Homeಗೌರಿ ಕಾರ್ನರ್ಗೌರಿ ಇಲ್ಲದಿದ್ದರೆ ನಾವು ಸುಲಭವಾಗಿ ಮುಖ್ಯವಾಹಿನಿಗೆ ಬರುತ್ತಿರಲಿಲ್ಲವೇನೋ? : ಸಿರಿಮನೆ ನಾಗರಾಜ್

ಗೌರಿ ಇಲ್ಲದಿದ್ದರೆ ನಾವು ಸುಲಭವಾಗಿ ಮುಖ್ಯವಾಹಿನಿಗೆ ಬರುತ್ತಿರಲಿಲ್ಲವೇನೋ? : ಸಿರಿಮನೆ ನಾಗರಾಜ್

ಅಜ್ಞಾತವಾಸದಲ್ಲಿದ್ದಾಗ ಗೌರಿ ನಮ್ಮನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ತೀಕ್ಷ್ಣವಾದ ‘ಪಾಟಿಸವಾಲಿಗೆ’ ಒಳಪಡಿಸಿದ್ದರು.

- Advertisement -
- Advertisement -

ಗೌರಿ ಲಂಕೇಶ್ ಜೊತೆಗೆ ನನ್ನ ಮುಖಾಮುಖಿ ಒಡನಾಟ ಶುರುವಾಗಿದ್ದು ನಾನು ಮತ್ತು ನೂರ್ ಶ್ರೀಧರ್ ಅಜ್ಞಾತವಾಸದಿಂದ (‘ಅಂಡರ್‌ಗ್ರೌಂಡ್’ನಿಂದ) ಮುಖ್ಯವಾಹಿನಿಗೆ ಮರಳುವ ಪ್ರಕ್ರಿಯೆಯ ಸಂದರ್ಭದಲ್ಲಿ – ಅಂದರೆ ಸುಮಾರು 2014ರ ಕೊನೆಯ ಭಾಗದಲ್ಲಿ. ಅಲ್ಲಿಯವರೆಗೂ ಇಬ್ಬರಿಗೂ ಮತ್ತೊಬ್ಬರ ಬಗೆಗೆ ಗೊತ್ತಿತ್ತೇ ಹೊರತು ಮುಖತಃ ಭೇಟಿ ಆಗಿರಲಿಲ್ಲ. 2012ರಲ್ಲಿ ಪತ್ರಿಕೆಯ ಉಳಿವು ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅವರಿಗೊಂದು ದೀರ್ಘ ಪತ್ರ ಬರೆದಿದ್ದೆ. ಅವರು ಕೂಡಲೇ ಸ್ಪಂದಿಸಿದ್ದರು. ಅಷ್ಟೇ.

2013-14ರಲ್ಲಿ ಶ್ರೀ ಎಚ್.ಎಸ್.ದೊರೆಸ್ವಾಮಿಯವರ ಮುಂದಾಳ್ತನದಲ್ಲಿ ‘ಶಾಂತಿಗಾಗಿ ನಾಗರಿಕರ ವೇದಿಕೆ’ಯಡಿ ಎ.ಕೆ.ಸುಬ್ಬಯ್ಯ, ದೇವನೂರು ಮಹಾದೇವ, ಇಂದೂಧರ ಹೊನ್ನಾಪುರ, ಗೌರಿ ಇನ್ನೂ ಮುಂತಾದ ಸಹೃದಯರು ನಮ್ಮಗಳನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಗಂಭೀರವಾಗಿ ಕೈಗೆತ್ತಿಕೊಂಡರಷ್ಟೆ. ಅದರ ಕೊನೆಯ ಹಂತದಲ್ಲಿ, ಈ ತಂಡದವರು ಸರ್ಕಾರದ ಜೊತೆ ಕೊನೆಯ ಸುತ್ತಿನ ಮಾತುಕತೆಗಳಿಗೆ ಮುಂದಾಗುವ ಮೊದಲು ನಮ್ಮ ಜೊತೆ ನೇರವಾಗಿ ಚರ್ಚಿಸಬೇಕು ಎಂಬ ಪ್ರಸ್ತಾಪ ಬಂದು, ಅದಕ್ಕಾಗಿ ಯಾರೋ ಒಬ್ಬರ ಸ್ನೇಹಿತರ ತೋಟದ ಮನೆಯಲ್ಲಿ ಭೇಟಿ ವ್ಯವಸ್ಥೆಯಾಗಿತ್ತು. ಅಲ್ಲಿ ಅವರುಗಳು ನಮ್ಮನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ತೀಕ್ಷ್ಣವಾದ ‘ಪಾಟಿಸವಾಲಿಗೆ’ ಒಳಪಡಿಸಿದರು.

