Homeಮುಖಪುಟನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ – 22

ಸಮಸ್ಯೆಗಳ ಪರಿಹಾರ

ಸಮಸ್ಯೆಗಳು ಜೀವನದ ಒಂದು ಅವಿಭಾಜ್ಯ ಅಂಗ. ಹಾಗೆಂದು ಸಮಸ್ಯೆಯಿಂದ ಓಡಿ ಹೋಗುವುದಾಗಲೀ, ಆತ್ಮಹತ್ಯೆಯಾಗಲೀ ಪರಿಹಾರವಲ್ಲ. ಜೀವನಾವಶ್ಯಕ ಕಲೆಗಳಲ್ಲಿ ಸಮಸ್ಯೆ ಬಗೆಹರಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು ಜೊತೆ ಜೊತೆಯಾಗಿ ಹೋಗುತ್ತವೆ. ಸಮಸ್ಯೆ ಪರಿಹಾರಕ್ಕೆ ಎಲ್ಲೋ ಒಂದು ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದ್ದರೆ, ತೆಗೆದುಕೊಂಡ ನಿರ್ಧಾರ ಇನ್ನೆಲ್ಲೋ ಒಂದು ಸಮಸ್ಯೆಯನ್ನು ಸೃಷ್ಟಿಸಲೂಬಹುದು. ಹಾಗಾಗಿ ಅವೆರಡಕ್ಕೂ ಒಂದು ರೀತಿಯ ನಂಟು ಇರುವಂತಿದ್ದರೂ ಎಲ್ಲಾ ಸಮಸ್ಯೆಗೂ ನಿರ್ಧಾರವೇ ಪರಿಹಾರ ಎಂತಲೂ ಇಲ್ಲ; ಎಲ್ಲಾ ನಿರ್ಧಾರಗಳೂ ಹೊಸ ಸಮಸ್ಯೆಗೆ ಕಾರಣವಾಗುತ್ತವೆ ಎಂತಲೂ ಇಲ್ಲ.

ಇಲ್ಲಿ ಸಮಸ್ಯೆಯನ್ನು ನಾವು ಎರಡು ವಿಧವಾಗಿ ಪರಿಗಣಿಸಬಹುದು. ಒಂದು ವೈಯುಕ್ತಿಕ ಅಥವಾ ಸಾಮಾಜಿಕ. ಇದು ಮನಶಾಸ್ತ್ರಕ್ಕೆ ಸಂಬಂಧಿಸಿದ್ದು, ಮತ್ತೊಂದು ವಿಜ್ಞಾನಕ್ಕೆ ಸಂಬಂಧಿಸಿದ್ದು, ಅಂದರೆ ಗಣಿತ, ವ್ಯಾಕರಣ, ವೈದ್ಯಕೀಯ, ಇತ್ಯಾದಿ.. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ, ಕೇವಲ ವೈಯುಕ್ತಿಕ ಅಥವಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. ಒಟ್ಟಿನಲ್ಲಿ ಸಮಸ್ಯೆ ಏನೇ ಇರಲಿ, ಅದು ಸ್ಪಷ್ಟವಾಗಿದ್ದಷ್ಟೂ ಪರಿಹಾರ ಸುಲಭ. ಸಮಸ್ಯೆ ಏನು ಎಂಬುದೇ ತಿಳಿಯದಿದ್ದಲ್ಲಿ ಪರಿಹಾರವೂ ಕಷ್ಟಸಾಧ್ಯ. ಪರಿಹಾರಕ್ಕೆ ನಮಗೆ ಬೇಕಾಗಿರುವುದು ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆ. ಇವೆರಡರ ಬಗ್ಗೆ ನಾನು ಈಗಾಗಲೇ ತಿಳಿಸಿದ್ದೇನೆ.

