿ ಮಾಡಿದ್ದ. ಒಂದು ಶತಮಾನದ ತರುವಾಯ ವಿಲಿಯಂ ಶೇಕ್ಸ್‌ಪಿಯರ್ ತನ್ನ ದುಃಖಾಂತದ ನಾಟಕ ಕಿಂಗ್ ಲಿಯರ್‌ನಲ್ಲಿ ಈ ಕಥೆಯನ್ನು ಅಳವಡಿಸಿಕೊಂಡ. ಶೇಕ್ಸ್‌ಪಿಯರ್‌ನ ಲಿಯರ್ ಆಗಿನಿಂದ ಎಲ್ಲಾ ಭೂಖಂಡಗಳ ಲೇಖಕರನ್ನು ಪ್ರೇರೇಪಿಸುತ್ತಲೇ ಬಂದಿದೆ. ಅದರಲ್ಲಿ ಒಬ್ಬ, ಸೆಂಟ್ರಲ್ ಉಕ್ರೇನಿನ ಪೊಲ್ಟೊವಾದ ಜೀನಿಯಸ್. 1895ರಲ್ಲಿ ಹುಟ್ಟಿದ ಸೊಲೊಮನ್ ನವಮೋವಿಚ್ ಅಶ್ಕೆನಾಜಿಮ್‌ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನು. ಅವನು ತನ್ನ ಹದಿವಯಸ್ಸಿನಲ್ಲಿಯೇ ಬರೆಯಲು ಶುರುಮಾಡಿದ. ಶೋಲೆಂ ಅಲೈಕೆಂ ಎಂಬ ಕಾವ್ಯನಾಮ ಇರಿಸಿಕೊಂಡ. ಶೇಕ್ಸ್‌ಪಿಯರ್‌ನ ಲಿಯರ್ ಮತ್ತು ಅವನ ಮೂವರು ಹೆಣ್ಣುಮಕ್ಕಳು ಅವನಿಗೆ ತುಂಬಾ ಕಾಡಿತು; ಅವನಿಗೂ ಮೂರು ಭಾಷೆಗಳೊಂದಿಗೆ ಸಂಬಂಧವಿತ್ತು- ರಷಿಯನ್, ಹಿಬ್ರೂ ಮತ್ತು ಯಿಡ್ಡಿಶ್. ಆ ಮೂರರಲ್ಲಿ ಮೊದಲ ಎರಡನ್ನು ಬಿಟ್ಟು ಅವನು ಅತ್ಯಂತ ಪ್ಯಾಷನೇಟ್ ಆಗಿ ಯಿಡ್ಡಿಶ್ ಬಾಷೆಯ ಜೊತೆಗೇ ಇದ್ದ. ಜರ್ಮಾನಿಕ್ ಭಾಷೆಗಳಿಂದ ಆಳವಾಗಿ ಪ್ರಭಾವಿತವಾಗಿದ್ದರೂ, ಯಿಡ್ಡಿಶ್ ಬಾಷೆಯು ಹೆಬ್ರೂ ಮತ್ತು ಅರೇಬಿಕ್ ಭಾಷೆಗಳೊಂದಿಗಿನ ತನ್ನ ಕೊಂಡಿಗಳನ್ನು ಜೀವಂತವಾಗಿಟ್ಟಿತ್ತು.

