ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನೆಲ್ಲಾ ಕೈ ವಶಮಾಡಿಕೊಂಡಿರುವ “ಭಕ್ತರ ಫ್ರಭುತ್ವ” ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಫ್ಯಾಸಿಸಂ ಧೋರಣೆಯನ್ನು ಮುಂದುವರೆಸಿದೆ.
ತನ್ನ ಸುಳ್ಳುಗಳನ್ನು, ಮತೋನ್ಮತ್ತ ಕ್ರೌರ್ಯವನ್ನು ಖಂಡಿಸುವ, ಅದೇ ಕಾಲಕ್ಕೆ ಸತ್ಯವನ್ನು ಜನರ ಮುಂದಿಡುವ ಯಾರೊಬ್ಬರನ್ನೂ ಸಹಿಸಿಕೊಳ್ಳದ ಬಿಜೆಪಿ ರಾಜ್ಯದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ಕೆಲಸಕ್ಕೆ ಕೈ ಹಾಕಿರುವ ಮತ್ತೊಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಬಯಲಾಗಿದೆ.
ಇದನ್ನೂ ಓದಿ: 2019ರಲ್ಲಿ ದಿಟ್ಟವಾಗಿ ಧ್ವನಿಯೆತ್ತಿದ 10 ಪತ್ರಕರ್ತೆಯರ ಕುರಿತು
ಮೈಸೂರಿನ ಹಿರಿಯ ಪತ್ರಕರ್ತ ‘ಪ್ರಜಾಭಾರತ’ ಸುದ್ದಿವಾಹಿನಿಯ ಸಂಪಾದಕ ಕೆ. ದೀಪಕ್ ವಿರುದ್ಧ ಬಿಜೆಪಿಯ ರಾಜ್ಯ ಜಂಟೀ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ ಎಂಬುವರು ಸದ್ದಿಲ್ಲದೆ ಪೊಲೀಸ್ ದೂರು ದಾಖಲಿಸಿ ದೀಪಕ್ ಅವರನ್ನು ಜೈಲಿಗೆ ನೂಕುವ ಷಡ್ಯಂತ್ರ ದೀಪಕ್ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದ್ದರಿಂದ ವಿಫಲವಾಗಿದೆ.
ದೀಪಕ್ ಮಾಡಿದ ಅಪರಾಧವಾದರೂ ಏನು ಗೊತ್ತಾ?
ಕಳೆದ 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿನ “ಪ್ರಜಾಭಾರತ” ಸುದ್ದಿವಾಹಿನಿಯು “ಮತಭಾರತ” ಎಂಬ ಸರಣಿ ಸಂಚಿಕೆಯೊಂದರಲ್ಲಿ “ಬಿಜೆಪಿ ಮಿಷನ್:360-ಭಾರತಕ್ಕೆ ಆಪತ್ತು” ಪ್ರಸಾರ ಮಾಡಿದ್ದು. ಬಿಜೆಪಿಯ ಸಂವಿಧಾನ ವಿರೋಧಿ ಆಡಳಿತವನ್ನು ಎಳೆ ಎಳೆಯಾಗಿ ವಿಶ್ಲೇಷಿಸಲಾಗಿತ್ತು.

ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಮೈಸೂರಿನ ಪ್ರಜಾಭಾರತ ಸುದ್ದಿವಾಹಿನಿ ಸಂಪಾದಕ ಕೆ.ದೀಪಕ್ ವಿರುದ್ಧ ಕೋಮು ಸೌಹಾರ್ದ ಕದಡುವ ಸಂಚು ನಡೆಸಿದ ಆರೋಪ ಹೊರಿಸಿ ಬಿಜೆಪಿ ರಾಜ್ಯ ಜಂಟೀ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ರಿಯಾ ಜೊತೆ ಮಾಧ್ಯಮಗಳ ದುರ್ವತನೆ: ಕೊನೆಗೂ ಎಚ್ಚೆತ್ತ ಮುಂಬೈ ಪೊಲೀಸರು
ಸದ್ದಿಲ್ಲದೆ ಎಫ್‌ಐಅರ್ (ಐಪಿಸಿ 504, 505, 153 ಎ) ದಾಖಲಾಗಿದ್ದು, 17 ತಿಂಗಳ ನಂತರ ದೀಪಕ್ ಅವರನ್ನು ಬಂಧಿಸಿ ಜೈಲಿಗೆ ನೂಕುವಂತೆ ಪೊಲೀಸರಿಗೆ ತೀವ್ರ ಒತ್ತಡಗಳನ್ನು ಹೇರಲಾಗಿತ್ತು. ದೀಪಕ್ ನಿರೀಕ್ಷಣಾ ಜಾಮೀನು ಪಡೆದು ಬಿಜೆಪಿಯ ಷಡ್ಯಂತ್ರವನ್ನು ವಿಫಲಗೊಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಜಾಭಾರತ ಸುದ್ದಿವಾಹಿನಿ ಮತಭಾರತ ಸರಣಿಯಲ್ಲಿ ಕೇಂದ್ರದ ಮೋದಿ ಸರ್ಕಾರದ ವೈಫಲ್ಯ, ಸಮುದಾಯ ವಿರೋಧಿತನಗಳನ್ನು ಬಯಲಿಗೆಳೆಯುತ್ತಾ ಬಂದಿದ್ದರು. ಮೈಸೂರಿನ ಸಂಸದ ಪ್ರತಾಪ ಸಿಂಹ ಅವರ ಲೈಂಗಿಕ ಹಗರಣವನ್ನು ಸ್ಪೋಟಿಸಿದ್ದರು. ಇದೇ ಸೇಡಿಗೆ ದೀಪಕ್ ವಿರುದ್ಧ ಬೆಂಗಳೂರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದೂರು ದಾಖಲಾದದ್ದು ದೀಪಕ್ ಅವರಿಗೆ ತಿಳಿಯಲು 17 ತಿಂಗಳೇ ಬೇಕಾಯಿತು!. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದಂತೆ ದೀಪಕ್ ವಿರುದ್ಧ ಕೇಸು ದಾಖಲಾಗಿರುವುದು ಬೆಳಕಿಗೆ ಬಂದಿದ್ದು. ಅವರನ್ನು ಬಂಧಿಸಿಯೇ ತೀರಬೇಕೆಂಬ ಒತ್ತಡಗಳು ಪೊಲೀಸರ ಮೇಲಿತ್ತು.
ಪತ್ರಕರ್ತ ದೀಪಕ್ ಅವರನ್ನು ಜೈಲಿಗೆ ನೂಕಿ ಭಯಪಡಿಸಿ ಬಾಯಿ ಮುಚ್ಚಿಸುವ ಪ್ರತಾಪಸಿಂಹನ ಕೇಡಿ ಕೃತ್ಯ ಸದ್ಯಕ್ಕೆ ಈಡೇರಿಲ್ಲ.
ಕೆ.ದೀಪಕ್ ಕಳೆದ 21 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಅವರೋರ್ವ ಜರ್ನಲಿಸ್ಟ್ ಆ್ಯಕ್ಟ್ವೀಸ್ಟ್. ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಡಿಹೊತ್ತಿಗೆಯಾಗಿದ್ದ ಮೈಸೂರಿನ ‘ಸಾಧ್ವಿ’ ಪತ್ರಿಕೆಯ ಮೂಲಕ ಪರ್ತಕರ್ತ ಬದುಕು ಕಟ್ಟಿಕೊಂಡ ದೀಪಕ್ ‘ವಿಜಯ’, ಸೂರ್ಯೋದಯ, ಪ್ರಜಾನುಡಿ, ಸಂಜೆವಾಣಿ, ವಾರ್ತಾಭಾರತಿ ಪತ್ರಿಕೆಗಳು ಸೇರಿದಂತೆ ದೃಶ್ಯಮಾಧ್ಯಮಗಳಲ್ಲೂ ವೃತ್ತಿಪರ ಪತ್ರಕರ್ತನಾಗಿಯೂ ಅದೇ ಕಾಲಕ್ಕೆ ಬುದ್ದ, ಬಸವ, ಅಂಬೇಡ್ಕರ್ ಪ್ರೇಣಿತ ವೈಚಾರಿಕ ಚಿಂತನೆಗಳೊಂದಿಗೆ ಸಾಮಾಜಿಕ ಚಳವಳಿಗಳ ಜೊತೆ ಹೆಜ್ಜೆ ಹಾಕುತಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ದೀಪಕ್ ಹಾಲಿ ಮೈಸೂರು ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ಪತ್ರಕರ್ತರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ.