ಸಮಸ್ಯೆಯ ಪರಿಹಾರದಲ್ಲಿ ನಮ್ಮ ಮನಃಸ್ಥಿತಿಯೂ ಮುಖ್ಯ ಭೂಮಿಕೆ ವಹಿಸುತ್ತದೆ. ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ. ಅದೇ ರೀತಿ ಸಮಸ್ಯೆಯ ಎಲ್ಲಾ ಪಾರ್ಶ್ವಗಳನ್ನು ಸರಿಯಾಗಿ ತಿಳಿಯಲು ಸಾಧ್ಯವಾಗಿಲ್ಲದಿದ್ದಲ್ಲಿ, ನಮಗೆ ಗೊತ್ತಿರುವ ಅಲ್ಪ ಮಾಹಿತಿಯ ಆಧಾರದ ಮೇಲೆ, ಪರಿಹಾರಕ್ಕೆ ಕೈ ಹಾಕಿ ವಿಪರೀತ ಪರಿಣಾಮ ಎದುರಿಸಬೇಕಾಗುತ್ತದೆ. ಉದಾ: ಎಲೆಕ್ಟ್ರಿಕ್ ಮೀಟರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಒಲೆಯ ಮೇಲಿರಿಸಿದ ಕಾಯ್ದ ಎಣ್ಣೆಗೆ ಬೆಂಕಿ ತಗುಲಿದಾಗ, ನಾವು ಬೆಂಕಿ ನಂದಿಸಲು ಅದರ ಮೇಲೆ ನೀರು ಎರಚಲು ಹೋದಲ್ಲಿ, ವಿದ್ಯುತ್ ಶಾಕಿನಿಂದ ಅಥವಾ ದೊಡ್ಡ ಬೆಂಕಿ ಅನಾಹುತದಿಂದ ಹೆಚ್ಚಿನ ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ ಸಮಸ್ಯೆ ಅರ್ಥವಾಗದಿದ್ದಲ್ಲಿ, ನಮ್ಮಲ್ಲಿ ಸಾಮರ್ಥ್ಯ/ಸಂಪನ್ಮೂಲದ ಕೊರತೆ ಇದ್ದಲ್ಲಿ, ಪರಿಹಾರಕ್ಕೆ ನಾವೊಬ್ಬರೇ ಯತ್ನಿಸದೇ, ಕೂಡಲೇ ಬೇರೆಯವರ ಸಹಾಯ ಪಡೆಯಬೇಕು. ಇದು ಸಮಸ್ಯೆ ಪರಿಹಾರ ಕಲೆಯ ಮುಖ್ಯ ಎಚ್ಚರಿಕೆ.

ಮೊಟ್ಟ ಮೊದಲಿಗೆ ನಾವು ಸಮಸ್ಯೆ ಏನು ಎಂಬುದನ್ನು ಸರಿಯಾಗಿ ಅರಿಯಬೇಕು. ಸಮಸ್ಯೆ ನೇರವಾಗಿ ನಮ್ಮ ಕಣ್ಣಿಗೆ ಕಾಣುವುದು ಅಪರೂಪ, ಕೇವಲ ಅದರ ಲಕ್ಷಣಗಳು ನಮಗೆ ಗೋಚರಿಸುತ್ತವೆ. ಸಮಸ್ಯೆ ಎಲ್ಲೋ ಇರುತ್ತದೆ, ಲಕ್ಷಣಗಳು ಇನ್ನೆಲ್ಲೋ ಕಾಣಿಸಿಕೊಳ್ಳುತ್ತವೆ. ಹೇಗೆ ವೈದ್ಯರು ನಮ್ಮ ಕಾಯಿಲೆ ಕಂಡು ಹಿಡಿಯುವಾಗ ನಮ್ಮಿಂದ ತೊಂದರೆಯ ಲಕ್ಷಣಗಳನ್ನು ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾವೂ ಸಹ ಸಮಸ್ಯೆಯ ಗುಣ-ಲಕ್ಷಣಗಳನ್ನು ಗುರುತಿಸಿ, ವಿಶ್ಲೇಷಿಸಿ ಅದರಿಂದ ಸಮಸ್ಯೆ ಏನು ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದರಲ್ಲೂ ಸಮಸ್ಯೆಗೆ “ಮೂಲ ಕಾರಣ” ಏನು ಎಂಬುದನ್ನು ತಿಳಿದು, ನಂತರ ಮೂಲ ಕಾರಣ ಹೋಗಲಾಡಿಸುವಂತಹ ಪರಿಹಾರ ಹುಡುಕಬೇಕಾಗುತ್ತದೆ. ಮೂಲ ಕಾರಣ ತಿಳಿಯದಿದ್ದರೆ ನಾವು ಪರಿಹಾರಕ್ಕೆ ದಾರಿ ಸಿಕ್ಕದೆ, ಅದರ ಚಕ್ರವ್ಯೂಹದಲ್ಲಿ ಸಿಲುಕುವುದು ನಿಶ್ಚಿತ.

