Homeಸಿನಿಮಾಕ್ರೀಡೆಫಿಫಾ 2022 ಕೆಲವು ದಾಖಲೆಗಳು; ರೋಚಕ ಗೆಲುವಿನ ಮೂಲಕ 36 ವರ್ಷಗಳ ನಂತರ ವಿಶ್ವಕಪ್‌ಗೆ ಮುತ್ತಿಕ್ಕಿದ...

ಫಿಫಾ 2022 ಕೆಲವು ದಾಖಲೆಗಳು; ರೋಚಕ ಗೆಲುವಿನ ಮೂಲಕ 36 ವರ್ಷಗಳ ನಂತರ ವಿಶ್ವಕಪ್‌ಗೆ ಮುತ್ತಿಕ್ಕಿದ ಅರ್ಜೆಂಟೀನಾ

- Advertisement -
- Advertisement -

ಅರ್ಜೆಂಟೀನಾ ತಂಡ ಕೊನೆಯದಾಗಿ ಫಿಫಾ ವಿಶ್ವಕಪ್ ಗೆದ್ದದ್ದು 1986ರಲ್ಲಿ. ಆಗಿನ್ನೂ ಲಿಯೋನಲ್ ಮೆಸ್ಸಿ ಹುಟ್ಟಿರಲೇ ಇಲ್ಲ. ಆದರೆ, ಅರ್ಜೆಂಟೀನಾ ವಿಶ್ವಕಪ್ ಗೆಲ್ಲಲು ಮೆಸ್ಸಿಯಂತಹ ಆಟಗಾರನೇ ಹುಟ್ಟಿಬರಬೇಕಿತ್ತು ಎಂದರೆ ಅತಿಶಯೋಕ್ತಿಯೇನಲ್ಲ. ಏಕೆಂದರೆ ಫುಟ್‌ಬಾಲ್ ಲೋಕದಲ್ಲಿ ದಂತಕಥೆಯೇ ಆಗಿಬಿಟ್ಟಿದ್ದ ಡಿಯಾಗೋ ಮರಡೋನ ಸ್ವತಃ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದ ಆ ಸಾಧನೆಯನ್ನು ಇಂದು ಲಿಯೋನಲ್ ಮೆಸ್ಸಿ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವಕಪ್ ಗೆಲುವಿನ ನಿಟ್ಟುಸಿರಿನೊಂದಿಗೆ ವಿಶ್ವಕಪ್‌ಗೆ ಘೋಷಿಸಿದ್ದ ವಿದಾಯವನ್ನೂ ಹಿಂತೆಗೆದುಕೊಂಡಿದ್ದಾರೆ. ಅದೇ ಕಾರಣಕ್ಕೆ ಫಿಫಾ 2022 ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆದರೂ, ಅರ್ಜೆಂಟೀನಾ ಪಾಲಿಗೆ ಆ ಫೈನಲ್ ಗೆಲುವು ಅಷ್ಟು ಸುಲಭದ್ದಾಗಿರಲಿಲ್ಲ ಎಂಬುದೂ ನಿಜ.

ಭಾನುವಾರ ನಡೆದ ಫಿಫಾ ವಿಶ್ವಕಪ್ 2022 ಫೈನಲ್ ಪಂದ್ಯದ ವೇಳೆ ಇಡೀ ಜಗತ್ತಿನೆಲ್ಲೆಡೆ ಫುಟ್‌ಬಾಲ್ ಪ್ರಿಯರು ಉಸಿರು ಬಿಗಿಹಿಡಿದು ಕುಳಿತಿದ್ದರು. ಅದಕ್ಕೆ ಕಾರಣ ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ, ತಮ್ಮ ಪಾಲಿಗೆ ಅದು ಕೊನೆಯ ವಿಶ್ವಕಪ್ ಪಂದ್ಯ ಎಂದು ಘೋಷಿಸಿದ್ದು. (ನಂತರ ತಾವು ಆಟ ಮುಂದುವರಿಸುವುದಾಗಿ ಹೇಳಿದ್ದಾರೆ.) ಈ ವಿದಾಯದಲ್ಲಾದರೂ ಮೆಸ್ಸಿ ಫುಟ್‌ಬಾಲ್ ವಿಶ್ವಕಪ್ ಗೆಲ್ಲಬೇಕೆಂಬುದು ಅಸಂಖ್ಯಾತ ಫುಟ್‌ಬಾಲ್ ಪ್ರೇಮಿಗಳ ಬಯಕೆಯಾಗಿತ್ತು. ಅದರಂತೆಯೇ ಪಂದ್ಯ ಶುರುವಾದ ಮೊದಲಾರ್ಧದ ಸಮಯದಲ್ಲಿಯೇ ಅರ್ಜೆಂಟೀನಾ ಎರಡು ಗೋಲು ಹೊಡೆಯುವ ಮೂಲಕ ಸಂತಸದ ಅಲೆಯಲ್ಲಿ ತೇಲಿತ್ತು. ಆದರೆ, ಆ ಖುಷಿ ಬದಲಾಗುವ ಹೊತ್ತು ಸ್ವಲ್ಪ ತಡವಾದರೂ ಬಂದೆರಗಿತ್ತು.

