Homeಮುಖಪುಟಫಾತಿಮಾ ಶೇಖ್: 19ನೇ ಶತಮಾನದ ಶಿಕ್ಷಣತಜ್ಞೆ, ಭಾರತ ಮರೆತ ‘ಸ್ತ್ರೀವಾದದ ಐಕಾನ್’

ಫಾತಿಮಾ ಶೇಖ್: 19ನೇ ಶತಮಾನದ ಶಿಕ್ಷಣತಜ್ಞೆ, ಭಾರತ ಮರೆತ ‘ಸ್ತ್ರೀವಾದದ ಐಕಾನ್’

- Advertisement -
- Advertisement -

ಪ್ರತಿ ವರ್ಷ ಜನವರಿ 3 ರಂದು ನಾವು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸುತ್ತೇವೆ. ಅವರು ಭಾರತದ ಮೊದಲ ಮಹಿಳಾ ಶಿಕ್ಷಕಿ ಮತ್ತು ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿದ ಮೊದಲ ಭಾರತೀಯ ಮಹಿಳೆ. ಹೆಣ್ಣು ಮಕ್ಕಳಿಗಾಗಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಅವರಿಗೆ ಹೆಗಲಾಗಿದ್ದ ಮತ್ತೊಬ್ಬ ಧೀಮಂತ ಮಹಿಳೆ ಫಾತಿಮಾ ಶೇಖ್.

ಅವರು ಫುಲೆಯವರ ಭಿಡೆವಾಡ ಶಾಲೆಯಲ್ಲಿ ಹುಡುಗಿಯರಿಗೆ ಅಕ್ಷರ ಕಲಿಸುವ ಕೆಲಸ ಮಾಡಿದರು. ಮನೆಮನೆಗೆ ತೆರಳಿ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರನ್ನು ಪ್ರೋತ್ಸಾಹಿಸುತ್ತಿದ್ದರು. ಜೊತೆಗೆ ಫುಲೆ ಅವರ ಶಾಲೆಗಳ ವ್ಯವಹಾರಗಳನ್ನೂ ನಿರ್ವಹಿಸುತ್ತಿದ್ದರು. ಆಕೆಯ ಕೊಡುಗೆ ಇಲ್ಲದಿದ್ದರೆ ಇಡೀ ಬಾಲಕಿಯರ ಶಿಕ್ಷಣ ಯೋಚನೆ ಸಾಕಾರಗೊಳ್ಳುತ್ತಿರಲಿಲ್ಲ. ಆದ್ದರಿಂದ ಇತಿಹಾಸ ತಜ್ಞರು ಅವರನ್ನು 19ನೇ ಶತಮಾನದ ಶಿಕ್ಷಣತಜ್ಞೆ ಎಂದು ಕರೆಯುತ್ತಾರೆ.

1831ರ ಜನವರಿ 9ರಂದು ಜನಿಸಿದ ಫಾತಿಮಾ ಶೇಖ್, 1900 ಅಕ್ಟೋಬರ್ 9ರಂದು ನಿಧನರಾದರು. ಫಾತಿಮಾ ಶೇಖ್ ಭಾರತದ ಮೊಟ್ಟ ಮೊದಲ ಮುಸ್ಲಿಂ ಮಹಿಳಾ ಶಿಕ್ಷಣತಜ್ಞೆ. ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಅವರು ಪುಣೆಯಲ್ಲಿ ತುಳಿತಕ್ಕೊಳಗಾದ ಸಮುದಾಯಗಳ ಮಹಿಳೆಯರು ಮತ್ತು ಮಕ್ಕಳಿಗೆ ಅಕ್ಷರ ಕಲಿಸಿದರು.

ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಶಿಕ್ಷಣದ ಪ್ರವರ್ತಕರಾಗಿದ್ದ ಫಾತಿಮಾ, ದಲಿತ, ಆದಿವಾಸಿ, ಮುಸ್ಲಿಂ ಸಮುದಾಯಗಳ ಮಹಿಳೆಯರು ಮತ್ತು ಅವರ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಅವರು ದೃಢವಾಗಿ ನಿಂತಿದ್ದರು. ಏಕೆಂದರೆ, ಈ ವರ್ಗಗಳು ಹಿಂದೂ ಧರ್ಮ ಮತ್ತು ಸಂಪ್ರದಾಯದ ಹೆಸರಿನಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದರು. ಅವರು ಅಸ್ಪೃಶ್ಯರು, ಮುಸ್ಲಿಂ ಸಮುದಾಯಗಳ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಶಿಕ್ಷಣ ನೀಡಲು ಫುಲೆ ದಂಪತಿಗಳೊಂದಿಗೆ ಕೆಲಸ ಮಾಡಿದರು. ಇದು ಜ್ಯೋತಿಬಾ ಫುಲೆ ನೇತೃತ್ವದ ಸತ್ಯಶೋಧಕ್ (‘ಸತ್ಯದ ಹುಡುಕಾಟ’) ಚಳುವಳಿಯ ಒಂದು ಭಾಗವಾಗಿತ್ತು.

ಹೆಣ್ಣು ಮಕ್ಕಳಿಗೆ ಹಾಗೂ ದಲಿತರಿಗೆ ಶಿಕ್ಷಣ ನೀಡಿದ್ದಕ್ಕಾಗಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರನ್ನು ಕುಟುಂಬ ಮತ್ತು ಗ್ರಾಮದ ಸದಸ್ಯರು ಗ್ರಾಮದಿಂದ ಹೊರಹಾಕಿದ್ದರು. 1848 ರಲ್ಲಿ ದಲಿತ ಮಕ್ಕಳು ಮತ್ತು ಮಹಿಳೆಯರಿಗಾಗಿ ಮೊದಲ ಶಾಲೆಯನ್ನು ಪ್ರಾರಂಭಿಸುವ ಅವರ ಪ್ರಯತ್ನವನ್ನು ‘ಧರ್ಮ ವಿರೋಧಿ ಕೃತ್ಯ’ ಎಂದು ಹೆಸರಿಸಿದಾಗ, ಫಾತಿಮಾ ಶೇಖ್ ಮತ್ತು ಅವರ ಸಹೋದರ ಉಸ್ಮಾನ್ ಅವರಿಗೆ ಸಹಾಯ ಮಾಡಿದರು. ಫುಲೆಯವರ ವಿಚಾರಗಳಿಂದ ಪ್ರೇರಿತರಾದ ಉಸ್ಮಾನ್ ತಮ್ಮ ಸಹೋದರಿಯನ್ನು ವಿದ್ಯಾಭ್ಯಾಸ ಮಾಡಲು ಪ್ರೇರೇಪಿಸಿದರು. ಸಾವಿತ್ರಿಬಾಯಿಯವರೊಂದಿಗೆ ಶೇಖ್ ಶಿಕ್ಷಕರಾಗಿ ತರಬೇತಿ ಪಡೆಯಲು ಶ್ರಮಿಸಿದರು.

ಫುಲೆ ದಂಪತಿಗಳ ಜೊತೆಗೆ ಶೇಖ್ ಕೂಡ ಸಾಮಾಜಿಕ ಅವಮಾನದ ಕಷ್ಟಗಳನ್ನು ಎದುರಿಸಿದರು. ಏಕೆಂದರೆ, ಅವರು ಬ್ರಾಹ್ಮಣ ಜಾತಿಯ ಕಟ್ಟುನಿಟ್ಟಿನ ರಚನೆಗಳ ವಿರುದ್ಧ ಹೋರಾಡಿದರು. ಅವರು ಪ್ರಬಲ ಜಾತಿಗಳ ಜನರು ಮತ್ತು ತಮ್ಮದೇ ಸಮುದಾಯದ ವ್ಯಕ್ತಿಗಳಿಂದ ಕಲ್ಲು ಮತ್ತು ಹಸುವಿನ ಸಗಣಿಯಿಂದ ದಾಳಿಯನ್ನೂ ಎದುರಿಸಿದರು. ಶೇಖ್ ಅವರನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳು ‘ಅಧರ್ಮಿ’ ಎಂದು ಪರಿಗಣಿಸಿದ್ದರು.

ಯಾವುದಕ್ಕೂ ಜಗ್ಗದ ಶೇಖ್.. ತಾವು ಕಲಿತು, ಹೆಣ್ಣು ಮಕ್ಕಳಿಗೂ ಕಲಿಸಿದರು. ಕುಟುಂಬಗಳು ತಮ್ಮ ಹುಡುಗಿಯರನ್ನು ಶಾಲೆಗೆ ಕಳುಹಿಸಲು ಪ್ರೋತ್ಸಾಹಿಸುವ ಸಲುವಾಗಿ ಮನೆಮನೆಗೆ ಭೇಟಿ ನೀಡಿದರು.