ಮೂಲ ಕಾರಣ (ರೂಟ್ ಕಾಸ್) ಹುಡುಕಲು ಹಲವಾರು ಉಪಕರಣಗಳಿವೆ. ಅವುಗಳಲ್ಲಿ ಒಂದು “ಫೈವ್ ವೈ” (Five Why) ಇದರಲ್ಲಿ ಸಮಸ್ಯೆಯ ಬಗ್ಗೆ ಐದು ಬಾರಿ “ಏಕೆ?“ ಎಂದು ಪ್ರಶ್ನಿಸುವುದು. ಈ ಐದು ಬಾರಿಯ ಪ್ರಶ್ನೆಗೆ ಉತ್ತರ ಸಿಗುವಂತಿದ್ದರೆ ನಮಗೆ ಸಮಸ್ಯೆಯ ಮೂಲ ಕಾರಣ ಸ್ಪಷ್ಟವಾಗುತ್ತದೆ.

ಇನ್ನೊಂದು ಉಪಕರಣ ”ಫಿಷ್ ಬೋನ್” ಡಯಾಗ್ರಾಮ್. ಇದರಲ್ಲಿ ಸಮಸ್ಯೆಗೆ ಯಾವುದು ಕಾರಣ – ನಮ್ಮ ವ್ಯವಸ್ಥೆಯೇ, ಸಲಕರಣೆಗಳೇ, ಪರ್ಯಾವರಣವೇ, ಬಳಕೆಯ ವಸ್ತುಗಳೇ, ಜನರೇ ಅಥವಾ ಪ್ರಕ್ರಿಯೆಯೇ? ಎಂಬುದಾಗಿ ಅವುಗಳ ಕಾರ್ಯವನ್ನು ನಿರೀಕ್ಷಿಸಿ, ವಿಶ್ಲೇಶಿಸಿ ಯಾವುದು “ಕಾರಣ”, ಯಾವುದು ಲಕ್ಷಣ ಎಂಬ ತೀರ್ಮಾನಕ್ಕೆ ಬರುವುದು. ಚಿತ್ರ ಮೀನಿನ ಮೂಳೆಯ ಆಕಾರದಲ್ಲಿರುವುದರಿಂದ ಇದಕ್ಕೆ ಫಿಶ್ ಬೋನ್ ಎನ್ನುತ್ತಾರೆ.

ಮೇಲಿನ ರೀತಿಗಳಲ್ಲದೆ ಸಮಸ್ಯೆ ಪರಿಹಾರಕ್ಕೆ ಇನ್ನೂ ಕೆಲವು ತಂತ್ರಗಳನ್ನು ಬಳಸಬಹುದು. ಅವೆಂದರೆ:

·         ಸಮಸ್ಯೆಯ ಒಂದು ನಿಜರೂಪ ಮಾದರಿ (ಮೊಡೆಲ್) ಮಾಡಿಕೊಂಡು ಅದರ ಮೇಲೆ ಮೊದಲು ಪ್ರಯೋಗ ಮಾಡುವುದು. ನಂತರ ಅದನ್ನು ನಿಜವಾದ ಸಮಸ್ಯೆಯ ಮೇಲೆ ಉಪಯೋಗಿಸುವುದು (ವೈದ್ಯರು ತಮ್ಮ ಔಷಧಿಗಳನ್ನು ಮೊದಲು ಬಲಿಪಶುಗಳ ಮೇಲೆ ಉಪಯೋಗಿಸುವ ರೀತಿಯಲ್ಲಿ).

·         ಸಮಸ್ಯೆಯ ತರಹವೇ ಇರುವ ಅನುರೂಪ ಮಾದರಿಯ ಮೇಲೆ ಪ್ರಯೋಗ ಮಾಡಿ ನೋಡುವುದು.

·         “ಹೀಗೆ ಮಾಡಿದರೆ ಹೀಗೆ ಆಗುತ್ತದೆ” ಎನ್ನುವ ಪಠ್ಯಪುಸ್ತಕ ತತ್ವವಾದವನ್ನು ಪ್ರಯೋಗಿಸಿ ನೋಡುವುದು.