ಪಂದ್ಯದ ದ್ವಿತೀಯಾರ್ಧ ಆರಂಭವಾಗಿ ಸುಮಾರು 30 ನಿಮಿಷಗಳ ಆಟ ಮುಗಿದಿತ್ತು. ಆಗ ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ಎರಡು ನಿಮಿಷದ ಅಂತರದಲ್ಲಿ ಎರಡು ಗೋಲು ಹೊಡೆಯುವ ಮೂಲಕ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರವನ್ನೇ ಸೃಷ್ಟಿಸಿದ್ದರು. 90 ನಿಮಿಷದ ಆಟದ ಅವಧಿಯಲ್ಲಿ ಎರಡೂ ತಂಡಗಳು 2-2 ಗೋಲುಗಳಿಂದ ಡ್ರಾ ಸಾಧಿಸಿದ್ದವು. ಆಗ ಹೆಚ್ಚುವರಿ ಅರ್ಧ ಗಂಟೆಯ ಆಟ ಮುಂದುವರಿದಾಗ, ಮೆಸ್ಸಿ ಮತ್ತೊಂದು ಗೋಲು ಹೊಡೆದು ಅರ್ಜೆಂಟೀನಾವನ್ನು ಗೆಲುವಿನ ಹೊಸ್ತಿಲಿಗೆ ಕರೆದೊಯ್ದರು. ಆದರೆ, ಆಟ ಮುಕ್ತಾಯವಾಗಲು ಕೆಲವೇ ನಿಮಿಷಗಳಿರುವಾಗ ಎಂಬಾಪೆ ಗೋಲು ಬಾರಿಸುವ ಮೂಲಕ ಕಳೆದ ನಾಲ್ಕು ದಶಕಗಳಲ್ಲೇ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಮೊದಲ ಆಟಗಾರ ಎಂಬ ಮತ್ತೊಂದು ಹೆಗ್ಗಳಿಕೆ ಪಾತ್ರರಾದರು. ಈ ವೇಳೆ ಮೆಸ್ಸಿ ಅಭಿಮಾನಿಗಳ ಹೃದಯಬಡಿತ ಹೆಚ್ಚಾದದ್ದು ಸುಳ್ಳಲ್ಲ.

ಎಂಬಾಪೆ ಹ್ಯಾಟ್ರಿಕ್ ಗೋಲಿನ ಕಾರಣಕ್ಕೆ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸುವಂತಾಗಿತ್ತು. ಈ ವೇಳೆ ಅರ್ಜೆಂಟೀನಾ ಪೆನಾಲ್ಟಿಯಲ್ಲಿ 4-2ರ ಅಂತರದಲ್ಲಿ ಫ್ರಾನ್ಸ್‌ಅನ್ನು ಸೋಲಿಸುವ ಮೂಲಕ ಫಿಫಾ ವಿಶ್ವಕಪ್ ಕ್ಕೆ ಮುತ್ತಿಟ್ಟದ್ದು, ನಾಲ್ಕು ದಶಕಗಳ ಪ್ರಶಸ್ತಿಯ ಬರ ನೀಗಿಸಿದ್ದು ಈಗ ಇತಿಹಾಸ. ಈ ಗೆಲುವಿನೊಂದಿಗೆ ಮೆಸ್ಸಿ ಅಭಿಮಾನಿಗಳೂ ನಿಟ್ಟಿಸಿರುಬಿಟ್ಟಿದ್ದಾರೆ.