ನಾವು ಅಜ್ಞಾತವಾಸದಿಂದ ಹೊರಬರುತ್ತಿರುವುದು ಒಂದು ತಾತ್ಕಾಲಿಕ ಕಾರ್ಯತಂತ್ರದ, ‘ಹಿಡನ್ ಅಜೆಂಡಾ’ದ ಭಾಗವಾಗಿ ಅಲ್ಲ; ಬದಲಿಗೆ, ಸಂವಿಧಾನದ ಚೌಕಟ್ಟಿನಲ್ಲಿ ಬಹಿರಂಗವಾದ ಸಮೂಹ ಹೋರಾಟ ಕಟ್ಟದೆ, ದೇಶವ್ಯಾಪಿಯಾಗಿ ಎಲ್ಲ ಜನಸಮುದಾಯಗಳನ್ನು ಒಳಗೊಂಡ ಬೃಹತ್ ಸಮೂಹ ಚಳವಳಿ ಎದ್ದುನಿಲ್ಲದೆ ಈ ದೇಶದಲ್ಲಿ ಕ್ರಾಂತಿ ಅಥವಾ ಯಾವುದೇ ಮೂಲಭೂತ ಸಾಮಾಜಿಕ-ಆರ್ಥಿಕ-ರಾಜಕೀಯ ಪರಿವರ್ತನೆ ಸಾಧ್ಯವಿಲ್ಲ ಎನ್ನುವುದು ಈ ಮೂರು ದಶಕಕ್ಕೂ ಹೆಚ್ಚು ಕಾಲದ ಹೋರಾಟದಲ್ಲಿ ನಮಗೆ ದೃಢವಾಗಿ ಮನವರಿಕೆಯಾಗಿದೆ; ಆದ್ದರಿಂದ ನಾವು ನಮ್ಮ ಹಳೆಯ ನಿಲುವುಗಳಿಗೆ ಅಂಟಿಕೂರದೆ, ದೇಶದ ಈ ಕಾಲಘಟ್ಟದ ವಾಸ್ತವಕ್ಕೆ ಹೊಂದುವಂತಹ ಸಮೂಹ ಚಳವಳಿ-ಹೋರಾಟಗಳನ್ನು ರೂಪಿಸಬೇಕು, ಸಮಾಜದೊಳಗಿನ ಎಲ್ಲ ಬಗೆಯ ಅಸಮಾನತೆ-ತಾರತಮ್ಯಗಳ ವಿರುದ್ಧವೂ ಸಂಘಟನೆ-ಹೋರಾಟಗಳನ್ನು ಕಟ್ಟಬೇಕು; ಅದರಲ್ಲಿ ಎಲ್ಲ ಶೋಷಿತ-ದಮನಿತ ಸಮುದಾಯಗಳನ್ನೂ ಒಳಗೊಳ್ಳಬೇಕು, ಎಲ್ಲಾ ಜನಪರ-ಪ್ರಜಾಪ್ರಭುತ್ವವಾದಿ-ದೇಶಪ್ರೇಮಿ ಪ್ರಜ್ಞಾವಂತರನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ನಮ್ಮ ಮೂಲಭೂತ ಪರಿಕಲ್ಪನೆಗಳನ್ನು ಅವರ ಮುಂದಿಟ್ಟೆವು.

ಅಷ್ಟೇ ಅಲ್ಲದೆ, ಅವರುಗಳು ನಮ್ಮ ಮೇಲೆ ಇಡುತ್ತಿರುವ ವಿಶ್ವಾಸಕ್ಕೆ ನಾವು ಖಂಡಿತಾ ಎರಡು ಬಗೆಯುವುದಿಲ್ಲ ಎಂಬುದನ್ನೂ ಮನವರಿಕೆ ಮಾಡಿಕೊಟ್ಟೆವು; ಇದರಿಂದ ಅವರುಗಳಿಗೆ ನಮ್ಮ ಪ್ರಾಮಾಣಿಕತೆಯ ಬಗ್ಗೆ ಪೂರ್ತಿ ನಂಬಿಕೆ ಉಂಟಾಯಿತೆನ್ನಿಸುತ್ತೆ. ನಮ್ಮನ್ನು ಮುಖ್ಯವಾಹಿನಿಗೆ ಕರೆತರುವ ಕೊನೇ ಹಂತದ ಪ್ರಯತ್ನವನ್ನು ದೃಢವಾಗಿ ಪೂರ್ಣ ಆತ್ಮವಿಶ್ವಾಸದೊಂದಿಗೆ ಕೈಗೊಳ್ಳಲು ಅವರು ತೀರ್ಮಾನ ಮಾಡಿದರು. ಮುಂದೆ ನಡೆದದ್ದೆಲ್ಲ ಎಲ್ಲರಿಗೂ ತಿಳಿದೇ ಇದೆ.