ಸೊಲೊಮನ್‌ನ ಕಾವ್ಯನಾಮ ಶೊಲಂ ಅಲೈಕೆಂ ಅರೇಬಿಕ್‌ನ ’ಸಲಾಂ ಆಲೆಕುಂ’ಅನ್ನು ನೆನಪಿಸುತ್ತದೆ, ಮತ್ತದು ಪ್ರಾಚೀನ ಹಿಬ್ರೂ ’ಶೋಲೆಂ’ಗೆ ಸುಲಭವಾಗಿ ಕರೆದುಕೊಂಡು ಹೋಗುತ್ತದೆ, ಅದು ಸಂಸ್ಕೃತವು ಪಡೆದುಕೊಂಡಿರುವ ’ಶಾಂತಿ’ ಎಂಬ ಪದದ ಉಗಮಕ್ಕೆ ನಿಕಟವಾಗಿ ತಳುಕು ಹಾಕಿಕೊಂಡಿದೆ, ಇವೆರಡಕ್ಕೂ ಪ್ರಾಚೀನ ಇಂಡೋ-ಇರಾನಿಯನ್ ಬೇರುಗಳಿವೆ. ಶೊಲೆಂ ಅಲೈಕೆಂ ಹೇಳಿದ ಈ ಕಥೆಯಲ್ಲಿ ರಾಜನು ಒಬ್ಬ ಉಲ್ಲಾಸಯುಕ್ತ ಗೌಳಿ ಟೇವೆ ಆಗಿ ಮಾರ್ಪಡುತ್ತಾನೆ. ಪೂರ್ವ ಯುರೋಪಿನಲ್ಲಿ ಅತ್ಯಂತ ಕಟುವಾದ ಯಹೂದಿ ವಿರೋಧಿ ಸಾಮಾಜಿಕ ಮೌಲ್ಯಗಳು ಏರುತ್ತಿರುವ ಬೆಳವಣಿಗೆಗೆ ಅವನು ಸಾಕ್ಷಿಯಾಗಿದ್ದ ಎಂಬುದನ್ನು ಗಮನಿಸಬೇಕು, ಹಾಗಾಗಿ ಅವನ ಕಥೆಗಳು ಹಲವು ದಶಕಗಳ ನಂತರ ಬರಲಿರುವ ಹೊಲೊಕಾಸ್ಟ್‌ನ ಮುನ್ಸೂಚನೆ ನೀಡುವ ನೋವು ಮತ್ತು ಆತಂಕದಿಂದ ತುಂಬಿದ್ದವು. ಇತರ ಅನೇಕ ಯಹೂದಿಗಳಂತೆ ಅವನೂ ಮೊದಲ ವಿಶ್ವ ಯುದ್ಧ ಶುರುವಾದಾಗ ಅಮೆರಿಕಕ್ಕೆ ವಲಸೆ ಹೋದ. ಇವನ ಕಥೆಯೇ ಜೊಸೆಫ್ ಸ್ಟೇನ್‌ಗೆ ತನ್ನ ಸಂಗೀತನಾಟಕ ಫಿಡ್ಲರ್ ಆನ್ ದಿ ರೂಫ್ ನಿರ್ಮಿಸಲು ಪ್ರೇರೇಪಿಸಿತು ಹಾಗೂ ಅದೇ ಶೀರ್ಷಿಕೆಯ ಸಿನೆಮಾ ಕೂಡ ಮಾಡಿದ.

