300 ಯುನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಅರವಿಂದ್ ಕೇಜ್ರಿವಾಲ್ ಇತ್ತಿಚೆಗೆ ಉತ್ತರಾಖಂಡ ಚುನಾವಣೆಗೆ ಮುಂಚಿತವಾಗಿ ತಮ್ಮ ಪ್ರಣಾಳಿಕೆ ಎಂಬಂತೆ ಘೋಷಿಸಿದ್ದರು. ಇದೇ ಮಂತ್ರವನ್ನು ಮತ್ತೆ ಗೋವಾ ಚುನಾವಣೆಗೂ ಬಳಸಲು ಎಎಪಿ ಯೋಜಿಸಿದೆ.
ಫೆಬ್ರವರಿಯಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಜಯಗಳಿಸಿದರೇ, ಗೋವಾದಲ್ಲಿನ ಪ್ರತಿ ಕುಟುಂಬಕ್ಕೆ ತಿಂಗಳಿಗೆ 300 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ ಎಂದುದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
40 ಸದಸ್ಯರ ಗೋವಾ ವಿಧಾನಸಭೆಗೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ. “ದೆಹಲಿಯ ಜನರು ಉಚಿತ ವಿದ್ಯುತ್ ಪಡೆಯಲು ಸಾಧ್ಯವಾದರೆ, ಗೋವಾದ ಜನರಿಗೆ ಏಕೆ ಉಚಿತ ವಿದ್ಯುತ್ ನೀಡಬಾರದು” ಎಂದು ಪ್ರಶ್ನಿಸಿದ್ದಾರೆ. ಗೋವಾ ವಿದ್ಯುತ್ ಉತ್ಪಾದಿಸುವ ರಾಜ್ಯವಾಗಿದ್ದರೂ, ಗೋವಾದಲ್ಲಿ ಆಗಾಗ್ಗೆ ವಿದ್ಯುತ್ ಕಡಿತ ಆಗುತ್ತಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯುತ್ ದೀಪ ಅಳವಡಿಸಲು ಕೋರಿದ ಗ್ರಾಮಸ್ಥ: ಬಿಜೆಪಿಗೆ ಮತ ನೀಡಿದ್ದೆ ಎಂದು ಪ್ರಮಾಣ ಮಾಡಲು ಹೇಳಿದ ಶಾಸಕ!
ಕಳೆದ ವರ್ಷ ಗೋವಾದಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರಿರುವುದಕ್ಕೆ ಕೇಜ್ರಿವಾಲ್ ವಾಗ್ದಾಳಿ ನಡೆಸಿದದ್ದಾರೆ. ಜೊತೆಗೆ ಪ್ರತಿಪಕ್ಷದಲ್ಲಿ ಇರಬೇಕಾದವರು ಈಗ ರಾಜ್ಯವನ್ನು ಆಳುತ್ತಿದ್ದಾರೆ. ಅಧಿಕಾರದಲ್ಲಿರಬೇಕಾದವರು ಈಗ ಪ್ರತಿಪಕ್ಷದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
’ಪಕ್ಷ ಬದಲಿಸಿದ ಈ ಶಾಸಕರು ತಾವು ಜನರ ಕೆಲಸಗಳನ್ನು ಮಾಡಲು ಬಿಜೆಪಿಗೆ ಸೇರುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಅದರೆ, ಅವರು ಹೇಳಿಕೊಂಡಂತೆ ಜನರ ಕೆಲಸವನ್ನು ಮಾಡಿದ್ದಾರೆಯೇ..? ಇವರೆಲ್ಲಾ ಹಣದ ಆಮಿಷಕ್ಕೆ ಪಕ್ಷಾಂತರ ಮಾಡಿದ್ದಾರೆ ಎಂದುಈಗ ಜನರೇ ಹೇಳುತ್ತಿದ್ದಾರೆ ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ಗೋವಾ ಬದಲಾವಣೆಯನ್ನು ಬಯಸಿದೆ, ಜನರು ಶುದ್ಧ ರಾಜಕೀಯವನ್ನು ಬಯಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಪರ ಮತ ಚಲಾಯಿಸುವುದಿಲ್ಲ ಎಂದು ಸಾವಿರಾರು ಗೋವಾ ನಿವಾಸಿಗಳು ಹೇಳಿಕೊಳ್ಳುತ್ತಿದ್ದಾರೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಉತ್ತರಾಖಂಡದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವ ಎಎಪಿ, ಅಲ್ಲಿಯೂ ಕೂಡ ಉಚಿತ ವಿದ್ಯುತ್ ಮಂತ್ರ ಪಠಿಸಿದೆ. ದಿನವಿಡೀ ವಿದ್ಯುತ್ ಕಡಿತವಿಲ್ಲದಿರುವುದು. ಪ್ರತಿ ಮನೆಗೆ 300 ಯುನಿಟ್ ಉಚಿತವಾಗಿ ವಿದ್ಯುತ್, ಹಿಂದಿನ ಬಿಲ್‌ಗಳನ್ನು ಮನ್ನಾ ಮಾಡುವುದು ಮತ್ತು ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದು ಉತ್ತರಾಖಂಡದಲ್ಲಿ ಮಾಡಿರುವ ಪ್ರಮುಖ ಘೋಷಣೆಗಳಾಗಿವೆ.
ಇದನ್ನೂ ಓದಿ: ವಿದ್ಯುತ್ ಕಡಿತವಿಲ್ಲ, 300 ಯುನಿಟ್ ಉಚಿತ ವಿದ್ಯುತ್- ಉತ್ತರಾಖಂಡ ಚುನಾವಣೆಗೆ ಕೇಜ್ರಿವಾಲ್ ಘೋಷಣೆ