ವಿಶ್ವಕಪ್ ತಬ್ಬಿ ಮಲಗಿದ ಮೆಸ್ಸಿ

ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದು ಬೀಗಿದೆ. ಪರಿಣಾಮ ಲಿಯೋನಲ್ ಮೆಸ್ಸಿ ಇಂದು ವಿಶ್ವ ಫುಟ್‌ಬಾಲ್ ಅಭಿಮಾನಿಗಳಿಂದ ಕೊಂಡಾಡಲ್ಪಡುತ್ತಿದ್ದಾರೆ. ಈ ನಡುವೆ ಫ್ರಾನ್ಸ್ ಎದುರಿನ ಫೈನಲ್ ಪಂದ್ಯದಲ್ಲಿ ಗೆದ್ದು ತನ್ನ ಕನಸನ್ನು ನನಸು ಮಾಡಿಕೊಂಡಿರುವ ಮೆಸ್ಸಿ ಭಾನುವಾರ ಇಡೀ ರಾತ್ರಿ ಫುಟ್‌ಬಾಲ್ ವಿಶ್ವಕಪ್ ತಬ್ಬಿ ಮಲಗಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಸ್ವತಃ ಮೆಸ್ಸಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2 ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಅವರು ಟ್ರೋಫಿ ಹಿಡಿದುಕೊಂಡೇ ಹಾಸಿಗೆ ಮೇಲೆ ಕಂಬಳಿ ಹೊದ್ದು ಮಲಗಿದ್ದರೆ, ಮತ್ತೊಂದು ಫೋಟೋದಲ್ಲಿ ಹಾಸಿಗೆಯಲ್ಲಿರುವಾಗಲೇ ಟ್ರೋಫಿಯೊಂದಿಗೆ ಪೋಸ್ ನೀಡಿದ್ದಾರೆ. ಪ್ರಸ್ತುತ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹವಾ ಸೃಷ್ಟಿಸಿದೆ.

ಮುಂದಿನ ವಿಶ್ವಕಪ್‌ಗೆ ನಾರ್ಥ್ ಅಮೆರಿಕ ಸಾರಥ್ಯ

ಕತಾರ್ ಕಾರಣಕ್ಕೆ ಫಿಫಾ 2022 ಸಾಕಷ್ಟು ವಿವಾದಕ್ಕೆ ಗುರಿಯಾದರೂ ಈ ಹಿಂದಿನ ವಿಶ್ವಕಪ್‌ಗಳಿಗಿಂತ ಸಾಕಷ್ಟು ಯಶಸ್ವಿಯಾಗಿದೆ. ಈ ನಡುವೆ ಮುಂದಿನ ವಿಶ್ವಕಪ್‌ಅನ್ನು 2026ರಲ್ಲಿ ಅಮೆರಿಕ ಸೇರಿದಂತೆ ಮೂರು ದೇಶಗಳು ಜಂಟಿ ಆತಿಥ್ಯದಲ್ಲಿ ನಿರ್ವಹಿಸಲಿವೆ. ಹೀಗಾಗಿ ಅಭಿಮಾನಿಗಳ ಚಿತ್ತ ಇದೀಗ ಅಮೆರಿಕದತ್ತ ನೆಟ್ಟಿದೆ.

ಕಳೆದ 7 ಆವೃತ್ತಿಗಳಲ್ಲಿ ತಲಾ 32 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡರೆ, 2026ರ ವಿಶ್ವಕಪ್‌ನಲ್ಲಿ 48 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಪಂದ್ಯಗಳ ಸಂಖ್ಯೆ 64ರ ಬದಲು 80ಕ್ಕೆ ಏರಿಕೆಯಾಗಲಿದೆ. ಟೂರ್ನಿಗೆ ಆಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಆತಿಥ್ಯ ವಹಿಸಲಿದ್ದು, 14 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಭಾರತದಲ್ಲೂ ಫುಟ್‌ಬಾಲ್ ಕ್ರೇಜ್

ಭಾರತದಲ್ಲಿ ಸಾಮಾನ್ಯವಾಗಿ ಕ್ರಿಕೆಟ್ ಟೂರ್ನಿಗಳಿಗೆ ವೀಕ್ಷಕರ ಸಂಖ್ಯೆ ಅಧಿಕ. ಆದರೆ, ಈ ಬಾರಿಯ ಫುಟ್‌ಬಾಲ್ ವಿಶ್ವಕಪ್ ಭಾರತದಲ್ಲಿ ಕ್ರಿಕೆಟ್ ದಾಖಲೆಯನ್ನು ಮುರಿದಿದೆ. ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆ ಜಿಯೋ ಸಿನಿಮಾದಲ್ಲಿ ಬರೋಬ್ಬರಿ 110 ಮಿಲಿಯನ್ ವೀಕ್ಷಕರು ಈ ಬಾರಿ ಫುಟ್‌ಬಾಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಇನ್ನು ಅರ್ಜೆಂಟೀನಾ ಹಾಗೂ ಫ್ರಾನ್ಸ್ ನಡುವಿನ ಫೈನಲ್ ಪಂದ್ಯವೊಂದನ್ನೇ ಜಿಯೋಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಮೂಲಕ 32 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ, ಫಿಫಾ ವಿಶ್ವಕಪ್ ಟೂರ್ನಿ ಭಾರತದಲ್ಲಿ ಬರೋಬ್ಬರಿ 40 ಮಿಲಿಯನ್ ನಿಮಿಷಗಳ ವೀಕ್ಷಣೆ ಕಾಣುವ ಮೂಲಕ ಜಿಯೋ ಸಿನಿಮಾ ಹಾಗೂ ಸ್ಪೋರ್ಟ್ಸ್ 18 ಹೊಸ ದಾಖಲೆ ಬರೆದಿವೆ. ಇದರ ಜೊತೆಗೆ ಜಿಯೋಸಿನಿಮಾ ಹಾಗೂ ಸ್ಪೋರ್ಟ್ಸ್ 18 ಅತೀ ಹೆಚ್ಚು ಡೌನ್ಲೋಡ್ ಕಂಡಿರುವ ಆಪ್‌ಗಳು ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿವೆ.