ಸ್ಟೇನ್‌ನ ಸಂಗೀತನಾಟಕದ ಅತ್ಯುನ್ನತ ಹಾಡುಗಳು ವಿಶ್ವದ ಇತರ ಭಾಗಗಳನ್ನೂ ರೋಮಾಂಚನಗೊಳಿಸಿದವು. ಹಾಗೂ ಧಾರ್ಮಿಕ ತಾರತಮ್ಯದ ಚಿತ್ರಣ ಕಟ್ಟಿಕೊಟ್ಟಿದ್ದ ಸಲುವಾಗಿ ಯಹೂದಿ ವಿರೋಧಿ ಧೋರಣೆಯ ವಿರುದ್ಧದ ಹೋರಾಟದಲ್ಲಿ ಅವನನ್ನು ಹೀರೋ ಆಗಿಸಿದವು. ನಮ್ಮ ಕಾಲದ ಅತ್ಯುತ್ತಮ ಗೀತರಚನೆಕಾರರಾದ ಜಯಂತ ಕಾಯ್ಕಿಣಿಗೆ ಸ್ಟೇನ್‌ನ ಸಿನೆಮಾ ಆಕರ್ಷಿಸದೇ ಇದ್ದರೆ ಅದೊಂದು ಆಶ್ಚರ್ಯದ ವಿಷಯವಾಗಿರುತ್ತಿತ್ತು. ಕನ್ನಡ ಲೇಖಕರಾದ ಗೌರೀಶ್ ಕಾಯ್ಕಿಣಿಯ ಮಗನಾದ ಜಯಂತ ಪ್ರಗತಿಪರ ವಾತಾವರಣದಲ್ಲಿ ಬೆಳೆದವರು ಹಾಗೂ ಬಾಂಬೆಯ ಆಗಿನ ವಿಶಿಷ್ಟ ಕೈಗಾರಿಕಾ ಸಂಸ್ಕೃತಿಯಲ್ಲಿ ಕೆಲಸ ಮಾಡಿ, ನಂತರ ಬರಹವನ್ನು ಪೂರ್ಣಾವಧಿ ಕಾಯಕವನ್ನಾಗಿಸಿಕೊಂಡವರು. ಅವರು ಅತ್ಯಂತ ಉತ್ಕೃಷ್ಠ ಕಥೆ, ಕವಿತೆ ಮತ್ತು ನಾಟಕಗಳನ್ನು ಬರೆದಿದ್ದಾರೆ, ಸಾಹಿತ್ಯದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು, ಕನ್ನಡದಲ್ಲಿ ಇಂದು ಪ್ರಮುಖ ಲೇಖಕ ಹಾಗೂ ಗೀತರಚನೆಕಾರರಾಗಿದ್ದಾರೆ.

ಜಯಂತ ಕಾಯ್ಕಿಣಿಯ ’ಜತೆಗಿರುವನು ಚಂದಿರ’ ಇತ್ತೀಚಿನ ನಾಟಕವೇನಲ್ಲ. ಅದನ್ನು ಅವರ ನಾಟಕಗಳ ಸಂಗ್ರಹದ ಪುಸ್ತಕದಲ್ಲಿ ಒಂದೂವರೆ ದಶಕದ ಹಿಂದೆಯೇ ಪ್ರಕಟಿಸಲಾಗಿತ್ತು. ಈ ನಾಟಕ ಈ ಮುಂಚೆ ಬೆಂಗಳೂರಿನಲ್ಲಿ ಮತ್ತು ಇತರೆಡೆ ಪ್ರದರ್ಶನ ಕಂಡಿದ್ದು, ಭಾಷೆಯ ಮೇಲಿನ ಹಿಡಿತಕ್ಕಾಗಿ ಮತ್ತು ನಾಟಕದ ತೀವ್ರತೆಗಾಗಿ ಶ್ಲಾಘಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಶಿವಮೊಗ್ಗದಲ್ಲಿ ಕೊಟ್ರಪ್ಪ ಎಸ್ ಹಿರೆಮಾಗಡಿಯವರ ನೇತೃತ್ವದ ರಂಗಬೆಳಕು ಎಂಬ ತಂಡವೂ ಈ ನಾಟಕದ ಪ್ರದರ್ಶನ ಮಾಡಿತ್ತು. ಜುಲೈ 3ರ ಭಾನುವಾರದಂದು ಇದರ ಪ್ರದರ್ಶನ ನಡೆಯುತ್ತಿರುವಾಗ ಭಜರಂಗ ದಳದ ಸದಸ್ಯರು ಅದರ ಪ್ರದರ್ಶನಕ್ಕೆ ಅಡ್ಡಿಪಡಿಸಿದರು. ಅವರ ವಾದ, ಆ ಪ್ರದರ್ಶನವನ್ನು ಒಂದು ವೀರಶೈವ ಸಭಾಂಗಣದಲ್ಲಿ ಮಾಡುತ್ತಿದ್ದು, ಅಲ್ಲಿ ಒಬ್ಬ ಮುಸ್ಲಿಂ ಪಾತ್ರವಿರುವ ನಾಟಕದ ಪ್ರದರ್ಶನ ಮಾಡುವುದು ಧರ್ಮದ್ರೋಹವಾದಂತಾಗುತ್ತದೆ ಎಂದು. ಭಜರಂಗ ದಳದ ಜನರಿಗೆ ಆ ಕರುಣಾಮಯಿ ಗೌಳಿಯ ಮತ್ತು ಅವನ ಮೂವರು ಹೆಣ್ಣುಮಕ್ಕಳ ಆಧುನಿಕ ಕಥೆಯನ್ನು ಸೃಷ್ಟಿಸಿದ ಉಕ್ರೇನಿನ ಲೇಖಕನ ಹೆಸರಿನ ಅಕ್ಷರಶಃ ಅರ್ಥ ’ನಿಮಗೆ ಶಾಂತಿ ಸಿಗಲಿ’ ಎಂತಿದೆ ಎಂಬುದು ಹಾಗೂ ಅದು ಸಂಸ್ಕೃತದ ಸ್ವರೂಪದಲ್ಲಿ ’ಶಾಂತಿ ಶಾಂತಿ ಶಾಂತಿ’ ಎಂಬ ಪ್ರತಿಯೊಂದು ಉಪನಿಷತ್ತಿನ ಅಂತಿಮ ದೇವಸ್ತುತಿ ಅಥವಾ ಪ್ರಾರ್ಥನೆಯಾಗಿದೆ ಎಂಬುದು ಗೊತ್ತಿರಲಿಕ್ಕಿಲ್ಲ.

ಭಜರಂಗದಳದ ಜನರಿಗೆ ವೀರಶೈವ ಪಂಥದ ಸ್ಥಾಪನಾ ಬರಹವಾದ ಶ್ರೀ ಸಿದ್ಧಾಂತ ಶಿಖಾಮಣಿಯ ಬಗ್ಗೆ ಏನಾದರೂ ತಿಳಿದಿದೆಯೋ ಎಂಬುದರ ಬಗ್ಗೆ ಹೇಳಲಾಗುವುದಿಲ್ಲ. ಶ್ರೀ ಸಿದ್ಧಾಂತ ಶಿಖಾಮಣಿ ಹೀಗೆ ಹೇಳುತ್ತದೆ “ಭಾವೀ ಯಾಸಿ ಸ್ಥಿರೋ ನಿತ್ಯಂ ಮನವೋಕ್ಯಾವಕರ್ಮಾಭಿಶಾಂತೋ ದಾಂತಸ್ತಾಪಶಿಶಿಲಾ ಸತ್ಯವಾಕ ಸಮದರ್ಶನ” ಇದರರ್ಥ “ಶಿವ-ಭಾವವನ್ನು ಪಡೆದುಕೊ- ದೈವಿಕತೆಯಿಂದ ಪ್ರಭಾವಿತವಾದ ಮನಸ್ಥಿತಿಯನ್ನು ಪಡೆದುಕೊ – ಅದನ್ನು ಮೂಲ ಕರ್ತವ್ಯವಾಗಿ ಪಡೆದುಕೊ; ಶಾಂತಿ, ಔದಾರ್ಯ, ಅಧ್ಯಯನ, ಸತ್ಯನುಡಿ ಪಡೆದುಕೋ, ಏಕೆಂದರೆ ಅವುಗಳೇ ದೈವಿಕತೆಯ ಅಭಿವ್ಯಕ್ತಿಯಾಗಿವೆ’. ನಿಜ ಏನೆಂದರೆ, ನಾಟಕದ ಪ್ರದರ್ಶನಕ್ಕೆ ಅಡ್ಡಿತಂದ ವಿಧ್ವಂಸಕರು ಜೀವನದ ಬಗ್ಗೆ ಇರುವ ವೀರಶೈವ ಪಂಥದ ಪಾಠಗಳೇನಿವೆ ಎಂಬುದರ ಬಗ್ಗೆ ಕೇರ್ ಮಾಡುವುದಿಲ್ಲ ಹಾಗೂ ಶಿವಮೊಗ್ಗೆಯ ಪ್ರದರ್ಶನಕ್ಕೆ ಕಾಯ್ಕಿಣಿಯ ನಾಟಕವು ತಂದ ಕಥೆಯ ದೀರ್ಘ ಇತಿಹಾಸದ ಬಗ್ಗೆಯೂ ಅವರಿಗೆ ಏನೂ ಆಗಬೇಕಿಲ್ಲ. ವಿಧ್ವಂಸಕತೆ ಮತ್ತು ಸಾಂಸ್ಕೃತಿಕ ನಿಗ್ರಹಗಳಿಗೆ ನೆನಪು ಎಂಬುದು ತುಂಬಾ ಕಡಿಮೆ. ಅವರು ಪರಂಪರೆಯ ಹೆಸರಿನಲ್ಲಿ ಈ ಕೃತ್ಯಗಳನ್ನು ಎಸಗಬಹುದು ಆದರೆ ಅವರು ಸಮರ್ಥಿಸಿಕೊಳ್ಳುತ್ತಿರುವುದು ಏನೆಂಬುದರ ಬಗ್ಗೆ ಯಾವ ಅರಿವೂ ಇಲ್ಲ. ದೇಶದಲ್ಲಿ ಅತ್ಯುತ್ತಮವಾದ ನಾಟಕದ ಅಕಾಡೆಮಿಯನ್ನು ಶಿವಮೊಗ್ಗದಲ್ಲಿ ಇರುವ ಹೆಗ್ಗೋಡಿನಲ್ಲಿ ಸುಬ್ಬಣ್ಣ ಸ್ಥಾಪಿಸಿದರು. ಇನ್ನೊಬ್ಬ ಅತ್ಯುತ್ತಮ ನಾಟಕಕಾರ ನಿರ್ದೇಶಕ ಪ್ರಸನ್ನ ಅವರು ಅದೇ ಜಿಲ್ಲೆಯಲ್ಲಿ ವಾಸಿಸುತ್ತಾರೆ. ಕಳೆದ ಅರ್ಧ ಶತಕದಲ್ಲಿ ಜಿಲ್ಲೆಯ ಜನರು ನಾಟಕಗಳ ಅತ್ಯಂತ ಶ್ರೇಷ್ಠ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದಾರೆ. ಅಂತಹ ಸ್ಥಳದಲ್ಲಿ ರಂಗಭೂಮಿಯ ಮೇಲೆ ದಾಳಿಯಾಗುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ. ಆದರೆ ದುಃಖದ ಸಂಗತಿಯೇನೆಂದರೆ, ಭಾರತದಲ್ಲಿ ಛೂಬಿಡಲಾಗಿರುವ ಸಾಂಸ್ಕೃತಿಕ ಗೂಂಡಾಗಿರಿ ಅಲ್ಲಿಯೂ ತಲುಪಿದೆ.