ಜೊತೆಜೊತೆಗೆ ಶಾಲಾ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಶೇಖ್ ಅವರ ಕೊಡುಗೆಗಳಿಲ್ಲದಿದ್ದರೆ, ಫುಲೆಯವರ ಶೀಕ್ಷಣ ಕ್ರಾಂತಿಯ ಗುರಿ ಅಪೂರ್ಣವಾಗುತ್ತಿತ್ತು. ಶೇಖ್ ಅವರು ಶಿಕ್ಷಣದ ಧ್ಯೇಯವನ್ನು ಜೀವಂತವಾಗಿಡಲು ಶ್ರಮಿಸಿದ್ದಲ್ಲದೆ, ಸಾವಿತ್ರಿಬಾಯಿಯವರಿಗೆ ಮತ್ತು ಸತ್ಯಶೋಧಕ ಚಳುವಳಿಗೆ ಬೆಂಬಲವಾಗಿ ನಿಂತಿದ್ದರು. ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿರಾವ್ ಫುಲೆ ಅವರಿಗೆ ಬರೆದ ಪತ್ರಗಳಲ್ಲಿ ಇದನ್ನು ಕಾಣಬಹುದು. ಅದರಲ್ಲಿ ಅವರು ಫಾತಿಮಾ ಶೇಖ್ ಬಗ್ಗೆ ಮೆಚ್ಚುಗೆ ಮತ್ತು ಪ್ರೀತಿಯಿಂದ ಮಾತನಾಡುತ್ತಾರೆ. ಶೇಖ್ ಆಕೆಯ ಜೀವನ ಅಥವಾ ಕೆಲಸದ ಬಗ್ಗೆ ಯಾವುದೇ ವಿಷಯವನ್ನು ದಾಖಲಿಸಿಲ್ಲ; ಇತರರು ಕೂಡಾ ಬರೆದಿಲ್ಲ. ಆದರೆ, ಸಾವಿತ್ರಿಬಾಯಿಯವರ ಪತ್ರಗಳು ಫಾತಿಮಾ ಶೇಖ್ ಅವರು ನೀಡಿದ ಕೊಡುಗೆಗಳ ಮಾಹಿತಿಯ ಪ್ರಮುಖ ಮೂಲವಾಗಿದೆ.

ಸುದೀರ್ಘ ಹೋರಾಟ ಹಾಗೂ ಬರಹಗಾರರ ಪ್ರಚಾರದಿಂದ ಸಾವಿತ್ರಿಬಾಯಿ ಇಂದು ಸೂಕ್ತ ಮನ್ನಣೆಯನ್ನು ಪಡೆದಿದ್ದಾರೆ. ಆದರೆ, ಶೇಖ್ ಅವರು ಭಾರತೀಯ ಇತಿಹಾಸದಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟಿಲ್ಲ. ಅವರ ಕೊಡುಗೆಗಳನ್ನು ಬೇಕಂತಲೇ ನಿರ್ಲಕ್ಷಿಸಲಾಗಿದೆ. ಆಕೆ, ಧಾರ್ಮಿಕ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಪರವಾಗಿ ಹೋರಾಡಿದವರಲ್ಲಿ ಒಬ್ಬರಾಗಿದ್ದಾರೆ. ದಲಿತ -ಮುಸ್ಲಿಂ ಸಮುದಾಯಗಳ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ಕಲಿಸುವ ಕೆಲಸದಲ್ಲಿದ್ದ ಅವರು, ಹಿಂದೂಗಳಿಂದ ಮಾತ್ರವಲ್ಲದೆ ಸಾಂಪ್ರದಾಯಿಕ ಮುಸ್ಲಿಮರಿಂದಲೂ ವಿರೋಧವನ್ನು ಎದುರಿಸಿದರು.

19ನೇ ಶತಮಾನದಲ್ಲಿ ಹಿಂದೂ ಮಹಿಳೆಯರಂತೆ ಮುಸ್ಲಿಮ್ ಮಹಿಳೆಯರಿಗೂ ಶಿಕ್ಷಣ ಪಡೆಯಲು ಅವಕಾಶ ಇರಲಿಲ್ಲ. ಸಾಮಾಜಿಕ ಕಟ್ಟುಪಾಡುಗಳು ಉತ್ತುಂಗದಲ್ಲಿದ್ದ ಕಾಲಘಟ್ಟದಲ್ಲಿ ಅವರು ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಮತ್ತು ಇಸ್ಲಾಂ ಮೂಲಭೂತವಾದವನ್ನು, ಮುಸ್ಲಿಂ ಮಹಿಳೆಯಾಗಿ ಎದುರು ಹಾಕಿಕೊಳ್ಳಬೇಕಾಗಿರಲಿಲ್ಲ. ಫುಲೆ ದಂಪತಿಗಳಿಂದ ಪ್ರಭಾವಿತರಾಗಿದ್ದ ಅವರು, ದಲಿತರು, ಆದಿವಾಸಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಹೋರಾಡುವುದನ್ನು ಮುಂದುವರಿಸಿದರು.