ಗೂಗಲ್‌ನಲ್ಲೂ ಫಿಫಾ ದಾಖಲೆ!

ಫಿಫಾ ವಿಶ್ವಕಪ್ 2022ರ ಫೈನಲ್ ಪಂದ್ಯಾಟದ ಬಗ್ಗೆ ಗೂಗಲ್‌ನಲ್ಲಿ ಅತೀಹೆಚ್ಚು ಜನರು ಸರ್ಚ್ ಮಾಡಿದ್ದು, ಇದರಿಂದ ಗೂಗಲ್‌ನ ಟ್ರಾಫಿಕ್ ಕೂಡ ಹೆಚ್ಚಾಗಿದೆ. ಗೂಗಲ್‌ನ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಈಗಾಗಲೇ ಹಲವು ದಾಖಲೆಗಳಿಗೆ ಪಾತ್ರವಾಗಿರುವ ಫಿಫಾ 2022 ವಿಶ್ವಕಪ್ ಬಗ್ಗೆ 100 ಕೋಟಿಗೂ ಹೆಚ್ಚು ಜನರು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಮೂಲಕ ಗೂಗಲ್ ಟ್ರಾಫಿಕ್ ಹಿಂದೆದೂ ಕಾಣದಷ್ಟು ಹೆಚ್ಚಾಗಿದೆ ಎಂದು ಸುಂದರ್ ಪಿಚ್ಚೈ ತಿಳಿಸಿದ್ದಾರೆ.

ವಿಶ್ವಕಪ್‌ನಲ್ಲಿ ಗಮನ ಸೆಳೆದವರು ಇವರು!

ಎಂಬಾಪೆಗೆ ಗೋಲ್ಡನ್ ಬೂಟ್

ಫ್ರಾನ್ಸ್‌ನ ಯುವ ಆಟಗಾರ ಕಿಲಿಯನ್ ಎಂಬಾಪೆ ಈ ಬಾರಿಯ ವಿಶ್ವಕಪ್‌ನಲ್ಲಿ ನೀಡಿದ ಅಮೋಘ ಪ್ರದರ್ಶನ ಆ ತಂಡವನ್ನು ಸತತ ಎರಡನೇ ಬಾರಿಗೆ ಫೈನಲ್ ಹಂತಕ್ಕೇರುವಂತೆ ಮಾಡಿತ್ತು. ಫೈನಲ್‌ನಲ್ಲಿಯೂ ಐತಿಹಾಸಿಕ ಸಾಧನೆ ಮಾಡಿದ ಎಂಬಾಪೆ ಹ್ಯಾಟ್ರಿಕ್ ಗೋಲು ಬಾರಿಸಿ ಫ್ರಾನ್ಸ್ ತಂಡದ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಫೆನಾಲ್ಟಿ ಶೂಟ್‌ಔಟ್‌ನಲ್ಲಿ ಫ್ರಾನ್ಸ್ ಸೋಲು ಅನುಭವಿಸಬೇಕಾಯಿತು. ಆದರೆ ಈ ವಿಶ್ವಕಪ್‌ನಲ್ಲಿ ಒಟ್ಟು 8 ಗೋಲು ಗಳಿಸಿದ ಎಂಬಾಪೆ ಅತಿ ಹೆಚ್ಚು ಗೋಲು ಸಿಡಿಸಿ ವಿಶ್ವಕಪ್‌ನ ಪ್ರತಿಷ್ಠಿತ ಪ್ರಶಸ್ತಿಯಾದ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಮೆಸ್ಸಿಗೆ ಗೋಲ್ಡನ್ ಬಾಲ್