ಅಂದು ಈ ಎಲ್ಲ ಚರ್ಚೆ ನಡೆದ ನಂತರ, ಅವರುಗಳು ‘ಮೈಚಳಿ ಬಿಟ್ಟು’ ನಮ್ಮೊಂದಿಗೆ ಒಂದಷ್ಟು ಹೊತ್ತು ಲೋಕಾಭಿರಾಮವಾಗಿ, ತಮಾಷೆಯಾಗಿ ಮಾತಾಡುತ್ತ ಕಳೆದರು. ಪರಸ್ಪರ ವಿಶ್ವಾಸ, ಆತ್ಮೀಯತೆಯ ಭಾವನೆಯೊಂದಿಗೆ ನಾವಿಬ್ಬರೂ ವಾಪಸ್ ಹೊರಟೆವು. ಗೌರಿ ಈ ಇಡೀ ಪ್ರಕ್ರಿಯೆಯಲ್ಲಿ ಎಷ್ಟೊಂದು ಕಕ್ಕುಲಾತಿಯಿಂದ, ಉತ್ಕಟತೆಯಿಂದ ತೊಡಗಿಸಿಕೊಂಡರೆಂದರೆ, ಅವರು ಇರದಿದ್ದರೆ ನಾವು ಬಹಿರಂಗಕ್ಕೆ ಬರುವ ಪ್ರಕ್ರಿಯೆ ಇಷ್ಟು ಸುಮುಖವಾಗಿ ಪೂರ್ಣಗೊಳ್ಳಲು ಸಾಧ್ಯವಿತ್ತಾ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಅಷ್ಟೇ ಅಲ್ಲ, ಆ ನಂತರವೂ ಸಹ ಕಳೆದ ಐದೂಮುಕ್ಕಾಲು ವರ್ಷಗಳಲ್ಲಿ ದೊರೆಸ್ವಾಮಿಯವರ ಜೊತೆ ನಿಂತು, ಇನ್ನೂ ಹಲವಾರು ಸಮಾನ ಮನಸ್ಕ ಹೋರಾಟ ನಿರತ ಸಂಘನೆಗಳನ್ನೂ, ಮುಂದಾಳುಗಳನ್ನೂ ಜೊತೆಗೂಡಿಕೊಂಡು ನಾವು ಏನೇನು ಜನಪರ ಕೆಲಸಗಳನ್ನು ಮಾಡುತ್ತ ಬರಲು ಸಾಧ್ಯವಾಯಿತೋ, ಅದೆಲ್ಲದರಲ್ಲೂ ಗೌರಿಯವರ ಪಾತ್ರ ಅಚ್ಚಳಿಯದೆ ಬೆಸೆದುಕೊಂಡಿದೆ. ಅವರ ಹತ್ಯೆಯೊಂದು ಹೇಗೆ ಇಡೀ ನಾಡಿನ ಜನಪರ ಹೋರಾಟ-ಚಳವಳಿಗಳಿಗೆ ಉಂಟಾದ ಮರ್ಮಾಘಾತವೋ ಹಾಗೆಯೇ ನಮ್ಮ ಎಲ್ಲಾ ಸಮಾಜಮುಖಿ ಕೆಲಸಗಳಿಗೂ ಉಂಟಾದ ಗಂಭೀರ ನಷ್ಟ ಎಂದರೆ ಉತ್ಪ್ರೇಕ್ಷೆಯಲ್ಲ.


ಇದಮ್ಮೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಮಾತಾಡುವಾಗ “ಹತ್ಯೆ” ಎಂಬ ಪದವನ್ನು ಕನ್ನಡಿಗರು ಬಳಸುವುದನ್ನು ಕೇಳಿದ್ದೀರಾ?

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...