ಬಿಜೆಪಿ ಯಾರೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹಿಸಿಕೊಳ್ಳದು ಎಂಬುದಕ್ಕೆ ಅನೇಕ ನಿದರ್ಶನಗಳು ಮತ್ತೆ ಮತ್ತೆ ಬಯಲಾಗುತ್ತಲೆ ಇವೆ.
ಇದನ್ನೂ ಓದಿ: ಮೀಸಲಾತಿ ಮತ್ತು ಒಳಮೀಸಲಾತಿ ಎರಡೂ ಒಂದೆ..: ಬೆಟ್ಟಯ್ಯ ಕೋಟೆ ಸಂದರ್ಶನ
ಪ್ರಶ್ನಿಸುವ ಪತ್ರಕರ್ತರನ್ನು, ಸಾಹಿತಿ- ಬರಹಗಾರರನ್ನ, ವಿಮರ್ಶಕರನ್ನು, ಸೈದ್ಧಾಂತಿಕ ವಿರೋಧಿಗಳಿಗೆ ದೇಶದ್ರೋಹಿ ಎಂಬ ಹಣೆ ಪಟ್ಟಿ ಕಟ್ಟಿ ದಮನ ಮಾಡುವ ಮತ್ತು ವಿಚಾರ ಸಂಘರ್ಷದ ಮೂಲಕ ಎದುರುಗೊಳ್ಳಲಾರದ ಮನುವಾದಿ ಪ್ರೇಣಿತ ಬಿಜೆಪಿ ಮತ್ತದರ ಸಂತತಿಗಳು ಕಾನೂನು ದುರ್ಬಳಕೆ ಮಾಡಿಕೊಂಡೊ ಇಲ್ಲವೆ ಇನ್ನಾವುದಾದರೂ ದಾರಿಯಲ್ಲಿ ಹತ್ತಿಕ್ಕುವ ಕುಕೃತ್ಯಗಳು ಮುಂದುವರೆದಿವೆ.
ಪತ್ರಕರ್ತ ದೀಪಕ್ ವಿರುದ್ಧ ಕೇಸು ದಾಖಲಿಸಿದ ಬಿಜೆಪಿ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕಾರಿಯಾದದ್ದು ಎಂದು ಪತ್ರಕರ್ತರ ಸಮೂಹ ತೀವ್ರಖಂಡನೆ ವ್ಯಕ್ತಪಡಿಸಿದೆ.
“ನನ್ನ ಮೇಲೆ ಇಂತಹ ಹತ್ತಾರು ಕೇಸು ಹಾಕಿದರೂ ಸತ್ಯ ಹೇಳುವ ನನ್ನ ದನಿಯನ್ನು ಅಡಗಿಸಲಾಗದು. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದ ಹಕ್ಕನ್ನು ಹತ್ತಿಕ್ಕುವ ಯಾವುದೇ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ.”
– ಕೆ.ದೀಪಕ್
ವಿಡಿಯೋ ನೋಡಿ:ಮಾಧ್ಯಮಗಳು ಸೃಷ್ಟಿಸಿರುವ ಸಾವಿನ ಬಾವಿ – ಡಾ.ವಾಸು ಎಚ್.ವಿ ಮಾತುಗಳು



“ನನ್ನ ಮೇಲೆ ಇಂತಹ ಹತ್ತಾರು ಕೇಸು ಹಾಕಿದರೂ ಸತ್ಯ ಹೇಳುವ ನನ್ನ ದನಿಯನ್ನು ಅಡಗಿಸಲಾಗದು. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದ ಹಕ್ಕನ್ನು ಹತ್ತಿಕ್ಕುವ ಯಾವುದೇ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ.”