ಅತ್ಯುತ್ತಮ ಆಟಗಾರನಿಗೆ ನೀಡುವ ಗೋಲ್ಡನ್ ಬಾಲ್ ಪ್ರಶಸ್ತಿ ಲಿಯೋನೆಲ್ ಮೆಸ್ಸಿ ಪಾಲಾಗಿದೆ. 7 ಗೋಲು ಹಾಗೂ 3 ಅಸಿಸ್ಟ್‌ಗಳನ್ನು ಲಿಯೋನೆಲ್ ಮೆಸ್ಸಿ ತನ್ನ ಹೆಸರಿಗೆ ಹೊಂದಿದ್ದು ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಫೈನಲ್ ಪಂದ್ಯದಲ್ಲೂ ಅವರು ಎರಡು ಗೋಲು ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಎಮಿಗೆ ಗೋಲ್ಡನ್ ಗ್ಲವ್

ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್‌ಗೆ ನೀಡುವ ಗೋಲ್ಡನ್ ಗ್ಲವ್ ಪ್ರಶಸ್ತಿ ಅರ್ಜೆಂಟಿನಾ ತಂಡದ ಗೋಲ್ ಕೀಪರ್ ಎಮಿ ಮಾರ್ಟೀನ್ಜ್ ಪಾಲಾಗಿದೆ. ಆದರೆ, ಪ್ರಶಸ್ತಿ ಪಡೆದ ಬಳಿಕ ತೋರಿದ ಅನುಚಿತ ವರ್ತನೆಯಿಂದಾಗಿ ಇದೀಗ ಎಮಿ ಹಲವು ವಿವಾದಕ್ಕೆ ಈಡಾಗಿದ್ದಾರೆ.

ಫರ್ನಾಂಡಿಸ್‌ಗೆ ಯುವ ಆಟಗಾರ ಪ್ರಶಸ್ತಿ

ಈ ವಿಶ್ವಕಪ್‌ನ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಅರ್ಜೆಂಟೀನಾ ತಂಡದ ಯುವ ಆಟಗಾರ ಎನ್ಜೋ ಫರ್ನಾಂಡಿಸ್ ಪಾಲಾಗಿದೆ. ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಈತ ಲಿಯೋನಲ್ ಮೆಸ್ಸಿ ಸ್ಥಾನವನ್ನು ತುಂಬಲಿದ್ದಾರೆ ಎಂಬ ಭರವಸೆಯನ್ನು ತಮ್ಮ ಆಟದ ಮೂಲಕ ಮೂಡಿಸಿದ್ದಾರೆ.

ಫಿಫಾ ಗೋಲು ಗಳಿಸಿದವರ ಪಟ್ಟಿ

ಕುಲಿಯನ್ ಎಂಬಾಪೆ (ಫ್ರಾನ್ಸ್) – 8 ಗೋಲು
ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) – 7 ಗೋಲು
ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ) 4 ಗೋಲು
ಒಲಿವಿಯರ್ ಗಿರೌಡ್ (ಫ್ರಾನ್ಸ್)- 4 ಗೋಲು
ಅಲ್ವಾರೊ ಮೊರಾಟಾ (ಸ್ಪೇನ್) – 3
ಬುಕಾಯೊ ಸಾಕಾ (ಇಂಗ್ಲೆಂಡ್) – 3
ಕೋಡಿ ಗಕ್ಪೋ (ನೆದರ್ಲ್ಯಾಂಡ್ಸ್) – 3

ಭಾನುವಾರ ನಡೆದ ಫಿಫಾ ವಿಶ್ವಕಪ್ 2022ರ ಫೈನಲ್ ಸೆಣೆಸಾಟದಲ್ಲಿ ಅರ್ಜೆಂಟಿನಾ ತಂಡ ಗೆದ್ದು ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರೂ, ಬ್ರೆಜಿಲ್ ಅಗ್ರಸ್ಥಾನ ಅಬಾಧಿತವಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬೆಲ್ಜಿಯಂ ತಂಡವನ್ನು ಕೆಳಕ್ಕಿಳಿಸಿ ಬ್ರೆಜಿಲ್ ತಂಡ ನಂಬರ್ 1 ತಂಡವಾಗಿತ್ತು. ಆದರೆ ಈ ಬಾರಿಯ ವಿಶ್ವಕಪ್‌ನ ಕ್ವಾಟರ್‌ಫೈನಲ್ ಹಂತದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದರೂ ವಿಶ್ವಚಾಂಪಿಯನ್ ಅರ್ಜೆಂಟಿನಾ ತಂಡಕ್ಕೆ ಬ್ರೆಜಿಲ್ ತಂಡವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಚಾಂಪಿಯನ್ ಅರ್ಜೆಂಟೀನಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...