ಮಹಾರಾಷ್ಟ್ರ ಸರ್ಕಾರವು 2014 ರಲ್ಲಿ ಶೇಖ್ ಅವರ ಕೊಡುಗೆಗಳನ್ನು ಗುರುತಿಸಲು ಮತ್ತು ಮೌಲ್ಯೀಕರಿಸಲು ಪ್ರಯತ್ನಗಳನ್ನು ಮಾಡಿತು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಸರ್ ಸೈಯದ್ ಅಹ್ಮದ್ ಖಾನ್ ಮತ್ತು ಜಾಕಿರ್ ಹುಸೇನ್ ಅವರ ಜತೆಗೆ ಉರ್ದು ಶಾಲಾ ಪಠ್ಯಪುಸ್ತಕಗಳಲ್ಲಿ ಸಂಕ್ಷಿಪ್ತ ವಿವರವನ್ನು ಪ್ರಕಟಿಸಿತು.

ಇದನ್ನೂ ಓದಿ; ಸಾವಿತ್ರಿಬಾಯಿ ಫುಲೆ ಬ್ಯಾನರ್ ಹರಿದ ಕಿಡಿಗೇಡಿಗಳು; ಐವರ ವಿರುದ್ಧ ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...

ವಾರಣಾಸಿಯಲ್ಲಿ ಆಚರಿಸುವ ಪ್ರಸಿದ್ಧ ‘ಭಸ್ಮ ಹೋಳಿ’ಗೆ ಸಂಸ್ಕೃತ ವಿದ್ವಾಂಸರು ಮತ್ತು ಕಾಶಿ ವಿದ್ವತ್ ಪರಿಷತ್ ವಿರೋಧ 

ವಾರಣಾಸಿ (ಉತ್ತರ ಪ್ರದೇಶ): ನಗರದ ಸ್ಮಶಾನ ಭೂಮಿಗಳಾದ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳಲ್ಲಿ 'ಮಸಾನೆ ಕಿ ಹೋ ಲಿ ' ನುಡಿಸುವ ಸಂಪ್ರದಾಯವನ್ನು ಸಂಸ್ಕೃತ ವಿದ್ವಾಂಸರು ಮತ್ತು ಹಿಂದೂ ಧರ್ಮಗ್ರಂಥಗಳ ತಜ್ಞರ ಪರಿಷತ್ತು...

ಮುಸ್ಲಿಮರೆಂದು ತಿಳಿದು ಮಹಿಳೆಯರಿಗೆ ವಿತರಿಸಿದ್ದ ಕಂಬಳಿ ವಾಪಸ್ ಪಡೆದ ಬಿಜೆಪಿ ಮಾಜಿ ಸಂಸದ

ಬಿಜೆಪಿಯ ಮಾಜಿ ಸಂಸದ ಸುಖ್‌ವೀರ್ ಸಿಂಗ್ ಜೌನ್‌ಪುರಿಯಾ ಅವರು, ಮುಸ್ಲಿಮರೆಂದು ಗೊತ್ತಾದ ಬಳಿಕ ಮಹಿಳೆಯರಿಗೆ ವಿತರಿಸಿದ್ದ ಕಂಬಳಿಯನ್ನು ವಾಪಸ್ ಪಡೆದಿದ್ದಾರೆ ಎಂದು ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಟಿಕರಾಮ್ ಜುಲ್ಲಿ ಭಾನುವಾರ...

ಜೆಎನ್‌ಯು: ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಮತ್ತು ಎಬಿವಿಪಿ ನಡುವೆ ಘರ್ಷಣೆ: ಉದ್ವಿಗ್ನತೆ  

ಸೋಮವಾರ ಮುಂಜಾನೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಎಡಪಂಥೀಯ ಮತ್ತು ಬಲಪಂಥೀಯ ವಿದ್ಯಾರ್ಥಿ ಗುಂಪುಗಳು ಪರಸ್ಪರ ಹಿಂಸಾಚಾರವನ್ನು ಬಿಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಆವರಣದಲ್ಲಿ ಉದ್ವಿಗ್ನತೆ ಉಂಟಾಗಿದೆ.  ಸೋಮವಾರ ಬೆಳಗಿನ...

ಡ್ರಗ್ ದೊರೆ ‘ಎಲ್ ಮೆಂಚೊ’ ಹತ್ಯೆ : ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ

'ಎಲ್ ಮೆಂಚೊ' ಎಂದೇ ಪರಿಚಿತನಾಗಿದ್ದ ಡ್ರಗ್ ದೊರೆ ನೆಮೆಸಿಯೊ ಒಸೆಗುಯೆರಾನನ್ನು ಕಾರ್ಯಾಚರಣೆಯೊಂದರಲ್ಲಿ ಕೊಂದಿರುವುದಾಗಿ ಮೆಕ್ಸಿಕನ್ ಸೇನೆ ಭಾನುವಾರ (ಫೆ.22) ಘೋಷಿಸಿದೆ. ಆ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ ಎಂದು...