ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆಗೆ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೇ ಹೊಣೆಗಾರರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಶುಕ್ರವಾರ ಹೇಳಿದ್ದಾರೆ. ಅವರು ಸೌದಿ ಅರೇಬಿಯಾದ ಉಪಪ್ರಧಾನಿಯೂ ಆಗಿರುವ ರಾಜಕುಮಾರನೊಂದಿಗೆ ಮಾತುಕತೆ ನಡೆಸಿದ ಸ್ವಲ್ಪ ಸಮಯದ ನಂತರವೇ ಈ ಹೇಳಿಕೆ ನೀಡಿದ್ದಾರೆ.
ಜೋ ಬಿಡೆನ್ ಅವರು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಕೊಲೆಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದ್ದು, ಆದರೆ ಕೊಲೆಯ ಹೊಣೆಗಾರಿಕೆಯನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಖಶೋಗಿ ಹತ್ಯೆಗೆ ಸಂಬಂಧಿಸಿದ ವಿಚಾರವನ್ನು ನಾನು ಸಭೆಯ ಮುಂದೆ ಎತ್ತಿದ್ದೇನೆ. ಆ ಸಮಯದಲ್ಲಿ ನಾನು ಅದರ ಬಗ್ಗೆ ಏನು ಯೋಚಿಸಿದೆ ಮತ್ತು ಈಗ ಅದರ ಬಗ್ಗೆ ನಾನು ಏನು ಯೋಚಿಸುತ್ತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ” ಎಂದು ಬಿಡೆನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಾನು ನೇರವಾಗಿ ಚರ್ಚಿಸುತ್ತಾ ನನ್ನ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದ್ದೇನೆ. ನಾನು ನೇರವಾಗಿ ಹೇಳಿದ್ದೇನೆ, ಅಮೆರಿಕಾದ ಅಧ್ಯಕ್ಷರಾಗಿ ಮಾನವ ಹಕ್ಕುಗಳ ವಿಷಯದ ಬಗ್ಗೆ ಮೌನವಾಗಿರುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ಇಸ್ತಾನ್‌ಬುಲ್‌ನಲ್ಲಿರುವ ಸೌದಿ ಅರೇಬಿಯಾದ ದೂತಾವಾಸದಲ್ಲಿ ಸೌದಿ ಏಜೆಂಟರಿಂದ ಹತ್ಯೆಗೀಡಾದ, ಸೌದಿ ಮೂಲದ ಪತ್ರಕರ್ತ ಖಶೋಗಿಯನ್ನು ಸೆರೆಹಿಡಿಯಲು ಅಥವಾ ಕೊಲ್ಲುವ ಕಾರ್ಯಾಚರಣೆಯನ್ನು ರಾಜಕುಮಾರ ಸಲ್ಮಾನ್ ಅನುಮೋದಿಸಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ. ಖಶೋಗಿ ಕೊಲೆಯು ಅಘಾತಕಾರಿ ಎಂದು ಎಂದು ಬಿಡೆನ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಮುಂದೆಯೆ ಭಾರತೀಯ ಮಾಧ್ಯಮಗಳ ಬಗ್ಗೆ ಬಿಡೆನ್ ವ್ಯಂಗ್ಯ?
“ಸೌದಿ ರಾಜಕುಮಾರ ಕೊಲೆಗೆ ತಾನು ವೈಯಕ್ತಿಕವಾಗಿ ಜವಾಬ್ದಾರನಲ್ಲ ಎಂದು ಹೇಳಿದ್ದಾರೆ. ಆದರೆ ನಾನು ಕೊಲೆಗೆ ನೀವೇ ಕಾರಣ ಎಂದು ಭಾವಿಸಿದ್ದೇನೆ ಎಂದು ಸೂಚಿಸಿದೆ” ಎಂದು ಎಂದು ಬಿಡೆನ್ ತಮ್ಮ ಸಭೆಯ ಸಮಯದಲ್ಲಿ ರಾಜಕುಮಾರನ ಪ್ರತಿಕ್ರಿಯೆಯ ಬಗ್ಗೆ ಹೇಳಿದ್ದಾರೆ.
ಜೊ ಬಿಡೆನ್ ಅವರು ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾಗ, ಖಶೋಗಿಯ ಹತ್ಯೆಯ ಕಾರಣಕ್ಕೆ ಸೌದಿ ಅರೇಬಿಯಾವನ್ನು ವಿಶ್ವ ವೇದಿಕೆಯಲ್ಲಿ ಏಕಾಂಗಿ(ಪರಿಯಾ) ಮಾಡಬೇಕೆಂದು ಹೇಳಿದ್ದರು. ಈ ಹೇಳಿಕೆಗೆ ತಾನು ವಿಷಾದಿಸುವುದಿಲ್ಲ ಎಂದು ಅವರು ಶುಕ್ರವಾರ ಹೇಳಿದ್ದಾರೆ.
ಈ ನಡವೆ ಸೌದಿ ರಾಜಕುಮಾರನೊಂದಿಗಿನ ಬಿಡೆನ್ ಅವರ ಸಂವಾದವು ವಾಷಿಂಗ್ಟನ್ ಪೋಸ್ಟ್ ಮತ್ತು ಪತ್ರಕರ್ತರ ಸಮಿತಿ ಸೇರಿದಂತೆ ಅಮೆರಿಕದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಸ್ನೇಹಿತರೊಂದಿಗೆ ಮಾತನಾಡುವ ವಿಧಾನವಲ್ಲ: ಭಾರತವನ್ನು ಹೊಲಸು ಎಂದಿದ್ದ ಟ್ರಂಪ್ ಮೇಲೆ ಜೋ ಬಿಡೆನ್ ವಾಗ್ದಾಳಿ
ಖಶೋಗಿ ಅವರ ಪ್ರೇಯಸಿ ಹ್ಯಾಟಿಸ್ ಸೆಂಗಿಜ್ ಅವರು ಟ್ವಿಟ್ಟರ್‌ನಲ್ಲಿ ಬಿಡೆನ್ ಅವರು ಸೌದಿ ರಾಜಕುಮಾರನೊಂದಿಗಿನ ಭೇಟಿಯ ಚಿತ್ರವನ್ನು ಟ್ವೀಟ್ ಮಾಡಿ, “ಖಶೋಗಿ ಹೀಗೆ ಬರೆಯುತ್ತಾರೆ; ನನ್ನ ಕೊಲೆಗೆ ನೀವು ಭರವಸೆ ನೀಡಿದ ಹೊಣೆಗಾರಿಕೆ ಇದುವೇ? ರಾಜಕುಮಾರ ಸಲ್ಮಾನ್‌ನ ಮುಂದಿನ ಬಲಿಪಶುಗಳ ರಕ್ತವು ನಿಮ್ಮ ಕೈಯಲ್ಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.