·         ಸಂಕೀರ್ಣ ಸಮಸ್ಯೆಯನ್ನು ಚಿಕ್ಕ-ಚಿಕ್ಕದಾಗಿ ತುಂಡರಿಸಿ ಪರಿಹಾರ ಹುಡುಕುವುದು.

·         ಯಾವ ಯಾವ ತುಂಡುಗಳಿಗೆ ಪರಿಹಾರ ಸಿಗುತ್ತದೋ ಅಲ್ಲಿಂದ ಮುಂದಕ್ಕೆ ಹೊಸದಾಗಿ ಯೋಚಿಸುವುದು.

·         ಪರಿಹಾರ ಸಿಗದ ತುಂಡುಗಳನ್ನು ಒಟ್ಟು ಸೇರಿಸಿ ಪರಿಹಾರ ಕಂಡುಕೊಳ್ಳುವುದು

·         ಸಮಸ್ಯೆಯನ್ನು ಪರಿವರ್ತಿಸಿ ಪರಿಹಾರವಿರುವಂತಹ ಸಮಸ್ಯೆಯನ್ನಾಗಿ ಮಾಡುವುದು.

ಸಮಸ್ಯೆ ಪರಿಹಾರದ ಐದು ಹೆಜ್ಜೆಗಳು:

1.      ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಸರಿಯಾಗಿ ಗುರುತಿಸಿ, ವ್ಯಾಖ್ಯಾನಿಸುವುದು.

2.      ಅದರ ಪರಿಹಾರಕ್ಕೆ ಬೇಕಾದ ಪರ್ಯಾಯ ಮಾರ್ಗಗಳನ್ನು, ಬೇಕಾದ ಸಂಪನ್ಮೂಲ ಹುಡುಕುವುದು/ಕ್ರೋಢೀಕರಿಸುವುದು.

3.      ಪರ್ಯಾಯ ಮಾರ್ಗಗಳ ಉಪಯುಕ್ತತೆ/ಮೌಲ್ಯ ಕಂಡುಹಿಡಿದು, ಅವುಗಳಲ್ಲಿ ಅತ್ಯಂತ ಸೂಕ್ತವಾದುದನ್ನು ಆಯ್ದುಕೊಳ್ಳುವುದು.

4.      ಆಯ್ದ ಯೋಜನೆಯನ್ನು ಚಾಚೂ ತಪ್ಪದಂತೆ ಜಾರಿಗೊಳಿಸುವುದು.

5.      ಸಮಸ್ಯೆ ಪರಿಹಾರವಾಯಿತೋ, ಇಲ್ಲವೋ ಎಂದು ನೋಡುವುದು. ಆಗಿಲ್ಲದಿದ್ದಲ್ಲಿ ಮತ್ತೆ. ಹೆಜ್ಜೆ ಕ್ರಮಾಂಕ 1 ರಿಂದ ಪ್ರಾರಂಭಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತ 6ನೇ ಅತ್ಯಂತ ಕಲುಷಿತ ರಾಷ್ಟ್ರ; ಉತ್ತರ ಪ್ರದೇಶದ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರ: ವರದಿ

ಪ್ರಮುಖ ವಾಯು ಮಾಲಿನ್ಯಕಾರಕ ಸೂಕ್ಷ್ಮ ಕಣಗಳ ಮಟ್ಟದಲ್ಲಿ ಭಾರತ ಆರನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದ್ದರೆ, ಉತ್ತರ ಪ್ರದೇಶದ ಲೋನಿ ಜಗತ್ತಿನಾದ್ಯಂತ ಅತ್ಯಂತ ಕಲುಷಿತ ನಗರವಾಗಿದೆ. ದೆಹಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ವಿಶ್ವ ವಾಯು...

ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಹರೀಶ್ ರಾಣಾ ದೆಹಲಿ ಏಮ್ಸ್‌ನಲ್ಲಿ ನಿಧನ

ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿ, ಅಂತಿಮವಾಗಿ 2026ರ ಮಾರ್ಚ್ 11ರಂದು ನಿಷ್ಕ್ರಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದ 32 ವರ್ಷದ ಯುವಕ ಹರೀಶ್ ರಾಣಾ, ಮಂಗಳವಾರ (ಮಾ.24)...

ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯವರ್ತಿಯಾದರೆ ಅದು ಭಾರತದ ರಾಜತಾಂತ್ರಿಕ ಹಿನ್ನೆಡೆಯಾಗಬಹುದು; ಕಾಂಗ್ರೆಸ್ 

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂವಹನದಲ್ಲಿ ಪಾಕಿಸ್ತಾನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳು ದೃಢಪಟ್ಟರೆ ಭಾರತಕ್ಕೆ ರಾಜತಾಂತ್ರಿಕ ಹಿನ್ನಡೆಯಾಗಬಹುದು ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ,...

ಭಯೋತ್ಪಾದಕ ಚಟುವಟಿಕೆಗಳ ಆರೋಪ; ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ

ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ದೆಹಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಆಕೆಯ ಸಹಚರರಾದ ಸೋಫಿ...

ಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಕೇರಳ ರಾಜ್ಯ ಘಟಕದ ಸೀಲ್ ಇದ್ದ ಬಗ್ಗೆ ಸೋಮವಾರದಿಂದ (ಮಾ.23) ಭಾರೀ ಚರ್ಚೆಯಾಗುತ್ತಿದೆ. ಸಿಪಿಐ(ಎಂ), ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಚುನಾವಣಾ...

ಪಂಜಾಬ್: ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳಕ್ಕೆ ಅಧಿಕಾರಿ ಆತ್ಮಹತ್ಯೆ; ಅಮೃತಸರದಲ್ಲಿ ಶವಪರೀಕ್ಷೆಗೆ ಕುಟುಂಬ ಒಪ್ಪಿಗೆ

ಪಂಜಾಬ್‌ನ ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಗೋದಾಮು ನಿಗಮದ ಅಧಿಕಾರಿ ಗಗನ್‌ದೀಪ್ ಸಿಂಗ್ ರಾಂಧವ ಅವರ ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ಅಮೃತಸರದಲ್ಲಿ ನಡೆಸಲಾಗುವುದು...

ಮುಸ್ಲಿಂ ಮಹಿಳೆಯರು ‘ನಮಾಜ್’ ಮಾಡುತ್ತಿದ್ದ ಕೊಠಡಿಯಲ್ಲಿ ಮಂತ್ರ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ

ತೆಲಂಗಾಣದ ಭಾರತೀಯ ಜನತಾ ಪಕ್ಷದ (ಬಿಜೆಪಿ)ದ ವಿವಾದಾತ್ಮಕ ನಾಯಕಿ ಮಾಧವಿ ಲತಾ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ. ನಮಾಜ್‌ ಮಾಡುತ್ತಿದ್ದವರ ಹಿಂದೆ ಮಂತ್ರ ಪಠಿಸುತ್ತಿರುವ ಅವರ ವೀಡಿಯೊವೊಂದು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...

ತೂತುಕುಡಿ ಸಾತನ್‌ಕುಳಂ ತಂದೆ ಮಗನ ಕಸ್ಟಡಿ ಸಾವು ಪ್ರಕರಣ : ಒಂಬತ್ತು ಪೊಲೀಸರು ದೋಷಿಗಳು ಎಂದ ಕೋರ್ಟ್

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ; ಗುರುಗ್ರಾಮ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹರಿಯಾಣದ ಗುರುಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸಿದ ಬಗ್ಗೆ ಹರಿಯಾಣ ಪೊಲೀಸರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮಗುವಿನೊಂದಿಗೆ...

ದಾವಣಗೆರೆ: ನಿಮ್ಮ ದೇಶಭಕ್ತಿ ಪ್ರಶ್ನಿಸುವ ಅಯೋಗ್ಯರಿಗೆ ಮತ ಹಾಕಬೇಡಿ; ಮುಸ್ಲಿಮರಿಗೆ ಪ್ರದೀಪ್ ಈಶ್ವರ್ ಮನವಿ

ದಾವಣಗೆರೆ: ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿದ, ಅವರ ಕುಟುಂಬಗಳ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಬಿಜೆಪಿ. ಇವತ್ತು ಯಾವುದೋ ಅಸಮಾಧಾನಕ್ಕೆ ಬಿಜೆಪಿಗೆ ಮತ ಹಾಕದರೆ ನಿಮ್ಮ ಅಸ್ತಿತ್ವಕ್ಕೆ ಕುತ್ತು ಬರುತ್ತದೆ. ಇಂತಹ ಅಯೋಗ್ಯರಿಗೆ ಮತ...