ಜಯಂತ ಕಾಯ್ಕಿಣಿ

ಇಂದಿನ ಭಾರತದಲ್ಲಿ ಹಿಂದೂ ತಾತ್ವಿಕತೆ ಮತ್ತು ಮೀಮಾಂಸೆಗಳು ನಿಜವಾಗಿಯೂ ಏನು ಹೇಳುತ್ತವೆಂಬುದನ್ನು ಅರ್ಥಮಾಡಿಕೊಳ್ಳಲು ಹಿಂದುತ್ವ ಶಕ್ತಿಗಳಿಗೆ ಸಮಯವೇ ಇಲ್ಲ. ಸ್ವತಃ ಒಬ್ಬ ಅಶ್ಕೆನಾಜಿಮ್ (ಯಹೂದಿ) ಆಗಿದ್ದ ಶೋಲೆಮ್‌ಗೆ 19ನೇ ಶತಮಾನದ ಕೊನೆಯ ಭಾಗದಲ್ಲಿ ಯಹೂದಿಗಳ ವಿರುದ್ಧ ಬೆಳೆದ ದ್ವೇಷವು ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್‌ಗಳ ಸೃಜನಶೀಲ ಆಕರಗಳನ್ನು ಹೇಗೆ ಬತ್ತಿಸಿತು ಎಂಬುದರ ಅರಿವಿತ್ತು. ಡ್ರೈಫಸ್ ಮೇಲೆ ನಡೆದ ವಿಚಾರಣೆ ಹಾಗೂ ಶಿಕ್ಷೆಯು ಇನ್ನೂ ಮರೆತುಹೋಗಿಲ್ಲ (ಅನ್ಯಾಯವಾಗಿ ಶಿಕ್ಷೆಗೊಳಗಾದ ಫ್ರಾನ್ಸ್‌ನ ಮಿಲಿಟರಿ ಅಧಿಕಾರಿ ಡ್ರೈಫಸ್ ಒಂದು ದಶಕದ ನಂತರ ನಿರಪರಾಧಿ ಎಂದು ಸಾಬೀತಾಗಿತ್ತು – ಅನು). ಸಾರಾ ಬರ್ನ್‌ಹಾರ್ಡ್ಟ್, ಅನಟೊಲೆ ಫ್ರಾನ್ಸ್, ಜಾರ್ಜ್ ಕ್ಲೆಮೆನ್‌ಕಾವ್ ಮತ್ತು ಎಮಿಲಿ ಜೋಲಾರಂತಹ ಮನುಷ್ಯ ಘನತೆಯನ್ನು ಎತ್ತಿಹಿಡಿದವರೂ ಇನ್ನೂ ನೆನಪಿನಿಂದ ಅಳಿಸಿ ಹೋಗಿಲ್ಲ. ಹಾಗೆ ನೋಡಿದರೆ ರಷ್ಯಾ, ಫ್ರಾನ್ಸ್ ಮತ್ತು ಹಿಟ್ಲರನ ಜರ್ಮನಿಯಲ್ಲಿ ಯಹೂದಿಯರ ಕುರಿತಾಗಿದ್ದ ದ್ವೇಷವನ್ನು ಇತಿಹಾಸದ ಅತ್ಯಂತ ನಾಚಿಕೆಗೇಡಿನ ಸಂಗತಿಯನ್ನಾಗಿ ನೆನಪಿಸಿಕೊಳ್ಳಲಾಗುತ್ತದೆ.

ಕಳೆದ ಹಲವು ವರ್ಷಗಳಲ್ಲಿ ಕರ್ನಾಟಕದ ಬಹುಮುಖ್ಯ ಬರಹಗಾರರಾದ ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ದೇವನೂರ ಮಹಾದೇವ ಮತ್ತು ರಹಮತ್ ತರೀಕೆರೆಯಂಥವರು ಬೆಳೆಯುತ್ತಿರುವ ದ್ವೇಷದ ವಾತಾವರಣದ ವಿರುದ್ಧ ಮಾತಾಡಿದ್ದಾರೆ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶರಂಥವರು ಬಂದೂಕಿನ ಗುಂಡುಗಳನ್ನೆದುರಿಸಬೇಕಾಯಿತು. ಮೊದಮೊದಲು ಅದು ದಿಗಂತದಲ್ಲೆಲ್ಲೋ ಮೋಡಕವಿದು ಕತ್ತಲಾದಂತಹ ಆತಂಕವಷ್ಟೇ ಆಗಿತ್ತು. ನಂತರ ಹತ್ತಿರದಲ್ಲೇ ದೈಹಿಕ ದಾಳಿಗಳಾಗತೊಡಗಿದವು. ಕಳೆದ ಕೆಲವು ತಿಂಗಳುಗಳಲ್ಲಿ ಸರ್ಕಾರವೇ ಸಕ್ರಿಯವಾಗಿ ಅಲ್ಪಸಂಖ್ಯಾತ ವಿರೋಧಿ ಭಾವನೆಯ ಬೆಂಕಿಯನ್ನು ಹೊತ್ತಿಸಿ, ಬೆಳೆಸತೊಡಗಿದೆ. ಈಗ ದ್ವೇಷದ ಕಾರ್ಯಕ್ರಮವು ತನ್ನಂತಾನೇ ಹೊತ್ತಿಕೊಳ್ಳಬಲ್ಲದು. ಅದಕ್ಕೀಗ ಸರ್ಕಾರದ ಪೋಷಣೆಯಾಗಲೀ, ತನ್ನ ಅಸಲೀ ಹುನ್ನಾರವನ್ನು ಮುಚ್ಚಿಟ್ಟುಕೊಳ್ಳುವ ಅಗತ್ಯವಾಗಲೀ ಇಲ್ಲ. ಭಾರತದ ಜನತೆಯ ಮುಂದೆ ತೆರೆದುಕೊಳ್ಳುತ್ತಿರುವ ನಾಟಕವು ಆರೆಸ್ಸೆಸ್, ವಿಎಚ್‌ಪಿ ಮತ್ತು ಭಜರಂಗದಳಗಳು ಸರ್ಕಾರದ ಶಾಮೀಲುದಾರಿಕೆಯೊಂದಿಗೆ ಅಬ್ಬರಿಸುತ್ತಿರುವ ಪಾತ್ರಧಾರಿಗಳಾಗಿದ್ದಾರೆ. ದ್ವೇಷದ ರಂಗಭೂಮಿಯು ಅಭೂತಪೂರ್ವ ಮುನ್ನಡೆಯನ್ನು ಸಾಧಿಸಿಯಾಗಿದೆ. ನಾಕಟವೊಂದರ ಕಾಲ್ಪನಿಕ ಪಾತ್ರವು ಧಾರ್ಮಿಕ ಸ್ಥಳವೊಂದರ ಪಾವಿತ್ರ್ಯವನ್ನೂ ಕೆಡಿಸಬಹುದೆಂದು ಅದು ಘೋಷಿಸಿದೆ. ಇದು ಮುಂದೆ ನಾಗರಿಕರ ಜನಾಂಗೀಯ ಶುದ್ಧತೆಯನ್ನು ಅಳೆಯುವ ಯೋಜನೆಯ ಸಿದ್ಧತೆಯಾಗಿದ್ದರೆ ಆಶ್ಚರ್ಯವೇನಿಲ್ಲ. ಜಗತ್ತು ಯಾವಾಗಲೂ ಒಂದು ಕಿರಿದಾದ ಜಾಗವೇ ಆಗಿದೆ; ಭಾರತದಲ್ಲದು ಬಹುವೇಗವಾಗಿ ಕಾಣೆಯಾಗುತ್ತಿರುವ, ಸಂವಿಧಾನವು ಕಲ್ಪಿಸಿಕೊಂಡಿದ್ದಕ್ಕಿಂತಲೂ ಪುಟ್ಟದಾದ ಜಾಗವಾಗುತ್ತಾ ಹೋಗುತ್ತಿದೆ.

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಮುಸ್ಲಿಂ ಪ್ರಧಾನ ಕಥೆ ಹೊಂದಿದೆ ಎಂದು ನಾಟಕಕ್ಕೆ ಅಡ್ಡಿಪಡಿಸಿದ RSS-ಬಜರಂಗದಳದ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...